Bhishma Bhojan: ಪ್ರತಿ ದಿನ ಹೀಗೆ ಊಟ ಮಾಡಿದ್ರೆ ಹೊಸ್ತಿಲು ದಾಟಿ ಬರ್ತಾಳೆ ಲಕ್ಷ್ಮಿ

By Suvarna NewsFirst Published Dec 6, 2022, 4:35 PM IST
Highlights

ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಲಕ್ಷ್ಮಿಯನ್ನು ಸಂತೋಷಗೊಳಿಸುವ ಪರಿ ಅನೇಕರಿಗೆ ತಿಳಿದಿಲ್ಲ. ಬರೀ ನಾವು ಊಟ ಮಾಡುವ ವಿಧಾನದಿಂದಲೇ ನಾವು ಆಕೆಯನ್ನು ಮನೆಗೆ ಕರೆಯಬಹುದು. ಭೀಷ್ಮ ಸೂತ್ರದಲ್ಲಿ ಇದ್ರ ಬಗ್ಗೆ ಹೇಳಲಾಗಿದೆ. 
 

ಹಿಂದಿನ ಕಾಲದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಆಹಾರ ಸೇವನೆ ಮಾಡ್ತಿದ್ದರು. ಮನೆ ಮಂದಿಯೆಲ್ಲ ಒಂದಾಗಿ, ಹರಟೆ ಹೊಡೆಯುತ್ತಾ ಊಟ ಮಾಡ್ತಿದ್ದರು. ಆದ್ರೆ ಈಗಿನ ಕೆಲಸ ಹಾಗೂ ಒತ್ತಡದ ಜೀವನದಲ್ಲಿ ಜನರಿಗೆ ಕುಳಿತು ಊಟ ಮಾಡಲು ಸಮಯವಿಲ್ಲ. ಮನೆಯಲ್ಲಿ ಮೂರು ಜನವಿದ್ರೂ ಊಟ ಮಾಡುವ ಸಮಯ ಬೇರೆ ಬೇರೆ. ಹಾಗೆ ಅವರದೇ ಆದ ಶೈಲಿಯಲ್ಲಿ ಆಹಾರ ಸೇವನೆ ಮಾಡ್ತಾರೆ. ಆಹಾರ ಸೇವನೆ ಬರೀ ನಮ್ಮ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. 

ಶಾಸ್ತ್ರಗಳಲ್ಲಿಯೂ ಆಹಾರ (Food) ಸೇವನೆ ಬಗ್ಗೆ ಹಲವು ನಿಯಮಗಳಿವೆ. ಭೀಷ್ಮ (Bhishma)  ಸೂತ್ರದಲ್ಲಿ ಕೂಡ ಭೋಜನ (Dinner) ದ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ಭೀಷ್ಮ ಸೂತ್ರದಲ್ಲಿ ಹೇಳಿದ ನಿಯಮಗಳನ್ನು ನಾವು ಆಹಾರ ಸೇವನೆ ಮಾಡುವಾಗ ಅಳವಡಿಸಿದ್ರೆ ಬಡತನ (Poverty) ಎಂದಿಗೂ ಬರುವುದಿಲ್ಲ ಎಂದು ನಂಬಲಾಗಿದೆ. ನಾವಿಂದು ಭೀಷ್ಮ ಸೂತ್ರದಲ್ಲಿ ಭೋಜನದ ಬಗ್ಗೆ ಏನೆಲ್ಲ ಹೇಳಲಾಗಿದೆ ಎಂಬುದನ್ನು ನಿಮಗೆ ಹೇಳ್ತೆವೆ. 

