ದಶಕಗಳಿಂದ ಮುಳುಗಿದ್ದ ರಂಗನಾಥ ದೇವಸ್ಥಾನ ಬರಗಾಲದಿಂದ ಪ್ರತ್ಯಕ್ಷ, ಈಗಲೂ ಕೇಳಿಸುತ್ತಿದೆ ಗಂಟೆ ನಾದ

Published : Aug 04, 2026, 03:23 PM IST
Ancient Bathu Ki Ladi Temple Complex

ಸಾರಾಂಶ

ದಶಕಗಳಿಂದ ಮುಳುಗಿದ್ದ ಪವಿತ್ರ ಬಾತು ಕಿ ಲಡಿ ದೇವಸ್ಥಾನ, ದೇಶದ ಬರಗಾಲ,ಮಳೆ ಕೊರತೆಯಿಂದ ಪ್ರತ್ಯಕ್ಷಗೊಂಡಿದೆ. ವಿಶೇಷ ಅಂದರೆ ಇಲ್ಲಿ ಪೂಜೆ ನಡೆಯದೇ ದಶಕಗಳೇ ಕಳೆದರೂ ಈಗಲೂ ಗಂಟೆ ಶಬ್ದ ಕೇಳಿಸುತ್ತಿದೆ.

ಕಂಗ್ರಾ (ಆ.04) ಕರ್ನಾಟಕದ ಕೆಲ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಆದರೆ ದೇಶದ ಬರಗಾಲ ಪರಿಸ್ಥಿತಿ ಸುಧಾರಿಸಿಲ್ಲ. ಬರಗಾಲದಿಂದ ಹಲವು ಜಲಾಶಗಳು ನೀರಿನ ಕೊರತೆ ಅನುಭವಿಸುತ್ತಿದೆ. ದಶಕಗಳಿಂದ ಜಲಾಶಗಳ ಕಾರಣ ಮುಳುಗಿದ್ದ ದೇವಾಲ ಪ್ರತ್ಯಕ್ಷಗೊಂಡಿದೆ. ಹೌದು, ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿರುವ ಅತ್ಯಂತ ಸುಂದರ ಹಾಗೂ ಅತ್ಯಂತ ಪವಿತ್ರ ಬಾತು ಕಿ ಲಡಿ ದೇವಸ್ಥಾನ ಪ್ರತ್ಯಕ್ಷಗೊಂಡಿದೆ. ಈ ದೇವಸ್ಥಾನ ವರ್ಷದ 8 ರಿಂದ 10 ತಿಂಗಳು ಮುಳಿಗಿದ್ದರೂ ದೇವಸ್ಥಾನದ ಗಂಟೆ ಶಬ್ದ ಕೇಳಿಸುತ್ತಲೇ ಇರುತ್ತೆ ಎಂದು ಸ್ಥಳೀಯರು ಹೇಳುತ್ತಾರೆ.

ದೇವಸ್ಥಾನ ಸಂಪೂರ್ಣ ಮುಳುಗಿದ್ದರೂ ಗಂಟೆ ಶಬ್ದ

ಪ್ರತಿ ವರ್ಷ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ವರೆಗೆ ಮಾತ್ರ ಈ ದೇವಾಲಯ ಕಾಣುತ್ತದೆ. ಆದರೆ ಈ ಬಾರಿ ಜೂನ್, ಜುಲೈ ಕಳೆದರೂ ದೇವಸ್ಥಾನ ಗೋಚರಿಸುತ್ತಿದೆ. ಬಾತು ಕಿ ಲಡಿ ದೇವಸ್ಥಾನಗಳ ಇಡೀ ಸಂಕೀರ್ಣ ನೀರಿನಲ್ಲಿ ಮುಳುಗಡೆಯಾಗುತ್ತದೆ. ಈ ಪೈಕಿ ಕೆಲ ದೇವಸ್ಥಾನಗಳು ನೀರು ಮಾರ್ಚ್‌ನಲ್ಲೂ ಗೋಚರಿಸುವುದಿಲ್ಲ. 'ಬಾಥೂ ಕಿ ಲಡಿ ಇದೀಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಡೀ ದೇವಸ್ಥಾನ ಸಂಕೀರ್ಣ ಗೋಚರಿಸುತ್ತಿದೆ. ವಿಶೇಷ ಅಂದರೆ ಈ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿರುವ ಸಂದರ್ಭದಲ್ಲೂ ದೇವಸ್ಥಾನದ ಗಂಟೆ ಶಬ್ದ ಕೇಳಿಸುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

