Astrology Tips : ಕೈ ಜೋಡಿಸಿ ನಮಸ್ಕರಿಸಿದ್ರೆ ಸಿಗುತ್ತೆ ಈ ಲಾಭ

By Suvarna News  |  First Published Nov 19, 2022, 5:18 PM IST

ನಮಸ್ಕಾರ ಮಾಡೋದು ನಮ್ಮ ಸಂಸ್ಕೃತಿ. ಎರಡು ಕೈ ಜೋಡಿಸಿ ಕೈ ಮುಗಿದ್ರೆ ಸಾಕಷ್ಟು ಆರೋಗ್ಯ ಲಾಭವಿದೆ. ಎರಡು ಅಂಗೈಯನ್ನು ಪರಸ್ಪರ ಒತ್ತಿದ್ರೆ ಗ್ರಹ ದೋಷ ನಿವಾರಣೆಯಾಗುವ ಜೊತೆಗೆ ಹಠಾತ್ ಆರ್ಥಿಕ ವೃದ್ಧಿಯನ್ನು ಕೂಡ ಕಾಣಬಹುದು. 
 


ಎದುರಿಗೆ ಬಂದ ವ್ಯಕ್ತಿಗೆ ನಮಸ್ಕಾರ ಹೇಳೋದು ನಮ್ಮ ನಾಗರಿಕತೆ. ಇತ್ತೀಚಿನ ದಿನಗಳಲ್ಲಿ ನಮಸ್ಕಾರದ ಜಾಗವನ್ನು ಹಾಯ್, ಹಲೋ ಆವರಿಸಿದೆ. ಆದ್ರೂ ಅನೇಕರು ಈಗ್ಲೂ ಕೈಮುಗಿದು ನಮಸ್ಕಾರ ಹೇಳ್ತಾರೆ. ಮತ್ತೆ ಕೆಲವರು ದೇವರ ಮುಂದೆ ನಿಂತಾಗ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡ್ತಾರೆ. ಈ ನಮಸ್ಕಾರ ಬರೀ ಪದ್ಧತಿಯಲ್ಲ. ಧಾರ್ಮಿಕ, ವೈಜ್ಞಾನಿಕ, ಜ್ಯೋತಿಷ್ಯ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ನಾವು ಕೈ ಜೋಡಿಸಿ ಮಾಡುವ ನಮಸ್ಕಾರದ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ನಮಸ್ಕಾರ (Namaste) ದ ಅರ್ಥವೇನು? : ನಮಸ್ಕಾರ ಎಂಬ ಪದವು ಸಂಸ್ಕೃತ (Sanskrit) ದ ಪದವಾಗಿದೆ. ಇದು ಎರಡು ಪದಗಳಿಂದ ಮಾಡಲ್ಪಟ್ಟಿದೆ. 'ನಮಃ' ಮತ್ತು ಸಾಕರ್. ನಮಃ ಎಂದರೆ ನಮಸ್ಕರಿಸುವುದು ಮತ್ತು ಸಾಕರ್ ಎಂದರೆ ನೀವು ನೀಡಿದ ನಮನಗಳು ಆಶೀರ್ವಾದ ರೂಪದಲ್ಲಿ ನೆರವೇರುತ್ತವೆ ಎಂದರ್ಥ. ದೇವರ (God) ಮುಂದೆ ಅಥವಾ ಹಿರಿಯರಿಗೆ ನಾವು ಕೈ ಮುಗಿದು ನಮಸ್ಕಾರ ಮಾಡ್ತೇವೆ. ಆದ್ರೆ ಅನೇಕರಿಗೆ ಅದರ ಪ್ರಯೋಜನ (Benefit) ಗಳು ಮತ್ತು ನಮಸ್ಕಾರದ ಸರಿಯಾದ ವಿಧಾನದ ತಿಳಿದಿಲ್ಲ. 

