ಮಕರ ರಾಶಿಯಲ್ಲಿ ಸಂಚರಿಸೋ ರವಿ, ಸಿಂಹಕ್ಕೆ ಒಳಿತು, ಉಳಿದವರಿಗೆ ?

By Suvarna NewsFirst Published Jan 9, 2020, 5:12 PM IST
Highlights

ಮನುಷ್ಯನ ಜಾತಕದಲ್ಲಿ ಕೆಲವು ಗ್ರಹಗಳು ಉಚ್ಛವಾಗಿರುತ್ತವೆ, ಮತ್ತೆ ಕೆಲವು ನೀಚವಾಗಿರುತ್ತವೆ. ಒಂದು ಮನೆಯಿಂದ ಮತ್ತೊಂದು ಮನೆಗೆ ಅವು ಸಂಚರಿಸುತ್ತಲೇ ಇರುತ್ತವೆ. ಅವು ಮನುಷ್ಯನ ಏಳು ಬೀಳಿಗೆ ಕಾರಣವಾಗುತ್ತವೆ. ರವಿ ಮಕರ ರಾಶಿಯಲ್ಲಿ ಸಂಚರಿಸಲು ಆರಂಭಿಸಿದ್ದು, ಯಾವ ರಾಶಿಗೆ, ಏನು ಲಾಭ? ನೀವೇ ನೋಡಿ...
 

ರವಿಯು ದಿನಾಂಕ 14-01-2020ರಿಂದ 13-2-2020ರವರೆಗೆ ಮಕರ ರಾಶಿಯಲ್ಲಿ ಸಂಚರಿಸುತ್ತಾನೆ. ರವಿಗೆ ಕೆಲಸ ಮಾಡಿಸುವ ಶಕ್ತಿ ಇದೆ. ಕೆಲಸ ಮಾಡಿಸುವುದು ಅಧಿಕಾರದ ಲಕ್ಷಣ. ಅಧಿಕಾರ ರಾಜನ ಲಕ್ಷಣ. ರಾಜಾಧಿರಾಜರುಗಳು ಉನ್ನತ ಅಧಿಕಾರಿಗಳು ಇವನ ಅಂಶದಲ್ಲಿ ಹುಟ್ಟುತ್ತಾರೆ. ರವಿಗೆ ಶತ್ರುಗ್ರಹ ಇರುವುದಿಲ್ಲ. ಮಕರವು ಶನಿಯ ಮನೆ. ಈ ಮನೆಯಲ್ಲಿ ರವಿ ಇದ್ದರೆ ನೀಚ ಕೆಲಸಗಳನ್ನು ಮಾಡಲು ಮನಸ್ಸು ಹೋಗುತ್ತದೆ. ತಿಳುವಳಿಕೆ ಇದ್ದರೂ ಇಲ್ಲದಂತೆ ಮಾಡುತ್ತಾನೆ. ರವಿ ಮಕರ ರಾಶಿಯನ್ನು ಸಂಚರಿಸುವಾಗ ಹನ್ನೆರಡು ರಾಶಿಗಳ ಗೋಚಾರ ಫಲ-

ಮೇಷ: ಇವರಿಗೆ ಹತ್ತನೆ ರಾಶಿಯ ರವಿ ಇರುವುದರಿಂದ ಎಲ್ಲಾ ಕೆಲಸದಲ್ಲಿ ಜಯವಾಗುತ್ತದೆ. ಎಲ್ಲಾ ಕಾರ್ಯವು ಸಿದ್ಧಿಯಾಗುತ್ತದೆ. ಸ್ಥಾನಮಾನ ಸಿಗುತ್ತದೆ. ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾಗುತ್ತಾರೆ. ಸರಕಾರಿ ನೌಕರರಿಗೆ ಮೇಲಾಧಿಕಾರಿಯಿಂದ ಪ್ರಶಂಸೆ ಸಿಗುತ್ತದೆ. ಎಲ್ಲರ ಸಹಕಾರ ಸಿಗುತ್ತದೆ.

ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!

