ಚಾಣಕ್ಯ ನೀತಿ: ಪ್ರೇಮ ಬಂಧ ಗಟ್ಟಿಯಾಗಲು ಏನು ಮಾಡಬೇಕು?

By Sushma Hegde  |  First Published Jun 12, 2023, 11:34 AM IST

ಪ್ರೀತಿ ಮತ್ತು ದಾಂಪತ್ಯ (marriage)  ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ, ಮನುಷ್ಯನು ಕೆಲವು ವಿಶೇಷ ಗುಣ (special quality) ಗಳನ್ನು ಹೊಂದಿರಬೇಕು. ಅದರಲ್ಲಿಯೂ ಪುರುಷರು ಈ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಚಾಣಕ್ಯನ ಪ್ರಕಾರ ಪುರುಷ (male) ರು ಪ್ರೇಮ ಸಂಬಂಧವು ದೀರ್ಘಕಾಲದವರೆಗೆ ಉಳಿಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ.


ಪ್ರೀತಿ ಮತ್ತು ದಾಂಪತ್ಯ (marriage)  ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ, ಮನುಷ್ಯನು ಕೆಲವು ವಿಶೇಷ ಗುಣ (special quality) ಗಳನ್ನು ಹೊಂದಿರಬೇಕು. ಅದರಲ್ಲಿಯೂ ಪುರುಷರು ಈ ವಿಚಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಚಾಣಕ್ಯನ ಪ್ರಕಾರ ಪುರುಷ (male) ರು ಪ್ರೇಮ ಸಂಬಂಧವು ದೀರ್ಘಕಾಲದವರೆಗೆ ಉಳಿಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ನಿಜವಾದ ಪ್ರೀತಿ (love) ಯನ್ನು ಕಂಡುಕೊಳ್ಳಬೇಕು ಎಂದು ಯಾವಾಗಲೂ ಹಂಬಲಿಸುತ್ತಾನೆ. ಆದರೆ ಅನೇಕ ಬಾರಿ ಅವರು ಪ್ರಯತ್ನಿಸಿದರೂ ನಿಜವಾದ ಪ್ರೀತಿಯನ್ನು ಕಾಣುವುದಿಲ್ಲ. ಆದರೆ ಕೆಲವರು ಸಂಬಂಧವನ್ನು ಹೃದಯ (heart) ದಿಂದ ಪಾಲಿಸುತ್ತಾರೆ. ಚಾಣಕ್ಯ ನೀತಿಯ ಪ್ರಕಾರ ಕೆಲವು ಜನರು, ಅದರಲ್ಲಿಯೂ ವಿಶೇಷವಾಗಿ ಪುರುಷರ ಪ್ರೀತಿ ಸಂಬಂಧವು ದೀರ್ಘಕಾಲ  (long time) ಇರುತ್ತದೆ. ಚಾಣಕ್ಯನ ಪ್ರಕಾರ ಪುರುಷರ ಈ ನಾಲ್ಕು ವಿಷಯಗಳಿಂದಾಗಿ ಪುರುಷರ ಪ್ರೇಮ ಸಂಬಂಧವು ದೀರ್ಘಕಾಲದವರೆಗೆ ಇರುತ್ತದೆ.

Tap to resize

Latest Videos

ಸ್ವಾತಂತ್ರ್ಯ ಇರಲಿ

ಯಾವುದೇ ಕಟ್ಟುಪಾಡು (regimen) ಗಳಿಲ್ಲದ ಸಂಬಂಧ, ಹೆಣ್ಣನ್ನು ಬಂಧಿಸದ ಪುರುಷ ಹಾಗೂ ಮಹಿಳೆ (woman) ಯರು ತಮ್ಮ ಜೀವನವನ್ನು ಅವರು ಬಯಸಿದಂತೆ ಬದುಕಲು ಸ್ವತಂತ್ರವಾಗಿದ್ದಾಗ ಸಂಬಂಧಗಳು ಹೆಚ್ಚು ಕಾಲ ಉಳಿಯುತ್ತವೆ. ಮಹಿಳೆಯರ ಮೇಲೆ ನಿರ್ಬಂಧ (restriction) ಗಳನ್ನು ಹೇರುವ ಸಂಬಂಧಗಳು ಸ್ವಲ್ಪ ಸಮಯದ ನಂತರ ಬಿರುಕುಗಳಿಗೆ ಕಾರಣವಾಗುತ್ತವೆ ಮತ್ತು ಸಂಬಂಧ (relationship)ವು ಹದಗೆಡುತ್ತದೆ .

