ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ತೆಂಗಿನಕಾಯಿಯನ್ನು ಅರ್ಪಿಸುವ ವಾಡಿಕೆ ಇದೆ. ಆದರೆ ಯಾವ ದೇವರಿಗೆ ಯಾವ ರೀತಿಯ ತೆಂಗಿನಕಾಯಿ ನೈವೇದ್ಯ ಮಾಡಬೇಕು?
ಹಿಂದೂ ಧರ್ಮಕ್ಕೆ ಸಂಬಂಧಿಸಿದ ಅನೇಕ ಪೂಜಾ ನಿಯಮಗಳಿವೆ. ಇದರೊಂದಿಗೆ ವಿವಿಧ ದೇವತೆಗಳನ್ನು ಪೂಜಿಸುವ ವಿಧಾನದಲ್ಲಿ ವ್ಯತ್ಯಾಸವಿದೆ. ಅದಕ್ಕಾಗಿಯೇ ಹಿಂದೂ ಧರ್ಮದಲ್ಲಿ ವಾರದ ಪ್ರತಿ ದಿನವನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ ಮತ್ತು ವಾರದ ಪ್ರತಿ ದಿನವನ್ನು ಒಂದಿಲ್ಲೊಂದು ದೇವರಿಗೆ ಸಮರ್ಪಿಸಲಾಗಿದೆ.
ಹಿಂದೂ ಧರ್ಮದಲ್ಲಿ, ಯಾವುದೇ ಪೂಜೆ-ಪಾರಾಯಣ ಅಥವಾ ಮಂಗಳಕರ ಕೆಲಸವನ್ನು ಆಯೋಜಿಸಿದಾಗ, ತೆಂಗಿನಕಾಯಿಯನ್ನು ಬಳಸಲಾಗುತ್ತದೆ. ಹೊಸ ಅಂಗಡಿಯ ಪ್ರಾರಂಭ, ಮದುವೆ, ಹೊಸ ವಾಹನ, ಗೃಹಪ್ರವೇಶ ಮತ್ತು ವಾರದ ಉಪವಾಸ, ಹೀಗೆ ಎಲ್ಲಾ ಸಂದರ್ಭಗಳಲ್ಲಿ ತೆಂಗಿನಕಾಯಿ ಮುಖ್ಯವಾಗಿದೆ.
ತೆಂಗಿನಕಾಯಿಯನ್ನು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲಾ ದೇವರು ಮತ್ತು ದೇವತೆಗಳಿಗೆ ಅರ್ಪಿಸಲಾಗುತ್ತದೆ ಮತ್ತು ತೆಂಗಿನಕಾಯಿಯನ್ನು ಖಂಡಿತವಾಗಿಯೂ ಪೂಜಾ ಸಾಮಗ್ರಿಗಳಲ್ಲಿ ಸೇರಿಸಲಾಗುತ್ತದೆ. ಏಕೆಂದರೆ ಅದು ಇಲ್ಲದೆ ಪೂಜೆ ಅಪೂರ್ಣ. ಪೂಜೆಯಲ್ಲಿ ತೆಂಗಿನಕಾಯಿ ಏಕೆ ಬೇಕು, ಅದರ ಪ್ರಾಮುಖ್ಯತೆ ಏನು ಮತ್ತು ಯಾವ ತೆಂಗಿನಕಾಯಿಯನ್ನು ಯಾವ ದೇವರಿಗೆ ಅರ್ಪಿಸಬೇಕು ಎಂಬುದನ್ನು ತಿಳಿಯಿರಿ.
Weekly Love Horoscope: ಸ್ವತಃ ಕೈಯಾರೆ ಪ್ರೇಮಜೀವನ ಹಾಳು ಮಾಡಿಕೊಳ್ಳುವ ಮಿಥುನ!
