ನಾಳೆ ತೊಟ್ಟಿಲಮಡು ಜಾತ್ರೆ: ಸಂತಾನ ಭಾಗ್ಯ ಕರುಣಿಸೋ ಪುಣ್ಯ ಪವಿತ್ರ ಕ್ಷೇತ್ರವಿದು, ಏನಿದರ ಮಹಿಮೆ?

Kannadaprabha News   | Kannada Prabha
Published : Nov 18, 2026, 10:34 AM IST
Rajamudi Utsav 2026

ಸಾರಾಂಶ

ಕಾರ್ತಿಕ ಮಾಸದ ರಾಜಮುಡಿ ಬ್ರಹ್ಮೋತ್ಸವದ ಆರನೇ ದಿನದ ಅಷ್ಟತೀರ್ಥೋತ್ಸವವು ಮಕ್ಕಳ ಭಾಗ್ಯ ಕರುಣಿಸುವ ಉತ್ಸವವೆಂದು ಪ್ರಸಿದ್ಧವಾಗಿದೆ. ತೊಟ್ಟಿಲಮಡು ಜಾತ್ರೆಯಲ್ಲಿ ಪವಿತ್ರ ಸ್ನಾನ ಮತ್ತು ವೈಕುಂಠನಾಥನ ಪೂಜೆಯಿಂದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಈ ಬಾರಿ ಆಕರ್ಷಕ ದೀಪಾಲಂಕಾರ ಮತ್ತು ಕದಂಬ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಕಾರ್ತಿಕ ಮಾಸದ ರಾಜಮುಡಿ ಬ್ರಹ್ಮೋತ್ಸವ(Rajamudi Utsav)ದ ಆರನೇ ದಿನದ ಅಷ್ಠತೀರ್ಥೋತ್ಸವ ‘ಮಕ್ಕಳಭಾಗ್ಯ ಕರುಣಿಸುವ ಉತ್ಸವ’ವೆಂದೇ ಖ್ಯಾತಿಯಾಗಿದ್ದು, ತೊಟ್ಟಿಲಮಡು ಜಾತ್ರೆಯಲ್ಲಿ ಹರಕೆ ಹೊತ್ತವರು ಯದುಗಿರಿಯ ಬೆಟ್ಟಗುಡ್ಡಗಳ ಮಧ್ಯೆ ಋಷಿಮುನಿಗಳು ತಪ್ಪಸುಮಾಡಿ ಸ್ಥಳಗಳಲ್ಲಿರುವ ಅಷ್ಠ ತೀರ್ಥಗಳಲ್ಲಿ ಪವಿತ್ರ ಸ್ನಾನ ಮಾಡಿ ಕೊನೆಯಲ್ಲಿ ವೈಕುಂಠನಾಥನಿಗೆ ಪೂಜೆ ಮಾಡಿದರೆ ಚೆಲುವನಾರಾಯಣಸ್ವಾಮಿ ಇಷ್ಠಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ವೈಕುಂಠನಾಥನಿಗೆ ವಿಶೇಷ ಪೂಜೆ

ಮೇಲುಕೋಟೆಗೆ ಬರುವ ಬಹುತೇಕ ಭಕ್ತರಿಗೆ ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುವ ಪಕೃತಿಯ ಮಡಿಲಿನ ಸುಂದರ ತಾಣ ತೊಟ್ಟಲಮಡುವಿನ ಪರಿಚಯವಿಲ್ಲ. ಸುತ್ತಮುತ್ತಲ ಹಳ್ಳಿಗಳ ಜನರು ಜಾತ್ರೆಯವೇಳೆ ಇಲ್ಲಿಗೆ ಆಗಮಿಸಿ ವೈಕುಂಠನಾಥನಿಗೆ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.

ಜಾತ್ತೆ ಹಿನ್ನೆಲೆಯಲ್ಲಿ ಇಂದಿನಿಂದಲೇ (ನ.18ರ) ಸಂಜೆಯಿಂದಲೇ ವೈಕುಂಠಗಂಗೆಯ ಇಡೀ ಪಾಕೃತಿಕ ಪರಿಸರಕ್ಕೆ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಪ್ರಥಮಬಾರಿಗೆ ಆಕರ್ಷಕ ದೀಪಾಲಂಕಾರ ಮಾಡಲಾಗುತ್ತಿದೆ. ಮಂಟಪಗಳಿಗೆ ಚಿನ್ನದಬಣ್ಣದ ದೀಪಾಲಂಕಾರ, ಮರಗಳಿಗೆ ಹಸುರಿನ ಚಿತ್ತಾರ, ಕಣಿವೆಬಳಿ ಆಕರ್ಷಕ ಸ್ವಾಗತ ಕಮಾನು, ಹಾಕಲಾಗುತ್ತದೆ. ವಿಶೇಷ ದೀಪಾಲಂಕಾರ ಗ್ರಾಪಂ ವ್ಯವಸ್ತೆಗೆ ಪೂರಕವಾಗಿರಲಿದೆ.

