ಕೆಲ ರಾಶಿಗಳ ಜನರು ಆಳವಾದ ಭಾವನಾತ್ಮಕತೆ, ಸಂಕೀರ್ಣ ವ್ಯಕ್ತಿತ್ವ ಹೊಂದಿರುತ್ತಾರೆ. ಇವರಲ್ಲಿ ನಿಗೂಢತೆಯೂ ಇರುತ್ತದೆ. ಪರಿಣಾಮವಾಗಿ, ವಿಚಿತ್ರ ಎಂದು ಇತರರು ಅಂದುಕೊಳ್ಳುವಂತೆ ಇವರು ವರ್ತಿಸಬಲ್ಲರು.
ನಾವ್ಯಾರೂ ನಮ್ಮ ಗುಣ ಸ್ವಭಾವಗಳನ್ನು ಬೇಕೆಂದೇ ನಿರ್ಮಿಸಿಕೊಳ್ಳುವುದಿಲ್ಲ. ಅವು ಹೇಗೋ ನಮ್ಮಲ್ಲಿರುತ್ತವೆ. ಪರಿಸ್ಥಿತಿ, ಬೆಳೆದ ವಾತಾವರಣಗಳು ಮನುಷ್ಯನ ಮೇಲೆ ಪರಿಣಾಮ ಬೀರುತ್ತವೆಯಾದರೂ, ಬಹಳಷ್ಟು ಗುಣ ಸ್ವಭಾವಗಳು ಜನ್ಮಜಾತವಾಗಿರುತ್ತವೆ. ಅವು ನಮ್ಮಲ್ಲೇ ಏಕೆ ಇವೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಉತ್ತರವಿದೆ. ಮನುಷ್ಯನ ಪ್ರಕೃತಿ ರೂಪುಗೊಳ್ಳಲು ರಾಶಿಚಕ್ರಗಳು, ಗ್ರಹಗಳು ಕಾರಣವಾಗುತ್ತವೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹೌದು, ರಾಶಿಚಕ್ರಗಳು ಮನುಷ್ಯನ ಗುಣಸ್ವಭಾವ ಅರಿತುಕೊಳ್ಳುವಲ್ಲಿ ಸಾಕಷ್ಟು ಸಹಕಾರಿಯಾಗುತ್ತವೆ. ನಮ್ಮವರ ಅದೆಷ್ಟೋ ವರ್ತನೆಗಳನ್ನು ಇವುಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಎಷ್ಟೋ ಜನ ಸಮತೋಲನ ಸ್ವಭಾವ ಹೊಂದಿದ್ದರೆ, ಕೆಲವರು ಹೆಚ್ಚು ಸೂಕ್ಷ್ಮತನ ಹೊಂದಿರುತ್ತಾರೆ, ಮತ್ತೆ ಕೆಲವರಲ್ಲಿ ಹಠಮಾರಿತನವೇ ಹೆಚ್ಚಾಗಿದ್ದರೆ, ಕೆಲವರು ನಿಗೂಢವಾಗಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 5 ರಾಶಿಗಳು ನಿಗೂಢತೆಯನ್ನು ಹೆಚ್ಚು ಹೊಂದಿರುತ್ತವೆ. ಈ ರಾಶಿಗಳು ಯಾವುವೆಂದು ಅರಿತುಕೊಳ್ಳೋಣ.
• ವೃಶ್ಚಿಕ (Scorpio)-ಆಕರ್ಷಕ ಮತ್ತು ನಿಗೂಢ (Mysterious)
ಭಾವ ತೀವ್ರತೆಗೆ (Passionate Nature) ಮತ್ತೊಂದು ಹೆಸರಾಗಿರುವ ವೃಶ್ಚಿಕ ರಾಶಿಯ ಜನ ಆಕರ್ಷಕ (Magnetic) ವ್ಯಕ್ತಿತ್ವವನ್ನೂ ಹೊಂದಿರುತ್ತಾರೆ. ಎಲ್ಲ ರಾಶಿಗಿಂತ ಇವರು ನಿಗೂಢವಾಗಿರುತ್ತಾರೆ. ಪ್ಲೂಟೋ ಗ್ರಹಾಧಿಪತಿಯಾಗಿದ್ದು, ಇದು ಪರಿವರ್ತನೆ ಮತ್ತು ಮರುಹುಟ್ಟನ್ನು ಪ್ರತಿನಿಧಿಸುತ್ತದೆ. ಹೀಗಾಗಿ, ಈ ರಾಶಿಯ ಜನರಿಗೆ ವಿಶ್ವದಲ್ಲಿರುವ ಗುಪ್ತ ಸತ್ಯಗಳನ್ನು (Hidden Truth) ಅರಿಯುವ ಆಸೆ ಹೆಚ್ಚು. ಮತ್ತೊಬ್ಬರ ಭಾವನೆ, ಉದ್ದೇಶಗಳನ್ನು ಸುಲಭವಾಗಿ ಗ್ರಹಿಸುತ್ತಾರೆ. ಇಂಥದ್ದೊಂದು ಅಂತಃದೃಷ್ಟಿ ಹೊಂದಿರುವುದರಿಂದ ಕೆಲವೊಮ್ಮೆ ಅಸೂಯೆ, ಪೊಸೆಸಿವ್ ನೆಸ್, ಮ್ಯಾನಿಪ್ಯುಲೇಟ್ ಗುಣವನ್ನು ಪ್ರದರ್ಶಿಸುತ್ತಾರೆ. ತಮ್ಮದೇ ಮಾನಸಿಕತೆಯ ಆಳಕ್ಕಿಳಿಯಲು ಇವರಿಗೆ ಯಾವುದೇ ಹಿಂಜರಿಕೆಯಿಲ್ಲ.