ವೃಷಭ: ಇವರಿಗೆ 9ನೇ ರವಿ. ಇವರು ಏನು ಕೆಲಸ ಮಾಡಿದರೂ ಆಪತ್ತು ಬರುತ್ತದೆ. ಬಹಳ ಜಾಗ್ರತೆಯಿಂದ ಮುಂದುವರಿಯಬೇಕು. ವೈರಿಗಳಿಂದ ಕಾಟ ಇರುತ್ತದೆ. ಕಛೆರಿ ಕೆಲಸದಲ್ಲಿ ಇತರ ನೌಕರರ ಕಿರುಕುಳ ಇರುತ್ತದೆ. ಹಣಕಾಸಿನ ಅನಾನುಕೂಲ. ವ್ಯಾಪಾರದಲ್ಲಿ ಲಾಭ ಇರುವುದಿಲ್ಲ. ಆರೋಗ್ಯದಲ್ಲಿ ಏರುಪೇರಾಗುತ್ತದೆ. ಮಾನಸಿಕ ನೆಮ್ಮದಿ ಇರುವುದಿಲ್ಲ.

ಮಿಥುನ: ಇವರಿಗೆ ಎಂಟನೇ ರವಿ. ಆರೋಗ್ಯದ ತೊಂದರೆ ಇರುತ್ತದೆ. ಕೆಮ್ಮು ಉಬ್ಬಸ ಇರುವವರಿಗೆ ಸ್ವಲ್ಪ ಜಾಸ್ತಿಯಾಗುತ್ತದೆ. ಹೆಂಡತಿಯ ವೈಮನಸ್ಸು ಇರಬಹುದು. ಮನೆಯಲ್ಲಿ ಕಿರಿಕಿರಿ ಇರುತ್ತದೆ. ಕಛೇರಿಯಲ್ಲಿ ಸ್ತಿçÃಯರಿಂದ ಬೈಯ್ದುಕೊಳ್ಳುವಿರಿ. ಆದಷ್ಟು ತಾಳ್ಮೆಯಿಂದ ಇರಬೇಕು.

ಕರ್ಕಾಟಕ: ಇವರಿಗೆ ಏಳನೇ ಮನೆಯ ರವಿ. ಪ್ರಯಾಣದಿಂದ ತೊಂದರೆ. ಹೊಟ್ಟೆಯ ತೊಂದರೆ, ನಿದ್ರಾಹೀನತೆ, ಸುಖ ಇರುವುದಿಲ್ಲ. ಇವರು ವಾಹನ ಖರೀದಿ ಮಾಡುವುದಾದರೆ ಮುಂದುವರಿಸಬೇಕು. ವಾಹನ ಆಗಾಗ ಕೈಕೊಡುವ ಸಂಭವ ಬರುತ್ತದೆ.

ಸಿಂಹ: ಇವರಿಗೆ ಆರನೇ ಮನೆಯ ರವಿ. ಇವರಿಗೆ ಕಾಯಿಲೆ ಇದ್ದರೆ ಗುಣವಾಗುತ್ತದೆ. ಶತ್ರುಗಳು ದೂರ ಹೋಗುತ್ತಾರೆ. ದುಃಖ ದೂರ ಹೋಗುತ್ತದೆ. ಆದಷ್ಟು ತಾಳ್ಮೆಯಿಂದ ಇದ್ದು ಆರೋಗ್ಯದ ಕಡೆ ಗಮನ ಕೊಡಬೇಕು. ಹಿತಶತ್ರುಗಳು ದೂರವಾಗುವ ಸಂಭವ ಇರುತ್ತದೆ.

ಕನ್ಯಾ: ಇವರಿಗೆ ಐದನೇ ರವಿ. ಇವರಿಗೆ ಶತ್ರುಗಳು ಜಾಸ್ತಿಯಾಗುತ್ತಾರೆ. ಶತ್ರು ಪೀಡೆ ಇರುತ್ತದೆ. ಹಿತಶತ್ರುಗಳಿಂದ ತೊಂದರೆ ಅನುಭವಿಸುತ್ತೀರಿ. ತಿನ್ನುವ ವಸ್ತುಗಳ ಬಗ್ಗೆ ಗಮನ ಕೊಡಬೇಕು.

ತುಲಾ: ಇವರಿಗೆ ನಾಲ್ನನೇ ಮನೆಯ ರವಿ. ಅನಾರೋಗ್ಯದಿಂದ ತೊಂದರೆಯನ್ನು ಅನುಭವಿಸುತ್ತೀರಿ. ಸ್ತಿçà ಭೋಗಕ್ಕೆ ವಿಘ್ನಗಳು ಬರುತ್ತದೆ. ಸ್ತಿçÃಯರಿಂದ ತೊಂದರೆಯನ್ನು ಅನುಭವಿಸುತ್ತೀರಿ. ನೀವು ಪ್ರಯತ್ನಿಸಿದ ಕೆಲಸದಲ್ಲಿ ಅಪಜಯವಾಗುತ್ತದೆ. ನ್ಯಾಯಾಲಯದ ವ್ಯಾಜ್ಯದಲ್ಲಿ ಪ್ರಗತಿ ಇರುವುದಿಲ್ಲ.