Tap to resize

Latest Videos

ನಮಸ್ಕಾರದ ವಿಧಗಳು : 

ಸಾಮಾನ್ಯ ನಮಸ್ಕಾರ : ಯಾರನ್ನಾದರೂ ಭೇಟಿಯಾದಾಗ ಎರಡೂ  ಅಂಗೈಗಳನ್ನು ಜೋಡಿಸಿ ನಮಸ್ಕಾರ ಮಾಡಲಾಗುತ್ತದೆ. ಈ ರೀತಿಯ ನಮಸ್ಕಾರವನ್ನು ಸಾಮಾನ್ಯ ನಮಸ್ಕಾರ ಎಂದು ಕರೆಯಲಾಗುತ್ತದೆ.

ಪಾದ ನಮಸ್ಕಾರ : ನಮ್ಮ ಹಿರಿಯರ ಪಾದಗಳನ್ನು ಮುಟ್ಟಿ ಮಾಡುವ ನಮಸ್ಕಾರವನ್ನು ಪಾದ ನಮಸ್ಕಾರ ಎನ್ನಲಾಗುತ್ತದೆ.

ಸಾಷ್ಟಾಂಗ ನಮಸ್ಕಾರ : ನಮ್ಮ ಇಡೀ ದೇಹ ನೆಲಕ್ಕಿರುತ್ತದೆ. ಹೊಟ್ಟೆ ಕೆಳಗೆ ಮಾಡಿ ಮಲಗಿ, ಕೈಗಳನ್ನು ತಲೆಯಿಂದ ಮುಂದಕ್ಕೆ ಚಾಚಿ, ಹಸ್ತಗಳನ್ನು ಜೋಡಿಸಿ ಮಾಡುವ ನಮಸ್ಕಾರ ಸಾಷ್ಟಾಂಗ ನಮಸ್ಕಾರ. 

ನಮಸ್ಕಾರದ ಮಾಡುವ ಸರಿಯಾದ ವಿಧಾನ :  ಒಂದು ಕೈಯಿಂದ ಎಂದಿಗೂ ನಾವು ನಮಸ್ಕಾರ ಮಾಡಬಾರದು.  ನಮಸ್ಕಾರ ಮಾಡುವಾಗ ತಲೆ ತಗ್ಗಿಸಬಾರದು. ಎರಡೂ ಕೈಗಳನ್ನು ಜೋಡಿಸುವಾಗ, ಬೆರಳುಗಳು ಒಂದಕ್ಕೊಂದು ಅಂಟಿರಬೇಕು. ಹಾಗೆಯೇ ಎರಡೂ ಕೈನ ಅಂಗೈಗಳು ಪರಸ್ಪರ ಒತ್ತಿರಬೇಕು. ಮಧ್ಯದಲ್ಲಿ ಅಂತರವಿರಬಾರದು. ನಮಸ್ಕಾರ ಮಾಡುವಾಗ ಎರಡು ಕ್ಷಣವಾದರೂ ಕಣ್ಣು ಮುಚ್ಚಬೇಕು. ಹಾಗೆಯೇ ಯಾವಾಗಲೂ ಖಾಲಿ ಕೈಗಳಲ್ಲಿ ನಮಸ್ಕಾರ ಮಾಡಬೇಕು. ಅಂದರೆ ನಮಸ್ತೆ ಹೇಳುವಾಗ ಕೈಯಲ್ಲಿ ಯಾವುದೇ ವಸ್ತು ಇರಬಾರದು.  