Heartbreak Zodiac Sign: ಪ್ರೀತಿ ಮಾಯೆ ಹುಷಾರು.. ಈ ರಾಶಿಯವರ ಪ್ರಾಣ ತೆಗೆಯುತ್ತೆ ಬ್ರೇಕ್ ಅಪ್..!
• ಮಕರ (Capricorn)-ಮಹತ್ವಾಕಾಂಕ್ಷಿ ಮತ್ತು ಪ್ರಾಯೋಗಿಕ
ಶಿಸ್ತು, ಮಹತ್ವಾಕಾಂಕ್ಷೆ (Ambitious), ಯಶಸ್ಸನ್ನು ಬಹುವಾಗಿ ಬಯಸುವ ಮಕರ ರಾಶಿಯ ಜನರಲ್ಲಿ ಬೇರೊಬ್ಬರಿಗೆ ಅರಿವಾಗದ ಕಪ್ಪು ಭಾಗವೂ ಇರುತ್ತದೆ. ಅಧಿಕಾರ (Power) ಮತ್ತು ನಿಯಂತ್ರಣಕ್ಕಾಗಿ ಅವರಲ್ಲಿ ಅಪಾರ ದಾಹವಿರುತ್ತದೆ. ತಮ್ಮ ಆಸೆ-ಆಕಾಂಕ್ಷೆಗಳ ಆಳಕ್ಕಿಳಿದು ಪರಾಮರ್ಶೆ ಮಾಡಬಲ್ಲ ಚಾಕಚಕ್ಯತೆ ಇವರಲ್ಲಿರುತ್ತದೆ. ಇದರಿಂದಾಗಿ ನೈತಿಕತೆಯನ್ನೂ ಮೀರಿ ಕೆಟ್ಟದಾಗಿ ಇತರರನ್ನು ಪ್ರೇರೇಪಿಸುವ (Manipulate) ಗುಣ ಹೊಂದಬಹುದು. ತಮ್ಮ ಗುರಿ ಸಾಧನೆಗೆ ಇತರರನ್ನು ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ಗುಣವೂ ಕಂಡುಬರುತ್ತದೆ.
• ಮೀನ (Pisces)-ಕನಸುಗಾರ (Dreamy) ಮತ್ತು ನಿಗೂಢ
ದ್ವಾದಶ ರಾಶಿಗಳ ಪೈಕಿಯಲ್ಲೇ ಕನಸುಗಾರ ರಾಶಿ ಎನಿಸಿಕೊಂಡಿರುವ ಮೀನ ರಾಶಿಯಲ್ಲಿ ನಿಗೂಢತೆಯೂ ಇದೆ. ನೆಪ್ಚೂನ್ ಗ್ರಹಾಧಿಪತಿಯಾಗಿದ್ದು, ಭ್ರಮೆ ಮತ್ತು ಆಧ್ಯಾತ್ಮಿಕತೆಯನ್ನು ಹೊಂದಿರುತ್ತದೆ. ಈ ರಾಶಿಯ ಜನ ಆಳವಾದ ಭಾವನೆಗಳನ್ನು ಹೊಂದಿದ್ದು, ಅಪೂರ್ವ ಕಲ್ಪನಾ ಶಕ್ತಿ ಹೊಂದಿರುತ್ತಾರೆ. ಆದರೆ, ವಾಸ್ತವದಿಂದ ಹಿಮ್ಮೆಟ್ಟುವ ಅಥವಾ ಪಲಾಯನ ಮಾಡುವ ಗುಣದಿಂದಾಗಿ ಕೆಲವೊಮ್ಮೆ ತಮಗೆ ತಾವೇ ಹಾನಿ ತಂದುಕೊಳ್ಳುವ ಗುಣ ಪ್ರದರ್ಶಿಸುತ್ತಾರೆ. ವ್ಯಸನಕ್ಕೆ (Addiction) ತುತ್ತಾಗಬಹುದು ಅಥವಾ ಹಗಲು ಕನಸು ಕಾಣುತ್ತ ಜೀವನ (Life) ಕಳೆಯಬಹುದು. ನಿಜ ಜೀವನದ ಸಂಕಷ್ಟಗಳು ಇವರನ್ನು ಅತೀವ ದುಃಖಿಗಳನ್ನಾಗಿ ಮಾಡುತ್ತವೆ. ಆದರೆ, ಜನರ ಸ್ಥಿತಿಗತಿ ಅರ್ಥ ಮಾಡಿಕೊಳ್ಳುವ ಗುಣವನ್ನೂ ಹೊಂದಿರುತ್ತಾರೆ.
