ಅಕ್ಷಯ ತೃತೀಯದ ದಿನ ಒಂದಿಲ್ಲೊಂದು ಬೆಲೆ ಬಾಳುವ ವಸ್ತುಗಳನ್ನು ಖರೀದಿಸಬೇಕು. ಇದರಿಂದ ಅವು ಅಕ್ಷಯವಾಗುತ್ತವೆ ಎಂಬ ನಂಬಿಕೆ ಇದೆ. ರಾಶಿಗನುಗುಣವಾಗಿ ನೀವು ಯಾವ ಲೋಹ ಖರೀದಿಸಿದರೆ ಉತ್ತಮ ತಿಳಿಯಿರಿ.
ಅಕ್ಷಯ ತೃತೀಯ(Akshaya Tritiya)ದ ದಿನ ಎಂದರೆ ಅತ್ಯಂತ ಶುಭ ದಿನ. ಈ ದಿನ ಬಹುತೇಕ ಛತ್ರಗಳಲ್ಲಿ ವಿವಾಹಗಳು ಜರುಗುತ್ತವೆ. ಬಹುತೇಕ ಹೊಸ ಮನೆಗಳು ಗೃಹ ಪ್ರವೇಶ ಸಮಾರಂಭ ಕಾಣುತ್ತವೆ, ಬಹಳಷ್ಟು ಜನರು ಹೊಸ ವಾಹನ ಖರೀದಿಸಿ ಸಂತಸ ಪಡುತ್ತಾರೆ. ಮತ್ತಷ್ಟು ಮನೆಗಳಲ್ಲಿ ಸಣ್ಣ ಮಟ್ಟದಲ್ಲಾದರೂ ಸರಿ ಚಿನ್ನ(gold), ಬೆಳ್ಳಿ(silver) ಇತ್ಯಾದಿಗಳನ್ನು ಕೊಂಡಿಟ್ಟುಕೊಳ್ಳಲಾಗುತ್ತದೆ. ಈ ಎಲ್ಲ ಕೆಲಸಗಳನ್ನು ಈ ದಿನ ಮಾಡುವುದು ಬಹಳ ಶುಭವೆನಿಸಿದೆ. ಇದರಿಂದ ತಾಯಿ ಮಹಾಲಕ್ಷ್ಮೀ ಮನೆಗೆ ಬಂದು ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ಅಂತೆಯೇ ಹೀಗೆ ಲೋಹವನ್ನು ಖರೀದಿಸುವಾಗ ನಿಮ್ಮ ರಾಶಿ(Zodiac sign)ಗನುಗುಣವಾಗಿ ಖರೀದಿ ಮಾಡಿದರೆ ಅದೃಷ್ಟ ಇನ್ನಷ್ಟು ಹೆಚ್ಚಲಿದೆ.
ಅಕ್ಷಯ ತೃತೀಯದಂದು ರಾಶಿಚಕ್ರ ಚಿಹ್ನೆಯ ಪ್ರಕಾರ ನೀವು ಯಾವ ಲೋಹ(metal) ಖರೀದಿ ಮಾಡಬೇಕೆಂದು ತಿಳಿಯೋಣ.
ಮೇಷ(Aries): ಮೇಷ ರಾಶಿಯ ಜನರು ಅಕ್ಷಯ ತೃತೀಯ ದಿನದಂದು ತಾಮ್ರ ಅಥವಾ ಚಿನ್ನವನ್ನು ಖರೀದಿಸುವುದು ಶುಭಕರವಾಗಿರುತ್ತದೆ. ನಿಮ್ಮ ರಾಶಿಯ ಅಧಿಪತಿ ಮಂಗಳ ಗ್ರಹಕ್ಕೆ ಮಂಗಳಕರ ಲೋಹವು ತಾಮ್ರ(copper)ವಾಗಿದೆ.
ವೃಷಭ(Taurus): ನಿಮ್ಮ ರಾಶಿಯನ್ನು ಆಳುವ ಗ್ರಹ ಶುಕ್ರ. ಅಕ್ಷಯ ತೃತೀಯದಲ್ಲಿ ಬೆಳ್ಳಿ(Silver)ಯನ್ನು ಖರೀದಿಸುವುದು ನಿಮಗೆ ಶುಭಕರವಾಗಿರುತ್ತದೆ. ವಜ್ರ(Diamond)ವನ್ನು ಶುಕ್ರನ ಮುಖ್ಯ ರತ್ನವೆಂದು ಪರಿಗಣಿಸಲಾಗಿದೆ. ಹೀಗಾಗಿ, ವಜ್ರವನ್ನು ಕೂಡಾ ಖರೀದಿಸಬಹುದು.
ಮಿಥುನ(Gemini): ಮಿಥುನ ರಾಶಿಯ ಜನರ ಆಡಳಿತ ಗ್ರಹ ಬುಧ. ಈ ಕಾರಣದಿಂದಾಗಿ, ಮಿಥುನ ರಾಶಿಯ ಜನರು ಅಕ್ಷಯ ತೃತೀಯದಂದು ಕಂಚಿನ(bronze) ಪಾತ್ರೆಗಳನ್ನು ಅಥವಾ ಆಭರಣಗಳನ್ನು ಖರೀದಿಸಬಹುದು.