ಏಕಾದಶಿ ದಿನ ತಪ್ಪದೇ ಈ ಕೆಲಸ ಮಾಡಿ, ಕನಸುಗಳು ಈಡೇರುತ್ತೆ

ನಮಸ್ಕಾರದ ಪ್ರಯೋಜನಗಳು :   
ಗ್ರಹಗಳು ಅಂಗೈಯಲ್ಲಿ ವಾಸಿಸುತ್ತವೆ ಎಂಬುದು ನಿಮಗೆ ತಿಳಿದಿದೆ. ನೀವು ಎರಡೂ ಅಂಗೈಯನ್ನು ಪರಸ್ಪರ ಒತ್ತುವುದ್ರಿಂದ ಒತ್ತಡ ಉಂಟಾಗುತ್ತದೆ. ಇದು ಗ್ರಹ ದೋಷವನ್ನು ಕಡಿಮೆ ಮಾಡುತ್ತದೆ. ನಮಸ್ಕಾರ ಭಂಗಿ, ಹೃದಯ ಚಕ್ರವನ್ನು ಜಾಗೃತಗೊಳಿಸುತ್ತದೆ. ಚಂದ್ರ ಹೃದಯದ ಜೊತೆ ಅಂದರೆ ಮನಸ್ಸಿನ ಸಂಬಂಧ ಹೊಂದಿದ್ದಾನೆ. ಹೃದಯ ಚಕ್ರ ಜಾಗೃತವಾದಾಗ ಜಾತಕದಲ್ಲಿ ಚಂದ್ರ ಬಲ ಪಡೆಯುತ್ತಾನೆ. 

ಮೆದುಳಿನ ನರಗಳು ಕೈಗಳ ನರಗಳಿಗೆ ಸಂಪರ್ಕ ಹೊಂದಿವೆ. ನಮಸ್ಕಾರ ಮಾಡಿದಾಗ ಕೈಗಳ ನರಗಳಿಗೆ ಒತ್ತಡ ಬಿದ್ದು, ಅವು ಜಾಗೃತ ಸ್ಥಿತಿಗೆ ಹೋಗುತ್ತದೆ.  ಗುರು ಬುದ್ಧಿಯ ಒಡೆಯನಾಗಿದ್ದಾನೆ. ನಮಸ್ಕಾರ ಮಾಡಿದಾಗ ಗುರು ಗ್ರಹ ಬಲಪಡೆಯುತ್ತದೆ. ವ್ಯಕ್ತಿಯ ಬುದ್ಧಿ ತೀಕ್ಷ್ಣವಾಗುತ್ತದೆ. ನಮಸ್ಕಾರ ಮಾಡುವುದ್ರಿಂದ ಮನಸ್ಸು ಶಾಂತವಾಗುತ್ತದೆ . 

ZODIAC SIGN: ಈ ರಾಶಿಗಳ ಜನರಿಗೆ ಸಂಬಂಧ ಬಹುಬೇಗ ಬೋರೆನಿಸುತ್ತೆ

ವಿಜ್ಞಾನದ ಪ್ರಕಾರ, ನಮಸ್ಕಾರದ ಸಮಯದಲ್ಲಿ ಬೆರಳಿನ ರೇಖೆಗಳು ಒಂದಕ್ಕೊಂದು ಘರ್ಷಣೆಗೊಳಗಾಗುತ್ತವೆ. ಇದ್ರಿಂದ ಅಲೆಗಳು ಉತ್ಪತ್ತಿಯಾಗುತ್ತವೆ. ಈ ತರಂಗ ಮಂಗಳವೆಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ. 
ಕೈಗಳನ್ನು ಪರಸ್ಪರ ಉಜ್ಜುವುದ್ರಿಂದ ಉತ್ಪತ್ತಿಯಾಗುವ ಅಲೆಗಳು ಲಕ್ಷ್ಮಿಯ ಬೀಜ ಮಂತ್ರದ ಮೊದಲ ಅಕ್ಷರ ಶ್ರೀಮ್ ಅನ್ನು ವ್ಯಕ್ತಿಯೊಳಗೆ ಜಾಗೃತಗೊಳಿಸುತ್ತದೆ. ನಮಸ್ಕಾರದ ನಂತರ ಏಕಾಂತ ಸ್ಥಳದಲ್ಲಿ ಕುಳಿತು ಲಕ್ಷ್ಮಿಯ ಬೀಜ ಮಂತ್ರವನ್ನು 11 ಬಾರಿ ಪಠಿಸಿದರೆ ಸಂಪತ್ತು ಹಠಾತ್ ಹೆಚ್ಚಳವಾಗುವ ಸಾಧ್ಯತೆಗಳಿವೆ. 
 

click me!