ಹಾಸನಾಂಭ ಸನ್ನಿಧಿಯಲ್ಲಿ ಸುಗಮಸಂಗೀತ ನಡೆಸಿಕೊಟ್ಟ ಮೈಸೂರಿನ ಕಲಾವಿದರ ತಂಡದಿಂದ ಭಕ್ತಿಸುಗಮ ಸಂಗೀತ ಏರ್ಪಡಿಸಲಾಗಿದೆ. ಅಷ್ಟತೀರ್ಥೋತ್ಸವ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕನಗೋನಹಳ್ಳಿ ಪರಮೇಶಗೌಡ ತಿಳಿಸಿದರು. ಈ ವೇಳೆ ಸದಸ್ಯರಾದ ವಿ ವೆಂಕಟರಾಮೇಗೌಡ, ಬಚ್ಚಿಕೊಪ್ಪಲು ರಾಜು, ವಕೀಲ ಕಾಡೇನಹಳ್ಳಿ ಸತೀಶ್, ಕದಲಗೆರೆ ಪುಟ್ಟಸ್ವಾಮಿಗೌಡರು, ಶೋಭರಾಮಚಂದ್ರು, ವೆಂಕಟೇಶ್ ಮತ್ತಿತತರು ಇದ್ದರು.

ಸ್ವಚ್ಛತಾ ಕಾರ್ಯ:

ತೊಟ್ಟಿಲಮಡುಗೆ ಬರುವ ರಸ್ತೆ ಹಾಗೂ ವೈಕುಂಠ ಗಂಗೆಯ ಬಳಿ ಸ್ವಚ್ಚತಾ ಕಾರ್ಯ ನಡೆದಿದೆ. ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿ ಬೆಳಕಿನ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ಗ್ರಾಪಂ ಅಧ್ಯಕ್ಷೆ ಭವಾನಿ ಹರಿಧರ, ಸದಸ್ಯರು ಹಾಗೂ ಪಿಡಿಒ ಪ್ರತಾಪ್ ಅವರು ಜಾತ್ರೆಗೆ ಭಕ್ತ ಸ್ನೇಹಿಯಾಗಿ ವ್ಯವಸ್ಥೆ ಮಾಡಿದ್ದಾರೆ.

ಇನ್ಸ್‌ಪೆಕ್ಟರ್ ಆನಂದಗೌಡ ಮಾರ್ಗದರ್ಶನದಲ್ಲಿ ಪೊಲೀಸರು ಭದ್ರತೆಗೆ ಸಜ್ಜುಗೊಂಡಿದ್ದಾರೆ. ಜಾತ್ರಾ ಸಮಯದಲ್ಲಿ ಕಣಿವೆ ಬಳಿಯಿಂದ ತೊಟ್ಟಿಲಮಡು ಬಳಿಗೆ ಯಾವುದೇ ವಾಹನಗಳು ಹೋಗುವುದನ್ನು ನಿಷೇಧಿಸಲಾಗಿದೆ.

ವಿಶೇಷ ಪ್ರಸಾದ ಕದಂಬ ವಿನಿಯೋಗ:

ಜಾತ್ರೆಗೆ ಬರುವ ಸಾವಿರಾರು ಭಕ್ತರಿಗೆ ಮೇಲುಕೋಟೆಯ ಪಾರಂಪರಿಕ ಆಹಾರ ಕದಂಬ ಮತ್ತು ದದಿಯೋದನ ಪ್ರಸಾದ ನೀಡಲಾಗುತ್ತದೆ. ದೇವಾಲಯ ಹಾಗೂ ವಿವಿಧ ಜನಾಂಗದವರು ವಿಶೇಷವಾದ ಕದಂಬ ಪ್ರಸಾದ ತಯಾರಿಸಿ ಭಕ್ತರಿಗೆ ನೀಡುತ್ತಾರೆ. ಹೆಬ್ಬಂಡೆಗಳ ಮೇಲೆ ಕುಳಿತು ಪ್ರಸಾದ ಸವಿಯುವುದೇ ವಿಶೇಷ ಅನುಭವ ನೀಡುತ್ತದೆ.

PREV
Read more Articles on
click me!

Recommended Stories

ಹಿರಿಯರು ಹೇಳಿದ್ದೆಲ್ಲಾ ಮೂಢನಂಬಿಕೆ ಅಲ್ಲ! ಈ 5 ಸಂಪ್ರದಾಯಗಳ ಹಿಂದಿನ ಸತ್ಯ ತಿಳಿದ್ರೆ ಅಚ್ಚರಿಯಾಗುತ್ತೆ
ಪ್ರಮೋಷನ್, ದುಪ್ಪಟ್ಟು ಲಾಭ, ಪಿತ್ರಾರ್ಜಿತ ಆಸ್ತಿ.. ನವೆಂಬರ್ 22ರಿಂದ ಈ 6 ರಾಶಿಗಳಿಗೆ ಕುಬೇರ ಯೋಗದ ಭರ್ಜರಿ ಫಲ!