ಕರ್ಕಾಟಕ(Cancer): ಅಕ್ಷಯ ತೃತೀಯ ಸಂದರ್ಭದಲ್ಲಿ ಕರ್ಕಾಟಕ ರಾಶಿಯವರು ಬೆಳ್ಳಿಯನ್ನು ಖರೀದಿಸುವುದು ಒಳ್ಳೆಯದು. ಈ ರಾಶಿಚಕ್ರದ ಆಡಳಿತ ಗ್ರಹ ಚಂದ್ರ, ಆದ್ದರಿಂದ ಬೆಳ್ಳಿ(Silver)ಯು ನಿಮಗೆ ಮಂಗಳಕರವಾಗಿರುತ್ತದೆ.
ಸಿಂಹ(Leo): ಸಿಂಹ ರಾಶಿಯ ಆಡಳಿತ ಗ್ರಹ ಸೂರ್ಯ. ಈ ರಾಶಿಯ ಜನರು ಅಕ್ಷಯ ತೃತೀಯ ದಿನದಂದು ತಾಮ್ರ ಅಥವಾ ಚಿನ್ನ(gold)ವನ್ನು ಖರೀದಿಸಬೇಕು.
ಕನ್ಯಾ(Virgo): ಕನ್ಯಾ ರಾಶಿಯ ಆಡಳಿತ ಗ್ರಹ ಬುಧ. ಈ ರಾಶಿಯ ಜನರು ಅಕ್ಷಯ ತೃತೀಯದಂದು ಕಂಚನ್ನು ಖರೀದಿಸಿದರೆ ಮಂಗಳಕರವಾಗಿರುತ್ತದೆ.
ತುಲಾ(Libra): ತುಲಾ ರಾಶಿಯ ಜನರು ಅಕ್ಷಯ ತೃತೀಯ ದಿನದಂದು ಬೆಳ್ಳಿಯನ್ನು ಖರೀದಿಸಬೇಕು. ಈ ರಾಶಿಚಕ್ರದ ಆಡಳಿತ ಗ್ರಹ ಶುಕ್ರ.
ವೃಶ್ಚಿಕ(Scorpio): ಅಕ್ಷಯ ತೃತೀಯ ದಿನದಂದು ವೃಶ್ಚಿಕ ರಾಶಿಯವರಿಗೆ ತಾಮ್ರವನ್ನು ಖರೀದಿಸುವುದು ಒಳ್ಳೆಯದು. ಈ ರಾಶಿಯ ಅಧಿಪತಿ ಮಂಗಳ(Mars) ಗ್ರಹದ ಮಂಗಳಕರ ಲೋಹವು ತಾಮ್ರವಾಗಿದೆ.
ಧನು(Sagittarius): ಧನು ರಾಶಿಯ ಆಡಳಿತ ಗ್ರಹವು ಗುರು(Jupitar). ಅಕ್ಷಯ ತೃತೀಯ ದಿನದಂದು ನಿಮ್ಮ ರಾಶಿಯ ಜನರು ಹಿತ್ತಾಳೆ ಅಥವಾ ಚಿನ್ನವನ್ನು ಖರೀದಿಸುವುದು ಉತ್ತಮ.
ಮಕರ(Capricorn): ಅಕ್ಷಯ ತೃತೀಯದಂದು ಮಕರ ರಾಶಿಯವರು ಸ್ಟೀಲ್ ಅಥವಾ ಕಬ್ಬಿಣ(Iron)ದ ಪಾತ್ರೆಗಳನ್ನು ಖರೀದಿಸುವುದು ಒಳ್ಳೆಯದು ಏಕೆಂದರೆ ಈ ರಾಶಿಯ ಅಧಿಪತಿ ಶನಿದೇವರು.
Akshaya Tritiya 2022: ಈ ದಿನ ಶುಭಾತಿಶುಭವಾಗಲು ಕಾರಣ ಒಂದೆರಡಲ್ಲ..
ಕುಂಭ(Aquarius): ಈ ರಾಶಿಯ ಜನರು ಮಕರ ರಾಶಿಯಂತೆ ಸ್ಟೀಲ್ ಅಥವಾ ಕಬ್ಬಿಣದ ಪಾತ್ರೆಗಳನ್ನು ಖರೀದಿಸಬೇಕು. ಏಕೆಂದರೆ ಈ ರಾಶಿಯ ಅಧಿಪತಿಯೂ ಶನಿದೇವನೇ. ಈ ಲೋಹಗಳು ಶನಿಗೆ ಸಂಬಂಧಿಸಿದ್ದು.
ಮೀನ(Pisces): ಈ ರಾಶಿಯನ್ನು ಆಳುವ ಗ್ರಹ ಗುರು. ಮೀನ ರಾಶಿಯವರಿಗೆ ಅಕ್ಷಯ ತೃತೀಯ ಸಂದರ್ಭದಲ್ಲಿ ಹಿತ್ತಾಳೆಯನ್ನು ಖರೀದಿಸುವುದು ಶುಭಕರವಾಗಿರುತ್ತದೆ. ಅವರು ಬಯಸಿದರೆ ಚಿನ್ನವನ್ನೂ ಖರೀದಿಸಬಹುದು.