ದುರ್ಗಾದೇವಿಯ ಸ್ವರೂಪವಾದ್ರೂ ನಡೆಯೋದಿಲ್ಲ ಪೂಜೆ ! ಮನೆಯಲ್ಲಿ ಕಾಳಿ ಆರಾಧನೆ ನಡೆಯೋದಿಲ್ಲ ಏಕೆ?

Published : Nov 19, 2026, 09:42 PM IST
Kali

ಸಾರಾಂಶ

Kali Puja: ಕಾಳಿ ಮಾತೆಯ ದೇವಸ್ಥಾನಕ್ಕೆ ಹೋಗುವ ಭಕ್ತರು ಮನೆಯಲ್ಲಿ ಅದ್ರ ಫೋಟೋ ಇಟ್ಟು ಪೂಜೆ ಮಾಡೋದಿಲ್ಲ. ಸಾಮಾನ್ಯರ ಮನೆಯಲ್ಲಿ ಕಾಳಿ ಪೂಜೆ ನಡೆಯೋದಿಲ್ಲ ಏಕೆ ಗೊತ್ತಾ?

ಹಿಂದೂ ಧರ್ಮದಲ್ಲಿ ಕಾಳಿ ಮಾತೆಯನ್ನು ಶಕ್ತಿ, ಧೈರ್ಯ ಮತ್ತು ದುಷ್ಟ ಶಕ್ತಿಗಳನ್ನು ಸಂಹರಿಸುವ ದೇವಿಯಾಗಿ ಪೂಜಿಸಲಾಗುತ್ತೆ. ಕಾಳಿ ರೂಪ ಎಷ್ಟು ಶಕ್ತಿಶಾಲಿಯಾಗಿದೆಯೋ, ಆರಾಧನೆಯೂ ಅಷ್ಟೇ ಮಹತ್ವ ಪಡೆದಿದೆ. ಮುಖ್ಯವಾಗಿ ತಾಂತ್ರಿಕ ಪೂಜಾ ಪದ್ಧತಿಯಲ್ಲಿ ಕಾಳಿ ಮಾತೆಯ ಆರಾಧನೆಗೆ ವಿಶೇಷ ಸ್ಥಾನವಿದೆ. ಇದೇ ಕಾರಣಕ್ಕೆ ಹಲವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡೋದು ಸಹಜ. ಕಾಳಿ ಮಾತೆಯ ಫೋಟೋವನ್ನು ಮನೆಯಲ್ಲಿ ಇಡುವುದು ಸರಿಯೇ? ಅದಕ್ಕೆ ಉತ್ತರ ಇಲ್ಲಿದೆ.

ಕಾಳಿ ಮಾತೆಯನ್ನು ಮನೆಯಲ್ಲಿ ಪೂಜಿಸ್ಬಹುದಾ?

ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಕಾಳಿ ಮಾತೆಯ ಫೋಟೋ ಇಡುವುದು ತಪ್ಪಲ್ಲ. ಆದರೆ ವಾಸ್ತು ಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಕಾಳಿ ಮಾತೆಯ ಫೋಟೋ ಇಡುವುದಕ್ಕೆ ಕೆಲವು ನಿಯಮಗಳಿವೆ. ಅವುಗಳನ್ನು ಪಾಲಿಸುವುದು ಮುಖ್ಯವೆಂದು ಪರಿಗಣಿಸಲಾಗುತ್ತೆ. ಫೋಟೋ ಇಡುವಾಗ ಮತ್ತು ಪೂಜಿಸುವಾಗ ಕೆಲವು ವಿಶೇಷ ವಾಸ್ತು ನಿಯಮಗಳನ್ನು ಪಾಲಿಸಬೇಕು. ಕಾಳಿ ಮಾತೆಯನ್ನು ನಕಾರಾತ್ಮಕ ಶಕ್ತಿಗಳನ್ನು ನಾಶಮಾಡುವ ಮತ್ತು ಭಕ್ತರನ್ನು ರಕ್ಷಿಸುವ ದೇವಿ ಎಂದು ನಂಬಲಾಗಿದೆ. ಅವರ ಆರಾಧನೆಯಿಂದ ಧೈರ್ಯ, ಆತ್ಮವಿಶ್ವಾಸ ಹಾಗೂ ಕೆಟ್ಟ ಸಂಗತಿಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ.

ಫೋಟೋ ಇಡುವ ನಿಯಮ ಏನು?

ಸಾಧನೆ ಅಥವಾ ಸಿದ್ಧಿ ಪಡೆದವರು, ಇಲ್ಲವೇ ಈ ಕುರಿತು ದೀಕ್ಷೆ ಪಡೆದವರು ಮಾತ್ರ ಕಾಳಿ ಮಾತೆಯ ಫೋಟೋವನ್ನು ಮನೆಯಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ. ಯಾವುದೇ ರೀತಿಯ ದೀಕ್ಷೆ ಅಥವಾ ಸಾಧನೆ ಇಲ್ಲದೆ ಇರುವವರು ಕಾಳೆ ಫೋಟೋವನ್ನು ಮನೆಯಲ್ಲಿ ಇಡಬಾರದು ಎಂಬ ನಂಬಿಕೆ ಇದೆ.

