ಮನುಷ್ಯ ಪ್ರಾಣಿಗಿಂತ ಏಕೆ ವಿಭಿನ್ನ ಹೇಳಿ? ಚಾಣಕ್ಯ ಏನು ಹೇಳಿದ್ದಾನೆ ಕೇಳಿಸ್ಕೊಳ್ಳಿ

Published : Nov 07, 2022, 05:16 PM ISTUpdated : Nov 08, 2022, 09:08 AM IST
ಮನುಷ್ಯ ಪ್ರಾಣಿಗಿಂತ ಏಕೆ ವಿಭಿನ್ನ ಹೇಳಿ? ಚಾಣಕ್ಯ ಏನು ಹೇಳಿದ್ದಾನೆ ಕೇಳಿಸ್ಕೊಳ್ಳಿ

ಸಾರಾಂಶ

ಮನುಷ್ಯ ಮತ್ತೆ ಪ್ರಾಣಿ ಮಧ್ಯೆ ಒಂದೇ ಒಂದು ಭಿನ್ನತೆಯಿದೆ. ಇದೇ ಮನುಷ್ಯ ಇಷ್ಟು ಮುಂದೆ ಸಾಗಲು, ಸಾಧನೆ ಮಾಡಲು ಕಾರಣವಾಗಿದೆ. ಆ ಒಂದು ಗುಣ ಮನಷ್ಯನಲ್ಲಿ ಇಲ್ಲ ಅಂದ್ರೆ ಆತ ಪ್ರಾಣಿಗಳ ಸಾಲಿನಲ್ಲಿ ನಿಲ್ಲುತ್ತಾನೆ.    

ಮಂಗನಿಂದ ಮಾನವ ಎನ್ನಲಾಗುತ್ತದೆ. ಅಂದ್ರೆ ಮಾನವ ಹಿಂದೆ ಪ್ರಾಣಿಯಾಗಿದ್ದ. ಇದೇ ಕಾರಣಕ್ಕೆ ಮನುಷ್ಯನಲ್ಲಿ ಪ್ರಾಣಿಯ ಅನೇಕ ಸ್ವಭಾವವನ್ನು ನಾವು ನೋಡಬಹುದು. ಮನುಷ್ಯ ಹಾಗೂ ಪ್ರಾಣಿ ಮಧ್ಯೆ ಅನೇಕ ಸ್ವಭಾವದಲ್ಲಿ ಸಾಮ್ಯತೆಯಿದೆ. ಅರ್ಥಶಾಸ್ತ್ರಜ್ಞ ಚಾಣಕ್ಯ ಕೂಡ ಇದ್ರ ಬಗ್ಗೆ ಹೇಳಿದ್ದಾನೆ. ಚಾಣಕ್ಯ ಬರೀ ಅರ್ಥ ಶಾಸ್ತ್ರಜ್ಞನಾಗಿರಲಿಲ್ಲ, ಆತ ನಮ್ಮ ಈಗಿನ ಹಾಗೂ ಮುಂದಿನ ಜೀವನಕ್ಕೆ ಅಗತ್ಯವಿರುವ ಅನೇಕ ಸಂಗತಿಗಳನ್ನು ಹೇಳಿದ್ದಾನೆ. ಚಾಣಕ್ಯ ನೀತಿಯನ್ನು ಡಿಜಿಟಲ್ ಯುಗದಲ್ಲೂ ಪಾಲನೆ ಮಾಡಬಹುದು. ಚಾಣಕ್ಯ ಮನುಷ್ಯನಾದವನು ಹೇಗಿರಬೇಕು, ಯಶಸ್ಸು ಗಳಿಸಲು ಏನು ಮಾಡಬೇಕು, ಸಾಧನೆಗಾಗಿ ಏನೆಲ್ಲ ತ್ಯಾಗ ಮಾಡಬೇಕು, ಯಾರಿಂದ ದೂರವಿರಬೇಕು ಹೀಗೆ ಚಾಣಕ್ಯ ಹೇಳದ ವಿಷ್ಯವಿಲ್ಲ. 

ಚಾಣಕ್ಯ (Chanakya) ಮಾನವರು ಮತ್ತು ಪ್ರಾಣಿ (Animal) ಗಳಲ್ಲಿ 4 ಗುಣಗಳು ಒಂದೇ ಆಗಿರುತ್ತವೆ ಎಂದಿದ್ದಾನೆ. ಆದರೆ ಮನುಷ್ಯನನ್ನು ಪ್ರಾಣಿಗಳಿಗಿಂತ ಭಿನ್ನವಾಗಿಸುವ ಒಂದು ಗುಣವಿದೆ. ಈ ಗುಣ ಮನುಷ್ಯನಲ್ಲಿ ಇಲ್ಲದೆ ಹೋಗಿದ್ರೆ ಆತನನ್ನು ಪಶುವಿನಂತೆ ನೋಡಲಾಗ್ತಾಯಿತ್ತು ಎನ್ನುತ್ತಾರೆ ಚಾಣಕ್ಯ. ಚಾಣಕ್ಯ ನೀತಿಶಾಸ್ತ್ರದ 17ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ಈ ವಿಷ್ಯವನ್ನು ಚಾಣಕ್ಯ ಹೇಳಿದ್ದಾನೆ. ಜೀವನದಲ್ಲಿ ಯಶ ಕಾಣಬೇಕೆಂದ್ರೆ, ಪ್ರಾಣಿಯ ಸಾಲಿಗೆ ಸೇರಬಾರದು ಅಂದ್ರೆ ಮನುಷ್ಯ ಒಂದು ಗುಣವನ್ನು ಎಂದಿಗೂ ಬಿಡಬಾರದು ಎನ್ನುತ್ತಾನೆ  ಚಾಣಕ್ಯ.  

ಜ್ಞಾನೇನ ಹೀನಾಃ ಪಶುಭಿಃ ಸಮಾನಾಃ 

ಈ ಶ್ಲೋಕ (Shloka) ದಲ್ಲಿ ಮನುಷ್ಯ ಹೇಗೆ ಪ್ರಾಣಿಗಿಂತ ಭಿನ್ನವಾಗಿ ನಿಲ್ಲುತ್ತಾನೆ ಎಂಬುದನ್ನು ಹೇಳಲಾಗಿದೆ. ಹಾಗೆಯೇ ಮನುಷ್ಯನಿಗೆ ಏಕೆ ಇದು ಮುಖ್ಯ ಎಂಬುದನ್ನು ಕೂಡ ಚಾಣಕ್ಯ ಹೇಳಿದ್ದಾನೆ.

ಮುಂಜಾನೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಲಕ್ಷ್ಮೀ ದೇವಿ ಪ್ರಸನ್ನಳಾಗ್ತಾಳೆ

ಚಾಣಕ್ಯನ ಪ್ರಕಾರ, ಮನುಷ್ಯನಿರಲಿ,  ಪ್ರಾಣಿ ಇರಲಿ ಇಬ್ಬರೂ ಹೊಟ್ಟೆಗೆ ಆದ್ಯತೆ ನೀಡ್ತಾರೆ. ಆಹಾರ (Food) ವಿಲ್ಲದೆ ಇಬ್ಬರು ಬದುಕುವುದು ಅಸಾಧ್ಯ ಎನ್ನುತ್ತಾರೆ ಚಾಣಕ್ಯ. ಹೊಟ್ಟೆ ತುಂಬಿದ ಮೇಲೆ ನಿದ್ರೆ ಬಂದೇ ಬರುತ್ತೆ. ಚಾಣಕ್ಯನ ಪ್ರಕಾರ ಆಹಾರದ ನಂತ್ರ ಪ್ರಾಣಿ ಹಾಗೂ ಮನುಷ್ಯ ಇಬ್ಬರೂ ನಿದ್ರೆಗೆ ಪ್ರಾಮುಖ್ಯತೆ ನೀಡ್ತಾರೆ. ಮನುಷ್ಯನ ರೀತಿಯಲ್ಲಿಯೇ ಪ್ರಾಣಿಗಳು ಕೂಡ ನಿದ್ರೆ ಮಾಡದೆ ಇರಲು ಸಾಧ್ಯವಾಗುವುದಿಲ್ಲ. ನಿದ್ರೆ ಸರಿಯಾಗಿದ್ರೆ ದೇಹಕ್ಕೆ ಶಕ್ತಿ ಸಿಗುತ್ತದೆ. ದುರ್ಬಲ ವ್ಯಕ್ತಿ ಕೆಲಸಕ್ಕೆ ಅರ್ಹನಾಗಿರುವುದಿಲ್ಲ. ಆತನಲ್ಲಿ ಕೆಲಸ ಮಾಡುವ ಶಕ್ತಿ ಇರೋದಿಲ್ಲ. ಶಕ್ತಿ ಬೇಕು, ಆಲಸ್ಯ ಹೋಗಿ ಉತ್ಸಾಹದಿಂದ ಇರಬೇಕೆಂದ್ರೆ ನಿದ್ರೆ ಮಾಡ್ಬೇಕು ಎಂಬುದು ಚಾಣಕ್ಯನ ಅಭಿಪ್ರಾಯ.  

