ಅಬ್ಬಬ್ಬಾ ಲಾಟ್ರಿ! ಇನ್ನೊಂದು ತಿಂಗಳ ಕಾಲ ಈ ಐದು ರಾಶಿಗಳಿಗೆ ಬುಧಾದಿತ್ಯ ಯೋಗ!

By Suvarna News  |  First Published May 14, 2022, 11:03 AM IST

ಮೇ 15ರಿಂದ ಜೂನ್ 15ರವರೆಗೆ ವೃಷಭ ರಾಶಿಯಲ್ಲಿ ಬುಧ ಮತ್ತು ಸೂರ್ಯ ಜೊತೆಗಿರಲಿದ್ದಾರೆ. ಈ ಬುಧಾದಿತ್ಯ ಯೋಗದ ಲಾಭ ಐದು ರಾಶಿಗಳಿಗೆ ದಕ್ಕಲಿದೆ. 


ಮೇ 16ರಂದು ಚಂದ್ರಗ್ರಹಣ(Lunar eclipse)ವಾಗಿಲಿದೆ. ಇದರಿಂದ ಯಾವೆಲ್ಲ ರಾಶಿಗಳು ಕಷ್ಟನಷ್ಟ ಅನುಭವಿಸಬೇಕೋ ಎಂದು ಭಯಭೀತರಾಗಿರುವ ಹೊತ್ತಿನಲ್ಲಿ ಐದು ರಾಶಿಗಳಿಗೆ(Zodiac signs) ಸಂತಸದ ವಿಷಯ ಇಲ್ಲಿದೆ. ಹೌದು, ಮೇ 15ರಿಂದ ಜೂನ್ 15ರವರೆಗೆ ವೃಷಭ(Taurus) ರಾಶಿಯಲ್ಲಿ ಬುಧ ಮತ್ತು ಸೂರ್ಯ(Sun) ಎರಡೂ ಗ್ರಹಗಳು ಸಂಧಿಸಲಿವೆ. ಜ್ಞಾನಕಾರಕನಾದ ಬುಧ(Mercury)ನು ಈಗಾಗಲೇ ವೃಷಭದಲ್ಲಿದ್ದಾನೆ. ಮೇ 15ರಂದು ಸೂರ್ಯ ಸಂಕ್ರಮಣವೂ ವೃಷಭ ರಾಶಿಯಲ್ಲಾಗುತ್ತಿದೆ.

ಈ ಎರಡೂ ಗ್ರಹಗಳ ಚಲನೆಯ ವೇಗ ಹತ್ತಿರ ಹತ್ತಿರ ಒಂದೇ ಇರುವುದರಿಂದ ಬುಹತೇಕರ ಜಾತಕದಲ್ಲಿ ಬುಧಾದಿತ್ಯ ಯೋಗ ಕಾಣಿಸಿಕೊಳ್ಳುತ್ತದೆ. ಆದರೆ, ಇವೆರಡೂ ನಿಮ್ಮ ಜಾತಕದಲ್ಲಿ ಯಾವ ಮನೆಯಲ್ಲಿವೆ ಎಂಬುದರ ಆಧಾರದ ಮೇಲೆ ಅದು ತರುವ ಅದೃಷ್ಟ ನಿರ್ಧಾರವಾಗುತ್ತದೆ. ರವಿ ಮತ್ತು ಬುಧ ಇಬ್ಬರೂ ಅನುಕೂಲಕರ ಸ್ಥಳಗಳಲ್ಲಿದ್ದಾಗ ಅಂಥ ರಾಶಿಗಳು ಸಾಕಷ್ಟು ಲಾಭ ಪಡೆಯುತ್ತವೆ. 

Tap to resize

Latest Videos

ಈ ಬಾರಿಯ ಬುಧಾದಿತ್ಯ ಸಂಕ್ರಮಣವು ಎಲ್ಲ ರಾಶಿಗಳ ಜೀವನದ ಮೇಲೂ ಪ್ರಭಾವ ಬೀರುತ್ತದೆ. ಆದರೆ ಈ ಒಂದು ತಿಂಗಳು ಐದು ರಾಶಿಗಳಿಗೆ ಬುಧಾದಿತ್ಯ ಯೋಗ(Budhaditya Yoga) ಸೃಷ್ಟಿಯಾಗಲಿದೆ. ಈ ಯೋಗವು ಬಹಳ ಶುಭಫಲಗಳನ್ನು ಐದು ರಾಶಿಗಳಿಗೆ ನೀಡಲಿದೆ. 

