ದುರ್ಗೆ ಆಶೀರ್ವಾದ, ಸಂಪತ್ತು ಪ್ರಾಪ್ತಿಗೆ ನವರಾತ್ರಿ ವೇಳೆ ಈ ತೋರಣ ಹಾಕಿ

Published : Sep 23, 2025, 05:12 PM IST
ashoka leaves toran

ಸಾರಾಂಶ

Ashoka leaves toran : ನವರಾತ್ರಿ ಸಮಯದಲ್ಲಿ ಇಡೀ ಮನೆಯನ್ನು ಸಿಂಗಾರ ಮಾಡ್ತೇವೆ. ಹೂ, ಹಣ್ಣಿನಿಂದ ದೇವಿ ಪೂಜೆ ಮಾಡ್ತೇವೆ. ಇದೇ ವೇಳೆ ಮನೆ ಮುಖ್ಯ ದ್ವಾರವನ್ನು ಮರೆಯಬೇಡಿ. ಅಲ್ಲಿ ಹಾಕುವ ಒಂದು ತೋರಣ ನಿಮ್ಮ ಅದೃಷ್ಟ ಬದಲಿಸುತ್ತೆ. 

ದೇಶದಾದ್ಯಂತ ನವರಾತ್ರಿ (Navratri) ಸಂಭ್ರಮ ಮನೆ ಮಾಡಿದೆ. ನವರಾತ್ರಿಯ ಪವಿತ್ರ ಹಬ್ಬದಲ್ಲಿ ಪ್ರತಿ ಮನೆಯಲ್ಲೂ ದೇವಿ ದುರ್ಗೆ (Durga)ಯ ಆರಾಧನೆ ನಡೆಯುತ್ತದೆ. ಭಕ್ತರು ಒಂಭತ್ತು ದಿನಗಳ ಕಾಲ ದೇವಿ ಪೂಜೆ, ಹವನ, ಮಂತ್ರ ಪಠಣ ಸೇರಿದಂತೆ ದೇವಿಯ ಭಕ್ತಿಯಲ್ಲಿ ಲೀನರಾಗ್ತಾರೆ. ನವರಾತ್ರಿ ಹಬ್ಬದಲ್ಲಿ ಮನೆ – ಮನಸ್ಸು ಎರಡೂ ಶುದ್ಧವಾಗಿರಬೇಕು. ನವರಾತ್ರಿ ಆರಂಭಕ್ಕೂ ಮುನ್ನವೇ ಮನೆ ಸ್ವಚ್ಛಗೊಳಿಸಲು ಶಾಸ್ತ್ರದಲ್ಲಿಯೇ ಸಲಹೆ ನೀಡಲಾಗಿದೆ. ನವರಾತ್ರಿ ಸಂದರ್ಭದಲ್ಲಿ ಮನೆಯನ್ನು ಅಲಂಕರಿಸಲಾಗುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ತೋರಣ (Toran)ಗಳನ್ನು ಹಾಕಲಾಗುತ್ತದೆ. ಮನೆಯ ಮುಖ್ಯ ದ್ವಾರಕ್ಕೆ ಅಶೋಕ ಎಲೆಗಳ ತೋರಣವನ್ನು ಹಾಕುವುದು ಸಾಕಷ್ಟು ವಿಶೇಷತೆ ಪಡೆದಿದೆ. ವಾಸ್ತು ಶಾಸ್ತ್ರ ಹಾಗೂ ಶಾಸ್ತ್ರ ಎರಡರಲ್ಲೂ ಅಶೋಕ ಎಲೆಗೆ ಮಹತ್ವವಿದೆ. ಅಶೋಕ ಗಿಡವನ್ನು ಶುಭ, ಸಮೃದ್ಧಿ, ಸಂತೋಷದ ಸಂಕೇತವೆಂದು ಭಾವಿಸಲಾಗುತ್ತದೆ.

