
ವಸಂತ ಪಂಚಮಿ ಎಂದರೆ ಜ್ಞಾನದಾತೆ ಸರಸ್ವತಿಯ ಆರಾಧನೆ. ವಸಂತ ಪಂಚಮಿಯನ್ನು ಪ್ರತಿ ವರ್ಷ ಮಾಘ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಬರುತ್ತದೆ. ವಸಂತ ಮಾಸದ ಆರಂಭದಲ್ಲಿ ನಡೆಯುವ ಈ ಹಬ್ಬವನ್ನು ಹೆಚ್ಚಾಗಿ ಪಂಜಾಬ್, ಬಿಹಾರದಲ್ಲಿ ಆಚರಿಸುತ್ತಾರೆ. ಅವರವರ ಜನ್ಮ ರಾಶಿಗಳಿಗೆ ಅನುಸಾರವಾಗಿ ಸರಸ್ವತಿಯ ಪೂಜೆಯನ್ನು ಮಾಡಿದರೆ ಎಲ್ಲ ಕಷ್ಟಗಳು ದೂರವಾಗುತ್ತದೆ. ಯಾವ ರಾಶಿಯವರು ಹೇಗೆ ಪೂಜೆ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಮೇಷ ರಾಶಿ : ಮೇಷ ರಾಶಿಯಲ್ಲಿ ಜನಿಸಿದವರು ಪೂಜೆ ಮಾಡುವಾಗ ಸರಸ್ವತಿ (Saraswati) ಕವಚದ ಮಂತ್ರ ಪಠಿಸಿ, ಹಳದಿ ಅನ್ನ (Rice) ದ ನೈವೇದ್ಯವನ್ನು ನೀಡಿದರೆ ಅವರ ಆಸೆಗಳು ನೆರವೇರುತ್ತವೆ.
ವೃಷಭ ರಾಶಿ : ಈ ರಾಶಿಯಲ್ಲಿ ಹುಟ್ಟಿದವರು ವಸಂತ ಪಂಚಮಿಯಂದು ಪೂಜೆ ಮಾಡುವಾಗ ಬಿಳಿ ಶ್ರೀಗಂಧ (Sandalwood) ಮತ್ತು ಬಿಳಿ ಹೂವನ್ನು ದೇವರಿಗೆ ಅರ್ಪಿಸಬೇಕು. ಇದರಿಂದ ಅವರ ಎಲ್ಲ ಆಸೆಗಳು ನೆರವೇರಿ, ಕೆಲಸದಲ್ಲಿ ಏಳ್ಗೆಯಾಗುತ್ತದೆ.
ಮಿಥುನ ರಾಶಿ : ಸರಸ್ವತಿಯು ವಿದ್ಯಾದೇವತೆ ಆಗಿರುವುದರಿಂದ ಅಂದಿನ ದಿನ ಸರಸ್ವತಿಗೆ ಪೆನ್ (Pen) ಇಟ್ಟು ಪೂಜೆ ಸಲ್ಲಿಸಿ. ಮಿಥುನ ರಾಶಿಯವರು ಹೀಗೆ ಮಾಡುವುದರಿಂದ ಅವರ ಜೀವನದಲ್ಲಿ ಉತ್ತಮ ಫಲ ಸಿಗುತ್ತದೆ.
ಕಟಕ ರಾಶಿ : ಕಟಕ ರಾಶಿಗೆ ಚಂದ್ರ ಅಧಿಪತಿಯಾದ್ದರಿಂದ ಈ ರಾಶಿಯವರು ವಸಂತಿ ಪಂಚಮಿಯಂದು ಸರಸ್ವತಿಗೆ ಹಳದಿ ಬಣ್ಣದ ಹೂವುಗಳನ್ನು ನೀಡಬೇಕು. ಖೀರ್ ಗೆ ಕೇಸರಿ ದಳಗಳನ್ನು ಸೇರಿಸಿ ನೈವೇದ್ಯ ಮಾಡಬೇಕು. ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಅಧಿಪತಿ ಸೂರ್ಯನಾಗಿರುವುದರಿಂದ ನೀವು ಸರಸ್ವತಿ ಪೂಜೆ ಮಾಡಿ ಗಾಯತ್ರಿ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮಗೆ ನೌಕರಿಯಲ್ಲಿ ಬಡ್ತಿ ಸಿಗುತ್ತದೆ ಮತ್ತು ಧನ ಲಾಭವಾಗುತ್ತದೆ.
