ಆಗಸ್ಟ್‌ನಲ್ಲಿ ರಚನೆಯಾಗ್ತಿದೆ ದರಿದ್ರ ಯೋಗ; ಜಾಗರೂಕರಾಗಿರಲೇಬೇಕು ಈ ಮೂರು ರಾಶಿಯವರು, ತಪ್ಪಿದ್ರೆ ಅನಾಹುತ ಫಿಕ್ಸ್!

By Mahmad Rafik  |  First Published Jul 31, 2024, 10:22 PM IST

ದರಿದ್ರ ಯೋಗಕ್ಕೆ ಒಳಗಾಗುವ ರಾಶಿಚಕ್ರದವರ ಜೀವನದಲ್ಲಿ ಹಣದ ಸಮಸ್ಯೆ, ಆರೋಗ್ಯ ನಷ್ಟ, ಕೌಟುಂಬಿಕ ಕಲಹ ಸೇರಿದಂತೆ ಹಲವು ತೊಂದರೆಗಳು ಉಂಟಾಗುತ್ತವೆ. ಇದರ ಯೋಗಕ್ಕೆ ಒಳಗಾಗುವ ಜನರು ಅತ್ಯಂತ ತಾಳ್ಮೆಯಿಂದಿರುವಂತೆ ಸಲಹೆ ನೀಡಲಾಗುತ್ತದೆ. 


ಬಾರಿ ಗ್ರಹಗಳ ಸಂಯೋಜನೆಯಿಂದಾಗಿ ಆಗಸ್ಟ್ ತಿಂಗಳಲ್ಲಿ ವಿಶೇಷ ಗ್ರಹ ಯೋಗ ರೂಪಗೊಳ್ಳುತ್ತಿದೆ. ಇದನ್ನು ದರಿದ್ರ ಯೋಗ ರಚನೆಯಾಗುತ್ತಿದೆ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ದರಿದ್ರ ಯೋಗವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆಗಸ್ಟ್‌ನಲ್ಲಿ ಹಲವು ಗ್ರಹಗಳು ತಮ್ಮ ರಾಶಿಯನ್ನು ಬದಲಿಸುತ್ತಿರುವ ಕಾರಣ, ಹಲವರ ರಾಶಿಚಕ್ರದ ಮೇಲೆ ಬದಲಾವಣೆಗಳು ಆಗುತ್ತಿದೆ. ಈ ಬದಲಾವಣೆ ಶುಭ-ಅಶುಭ ಫಲಗಳನ್ನು ಉಂಟು ಮಾಡುತ್ತದೆ. ಅದರಲ್ಲಿಯೂ ಈ ದರಿದ್ರ ಯೋಗ ರೂಪುಗೊಳ್ಳುತ್ತಿರುವ ಪರಿಣಾಮ ಕೆಲ ರಾಶಿಚಕ್ರ ಚಿಹ್ನೆಗಳ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರಲಿವೆ. ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. 12 ರಾಶಿಗಳ ಪೈಕಿ ಮೂರು ರಾಶಿಚಕ್ರಗಳ ಮೇಲೆ ದರಿದ್ರ ಯೋಗದ ವಕ್ರದೃಷ್ಟಿ ಬೀಳಲಿದೆ. ಹಾಗಾದ್ರೆ ಆ ಮೂರು ರಾಶಿಗಳು ಯಾವವು? ದರಿದ್ರ ಯೋಗ ಎಂದರೇನು ಎಂಬುದನ್ನು ನೋಡೋಣ ಬನ್ನಿ. 

ಏನಿದು ದರಿದ್ರ ಯೋಗ? 
ಗ್ರಹಗಳ ಸಂಯೋಜನೆಯಿಂದಾಗಿ ದರಿದ್ರ ಯೋಗ ರಚನೆಯಾಗುತ್ತದೆ. ಹೆಸರೇ ಹೇಳುವಂತೆ ಈ ಯೋಗವು ಕೆಲವು ರಾಶಿಚಕ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಈ ಯೋಗವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ದರಿದ್ರ ಯೋಗಕ್ಕೆ ಒಳಗಾಗುವ ರಾಶಿಚಕ್ರದವರ ಜೀವನದಲ್ಲಿ ಹಣದ ಸಮಸ್ಯೆ, ಆರೋಗ್ಯ ನಷ್ಟ, ಕೌಟುಂಬಿಕ ಕಲಹ ಸೇರಿದಂತೆ ಹಲವು ತೊಂದರೆಗಳು ಉಂಟಾಗುತ್ತವೆ. ಇದರ ಯೋಗಕ್ಕೆ ಒಳಗಾಗುವ ಜನರು ಅತ್ಯಂತ ತಾಳ್ಮೆಯಿಂದಿರುವಂತೆ ಸಲಹೆ ನೀಡಲಾಗುತ್ತದೆ. 