ವೃಷಭ(Taurus): ಈ ರಾಶಿಯಲ್ಲಿಯೇ ಬುಧ ಮತ್ತು ಸೂರ್ಯನ ಸಂಯೋಗವಾಗುತ್ತಿರುವುದು. ಇವೆರಡೂ ಶುಭ ಗ್ರಹಗಳಾಗಿರುವುದರಿಂದ ಇವಿರುವ ರಾಶಿಗೆ ಉತ್ತಮ ಲಾಭ ದೊರೆಯಲಿದೆ. ವೃತ್ತಿಜೀವನದಲ್ಲಿ ಲಾಭ ಪಡೆಯಲು ಅನೇಕ ಅವಕಾಶಗಳು ಲಭಿಸಲಿವೆ. ವ್ಯಾಪಾರದಲ್ಲಿ ಸುವರ್ಣಾವಕಾಶಗಳನ್ನು ಪಡೆಯುವ ಸಾಧ್ಯತೆಗಳಿವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಮಕ್ಕಳು ಅಧ್ಯಯನದಲ್ಲಿ ಉತ್ತಮ ಅಂಕಗಳನ್ನು ಪಡೆಯುವ ನಿರೀಕ್ಷೆಯಿದೆ. ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯುತ್ತೀರಿ.

ಕರ್ಕಾಟಕ ರಾಶಿ(Cancer): ಕಾರ್ಯ ಕ್ಷೇತ್ರದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸಮಯವು ಅನುಕೂಲಕರವಾಗಿರುತ್ತದೆ. ಉತ್ತಮ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಸುವರ್ಣಾವಕಾಶ ಸಿಗಲಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಹಣದ ಭಾಗವು ಬಲವಾಗಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗಲಿವೆ. 

Lunar Eclipse 2022: ಚಂದ್ರ ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಹೀಗೆ ಮಾಡಬಾರದು

ಸಿಂಹ(Leo): ಈ ಯೋಗದಿಂದ ನಿಮ್ಮ ದಕ್ಷತೆ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ನೀವು ಗೌರವ ಮತ್ತು ಮನ್ನಣೆಯನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಸಮಯವು ಅನುಕೂಲಕರವಾಗಿರುತ್ತದೆ. ಹಣವನ್ನು ಸಂಗ್ರಹಿಸುವಲ್ಲಿಯೂ ನೀವು ಯಶಸ್ವಿಯಾಗುತ್ತೀರಿ. ಕುಟುಂಬದಲ್ಲಿ ಅನಾರೋಗ್ಯ ಹೊಂದಿರುವವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದು ಸಮಾಧಾನ ತರುವುದು. ಹೊಸ ಮನೆ ನಿರೀಕ್ಷೆಯಲ್ಲಿರುವವರಿಗೆ ಕನಸು ನನಸಾಗಲಿದೆ. 

ಕನ್ಯಾ(Virgo): ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನೀವು ವಿವಿಧ ಮಾಧ್ಯಮಗಳ ಮೂಲಕ ಉತ್ತಮ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಹೆಚ್ಚು ಪ್ರಶಂಸಿಸಲಾಗುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಕಾಣುವಿರಿ. ಸಾಲಗಳು ತೀರಿ ನೆಮ್ಮದಿ ಆವರಿಸಲಿದೆ. ದೂರ ಪ್ರಯಾಣಗಳು ಸಂತಸ ತರಲಿವೆ. 

ನಕಾರಾತ್ಮಕತೆಯನ್ನು ದೂರ ಮಾಡಿ ಸಂಪತ್ತು ವೃದ್ಧಿಯಾಗಲು ಈ ಯಂತ್ರಗಳನ್ನು ಮನೆಯಲ್ಲಿಡಿ

ಮಕರ(Capricorn): ನಿಮ್ಮ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಫಲ ಸಿಗಲಿದೆ. ಇದ್ದಕ್ಕಿದ್ದಂತೆ ಭಾರೀ ಮೊತ್ತದ ಹಣ ಸಿಗಬಹುದು. ಆರ್ಥಿಕ ಭಾಗವು ಬಲವಾಗಿರುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುವ ಲಕ್ಷಣಗಳೂ ಇವೆ. ಅಷ್ಟೇ ಅಲ್ಲ, ಜೀವನದ ಅತ್ಯುತ್ತಮ ಅನುಭವಗಳನ್ನು ನೋಡಲಿದ್ದೀರಿ. ಕುಟುಂಬದೊಂದಿಗೆ ಪ್ರವಾಸ ಸಂತೋಷ ತರಲಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!