ಭೀಷ್ಮ ಸೂತ್ರ : ಮಹಾಭಾರತ ಯುದ್ಧದ ಸಮಯದಲ್ಲಿ  ಭೀಷ್ಮ ಪಿತಾಮಹನು ಶರಶಯ್ಯೆ  ಮೇಲೆ ಮಲಗಿದ್ದಾಗ, ಯುಧಿಷ್ಠಿರ, ಅರ್ಜುನ ಸೇರಿದಂತೆ ಪಾಂಡವರು ಅವರಿಂದ ಜ್ಞಾನವನ್ನು ಪಡೆಯುತ್ತಿದ್ದರು. ಈ ಜ್ಞಾನವನ್ನು ಭೀಷ್ಮ ನೀತಿ ಎಂದೂ ಕರೆಯುತ್ತಾರೆ.  ಭೀಷ್ಮ, ಇಂದಿನ ಪೀಳಿಗೆ ತಿಳಿದಿರಬೇಕಾದ ಆಹಾರದ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನು ತಿಳಿಸಿದ್ದರು.

ಭೀಷ್ಮ ಭೋಜನ ಸೂತ್ರದಲ್ಲಿ ಏನಿದೆ?  : 
1. ಒಟ್ಟಿಗೆ ಕುಳಿತು ಆಹಾರ ಸೇವನೆ :
ಭೀಷ್ಮ ಪಿತಾಮಹರು ಪ್ರಕಾರ, ಕುಟುಂಬ ಸದಸ್ಯರು ಒಟ್ಟಿಗೆ ಒಂದೇ ತಟ್ಟೆಯಲ್ಲಿ ಆಹಾರ ಸೇವಿಸಬೇಕು. ಇದ್ರಿಂದ ಲಕ್ಷ್ಮಿ ಸಂತೋಷಗೊಳ್ಳುತ್ತಾಳೆ. ಒಂದೇ ತಟ್ಟೆಯಲ್ಲಿ ಆಹಾರ ಸೇವನೆ ಮಾಡುವ ಕುಟುಂಬದಲ್ಲಿ ಹಣ ಮತ್ತು ಆಹಾರದ ಕೊರತೆ ಎದುರಾಗುವುದಿಲ್ಲ. ಆ ಮನೆ ಎಂದಿಗೂ ಸಮೃದ್ಧಿಯಿಂದ ಕೂಡಿರುತ್ತದೆ.

2. ಆಹಾರದಲ್ಲಿ ಸಿಗಬಾರದು ಕೂದಲು : ಭೀಷ್ಮ ಪಿತಾಮಹನ ಪ್ರಕಾರ, ಆಹಾರದಲ್ಲಿ ಕೂದಲು ಸಿಗಬಾರದು. ಕೂದಲು ಆಹಾರದಲ್ಲಿ ಸಿಕ್ಕರೆ ಆ ಆಹಾರವನ್ನು ಎಂದಿಗೂ ಸೇವನೆ ಮಾಡಬಾರದು. ಈ ಆಹಾರ ತಿನ್ನಲು ಯೋಗ್ಯವೆಂದು ಪರಿಗಣಿಸಲಾಗುವುದಿಲ್ಲ. ಒಂದ್ವೇಳೆ ನೀವು ಕೂದಲಿರುವ ಆಹಾರ ಸೇವನೆ ಮಾಡಿದ್ರೆ ಅದ್ರಿಂದ ಬಡತನ ಆವರಿಸುತ್ತದೆ ಎಂದು ಭೀಷ್ಮ ಸೂತ್ರದಲ್ಲಿ ಹೇಳಲಾಗಿದೆ.  
3. ಒಂದೇ ತಟ್ಟೆಯಲ್ಲಿ ಪತಿ – ಪತ್ನಿ ಆಹಾರ ಸೇವನೆ ಮಾಡಬಾರದು: ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಆಹಾರ ಸೇವನೆ ಮಾಡುವುದು ಸಾಮಾನ್ಯ. ಬಹುತೇಕರು ಒಂದೇ ತಟ್ಟೆಯಲ್ಲಿ ಆಹಾರ ಸೇವನೆ ಮಾಡ್ತಾರೆ. ಹಿಂದಿನ ಕಾಲದಲ್ಲಿ ಗಂಡ ಊಟ ಮಾಡಿದ ಮೇಲೆ ಅದೇ ತಟ್ಟೆಯಲ್ಲಿ ಪತ್ನಿ ಸೇವನೆ ಮಾಡ್ತಿದ್ದಳು. ಇಬ್ಬರು ಒಂದೇ ಪ್ಲೇಟಿನಲ್ಲಿ ಆಹಾರ ತಿಂದ್ರೆ ದಾಂಪತ್ಯ ಜೀವನದಲ್ಲಿ ಸಿಹಿಯನ್ನು ಕಾಪಾಡಿಕೊಳ್ಳಬಹುದು ಎಂದು ಜನರು ನಂಬಿದ್ದಾರೆ. ಆದ್ರೆ ಭೀಷ್ಮ ಸೂತ್ರದಲ್ಲಿ ಅದನ್ನು ಅನುಚಿತವೆಂದು ಪರಿಗಣಿಸಲಾಗಿದೆ. ಭೀಷ್ಮನ ಪ್ರಕಾರ, ಪತಿ-ಪತ್ನಿ ಒಂದೇ ತಟ್ಟೆಯಲ್ಲಿ ಆಹಾರ ಸೇವಿಸಿದರೆ ಅಂತಹ ತಟ್ಟೆಯು ಅಮಲು ಪದಾರ್ಥಗಳಿಂದ ತುಂಬಿರುತ್ತದೆ ಎಂದಿದ್ದಾರೆ. 