Tap to resize

Latest Videos

ಆಗಸ್ಟ್ ತಿಂಗಳಲ್ಲಿ ರೂಪುಗೊಳ್ಳುತ್ತಿರುವ ದರಿದ್ರ ಯೋಗವು ಮೇಷ, ಕರ್ಕಾಟಕ ಮತ್ತು ಮಕರ ರಾಶಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಈ ಮೂರು ರಾಶಿಚಕ್ರಗಳ ಜನರು ಆರ್ಥಿಕ ಬಿಕ್ಕಟ್ಟು, ಆರೋಗ್ಯ ಸಮಸ್ಯೆಗಳು ಮತ್ತು ಕುಟುಂಬ ವೈಷಮ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

1.ಮೇಷ ರಾಶಿ:
ಮೇಷ ರಾಶಿ ದರಿದ್ರ ಯೋಗದ ಪ್ರಭಾವಕ್ಕೆ ಒಳಗಾಗುವುದರಿಂದ ಈ ತಿಂಗಳು ಆರ್ಥಿಕ ನಷ್ಟಕ್ಕೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಈ ಸಮಯದಲ್ಲಿ ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು. ದರಿದ್ರ ಯೋಗದಿಂದ ಮೇಷ ರಾಶಿಯವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೇಷ ರಾಶಿಯ ಚಕ್ರದಲ್ಲಿ ಯಾವುದೇ ಗ್ರಹ ನೆಲಗೊಳ್ಳದ ಕಾರಣ ದರಿದ್ರ ಯೋಗಕ್ಕೆ ಇದು ಒಳಗಾಗುತ್ತಿದೆ ಎಂದು ಜ್ಯೋತಿಷ್ಯಿಗಳು ಹೇಳುತ್ತಾರೆ. 

2.ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಚಕ್ರದವರು ಸಹ ಕೌಟುಂಬಿಕ ಸಮಸ್ಯೆ ಮತ್ತು ವೈಷಮ್ಯವನ್ನು ಎದುರಿಸುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಈ ಸಮಯದಲ್ಲಿ ಕುಟುಂಬಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಕುಟುಂಬದ ಸದಸ್ಯರ ಜೊತೆಗಿನ ಸಂಬಂಧ ಸುಧಾರಿಸಲು ಪ್ರಯತ್ನಿಸಿರಬೇಕು. ಕರ್ಕಾಟಕ ರಾಶಿಯವರ ಪತ್ನಿಯ ಆರೋಗ್ಯದಲ್ಲಿಯೂ ಹೆಚ್ಚು ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.  ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಪ್ರಮುಖವಾಗಿರುತ್ತದೆ. 

Surya Ketu Yuti 2024: 18 ವರ್ಷಗಳ ನಂತರ ಸೂರ್ಯ-ಕೇತುವಿನ ಸಂಯೋಗ, ಬದಲಾಗಲಿದೆ 5 ರಾಶಿಚಕ್ರದವರ ಜೀವನ

3.ಮಕರ ರಾಶಿ
ಮಕರ ರಾಶಿಯ ಜನರು ದರಿದ್ರ ಯೋಗ ರಚನೆಯಿಂದಾಗಿ ವೃತ್ತಿ ಜೀವನದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ತಾಳ್ಮೆ ಅತ್ಯಗತ್ಯವಾಗಿದ್ದು, ಕಷ್ಟಪಟ್ಟು ಕೆಲಸ ಮಾಡಬೇಕು. ಮಕರ ರಾಶಿಯವರ ವೃತ್ತಿ ಜೀವನದ ಮೇಲೆಯೇ ದರಿದ್ರ ಯೋಗ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿರುತ್ತವೆ.

ದರಿದ್ರ ಯೋಗಕ್ಕೆ ಪರಿಹಾರ ಏನು? 

ದರಿದ್ರ ಯೋಗದ ಪರಿಹಾರಕ್ಕಾಗಿ ನಿಯಮಿತವಾಗಿ ದೇವಾಲಯಕ್ಕೆ ಭೇಟಿ ನೀಡಬೇಕುಲ. ಮನೆದೇವರ ಹೆಸರಿನಲ್ಲಿ ಮನೆಯಲ್ಲಿಯೇ ಬೆಳಗ್ಗೆ ಮಡಿಯಿಂದ ಕ್ರಮಬದ್ಧವಾಗಿ ಪೂಜೆ ಸಲ್ಲಿಸಿ. ಮನೆಯಿಂದ ಹೊರಡುವ ಮುನ್ನ ದೇವರಿಗೆ ನಮಸ್ಕರಿಸಿ ತೆರಳಿ. ನಿರ್ಗತಿಕರಿಗೆ ಶಕ್ತಿಗನುಸಾರವಾಗಿ ದಾನ ನೀಡಿ. ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ಮಂತ್ರಗಳನ್ನು ಪಠಿಸಿ. ಒಂದು ವೇಳೆ ಮನೆಯಲ್ಲಿ ವಾಸ್ತುದೋಷಗಳಿದ್ರೆ ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಲು ಪ್ರಯತ್ನಿಸಿ.

ಪಿತೃದೋಷ, ನಾಗದೋಷ ನಿವಾರಣೆಗಾಗಿ ನಾಗಪಂಚಮಿ ದಿನದಂದು ಮಾಡಿ ಈ 6 ಕೆಲಸ

Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥ, ನಂಬಿಕೆ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರೋ ವಿಷಯವನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

click me!