Chitradurga: ಚಳ್ಳಕೆರೆ ತಾಲ್ಲೂಕಿನ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ ನೆರವು!

By Govindaraj S  |  First Published Jun 18, 2022, 10:42 AM IST

ಅದೊಂದು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದಂತಹ ಪುರಾತನ ದೇವಸ್ಥಾನ. ಅಲ್ಲಿ ಸುಮಾರು ವರ್ಷಗಳಿಂದ ಪೂಜೆ ಪುರಸ್ಕಾರಗಳು ನಿಂತು ಹೋಗಿದ್ದವು. ಆದ್ರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮಾಡಿದ ಮಹಾತ್ ಕಾರ್ಯಕ್ಕೆ ಇಡೀ ಆ ಗ್ರಾಮದ ಜನರು ಹಾಗೂ ಆ ಸ್ವಾಮಿಯ ಭಕ್ತರು ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಶರಣು ಶರಣಾರ್ಥಿ ಎನ್ನುತ್ತಿದ್ದಾರೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜೂ.18): ಅದೊಂದು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದಂತಹ ಪುರಾತನ ದೇವಸ್ಥಾನ. ಅಲ್ಲಿ ಸುಮಾರು ವರ್ಷಗಳಿಂದ ಪೂಜೆ ಪುರಸ್ಕಾರಗಳು ನಿಂತು ಹೋಗಿದ್ದವು. ಆದ್ರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮಾಡಿದ ಮಹಾತ್ ಕಾರ್ಯಕ್ಕೆ ಇಡೀ ಆ ಗ್ರಾಮದ ಜನರು ಹಾಗೂ ಆ ಸ್ವಾಮಿಯ ಭಕ್ತರು ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಶರಣು ಶರಣಾರ್ಥಿ ಎನ್ನುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ-ನಾರಾಯಣಪುರದಲ್ಲಿ ಸುಮಾರು 500 ವರ್ಷಗಳ ಹಿಂದೆ ಹೊಯ್ಸಳರ ಕಾಲದಲ್ಲಿ ಶ್ರೀ ರಂಗನಾಥಸ್ವಾಮಿ ಅರ್ಥಾತ್ ಮಿನಿ ತಿರುಪತಿ ತಿಮ್ಮಪ್ಪನ ದೇವಸ್ಥಾನ ನಿರ್ಮಾಣವಾಗಿತ್ತು ಎಂದು ಶಾಸನದಲ್ಲಿ ಉಲ್ಲೇಖವಾಗಿದೆ. 

Latest Videos

undefined

ಆದ್ರೆ ಕಾರಣಾಂತರಗಳಿಂದ ಈ ದೇವಸ್ಥಾನ ಜೀರ್ಣೋದ್ಧಾರ ಮಾತ್ರ ಕಳೆದ ನೂರಾರು ವರ್ಷಗಳ ಹಿಂದೆ ರಾಜ ಮಹಾರಾಜರು ಮಾಡಿದ್ದೇ, ಮತ್ತೆ ಅಷ್ಟಾಗಿ ಈ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತಿರಲಿಲ್ಲ. ಆದ್ರೆ ಬೆಳಗೆರೆ-ನಾರಾಯಣಪುರ ಗ್ರಾಮದ ಜನರು ಕೂಡಲೇ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಬುದ್ದಿ ನಮ್ಮ ಗ್ರಾಮದಲ್ಲಿರುವ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿ, ನೀವೆ ಜೀರ್ಣೋದ್ಧಾರ ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಂಡರು. 