ಕನ್ಯಾ ರಾಶಿ : ವಸಂತ ಪಂಚಮಿಯಂದು ಈ ರಾಶಿಯವರು ಬಡ ಮಕ್ಕಳಿಗೆ ಪುಸ್ತಕ, ಪೆನ್ಸಿಲ್ ಅಥವಾ ಶಾಲೆ ಮಕ್ಕಳಿಗೆ ಬೇಕಾದ ಉಳಿದ ವಸ್ತುಗಳನ್ನು ದಾನಮಾಡಬೇಕು. ಬಡವರಿಗೆ ದಾನ ಮಾಡಿದ್ರೆ ಹೆಚ್ಚಿನ ಫಲವನ್ನು ಪಡೆಯಬಹುದು.
ತುಲಾ ರಾಶಿ : ತುಲಾ ರಾಶಿಯ ಶುಕ್ರನಾದ್ದರಿಂದ ಈ ರಾಶಿಯವರು ಸರಸ್ವತಿಗೆ ಬಿಳಿ ಬಣ್ಣದ ವಸ್ತುಗಳನ್ನು ನೀಡಬೇಕು. ಬಡವರಿಗೆ ಬಿಳಿ ಬಣ್ಣದ ವಸ್ತ್ರಗಳನ್ನು ದಾನ ಮಾಡಬೇಕು. ಇದರಿಂದ ನಿಮ್ಮ ಆಸೆಗಳೆಲ್ಲ ನೆರವೇರಿ ವಿಶೇಷ ಫಲ ಸಿಗುತ್ತದೆ.
ವೃಶ್ಚಿಕ ರಾಶಿ : ವಸಂತಿ ಪಂಚಮಿಯಂದು ಈ ರಾಶಿಯವರು ಸರಸ್ವತಿಗೆ ಕೆಂಪು ಹಳದಿ ಬಣ್ಣದ ದಾವಣಿಯನ್ನು ಅರ್ಪಿಸಿ ಕೆಂಪು ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ನಿಮ್ಮ ಎಲ್ಲ ಕೆಲಸಗಳೂ ಯಶಸ್ವಿಯಾಗುತ್ತವೆ.
ಧನು ರಾಶಿ : ಈ ರಾಶಿಯ ಅಧಿಪತಿ ಗುರುವಾದ್ದರಿಂದ ಈ ದಿನ ನೀವು ಹಳದಿ ಬಣ್ಣದ ವಸ್ತುಗಳನ್ನು ದೇವಿಗೆ ಅರ್ಪಿಸಬೇಕು ಹಾಗೂ ದಾನ ಮಾಡಬೇಕು. ಕಡಲೆಹಿಟ್ಟಿನ ಉಂಡೆಯನ್ನು ದೇವರಿಗೆ ನೈವೇದ್ಯ ಕೊಡಬೇಕು.
MAGH MASA 2023: ಈ ಮಾಸದಲ್ಲಿಯೇ ಬರಲಿದೆ ಶಿವರಾತ್ರಿ, ವಸಂತ ಪಂಚಮಿ
ಮಕರ ರಾಶಿ : ವಸಂತ ಪಂಚಮಿಯಂದು ಸರಸ್ವತಿಗೆ ಹಳದಿ ಅನ್ನ ನೈವೇದ್ಯ ಮಾಡಿ ಹಳದಿ ಬಣ್ಣದ ವಸ್ತುಗಳನ್ನು ಬಡವರಿಗೆ ದಾನ ಮಾಡಬೇಕು. ಇದರಿಂದ ಎಲ್ಲ ಬಯಕೆಗಳೂ ಇಡೇರುವುದು ಖಂಡಿತ.
ಕುಂಭ ರಾಶಿ : ಕುಂಭ ರಾಶಿಯವರು ವಸಂತ ಪಂಚಮಿಯಂದು ಸರಸ್ವತಿಯ ಪೂಜೆ ಮಾಡಿ ಬಿಳಿ ಬಣ್ಣದ ವಸ್ತ್ರವನ್ನು ದಾನ ಮಾಡಬೇಕು. ಇದರಿಂದ ವಿದ್ಯೆ (Education) ಲಭಿಸುತ್ತದೆ ಮತ್ತು ಸರಸ್ವತಿಯ ಆಶೀರ್ವಾದ (Blessing) ಯಾವಾಗಲೂ ಇರುತ್ತದೆ.
Idol Vastu : ದೇವರ ಮನೆಯಲ್ಲಿ ಈ ಮೂರ್ತಿ ಇಟ್ರೆ ನಷ್ಟ ನಿಮಗೆ
ಮೀನ ರಾಶಿ : ಮೀನ ರಾಶಿಯವರು ವಸಂತ ಪಂಚಮಿಯಂದು ಕಡಲೆಹಿಟ್ಟಿನಿಂದ ತಯಾರಿಸಿದ ಹಲ್ವಾವನ್ನು ದೇವಿಗೆ ನೈವೇದ್ಯ ಮಾಡಬೇಕು.