ಪ್ರತಿ ದಿನ ಮಸಾಲೆ ಪದಾರ್ಥಗಳನ್ನು ಬಳಸುವುದರಿಂದ, ದಾನ ನೀಡುವುದರಿಂದ ನೀವು ಗ್ರಹ ದೋಷಗಳಿಂದ ಮುಕ್ತರಾಗಿ ಅದೃಷ್ಟವನ್ನು ಸೆಳೆಯಬಹುದು ಎಂಬ ವಿಷಯ ಗೊತ್ತಿದೆಯೇ?
ಭಾರತೀಯ ಸಂಸ್ಕೃತಿಯು ಅತ್ಯಂತ ಚಿಂತನಶೀಲವಾಗಿ ನೇಯ್ದ ಸಂಸ್ಕೃತಿಗಳಲ್ಲಿ ಒಂದಾಗಿದೆ. ಇಲ್ಲಿ ಎಲ್ಲವೂ ಸಂಪ್ರದಾಯಗಳು ಮತ್ತು ಆಚರಣೆಗಳೊಂದಿಗೆ ಸಂಬಂಧವನ್ನು ಹೊಂದಿದೆ. ನಾವು ತಿನ್ನುವ ಆಹಾರ ಮತ್ತು ಮಸಾಲೆಗಳು ಸಹ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಸಂಬಂಧ ಹೊಂದಿವೆ. ನಂಬಿದ್ರೆ ನಂಬಿ ಅಥವಾ ಬಿಡಿ, ಆದರೆ ಮಸಾಲೆ ಪದಾರ್ಥಗಳು ನಿಮ್ಮ ಹಣೆಬರಹವನ್ನು ತಿರುಚುವ ಮತ್ತು ಅದೃಷ್ಟವನ್ನು ತರುವ ಶಕ್ತಿಯನ್ನು ಹೊಂದಿವೆ..
ಲವಂಗ ಮತ್ತು ಕಪ್ಪು ಮೆಣಸು(Clove and Black Pepper)
ಲವಂಗ ಮತ್ತು ಕರಿಮೆಣಸು ಶನಿ ಗ್ರಹಕ್ಕೆ ಸಂಬಂಧಿಸಿದೆ. ಇದು ಕೆಮ್ಮು ಮತ್ತು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ನೀವು ಇದನ್ನು ನಿಮ್ಮ ಬೆಳಿಗ್ಗೆ ಚಹಾದಲ್ಲಿ ಅಥವಾ ರಾತ್ರಿ ಮಲಗುವ ಮೊದಲು ಬಳಸಬಹುದು. ಸಾಸಿವೆ ಎಣ್ಣೆಯಲ್ಲಿ ಈ ಎರಡರಲ್ಲಿ ಯಾವುದನ್ನಾದರೂ ಸೇರಿಸಿ ದೀಪವನ್ನು ಹಚ್ಚಿ. ಇದು ಮನೆಯಲ್ಲಿ ಸಮೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ನಿಮಗೆ ಆರೋಗ್ಯ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತದೆ.
ಇಂಗು(Asafetida)
ಇದು ಬುಧದ ಮಸಾಲೆ. ಇದು ಗುರುಗ್ರಹಕ್ಕೂ ಸಂಬಂಧಿಸಿದೆ. ಇದು ಪಿತ್ತರಸ ಮತ್ತು ಗೌಟ್ ಅನ್ನು ನಿಯಂತ್ರಿಸುತ್ತದೆ. ನಿಮ್ಮ ಮಧ್ಯಾಹ್ನದ ಊಟದಲ್ಲಿ ನೀವು ಇಂಗನ್ನು ಬಳಸಬೇಕು. ನಿಮ್ಮ ಹೊಟ್ಟೆ ಆರೋಗ್ಯಕರವಾಗುತ್ತದೆ ಮತ್ತು ಕೋಪ ಕಡಿಮೆಯಾಗುತ್ತದೆ.
Mythology: ಅಗಸ್ತ್ಯರ ಮೇಲೆ ಮುನಿದು ನದಿಯಾಗಿ ಭೋರ್ಗರೆದ ಕಾವೇರಿ!