ಗರುಡ ಪುರಾಣದ ಪ್ರಕಾರ ಜೀವನದ ಯಶಸ್ಸಿನ ಮಂತ್ರ ಯಾವುದು ?

 

ಪರಸ್ಪರ ಗೌರವ ಕಾಪಾಡಿಕೊಳ್ಳಿ

ಯಾವುದೇ ಸಂಬಂಧ ಆಗಿರಲಿ ಗೌರವ  (respect) ಬಹಳ ಮುಖ್ಯ. ಮಹಿಳೆಯರನ್ನು ಗೌರವಿಸುವ ಪುರುಷರು ಮಹಿಳೆಯರನ್ನು ತುಂಬಾ ಪ್ರೀತಿಸುತ್ತಾರೆ. ಸಂಬಂಧದಲ್ಲಿ ಒಬ್ಬರನ್ನೊಬ್ಬರು ಗೌರವಿಸುವುದು ಬಹಳ ಮುಖ್ಯ. ಸಂಬಂಧ ಅಥವಾ ವೈವಾಹಿಕ ಜೀವನ (married life) ದಲ್ಲಿ ಮಹಿಳೆಯನ್ನು ಪುರುಷರು ಗೌರವಿಸಬೇಕು. ಆಗ ಅವರ ಸಂಬಂಧವು ಸುಲಭವಾಗಿ ಅರಳುತ್ತದೆ. ಆದರೆ ಪ್ರೇಮ ಸಂಬಂಧ ಅಥವಾ ವೈವಾಹಿಕ ಜೀವನದಲ್ಲಿ ಮಹಿಳೆಯರನ್ನು ಗೌರವಿಸದ ಪುರುಷ (male) ರು ಸಂಬಂಧವನ್ನು ಮುರಿಯುವ ಅಂಚಿನಲ್ಲಿದ್ದಾರೆ.

ಸುರಕ್ಷಿತ ಭಾವನೆ ಮೂಡಲಿ

ಪುರುಷರು ತುಂಬಾ ರಕ್ಷಣಾತ್ಮಕ (Protective) ವಾಗಿ, ಮಹಿಳೆಯರನ್ನು ನೋಡಿಕೊಳ್ಳುವ ಸಂಬಂಧಗಳು ಹೆಚ್ಚು ಕಾಲ ಉಳಿಯುತ್ತವೆ. ಚಾಣಕ್ಯ ನೀತಿ (Chanakya nithi) ಯ ಪ್ರಕಾರ, ತನ್ನ ಗೆಳತಿ ಅಥವಾ ಹೆಂಡತಿಯನ್ನು ಸುರಕ್ಷಿತವಾಗಿರಿಸುವ ವ್ಯಕ್ತಿ, ಸಂಬಂಧವು ದೀರ್ಘಕಾಲ (long time) ದವರೆಗೆ ಇರುತ್ತದೆ.

ಇದು ಭಯಾನಕ ವಾಸ್ತವ: ಶವದೊಂದಿಗೆ ‘ಅಘೋರಿ’ಗಳ ದೈಹಿಕ ಸಂಭೋಗ ಏಕೆ?

 

ಅಹಂಕಾರ ತ್ಯಜಿಸಿ

ಚಾಣಕ್ಯನ ಪ್ರಕಾರ ಒಬ್ಬನು ಎಂದಿಗೂ ಸಂಬಂಧದಲ್ಲಿ ಅಹಂಕಾರ (ego) ವನ್ನು ತರಬಾರದು. ನೀವು ಸಂಬಂಧಕ್ಕಿಂತ ಅಹಂಕಾರವನ್ನು ಹೆಚ್ಚು ಗೌರವಿಸಿದಾಗ, ಸಂಬಂಧವು ವಿಫಲ (fail) ಗೊಳ್ಳುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಅಹಂಕಾರವನ್ನು ಬದಿಗಿಟ್ಟು ಸಂಬಂಧಗಳಿಗೆ ಆದ್ಯತೆ ನೀಡುವ ಪುರುಷರ ಪ್ರೇಮ ಸಂಬಂಧ (love relationship) ಗಳು ದೀರ್ಘಕಾಲ ಉಳಿಯುತ್ತವೆ.

 

click me!