1970ರಲ್ಲಿ ವ್ಯಾಸ ನದಿಗೆ ಅಡ್ಡಲಾಗಿ ಮಹಾರಾಣಾ ಪ್ರತಾಪ್ ಸಾಗರ ಅಣೆಕಟ್ಟು ಕಟ್ಟಲಾಯಿತು. ಇದರ ಪರಿಣಾಮ ಅತ್ಯಂತ ಪ್ರಾಚೀನ ದೇವಾಲಯಗಳ ಸಂಕೀರ್ಣ, ಹಲವು ದೇವಸ್ಥಾನ ನೀರಿನಲ್ಲಿ ಮುಳುಗಡೆಯಾಗಿತ್ತು. ನೀರಿನ ಮಟ್ಟ ಕಡಿಮೆಯಾದಾಗ ಈ ದೇವಾಲಯ ಗೋಪುರ ಗೋಚರಿಸುತ್ತದೆ. ಆದರೆ ಈ ಬಾರಿ ಜಲಾಶಯದಲ್ಲಿ ನೀರು ಭಾರಿ ಕಡಿಮೆಯಾಗಿರುವ ಪರಿಣಾಮ ಸಂಪೂರ್ಣ ಸಂಕೀರ್ಣ ಗೋಚರಿಸುತ್ತಿದೆ.

ದೇವಸ್ಥಾನಕ್ಕಿದೆ ಪಾಂಡವರ ನಂಟು

ಈ ದೇವಸ್ಥಾನವನ್ನು ಆಜ್ಞಾತವಾಸದಲ್ಲಿದ್ದ ಪಾಂಡವರು ನಿರ್ಮಿಸದರು ಎಂಬುದು ಪುರಾಣ ದಾಖಲೆ. ಈ ದೇವಸ್ಥಾನ ನಿರ್ಮಿಸಿ ಪೂಜಿಸುತ್ತಿದ್ದ ಪಾಂಡವರು ಇಲ್ಲಿಂದರೆ ಸ್ವರ್ಗಕ್ಕೆ ತೆರಳಲು ಎಣಿಸಲು ನಿರ್ಮಿಸಲು ಯತ್ನಿಸಿದ್ದರು ಎನ್ನುವುದು ಪುರಾಣ ಕತೆ. ಆದರೆ ಪಾಂಡವರ ಪ್ರಯತ್ನ ಅಪೂರ್ಣವಾಯಿತು ಎಂಬ ಉಲ್ಲೇಖವಿದೆ. ಇತಿಹಾಸ ಪ್ರಕಾರ 16 ರಿಂದ 17ನೇ ಶತಮಾನದಲ್ಲಿ ಕಟೋತ್ ರಾಜವಂಶಸ್ಥರು ಈ ದೇವಾಲಯ ನಿರ್ಮಾಣ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ.

PREV
Read more Articles on
click me!

Recommended Stories

ಆಗಸ್ಟ್ 20 ರಂದು ಶನಿ ಗ್ರಹವು ಸಂಚಾರ ಮಾಡಲಿದ್ದು, ಈ 3 ರಾಶಿಗೆ ಕಷ್ಟ, ನೀವು ಜಾಗರೂಕರಾಗಿರಬೇಕು
ಅತಿಗಂಡ ಯೋಗದಿಂದಾಗಿ ಈ ರಾಶಿಚಕ್ರ ಚಿಹ್ನೆಗಳ ಬಾಗಿಲು ತಟ್ಟುತ್ತದೆ ಅದೃಷ್ಟ