ಕಾಳಿ ಮಾತೆಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಲು ದೀಕ್ಷೆ ಪಡೆದಿದ್ದರೆ, ಮನೆಯ ಪೂಜಾ ಸ್ಥಳವನ್ನು ಸ್ವಚ್ಛವಾಗಿ ಮತ್ತು ಶಾಂತವಾಗಿಡಬೇಕು. ಕಾಳಿ ಫೋಟೋವನ್ನು ಪೂಜಾ ಕೋಣೆಯಲ್ಲಿ ಅಥವಾ ನಿಯಮಿತವಾಗಿ ಪೂಜೆ ಮಾಡಲು ಸಾಧ್ಯವಾಗುವ ಸ್ಥಳದಲ್ಲಿ ಇಡಬೇಕು. ಒಮ್ಮೆ ಮನೆಯಲ್ಲಿ ಕಾಳಿ ಮಾತೆಯ ಫೋಟೋವನ್ನು ಇಟ್ಟರೆ, ಪ್ರತಿನಿತ್ಯ ನಿಯಮಿತವಾಗಿ ಪೂಜೆ ಮತ್ತು ಆರಾಧನೆ ಮಾಡುವುದು ಅಗತ್ಯ.

ಮನೆಯ ಪೂಜಾ ಸ್ಥಳದಲ್ಲಿ ಕಾಳಿ ಮಾತೆಯ ಸ್ಪಷ್ಟವಾದ ಮತ್ತು ಭಕ್ತಿಭಾವ ಮೂಡಿಸುವ ಚಿತ್ರವನ್ನು ಇಡುವುದು ಉತ್ತಮ ಎಂದು ಹೇಳಲಾಗುತ್ತದೆ. ಕುಟುಂಬದಲ್ಲಿ ಕಾಳಿ ಮಾತೆಯ ಶಾಂತ ಸ್ವರೂಪವನ್ನು ಪೂಜಿಸುವ ಸಂಪ್ರದಾಯವಿದ್ದರೆ, ಅದಕ್ಕೆ ಅನುಗುಣವಾದ ಫೋಟೋವನ್ನು ಆಯ್ಕೆ ಮಾಡಿಕೊಳ್ಳಬಹುದು. ಇನ್ನು ದೀಕ್ಷೆ ಪಡೆದವರು ಕಾಳಿ ಮಾತೆಯ ಉಗ್ರ ಸ್ವರೂಪದ ಚಿತ್ರವನ್ನೂ ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಮುಖ್ಯವಾಗಿ, ಫೋಟೋದ ಬಗ್ಗೆ ಮನಸ್ಸಿನಲ್ಲಿ ಭಕ್ತಿ ಮತ್ತು ಗೌರವ ಇರಬೇಕು.

ಮನೆಯಲ್ಲಿ ಕಾಳಿ ಮಾತೆಯ ಫೋಟೋವನ್ನು ಇಟ್ಟುಕೊಳ್ಳುವವರು ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದರಿಂದ ಪೂಜಾ ಸ್ಥಳದ ಪಾವಿತ್ರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು.

• ಕಾಳಿ ಮಾತೆಯ ಫೋಟೋವನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಕೆಂಪು ಬಟ್ಟೆಯನ್ನು ಹಾಸಿ ಗೌರವಪೂರ್ವಕವಾಗಿ ಇಡಬೇಕು. ಸ್ವಚ್ಛತೆ ಇಲ್ಲದ ಸ್ಥಳದಲ್ಲಿ ಫೋಟೋ ಇಡಬಾರದು.

• ಪ್ರತಿನಿತ್ಯ ನಿಯಮಿತವಾಗಿ ಪೂಜೆ ಮತ್ತು ಆರತಿ ಮಾಡಬೇಕು. ಭಕ್ತಿಯಿಂದ ನೈವೇದ್ಯ ಅರ್ಪಿಸಬೇಕು.

• ಫೋಟೋದ ಸುತ್ತಮುತ್ತ ಅನಗತ್ಯ ವಸ್ತುಗಳನ್ನು ಸಂಗ್ರಹಿಸಿಡಬಾರದು. ಪೂಜಾ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾಳಿ ಮಾತೆ ಅಧರ್ಮ, ಭಯ ಮತ್ತು ದುಷ್ಟ ಶಕ್ತಿಗಳನ್ನು ನಾಶಮಾಡುವ ದೇವಿಯಾಗಿದ್ದಾಳೆ. ಅವರ ಸ್ವರೂಪ ಶಕ್ತಿ ಮತ್ತು ನಿರ್ಭಯತೆಯ ಸಂಕೇತವಾಗಿದೆ. ಹೀಗಾಗಿ ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸುವ ಮೂಲಕ ಮನೆಯಲ್ಲಿ ಕಾಳಿ ಮಾತೆಯ ಫೋಟೋ ಇಟ್ಟು ಭಕ್ತಿಯಿಂದ ಪೂಜಿಸಬಹುದು ಎನ್ನಲಾಗಿದೆ.

PREV
Read more Articles on
click me!

Recommended Stories

Chanakya Niti: ಚಾಣಕ್ಯರ ಪ್ರಕಾರ ಈ 5 ಜನರಿಗೆ ಸಹಾಯ ಮಾಡಿದರೆ ನಿಮಗೇ ನಷ್ಟ! ಯಾರು ಆ ವ್ಯಕ್ತಿಗಳು?
ಮಂಗಳ-ಗುರು ಸಂಯೋಗದಿಂದ 4 ರಾಶಿಗೆ ಕುಬೇರ ಯೋಗ; ನವೆಂಬರ್ 30ರೊಳಗೆ ಹಣದ ಸುರಿಮಳೆ, ಚಿನ್ನ