ವೃಶ್ಚಿಕ: ಇವರಿಗೆ ಮೂರನೇ ಮನೆಯ ರವಿ. ಬಹಳ ಸಮಯದಿಂದ ಪ್ರಯತ್ನಿಸುವ ಕೆಲಸ ಜಯವಾಗುತ್ತದೆ. ಮನೆ ಆಸ್ತಿ ವ್ಯಾಪಾರದಲ್ಲಿ ಲಾಭವಾಗುತ್ತದೆ. ಹಣಕಾಸಿನ ಲಾಭವಾಗುತ್ತದೆ. ಸುಖ ಸಂತೋಷ ಇರುತ್ತದೆ. ಆಭರಣ ಲಾಭವಾಗುತ್ತದೆ. ಶತ್ರುಗಳು, ಹಿತಶತ್ರುಗಳು ದೂರ ಹೋಗುತ್ತಾರೆ.

ಧನು: ಇವರಿಗೆ ಎರಡನೇಯ ಮನೆಯ ರವಿ. ಬುದ್ಧಿ ಭ್ರಮಣೆಯಿಂದ ತೊಂದರೆಯನ್ನು ಅನುಭವಿಸಿ ಹಣ ಕಳೆದುಕೊಳ್ಳುತ್ತಾರೆ. ಸುಖ ನೆಮ್ಮದಿ ಇರುವುದಿಲ್ಲ. ಬೇರೆಯವರಿಂದ ವಂಚನೆಗೆ ಒಳಗಾಗುತ್ತಾರೆ. ಕಣ್ಣಿನ ದೃಷ್ಟಿಯ ತೊಂದರೆಯನ್ನು ಅನುಭವಿಸುತ್ತಾರೆ.

ಈ ಮನೆಯಲ್ಲಿ ರಾಹು ಇದ್ದರೆ ದಾಂಪತ್ಯ ಸುಖ ಕನಸಷ್ಟೇ!

ಮಕರ: ಇವರಿಗೆ ಒಂದನೇಯ ಮನೆಯ ರವಿ. ಇವರಿಗೆ ಪ್ರತಿಯೊಂದು ಕೆಲಸಗಳಲ್ಲಿ ಹಣ ನಷ್ಟವಾಗುತ್ತದೆ. ಬೇರೆ ಬೇರೆ ಕೆಲಸಗಳಿಗೆ ಹಣ ಖರ್ಚಾಗುತ್ತದೆ. ಜೀವಕ್ಕೆ ಸುಖ ಇರುವುದಿಲ್ಲ. ಪ್ರಯಾಣದಿಂದ ನಷ್ಟವಾಗುತ್ತದೆ. ಅನಾರೋಗ್ಯ ಇದ್ದು ಮಾನಸಿಕ ನೆಮ್ಮದಿ ಇರುವುದಿಲ್ಲ.

ಕುಂಭ: ಹನ್ನೆರಡನೇ ರವಿ ಇರುತ್ತದೆ. ಇವರು ದುಷ್ಟ ಪ್ರವೃತ್ತಿಯನ್ನು ಹೊಂದುತ್ತಾರೆ. ಸರಿಯಾದ ಸಮಯಕ್ಕೆ ಕೆಲಸಗಳು ಆಗುವುದಿಲ್ಲ. ಇವರು ನ್ಯಾಯ ಧರ್ಮವನ್ನು ಪಾಲಿಸುವುದಿಲ್ಲ. ಹಣಕಾಸಿನ ತೊಂದರೆಗಳು ಬರುತ್ತದೆ. ದುಷ್ಟರ ಸಹವಾಸವನ್ನು ಹೊಂದುತ್ತಾರೆ.

ಮೀನ: ಇವರಿಗೆ ಹನ್ನೊಂದನೇ ಮನೆಯ ರವಿ. ವಿವಿಧ ಮೂಲಗಳಿಂದ ಧನಲಾಭ ಬರುತ್ತದೆ.. ಸಮಾಜದಲ್ಲಿ ಕೀರ್ತಿ ಸ್ಥಾನಮಾನ ಸಿಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ ಬರುತ್ತದೆ. ಒಳ್ಳೆಯ ಆರೋಗ್ಯ ಇರುತ್ತದೆ. ವಿವಿಧ ಕೆಲಸದಲ್ಲಿ ಜಯವಾಗುತ್ತದೆ.

click me!