ನವರಾತ್ರಿ ಸಮಯದಲ್ಲಿ ಅಶೋಕ ಎಲೆ ತೋರಣದಿಂದ ಆಗುವ ಲಾಭ ಏನು? :

• ಮನೆಯ ಮುಂದಿರುವ ತೋರಣ ಲಕ್ಷ್ಮಿ ಮತ್ತು ದುರ್ಗೆಯನ್ನು ಸ್ವಾಗತಿಸುತ್ತದೆ, ಅಶೋಕ ಎಲೆಗಳಿಂದ ಮಾಡಿದ ತೋರಣವು ಸುಂದರವಾಗಿ ಕಾಣುವುದಲ್ಲದೆ, ವಾಸ್ತು ದೋಷಗಳನ್ನು ತೆಗೆದುಹಾಕುವಲ್ಲಿ ಸಹಕಾರಿ.

• ಅಶೋಕ ಎಲೆಗಳು ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ದೂರ ಇಡುತ್ತದೆ. ಮನೆಗೆ ಧನಾತ್ಮಕ ಶಕ್ತಿ ಪ್ರವೇಶ ಮಾಡಲು ಸಹಾಯ ಮಾಡುತ್ತದೆ.

ಕಾನ್ಫೆಡೆಂಟ್ ಆಗಿ ಸುಳ್ಳು ಹೇಳ್ತಾರೆ ಅಂದ್ರೆ ಈ ತಿಂಗಳಲ್ಲೇ ಹುಟ್ಟಿರುತ್ತಾರೆ

• ಪೂಜೆಗೆ ಅಶೋಕ ಎಲೆಗಳು ಮಂಗಳಕರ ಎನ್ನಲಾಗುತ್ತದೆ. ಅಶೋಕ ಗಿಡವನ್ನು ದೇವಿ ಲಕ್ಷ್ಮಿ ಮತ್ತು ತಾಯಿ ದುರ್ಗೆಗೆ ಪ್ರಿಯ ಎಂದು ನಂಬಲಾಗುತ್ತದೆ. ನೀವು ನವರಾತ್ರಿ ಸಮಯದಲ್ಲಿ ಅಶೋಕ ಎಲೆಗಳ ತೋರಣವನ್ನು ಮುಖ್ಯ ದ್ವಾರಕ್ಕೆ ಹಾಕಿದ್ರೆ ತಾಯಿ ದುರ್ಗೆಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.

• ಅಶೋಕ ಗಿಡ, ಅದೃಷ್ಟದ ಸಂಕೇತವಾಗಿದೆ. ನಿಮ್ಮ ಮನೆಯಲ್ಲಿ ಅಶೋಕ ಎಲೆ ತೋರಣವಿದ್ರೆ ಅದು ನಿಮ್ಮ ಜೀವನವನ್ನು ಬದಲಿಸುತ್ತದೆ. ಅದೃಷ್ಟ ಬದಲಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

• ನವರಾತ್ರಿಯ ಶುಭ ಸಂದರ್ಭದಲ್ಲಿ ಅಶೋಕ ಎಲೆ ತೋರಣವನ್ನು ಹಾಕುವುದ್ರಿಂದ ಮನೆಯಲ್ಲಿ ಶುದ್ಧತೆ, ಶಾಂತಿ ನೆಲೆಸುತ್ತದೆ.

• ವಾಸ್ತು ಶಾಸ್ತ್ರದ ಪ್ರಕಾರ ಅಶೋಕ ಎಲೆಯ ತೋರಣವನ್ನು ಮನೆಯ ಮುಖ್ಯ ಬಾಗಿಲಿಗೆ ಹಾಕುವುದರಿಂದ ದುಷ್ಟಶಕ್ತಿಗಳು ದೂರ ಓಡುತ್ತವೆ. ದೃಷ್ಟಿ ಕಣ್ಣು ನಿಮ್ಮ ಹಾಗೂ ಮನೆಯ ಮೇಲೆ ಬೀಳುವುದಿಲ್ಲ.

• ಮನೆಗೆ ಸಂಪತ್ತು, ಸಮೃದ್ಧಿ ಮತ್ತು ನೆಮ್ಮದಿ ತರುತ್ತದೆ.