Chitradurga: ಇ.ಡಿ ದುರ್ಬಳಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಐವರು ಮುಖಂಡರ ಬಂಧನ

ನಂತರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾದ ವಿರೇಂದ್ರ ಹೆಗ್ಗಡೆಯವರು ನಮ್ಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ ಮೂಲಕ ಹಾಗೂ ಸರ್ಕಾರದ ಸಹಯೋಗದೊಂದಿಗೆ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು ಶ್ರೀ ರಂಗನಾಥಸ್ವಾಮಿಯ ದೇಗುಲದ ಜೀರ್ಣೋದ್ಧಾರಕ್ಕೆ ಅನುವು ಮಾಡಿಕೊಟ್ಟರು.  ಅಂದರಂತೆ ಇಂದು ವಿರೇಂದ್ರ ಹೆಗ್ಗಡೆ ಅವರ ಸಹೋದರರಾದ ಶ್ರೀ ಸುರೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಉದ್ಘಾಟನೆ ನೆರವೇರಿತು. ಈ ದೇವರ ವಿಶೇಷತೆ ಎಂದ್ರೆ, ಗೊಲ್ಲ ಸಮುದಾಯದ ಜನರು ಈ ದೇವಸ್ಥಾನದ ಪೂರ್ವಿಕ ಅರ್ಚಕರು.‌ ಭಕ್ತರು ಸಂತಾನ, ಕೆಲಸಕ್ಕೆ ಸಂಬಂಧಿಸಿದ್ದು, ಅರೋಗ್ಯ ವಿಚಾರ ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. 

ಇನ್ನೂ ಬೆಳಗೆರೆ-ನಾರಾಯಣಪುರಕ್ಕೆ ಇಂದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಸಹೋದರ ಸುರೇಂದ್ರ ಕುಮಾರ್ ಆಗಮಿಸಿ ಸ್ವಾಮಿಯ ದೇವಾಲಯದ ಉದ್ಘಾಟನೆ ನೆರವೇರಿಸಿದರು.  ನಂತರ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾತನಾಡಿದ ಅವರು, ಈ ದೇವಾಲಯಕ್ಕೆ ಸುಮಾರು ಸಾವಿರಾರು ವರ್ಷಗಳ ಪುರಾತನವಾದ ಇತಿಹಾಸವಿದೆ. ನಮ್ಮ ಧರ್ಮೋತ್ಥಾನ‌ ಟ್ರಸ್ಟ್ ನ ಮೂಲ ಉದ್ದೇಶ 15ನೇ ಶತಮಾನದಲ್ಲಿ ದೇವಸ್ಥಾನಗಳು ಯಾವ ರೀತಿ ಇದ್ದವೋ ಅದೇ ರೀತಿ ಕಟ್ಟಿಸುವುದು ನಮ್ಮ‌ ವಾಡಿಕೆ.‌ 

Chitradurga: ಕಾಂಗ್ರೆಸ್ ಪ್ರತಿಭಟನೆ ಅವರ ಮೂರ್ಖತನದ ಪರಮಾವಧಿ: ಸಚಿವ ಬಿ.ಸಿ ಪಾಟೀಲ್

ಸದ್ಯ ರಾಜ್ಯದಲ್ಲಿ ‌ಪೂಜ್ಯರ ಮಾರ್ಗದರ್ಶನ 280ಕ್ಕೂ ಅಧಿಕ‌ ದೇವಸ್ಥಾನಗಳನ್ನು ಕರ್ನಾಟಕದಲ್ಲಿ ಪುನರ್ ಜೀರ್ಣೋದ್ಧಾರ ಮಾಡಿ ಸದ್ಯ ಇಂದಿಗೂ ಆ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಇದೇ ರೀತಿ ಧರ್ಮಸ್ಥಳಕ್ಕೂ ಈ ಭಾಗದ ಜನರಿಗೂ ನಂಟು ಇನ್ನಷ್ಟು ಹೆಚ್ಚು ಬೆಳೆಯಲಿ ಎಂದು ಆಶೀರ್ವಾದಿಸಿದರು. ಒಟ್ಟಾರೆಯಾಗಿ ಒಂದು ಬೆಳಗೆರೆಯ ಶ್ರೀ‌ರಂಗನಾಥಸ್ವಾಮಿಯ ಕಳಸಾರೋಹಣ ಹಾಗೂ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ತುಂಬಾ ಅಚ್ಚುಕಟ್ಟಾಗಿ ನಡೆಯಿತು. ಅಲ್ಲದೇ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

click me!