2026ರ 2 ಭವಿಷ್ಯ ನಿಜವಾದ ಬೆನ್ನಲ್ಲೇ ಲೀವಿಂಗ್ ನಾಸ್ಟ್ರಡಾಮಸ್‌ನಿಂದ ಮತ್ತೊಂದು ಸ್ಫೋಟಕ ಪ್ರಿಡಿಕ್ಷನ್

Published : Aug 03, 2026, 04:36 PM IST
Living Nostradamus Sparks Buzz

ಸಾರಾಂಶ

ಸ್ಪೇನ್ ಫಿಫಾ ವಿಶ್ವಕಪ್ ಗೆಲುವು ಸೇರಿದಂತೆ ಈ ವರ್ಷ ನುಡಿದ 2 ಭವಿಷ್ಯ ನಿಜವಾಗಿರುವ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಭವಿಷ್ಯ ಹೊರಬಂದಿದೆ. ಲೀವಿಂಗ್ ನಾಸ್ಟ್ರಡಾಮಸ್ ಎಂದೇ ಖ್ಯಾತಿಗೊಂಡಿರುವ ಅಥೋಸ್ ಸಲೋಮೆ ನುಡಿದ ಭವಿಷ್ಯವೇನು?

ಬ್ರಸಿಲಿಯಾ (ಆ.03) ಕೋವಿಡ್ ವೈರಸ್, ರಾಣಿ ಎಲಿಜಬೆತ್ II ನಿಧನ, ಮಧ್ಯಪ್ರಾಚ್ಯ ಯುದ್ಧ, ಸ್ಪೇನ್ ತಂಡದ ಫಿಫಾ ಗೆಲುವು ಸೇರಿದಂತೆ ಜಗತ್ತಿನ ವಿದ್ಯಮಾನಗಳ ನಿಖರ ಭವಿಷ್ಯ ನುಡಿದ ಅಥೋಸ್ ಸಲೋಮೆ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಲೀವಿಂಗ್ ನಾಸ್ಟ್ರಡಾಮಸ್ ಎಂದೇ ಜನಪ್ರಿಯಗೊಂಡಿರುವ ಅಥೋಸ್ ಸಲೋಮೆ ಇದೀಗ ಜಾಗಿತಕ ವಿದ್ಯಮಾನ ಹಾಗೂ ಆತಂಕಾರಿ ಬೆಳವಣಿಗೆ ಕುರಿತು ಮಹತ್ವದ ಭವಿಷ್ಯ ನುಡಿದಿದ್ದು,ಕುತೂಹಲ ಹೆಚ್ಚಾಗಿದೆ.

ಮತ್ತೊಂದು ನೇರ ಯುದ್ಧ

ಅಥೋಸ್ ಸಲೋಮೆ 2026ರಲ್ಲಿ 10 ಭವಿಷ್ಯ ನುಡಿದಿದ್ದಾರೆ. ಈ ಪೈಕಿ 2 ಭವಿಷ್ಯಗಳು ನಿಜವಾಗಿದೆ. ಇದೀಗ ಅಥೋಸ್ ಸಲೋಮೆ ಜಗತ್ತು ಮತ್ತೊಂದು ಅತಿದೊಡ್ಡ ಬಿಕ್ಕಟ್ಟು ಎದುರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆರ್ಕ್ಟಿಕ್ ವಲಯದಿಂದ ಮತ್ತೊಂದು ಭೀಕರ ಯುದ್ಧಕ್ಕೆ ಜಗತ್ತು ಸಾಕ್ಷಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಹಿಮಪದರಗಳು ಕರಗುತ್ತಿರುವುದರಿಂದ ಹೊಸ ಹಡಗು ಸಾರಿಗೆ ಮಾರ್ಗಗಳು ಮತ್ತು ಅಡಗಿರುವ ಪ್ರಾಕೃತಿಕ ಇಂಧನ ಸಂಪನ್ಮೂಲಗಳ ಮೇಲಿನ ನಿಯಂತ್ರಣಕ್ಕಾಗಿ ರಷ್ಯಾ ಹಾಗೂ ನ್ಯಾಟೋ (NATO) ಪಡೆಗಳ ನಡುವೆ ನೇರ ಮುಖಾಮುಖಿ ಸಂಭವಿಸುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸೌರ ಬಿರುಗಾಳಿ ಸೇರಿ ಹಲವು ಗಂಡಾಂತರ