ತೆಂಗಿನಕಾಯಿ ಪ್ರಾಮುಖ್ಯತೆ
ಪುರಾಣದ ನಂಬಿಕೆಯ ಪ್ರಕಾರ, ಭಗವಾನ್ ವಿಷ್ಣುವು ಭೂಮಿಯ ಮೇಲೆ ಅವತರಿಸಿದಾಗ, ಅವನು ತನ್ನೊಂದಿಗೆ ತಾಯಿ ಲಕ್ಷ್ಮಿ, ತೆಂಗಿನ ಮರ ಮತ್ತು ಹಸು ಕಾಮಧೇನುವನ್ನು ತಂದನು. ಹಾಗಾಗಿ ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ತ್ರಿದೇವ ಬ್ರಹ್ಮ, ವಿಷ್ಣು ಮತ್ತು ಮಹೇಶ ಇದರಲ್ಲಿ ನೆಲೆಸಿದ್ದಾರೆ. ತೆಂಗಿನಕಾಯಿಯ ಮೇಲಿನ ಮೂರು ರಂಧ್ರವನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಬಿಳಿಭಾಗವು ದೇವಿ ಪಾರ್ವತಿಯನ್ನು ಸಂಕೇತಿಸುತ್ತದೆ, ನೀರು ಗಂಗೆಯನ್ನು ಸೂಚಿಸುತ್ತದೆ ಮತ್ತು ಕಂದು ಬಣ್ಣದ ಚಿಪ್ಪು ಭಗವಂತ ಕಾರ್ತಿಕೇಯನನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗುತ್ತದೆ. ಆದ್ದರಿಂದ, ಪ್ರಾಮುಖ್ಯತೆ.
ಮನುಷ್ಯನ ಸೂಚ್ಯ ರೂಪ
ತೆಂಗಿನಕಾಯಿಯ ಬಗೆಗಿನ ಇನ್ನೊಂದು ನಂಬಿಕೆಯೆಂದರೆ, ತೆಂಗಿನಕಾಯಿಯನ್ನು ಮಾನವ ರೂಪದಲ್ಲಿ ವಿಶ್ವಾಮಿತ್ರನು ಸಿದ್ಧಪಡಿಸಿದನು. ಒಮ್ಮೆ ವಿಶ್ವಾಮಿತ್ರರು ಇಂದ್ರನ ಮೇಲೆ ಕೋಪಗೊಂಡು ಮತ್ತೊಂದು ಸ್ವರ್ಗವನ್ನು ನಿರ್ಮಿಸಲು ಪ್ರಾರಂಭಿಸಿದರು. ಎರಡನೆಯ ಪ್ರಪಂಚವನ್ನು ರಚಿಸುವಾಗ, ಅವರು ತೆಂಗಿನಕಾಯಿಯನ್ನು ಮಾನವ ರೂಪದಲ್ಲಿ ರಚಿಸಿದರು. ಅದಕ್ಕಾಗಿಯೇ ತೆಂಗಿನ ಚಿಪ್ಪಿನ ಹೊರಭಾಗದಲ್ಲಿ ಎರಡು ಕಣ್ಣುಗಳು ಮತ್ತು ಬಾಯಿಯ ವಿನ್ಯಾಸವಿದೆ. ಇದರ ಮೇಲಿನ ನಾರನ್ನು ಮನುಷ್ಯರ ಕೂದಲಿಗೆ, ಚಿಪ್ಪನ್ನು ಅಸ್ಥಿಪಂಜರಕ್ಕೆ, ನೀರನ್ನು ರಕ್ತಕ್ಕೆ ಹಾಗೂ ಕಾಯಿಯನ್ನು ನಮ್ಮ ಮಾಂಸಕ್ಕೆ ಹೋಲಿಸಲಾಗುತ್ತದೆ. ಹಾಗಾಗಿ, ತೆಂಗಿನಕಾಯಿ ಅರ್ಪಿಸುವುದೆಂದರೆ ನಮ್ಮನ್ನೇ ನಾವು ದೇವರಿಗೆ ಸಮರ್ಪಿಸಿಕೊಂಡಂತೆ ಎಂಬ ಸೂಚ್ಯಾರ್ಥವೂ ಇದೆ.
Purse Color Astrology: ರಾಶಿಗೆ ಹೊಂದುವ ಬಣ್ಣದ ಪರ್ಸ್ ಬಳಸಿದ್ರೆ ಅದೆಂದೂ ಖಾಲಿಯಾಗೋಲ್ಲ!
ಪೂಜೆಯಲ್ಲಿ ಯಾವ ದೇವರಿಗೆ ಯಾವ ತೆಂಗಿನಕಾಯಿಯನ್ನು ಅರ್ಪಿಸಬೇಕು?