• ಕರ್ಕಾಟಕ (Cancer)-ಸೂಕ್ಷ್ಮತೆ
ಕರ್ಕಾಟಕ ಭಾವನಾತ್ಮಕ ರಾಶಿ. ಆಳವಾದ ಭಾವನೆಗಳಲ್ಲಿ ಮುಳುಗುವ, ಅಂತಃಪ್ರಜ್ಞೆ (Intution) ಹೊಂದಿರುವ ಈ ರಾಶಿಯ ಜನರ ಮನೋಸ್ಥಿತಿಯಲ್ಲಿ (Mentality) ಏರಿಳಿತವಾಗುವುದು ಹೆಚ್ಚು. ಭಾವನಾತ್ಮಕ ಸೂಕ್ಷ್ಮತೆ ಹೊಂದಿರುವುದರಿಂದ ಮತ್ತೊಬ್ಬರ ಉದ್ದೇಶ, ಅಂತರಾಳವನ್ನು ಬಹಳ ಚೆನ್ನಾಗಿ ಅರಿಯುತ್ತಾರೆ. ಈ ಗುಣದಿಂದಾಗಿ ಇವರಲ್ಲಿ ಮನಸ್ಥಿತಿಯ ಏರಿಳಿತ ಕಂಡುಬರುತ್ತದೆ. ಆರೈಕೆ ಮಾಡುವ ಹಾಗೂ ರಕ್ಷಣಾತ್ಮಕ ಗುಣವಿದ್ದರೂ ಮತ್ತೊಬ್ಬರ ಮನಸ್ಥಿತಿ ಅರಿತುಕೊಳ್ಳುವ ಗುಣದಿಂದಾಗಿ ಅಂಟಿಕೊಳ್ಳುವ (Clinginess) ಸ್ವಭಾವ ಹೊಂದುತ್ತಾರೆ. ಹಾಗೆಯೇ, ಭಾವನಾತ್ಮಕವಾಗಿ ಮ್ಯಾನಿಪುಲೇಟ್ ಮಾಡುತ್ತಾರೆ.
ಈ ಸುಳಿವುಗಳು ನಿಮಗೆ ಪೂರ್ವ ಜನ್ಮವನ್ನು ನೆನಪಿಸುತ್ತವೆ..!
• ಕುಂಭ-ವಿಲಕ್ಷಣ (Eccentric) ಮತ್ತು ವಿರಕ್ತ
ದ್ವಾದಶ ರಾಶಿಗಳ ಪೈಕಿ ಕುಂಭ ರಾಶಿ ಹೆಚ್ಚು ವಿಲಕ್ಷಣವಾಗಿದೆ. ಅಸಾಂಪ್ರದಾಯಿಕ ಹಾಗೂ ಸ್ವತಂತ್ರ ಚಿಂತನೆ ಹೊಂದಿರುವ ಕುಂಭ ರಾಶಿಯ ಜನ ತಮ್ಮ ವಿರಕ್ತ (Detached) ಹಾಗೂ ಕ್ರಾಂತಿಕಾರಿ ಗುಣದಿಂದಾಗಿ ವಿಚಿತ್ರ ಎನಿಸುತ್ತಾರೆ. ಯುರೇನಸ್ ಗ್ರಹಾಧಿಪತಿಯಾಗಿದ್ದು, ಏಕಾಏಕಿ ಬದಲಾವಣೆ, ಅನ್ವೇಷಣೆಯ ಗುಣವನ್ನು ತೋರುತ್ತದೆ. ಸಾಮಾಜಿಕ ನಿಯಮ ಮತ್ತು ನಿರೀಕ್ಷೆಗಳನ್ನು ಇವರು ಒಪ್ಪಿಕೊಳ್ಳುವುದಿಲ್ಲ. ವಿರಕ್ತ ಗುಣದಿಂದಾಗಿ ಕೆಲವೊಮ್ಮೆ ಇವರಲ್ಲಿ ತಾವು ಸುಪೀರಿಯರ್ ಎನ್ನುವ ಭಾವನೆ ಮೂಡಬಹುದು. ಭಾವನಾತ್ಮಕವಾಗಿ (Emotionally) ಇವರನ್ನು ಸ್ಪರ್ಶಿಸಲು ಕಷ್ಟವಾಗಬಹುದು. ಆದರೆ, ಇವರಲ್ಲಿರುವ ಕ್ರಾಂತಿಕಾರಿ ಗುಣ ಸಾಮಾಜಿಕ ಬದಲಾವಣೆಗೂ ಕಾರಣವಾಗಬಲ್ಲದು.