ಇನ್ನು ಸಂಭೋಗದ ವಿಷ್ಯದಲ್ಲೂ ಪ್ರಾಣಿಗಳು ಹಾಗೂ ಮನುಷ್ಯರು ಒಂದೆ. ಸೃಷ್ಟಿಯ ಪ್ರಗತಿಗೆ ಮನುಷ್ಯರಂತೆ ಪ್ರಾಣಿಗಳ ಸಂಭೋಗವೂ ಅಗತ್ಯ. 

ಇನ್ನು ಮನುಷ್ಯ ಮತ್ತು ಪ್ರಾಣಿಗೆ ಹೋಲುವ ಇನ್ನೊಂದು ಸ್ವಭಾವವೆಂದ್ರೆ ಭಯ. ಮನುಷ್ಯರಲ್ಲಿ ಭಯದ ಭಾವನೆ ಸಹಜವಾಗಿರುತ್ತದೆ. ಅನೇಕ ರೀತಿಯ ಭಯವು ಮನುಷ್ಯರನ್ನು ಕಾಡುತ್ತದೆ. ಹಾಗೆಯೇ ಪ್ರಾಣಿಗಳು ಕೂಡ ಭಯವನ್ನು ಹೊಂದಿರುತ್ತಾರೆ. ಬೇರೆ ಪ್ರಾಣಿಗಳು ಹಾಗೂ ಮನುಷ್ಯನಿಂದ ರಕ್ಷಿಸಿಕೊಳ್ಳಲು ಅವರು ಮುಂದಾಗ್ತಾರೆ. ಹಾಗಾಗಿ ಇಬ್ಬರಲ್ಲೂ ಭಯದ ಸ್ವಭಾವವಿರುತ್ತದೆ ಎನ್ನುತ್ತಾರೆ ಚಾಣಕ್ಯ. 

ಚಾಣಕ್ಯ ಹೇಳಿದ ಈ ವಿಷಯಗಳನ್ನು ಎಂದಿಗೂ ಮರೆಯಬೇಡಿ

ಪ್ರಾಣಿಗಿಂತ ಮನುಷ್ಯ ಭಿನ್ನವಾಗಿರುವುದು ಜ್ಞಾನದ ವಿಷ್ಯದಲ್ಲಿ ಎನ್ನುತ್ತಾರೆ ಚಾಣಕ್ಯ. ಪ್ರಾಣಿಗಳಿಗೆ ಇಲ್ಲದ ಸ್ವಭಾವ ಇದು. ಬುದ್ಧಿವಂತಿಕೆಯು ಮಾನವರಲ್ಲಿ ಮಾತ್ರ ಕಾಣಿಸುತ್ತದೆ. ಮನುಷ್ಯ ಬುದ್ಧಿವಂತಿಕೆಯ ಬಲದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಬಲ್ಲ. 
ಯಾರಿಗೆ ಜ್ಞಾನವಿಲ್ಲವೋ ಅವರು ಪ್ರಾಣಿಗಳಂತೆ ಎಂದು ಚಾಣಕ್ಯ ಹೇಳುತ್ತಾನೆ. ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬಯಸದ ಅಥವಾ ಜ್ಞಾನಕ್ಕಾಗಿ ಹಾತೊರೆಯದ ವ್ಯಕ್ತಿ ಪ್ರಾಣಿ ಇದ್ದಂತೆ. ಜ್ಞಾನ ನಮ್ಮ ಬಳಿ ಬರೋದಿಲ್ಲ, ನಾವು ಜ್ಞಾನವನ್ನು ಅರಸಿ ಹೋಗಬೇಕು. ಎಲ್ಲಿ ಜ್ಞಾನ ಸಿಕ್ಕರೂ ಅದನ್ನು ಸಂಪಾದಿಸುತ್ತಲೇ ಇರಬೇಕು ಎನ್ನುತ್ತಾನೆ ಚಾಣಕ್ಯ. ಜ್ಞಾನದ ಸಹಾಯದಿಂದ, ಎಲ್ಲಾ ತೊಂದರೆಗಳನ್ನು ನಿವಾರಿಸಬಹುದು. ಸಾಧಿಸಬೇಕು ಎಂದಾದ್ರೆ ಜ್ಞಾನ ಸಂಪಾದನೆ ಮಾಡ್ಲೇಬೇಕು ಎಂಬುದು ಚಾಣಕ್ಯನ ಅಭಿಪ್ರಾಯ. 
 

PREV
Read more Articles on
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