ಈಗಾಗಲೆ ಯೂರೋಪ್‌ನಲ್ಲಿ ತಾಪಮಾನ ಏರಿಕೆ, ಕಾಡ್ಗಿಚ್ಚು ಹರಡುತ್ತಿದೆ. ಇದರ ಬೆನ್ನಲ್ಲೇ ಅಥೋಸ್ ಸಲೋಮೆ, ಸೌರ ಬಿರುಗಾಳಿ ಅಪ್ಪಳಿಸಲಿದೆ ಎಂದಿದ್ದಾರೆ. ಇದರಿಂದ ಪವರ್ ಗ್ರಿಡ್ ಸ್ಥಗಿತಗೊಳ್ಳಲಿದೆ. ಜಗತ್ತು ಕತ್ತಲಲ್ಲಿ ಮುಳುಗಲಿದೆ. ಎಐ ಸೇರಿದಂತೆ ಇತರ ತಂತ್ರಜ್ಞಾನ ಬಳಸಿ ಹಲವು ದೇಶಗಳ ವಿದ್ಯುತ್ ಸೇರಿದಂತೆ ಇತರ ನೆಟ್‌ವರ್ಕ್ ಮೇಲೆ ಸೈಬರ್ ದಾಳಿ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. H5N5 ಹಕ್ಕಿ ಜ್ವರ ಸೇರಿದಂತೆ ಕೆಲ ರೂಪಾಂತರಿ ವೈರಸ್‌ಗಳಿಂದ ಜನರು ಹಾಗೂ ಪ್ರಾಣಿ ಪಕ್ಷಿಗಳು ತೀವ್ರ ಸಂಕಟ ಎದುರಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಅಥೋಸ್ ನುಡಿದ ಹಲವು ಭವಿಷ್ಯಗಳು ನಿಜವಾಗಿದೆ. ಎಲಾನ್ ಮಸ್ಕ್ ಟ್ವಿಟರ್ ಖರೀದಿಯನ್ನು ಮೊದಲೇ ಭವಿಷ್ಯ ನುಡಿದಿದ್ದರು. ಈ ವರ್ಷ ಮಧ್ಯಪ್ರಾಚ್ಯ ಯುದ್ಧ ಕುರಿತು ನಿಖರವಾಗಿ ಹೇಳಿದ್ದರು. ಇತ್ತ ಆಫ್ರಿಕಾದಲ್ಲಿನ ಭಯೋತ್ಪಾದನಾ ಚಟುವಟಿಕೆ ತೀವ್ರಗೊಳ್ಳಲಿದೆ ಎಂದಿದ್ದರು. ಈ ಎರಡೂ ಭವಿಷ್ಯಗಳು ನಿಜವಾಗಿದೆ.

PREV
Read more Articles on
click me!

Recommended Stories

40 ವರ್ಷದ ನಂತರ ನಿಜವಾದ ಜಾಕ್‌ಪಾಟ್, ಶನಿ ದೇವರ ನೆಚ್ಚಿನ ಜನ್ಮ ದಿನಾಂಕಗಳು ಇವು
ವರುಣ-ಗುರು ಯೋಗ: 4 ರಾಶಿಗೆ ಸಂಪತ್ತು, ಹುಡುಕಿ ಬರಲಿದೆ ಸುಖ , ಅದೃಷ್ಟಕ್ಕೆ ಚಾಲನೆ!