ಖಾಶೆಂಪುರ್ ಗ್ರಾಮದ ಗ್ರಾಮ ದೇವತೆ ಮರಿಗೆಮ್ಮ ದೇವಿಯ ಮೂರ್ತಿಗಳನ್ನು ಜಾತ್ರಾ ಮಹೋತ್ಸವ ದಿನದಂದೇ ಒಂದೇ ದಿನದಲ್ಲೇ ತಯಾರಿಸುವ ಸಂಪ್ರದಾಯ ಜಾರಿಯಲಿದ್ದು, ಈ ವರ್ಷವೂ ಮಂಗಳವಾರ ಬೆಳಗ್ಗೆ ಗ್ರಾಮಸ್ಥರು ಮರದ ತುಕಡಿಗಳನ್ನು ಗ್ರಾಮದ ಬಡಿಗೇರ ಮನೆಗಳಿಗೆ ನೀಡಿದರು.
ಬೀದರ್ (ಜು.31): ತಾಲೂಕಿನ ಖಾಶೆಂಪುರ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿವೂ ಗ್ರಾಮ ದೇವತೆ ಮರಿಗೆಮ್ಮ ತಾಯಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿದ್ದು, ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ನಾಯಕ ಬಂಡೆಪ್ಪ ಖಾಶೆಂಪುರ್ ಅವರ ಸ್ವಗ್ರಾಮ ಖಾಶೆಂಪೂರ್ ನಲ್ಲಿ ನಡೆಯುವ ವಿಶೇಷ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮರಿಗೆಮ್ಮ ದೇವಿಯ ದರ್ಶನ ಪಡೆದುಕೊಂಡಿದ್ದರು,. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಖಾಶೆಂಪುರ್ ಗ್ರಾಮಸ್ಥರು ಬೆಳಗ್ಗೆಯಿಂದಲೇ ಸಿದ್ಧತೆ ಆರಂಭಿಸಿ, ಸಂಜೆ ವೇಳೆಗೆ ಗ್ರಾಮ ದೇವತೆಯ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಕಾರ್ಯಕ್ರಮ ನೆರವೇರಿಸಿದರು.
ಒಂದೇ ದಿನದಲ್ಲೇ ತಯಾರಾಗುವ ಮೂರ್ತಿಗಳು: ಖಾಶೆಂಪುರ್ ಗ್ರಾಮದ ಗ್ರಾಮ ದೇವತೆ ಮರಿಗೆಮ್ಮ ದೇವಿಯ ಮೂರ್ತಿಗಳನ್ನು ಜಾತ್ರಾ ಮಹೋತ್ಸವ ದಿನದಂದೇ ಒಂದೇ ದಿನದಲ್ಲೇ ತಯಾರಿಸುವ ಸಂಪ್ರದಾಯ ಜಾರಿಯಲಿದ್ದು, ಈ ವರ್ಷವೂ ಮಂಗಳವಾರ ಬೆಳಗ್ಗೆ ಗ್ರಾಮಸ್ಥರು ಮರದ ತುಕಡಿಗಳನ್ನು ಗ್ರಾಮದ ಬಡಿಗೇರ ಮನೆಗಳಿಗೆ ನೀಡಿದರು. ಅವುಗಳಿಂದ ಸಂಜೆಯವರೆಗೂ ಬಡಿಗೇರು ಮೂರ್ತಿಗಳನ್ನು ತಯಾರಿಸಿದರು. ತಯಾರಾದ ಮೂರ್ತಿಗಳನ್ನು ಸಂಜೆಯ ವೇಳೆಯಲ್ಲಿ ಗ್ರಾಮಸ್ಥರು ಬಡಿಗೇರ ಮನೆಯಿಂದ ಬಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆಯಲ್ಲಿ ತಂದು ಮರಿಗೆಮ್ಮ ದೇವಿಯ ಮಂದಿರದಲ್ಲಿ ಪ್ರತಿಷ್ಠಾಪಿಸಿದರು.
undefined
ಮುಡಾ ಹಗರಣ ಬಗ್ಗೆ ಬಿಜೆಪಿಯವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಪರಮೇಶ್ವರ್
ಈ ಸಂದರ್ಭದಲ್ಲಿ ಪ್ರಮುಖರಾದ ಶಾಂತಲಿಂಗ ಸಾವಳಗಿ, ರಾಜು ಖಾಶೆಂಪುರ್, ಸಂಜು ಖಾಶೆಂಪುರ್, ಬಾಬು ಖಾಶೆಂಪುರ್, ಅನಿಲ್ ಲಚ್ಚನೋರ್, ಶರಣಪ್ಪ ಖಾಶೆಂಪುರ್, ಭಜರಂಗ ತಮಗೊಂಡ, ಮಾರುತಿ ಬಸಗೊಂಡ, ಸುನೀಲ್ ಗುಮಾಸ್ತಿ, ವಿಶ್ವನಾಥ ಬಾಲೇಬಾಯಿ, ಯೋಗೇಶ್ ವಗ್ಗೆ, ರಾಜು ವಗ್ಗೆ, ಮಲ್ಲು ಮುದುಕಪ್ಪನವರ್, ಕೃಷ್ಣಾಚಾರಿ, ಮಂಜುನಾಥ ಬಾಲೇಬಾಯಿ, ದುಳಪ್ಪ ಪಟ್ನೆ, ಸುನೀಲ್ ಖಾಶೆಂಪುರ್, ಪವನ್ ವಗ್ಗೆ ಸೇರಿದಂತೆ ಖಾಶೆಂಪುರ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗಿಯಾಗಿದ್ದರು.