Chanakya Niti : ಯುವಕರ ಯಶಸ್ವಿ ಜೀವನಕ್ಕೆ ಚಾಣಕ್ಯನ ಕಿವಿಮಾತು

By Suvarna NewsFirst Published Oct 20, 2022, 1:18 PM IST
Highlights

ಯುವಕರ ಮನಸ್ಸನ್ನು ಹಿಡಿತದಲ್ಲಿಡುವುದು ಬಹಳ ಕಷ್ಟ. ತಮ್ಮದೇ ಲೋಕದಲ್ಲಿ ತೇಲಾಡುವ ಅವರಿಗೆ ಭವಿಷ್ಯದ ಬಗ್ಗೆ ಚಿಂತೆ ಇರೋದಿಲ್ಲ. ಯೌವನದಲ್ಲಿ ತಪ್ಪು ದಾರಿ ತುಳಿದು ಕೊನೆಗಾಲದಲ್ಲಿ ಪಶ್ಚಾತಾಪಪಟ್ರೆ ಪ್ರಯೋಜನವಿಲ್ಲ. 
 

ಮಹಾನ್ ಅರ್ಥಶಾಸ್ತ್ರಜ್ಞ ಚಾಣಕ್ಯನ ನೀತಿಗಳು ಈಗ್ಲೂ ನಮ್ಮ ಉಪಯೋಗಕ್ಕೆ ಬರ್ತಿವೆ. ಚಾಣಕ್ಯ ನಮ್ಮ ಜೀವನಕ್ಕೆ ಅಗತ್ಯವಿರುವ ಅನೇಕ ವಿಷ್ಯಗಳನ್ನು ಹೇಳಿದ್ದಾರೆ. ಚಾಣಕ್ಯನ ನೀತಿಯನ್ನು ಪಾಲನೆ ಮಾಡಿದ್ರೆ ಬದುಕು ಹಸನಾಗೋದ್ರಲ್ಲಿ ಎರಡು ಮಾತಿಲ್ಲ ಎನ್ನಬಹುದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಹೇಗಿರಬೇಕು, ಯಾವ ಕೆಲಸ ಮಾಡಿದ್ರೆ ಒಳ್ಳೆಯದು, ಯಾರಿಂದ ದೂರವಿರಬೇಕು, ಮನೆ ಹೇಗಿರಬೇಕು, ಯಶಸ್ವಿ ವ್ಯಕ್ತಿಯಾಗಲು ಏನು ಮಾಡಬೇಕು ಹೀಗೆ ಅನೇಕ ವಿಷ್ಯಗಳನ್ನು ಚಾಣಕ್ಯ ನೀತಿಯಲ್ಲಿ ನಾವು ನೋಡಬಹುದು. ಮಕ್ಕಳು ದೇಶದ ಭವಿಷ್ಯ. ಅವರಿಗೆ ಮೊದಲಿನಿಂದಲೂ ಸರಿಯಾದ ಮಾರ್ಗದರ್ಶನ ದೊರೆತರೆ ಅವರ ಬದುಕು ಹಸನಾಗುತ್ತದೆ. ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಮಕ್ಕಳು ತಪ್ಪು ದಾರಿ ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ವಿಚಲಿತರಾಗ್ತಾರೆ.  ಯುವಕರು ಯಶಸ್ವಿ ವ್ಯಕ್ತಿಯಾಗಲು ಬಯಸಿದರೆ ಏನೆಲ್ಲ ಮಾಡ್ಬೇಕು ಎಂಬುದನ್ನು ಕೂಡ ಚಾಣಕ್ಯ ಹೇಳಿದ್ದಾರೆ. ಕೆಲ ಸಂಗತಿಗಳಿಂದ ದೂರವಿದ್ರೆ ಮಾತ್ರ ಯುವಕರ ಸಾಧನೆ ಮಾಡಲು ಸಾಧ್ಯ ಎಂಬುದು ಚಾಣಕ್ಯನ ಅಭಿಪ್ರಾಯ. ನಾವಿಂದು, ಯಾರಿಂದ ದೂರವಿರಬೇಕೆಂದು ಚಾಣಕ್ಯ ಯುವಕರಿಗೆ ಸಲಹೆ ನೀಡಿದ್ದಾರೆ ಎಂಬುದನ್ನು ನೋಡೋಣ. 

ಸೋಮಾರಿತನ (Laziness) : ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ಎನ್ನುವ ಮಾತಿದೆ. ಕೈಕಟ್ಟಿ ಕುಳಿತರೆ ಏನೂ ಸಾಧಿಸಲು ಸಾಧ್ಯವಿಲ್ಲ. ಸೋಮಾರಿತನ ಯುವ ಪೀಳಿಗೆಯ ದೊಡ್ಡ ಶತ್ರು. ಯೌವನದಲ್ಲಿ ಕಷ್ಟಪಟ್ಟರೆ ವೃದ್ಧಾಪ್ಯ (Old Age) ದಲ್ಲಿ ಸುಖ ಕಾಣಬಹುದು. ಸೋಮಾರಿತನ ಯುವಕ (Young) ರ ಸಾಧನೆಗೆ ಅಡ್ಡಿಯಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಸದಾ ಲವಲವಿಕೆಯಿಂದಿರುವ, ಸೋಮಾರಿತನವನ್ನು ಹೊಡೆದೋಡಿಸುವ, ಶಿಸ್ತು ಬದ್ಧನಾಗಿರುವ ವ್ಯಕ್ತಿ ಸಾಧಿಸಬಲ್ಲ. ಸಮಯ ಬಹಳ ಅಮೂಲ್ಯವಾದದ್ದು, ಸಮಯ ಹಾಳು ಮಾಡಿದ್ರೆ ಮತ್ತೆ ಸಿಗಲು ಸಾಧ್ಯವಿಲ್ಲ. ಹಾಗಾಗಿ ಈ ಸಮಯವನ್ನು ಬಹಳ ಬುದ್ಧಿವಂತಿಕೆಯಿಂದ ಬಳಸಬೇಕು. 

Latest Videos

ಯುವಕರಲ್ಲಿ ಹೋರಾಟದ ಛಲವಿರಬೇಕು. ಸೋಮಾರಿತನದಿಂದ ಏನನ್ನೂ ಗಳಿಸಲು ಸಾಧ್ಯವಾಗುವುದಿಲ್ಲ. ಗುರಿಯನ್ನು ಸಾಧಿಸಲು  ಯಾವಾಗಲೂ ಸಕ್ರಿಯರಾಗಿರಬೇಕು ಎನ್ನುತ್ತಾರೆ ಚಾಣಕ್ಯ. ಆಲಸಿ ಯುವಕರಿಗೆ ಎಂದೂ ಯಶಸ್ಸು ಸಿಗುವುದಿಲ್ಲ. 

ದೀಪಾವಳಿ 2022: ಮನೆಯಲ್ಲಿ ಕನಿಷ್ಠ ಇಷ್ಟು ದೀಪ ಹಚ್ಚಬೇಕು.. ಎಷ್ಟು?

ಕೋಪ (Anger) : ಕೋಪಕ್ಕೆ ಬುದ್ದಿ ನೀಡಿದ್ರೆ ವಿನಾಶ ನಿಶ್ಚಿತ. ಯಶಸ್ಸಿನ ದಾರಿಯಲ್ಲಿ ದೊಡ್ಡ ಶಾಪ ಕೋಪ. ಕೋಪಗೊಂಡ ವ್ಯಕ್ತಿಯ ಬುದ್ಧಿ  ದುರ್ಬಲಗೊಳ್ಳುತ್ತದೆ. ದೊಡ್ಡವರಿರಲಿ, ಮಕ್ಕಳಿರಲಿ ಕೋಪ  ಯಾರಿಗೂ ಒಳ್ಳೆಯದಲ್ಲ. ಇದ್ರಿಂದ ನಷ್ಟ ಉಂಟಾಗುತ್ತದೆ. ಪ್ರತಿಯೊಬ್ಬರೂ ಕೋಪವನ್ನು ನಿಯಂತ್ರಿಸಲು ಕಲಿಯಬೇಕು. ಕೋಪದಿಂದ ಕುಟುಂಬ, ವೃತ್ತಿ (Career) ಜೀವನ ಹಾಳಾಗುತ್ತದೆ. ಕೋಪದಿಂದ ಯುವಕರ ಪ್ರಗತಗೆ ಅಡ್ಡಿಯಾಗುತ್ತದೆ. ಕೋಪ ಸ್ವಭಾವದ ವ್ಯಕ್ತಿಯನ್ನು ಬೇರೆಯವರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯಿರುತ್ತದೆ. ಹದಿಹರೆಯದ ಯುವಕರು ಈಗಿನಿಂದ್ಲೇ ಕೋಪ ನಿಯಂತ್ರಿಸಿಕೊಳ್ಳಲು ಕಲಿತರೆ ಮುಂದೆ ದಾರಿ ಸುಗಮವಾಗುತ್ತದೆ. 

Zodiac Sign: ಈ ರಾಶಿಗಳ ಮಂದಿ ಸುಲಭವಾಗಿ ಜನರ ಕೇಂದ್ರಬಿಂದುವಾಗ್ತಾರೆ

ಸ್ಥಿರ ಮನಸ್ಸು : ಈ ವಯಸ್ಸು ಚಂಚಲವಾಗಿರುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ತಿಳಿಯುವ ಮುನ್ನವೇ ಹದಿಹರೆಯದ ಮಕ್ಕಳು ಅದರ ಪ್ರಭಾವಕ್ಕೆ ಒಳಗಾಗ್ತಾರೆ. ಕೆಟ್ಟ ವ್ಯಕ್ತಿಯ ಸಹವಾಸ ಮಾಡಿದ್ರೆ ಜೀವನ ಕೆಟ್ಟ ದಾರಿಯಲ್ಲಿ ಸಾಗುತ್ತದೆ. ಕೆಟ್ಟ ವ್ಯಕ್ತಿ ಜೊತೆಗಿದ್ದೂ ಸಹ ನಿಮ್ಮತನವನ್ನು ಕಾಯ್ದುಕೊಳ್ಳುವುದು ತುಂಬಾ ಕಠಿಣ ಕೆಲಸ. ಹಾಗಾಗಿ ಕೆಟ್ಟ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದು. ಗ್ಲಾಮರ್, ಜಗಳ, ವ್ಯಸನ ಈ ವಿಷಯಗಳಿಂದ ಹೆಚ್ಚು ಅಂತರವನ್ನು ಕಾಯ್ದುಕೊಳ್ಳಬೇಕು. ಆಗ ಮಾತ್ರ ಯಶಸ್ಸು ನಿಮ್ಮ ಹತ್ತಿರ ಬರುತ್ತದೆ. ಅನೇಕರು ಈ ವಯಸ್ಸಿನಲ್ಲಿ ತಪ್ಪು ದಾರಿ ಹಿಡಿದಿರುತ್ತಾರೆ. ಸಾಗ್ತಿರುವ ದಾರಿ ತಪ್ಪೆಂದು ಹಿರಿಯರು ಹೇಳಿದ್ರೂ ಅದನ್ನು ನಂಬಲು ಸಿದ್ಧರಿರುವುದಿಲ್ಲ. ಆದ್ರೆ ಸಮಯ ಮೀರಿದ ಮೇಲೆ ಅವರಿಗೆ ತಪ್ಪಿನ ಅರಿವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

click me!