• ಅಶೋಕ ಎಲೆಗಳು ಔಷಧೀಯ ಗುಣಗಳನ್ನು ಹೊಂದಿದೆ.ಇದು ವಾತಾವರಣವನ್ನು ಶುದ್ಧಗೊಳಿಸುತ್ತದೆ. ಮಾಲಿನ್ಯ ಮತ್ತು ಸೂಕ್ಷ್ಮಜೀವಿಗಳಿಂದ ಗಾಳಿಯನ್ನು ಶುದ್ಧಗೊಳಿಸಿ, ಕುಟುಂಬಸ್ಥರ ಆರೋಗ್ಯ ಕಾಪಾಡುತ್ತದೆ.

ಅಶೋಕ ಎಲೆಯ ತೋರಣ ತಯಾರಿಸುವುದು ಹೇಗೆ? : 

ಮೊದಲು ಅಶೋಕ ಎಲೆಗಳನ್ನು ತೆಗೆದುಕೊಳ್ಳಿ. ಎಲೆ ಹಾಳಾಗಿರಬಾರದು, ಒಣಗಿರಬಾರದು ಅಲ್ಲದೆ ಮಧ್ಯ ಅಥವಾ ತುದಿ ಕತ್ತರಿಸಿರಬಾರದು. ಸರಿಯಾಗಿರುವ ಎಲೆಗಳನ್ನು ತನ್ನಿ. ಅವುಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸಿ. ಈ ಎಲೆಗಳನ್ನು ಪವಿತ್ರವಾದ, ಶುದ್ಧವಾದ ದಾರದಲ್ಲಿ ಕಟ್ಟಿ. ಅದನ್ನು ನಿಮ್ಮ ಮನೆಯ ಮುಖ್ಯ ದ್ವಾರಕ್ಕೆ ಹಾಕಬೇಕು. ತೋರಣ ತಯಾರಿಸುವಾಗ ಮತ್ತು ಕಟ್ಟುವಾಗ ಶುದ್ಧತೆಯನ್ನು ಕಾಯ್ದುಕೊಳ್ಳಿ. ನೀವು ಸ್ನಾನ ಮಾಡಿ, ಶುಚಿ ಬಟ್ಟೆ ಧರಿಸಿದ ನಂತ್ರವೇ ತೋರಣ ತಯಾರಿಸಿ. ಅಶೋಕ ಎಲೆ ತೋರಣ ಬಾಡದಂತೆ ನೋಡಿಕೊಳ್ಳಬೇಕು. ಮೂರು ಅಥವಾ ನಾಲ್ಕನೇ ದಿನಕ್ಕೆ ತೋರಣವನ್ನು ಬದಲಿಸಿ, ಹೊಸ, ತಾಜಾ ಎಲೆಗಳ ತೋರಣವನ್ನು ಹಾಕಿ.

ಈ ರಾಶಿ ಮಹಿಳೆಯರಿಗೆ ಅನ್ಯಾಯ ಕಂಡರೆ ತುಂಬಾ ಕೋಪ, ಇವರೊಂದಿಗೆ ಎಚ್ಚರ

ಆಧುನಿಕ ಯುಗದಲ್ಲಿ ತೋರಣದ ಮಹತ್ವ : 

ಈಗಿನ ದಿನಗಳಲ್ಲಿ ಆರ್ಟಿಫಿಶಿಯಲ್ ತೋರಣಗಳು ಸಾಕಷ್ಟು ಸಿಗುತ್ತವೆ. ಆದ್ರೆ ನಿಜವಾದ ಎಲೆಗಳಿಂದ ತಯಾರಿಸಿದ ತೋರಣ ಮನೆಯ ಸೌಂದರ್ಯ ಹೆಚ್ಚಿಸುವುದಲ್ಲದೆ, ಸಂಪ್ರದಾಯದೊಂದಿಗೆ ಸಂಪರ್ಕ ಕಾಪಾಡಿಕೊಳ್ಳುತ್ತದೆ. ಎಲೆಗಳಿಂದ ಮಾಡಿದ ತೋರಣವು ಮನೆಯಲ್ಲಿ ದೀರ್ಘಕಾಲೀನ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಕಾರಿ.

 

PREV
Read more Articles on
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