ವಿವಾಹದಲ್ಲಿ ಪತಿ ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸೋದ್ಯಾಕೆ?

4. ಈ ತಟ್ಟೆಯಲ್ಲಿ ಆಹಾರ ಸೇವನೆ ಮಾಡಬೇಡಿ : ಆಹಾರವಿಟ್ಟ ತಟ್ಟೆಯನ್ನು ನೀವು ತಿಳಿದೋ ತಿಳಿಯದೆಯೋ ಎಡವಿದರೆ ಅಂತಹ ತಟ್ಟೆಯಲ್ಲಿ ಆಹಾರ ಸೇವನೆ ಮಾಡುವುದನ್ನು ಮುಂದುವರೆಸಬೇಡಿ. ಅಂತಹ ಆಹಾರವನ್ನು ಸೇವಿಸುವುದರಿಂದ ದೇವರ ಆಶೀರ್ವಾದ ಸಿಗುವುದಿಲ್ಲ. ವ್ಯಕ್ತಿಯ ಸಾಲದ ಹೊರೆ ಹೆಚ್ಚಾಗುತ್ತದೆ. ಇದ್ರಿಂದ ಆತ ಸಮಸ್ಯೆ ಎದುರಿಸುತ್ತಾನೆ ಎನ್ನುತ್ತಾರೆ ಭೀಷ್ಮ. 

YEARLY HOROSCOPE 2023: ಹೊಸ ವರ್ಷ ಸಿಂಹ ರಾಶಿಗೆ 50 -50

5. ತಟ್ಟೆ ದಾಟಬೇಡಿ : ಸಾಮಾನ್ಯವಾಗಿ ಜನರು ಊಟದ ತಟ್ಟೆಯನ್ನು ದಾಟುವುದಿಲ್ಲ. ಹೀಗೆ ಮಾಡಿದ್ರೆ ಕಾಲಿನ ಧೂಳು ಆಹಾರಕ್ಕೆ ಸೇರುತ್ತದೆ. ಭೀಷ್ಮ ಕೂಡ ಇದನ್ನೇ ಹೇಳುತ್ತಾರೆ. ಊಟದ ತಟ್ಟೆಯನ್ನು ದಾಟಬಾರದು, ಒಂದು ವೇಳೆ ದಾಟಿದ್ರೆ ಆ ತಟ್ಟೆಯಿಂದ ಆಹಾರ ಸೇವನೆ ಮಾಡಬಾರದು. ಅದನ್ನು ಕೊಳಕು ಎಂದು ಬಿಡಬೇಕು ಎನ್ನುತ್ತಾರೆ ಭೀಷ್ಮ. 
 

click me!