ಜೀರಿಗೆ ಮತ್ತು ದಾಲ್ಚಿನ್ನಿ(Jeera and Dalchini)
ಈ ಎರಡೂ ಮಸಾಲೆಗಳು ಬುಧದೊಂದಿಗೆ ಸಂಬಂಧಿಸಿವೆ. ರಾಹುವಿನ ಸ್ವಲ್ಪ ಭಾಗವೂ ಇದೆ. ಎರಡೂ ಬಾಯಿ ಮತ್ತು ಪಿತ್ತರಸ ಸಮಸ್ಯೆಯನ್ನು ನಿವಾರಿಸುತ್ತದೆ. ನೀವು ಊಟದಲ್ಲಿ ಜೀರಿಗೆ ಮತ್ತು ರಾತ್ರಿಯ ಊಟದಲ್ಲಿ ದಾಲ್ಚಿನ್ನಿ ಬಳಸಬೇಕು. ಶನಿವಾರದಂದು ಜೀರಿಗೆಯನ್ನು ದಾನ ಮಾಡುವುದರಿಂದ ರಾಹು-ಕೇತುಗಳ ಪ್ರಭಾವ ಕಡಿಮೆಯಾಗುತ್ತದೆ. ನೀವು ಏರಿಳಿತಗಳಿಂದಲೂ ಮುಕ್ತರಾಗುವಿರಿ.
ಅರಿಶಿನ(Turmeric)
ಇದು ಬಹಳ ಅದ್ಭುತವಾದ ಮಸಾಲೆಯಾಗಿದೆ. ಇದು ಗುರುಗ್ರಹದೊಂದಿಗೆ ನೇರವಾಗಿ ಸಂಬಂಧಿಸಿದೆ. ಈ ಗ್ರಹವು ವಿಷ್ಣು ಮತ್ತು ಲಕ್ಷ್ಮಿಗೆ ಸಂಬಂಧಿಸಿದೆ. ವಿಷವನ್ನು ತಡೆಯುವ ಶಕ್ತಿ ಅರಿಶಿನಕ್ಕಿದೆ. ನಿಮ್ಮ ಆಹಾರದಲ್ಲಿ ಅರಿಶಿನವನ್ನು ಬಳಸುವುದರಿಂದ ನಿಮ್ಮ ಆರೋಗ್ಯವು ಸುಧಾರಿಸುತ್ತದೆ. ಇದು ಹಣ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಅರಿಶಿನ ಹಚ್ಚಿ ಸ್ನಾನ ಮಾಡಿದರೆ ದೃಷ್ಟಿ ದೋಷದಿಂದ ಮುಕ್ತಿ ಪಡೆಯಬಹುದು. ನಿಮಗೆ ಚರ್ಮದ ಸಮಸ್ಯೆ ಇರುವುದಿಲ್ಲ. ಇದು ವೈವಾಹಿಕ ಜೀವನದಲ್ಲಿನ ಘರ್ಷಣೆಗಳನ್ನೂ ಕಡಿಮೆ ಮಾಡುತ್ತದೆ. ಜ್ಯೋತಿಷ್ಯದಲ್ಲಿ, ಒಣ ಅರಿಶಿನವನ್ನು ಬಳಸಲಾಗುತ್ತದೆ. ಗುರುಗ್ರಹವು ತೊಂದರೆ ಉಂಟುಮಾಡಿದರೆ, ನೀವು ಗುರುವಾರ ಅರಿಶಿನವನ್ನು ದಾನ ಮಾಡಬಹುದು.
ಕೆಂಪು ಮೆಣಸು(Red Pepper)
ಇದು ಸೂರ್ಯ ಮತ್ತು ಮಂಗಳ ಗ್ರಹಗಳೊಂದಿಗೆ ಸಂಬಂಧಿಸಿದೆ. ಇದು ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ. ನೀವು ಅದನ್ನು ಸಮತೋಲನದಲ್ಲಿ ಬಳಸಿದರೆ ನಿಮ್ಮ ನಾಲಿಗೆ ಮತ್ತು ಲಾಲಾರಸದ ಸಮಸ್ಯೆಯನ್ನು ಗುಣಪಡಿಸಬಹುದು. ಇದು ಅಪಘಾತವನ್ನು ತಪ್ಪಿಸುತ್ತದೆ ಮತ್ತು ಖ್ಯಾತಿಯನ್ನು ಹೆಚ್ಚಿಸುತ್ತದೆ. ನೀವು ಸೂರ್ಯನಿಗೆ ಕೆಂಪು ಮೆಣಸಿನ ಕಾಯಿಯ ಮಿಶ್ರಣವನ್ನು ನೀರಿನಲ್ಲಿ ಅರ್ಪಿಸಿದರೆ, ಋಣಭಾರದಿಂದ ಮುಕ್ತರಾಗುತ್ತೀರಿ.
Gemology: ಮಾಣಿಕ್ಯ ಧಾರಣೆ ಈ ರಾಶಿಯವರ ಭವಿಷ್ಯ ಬೆಳಗುವುದು!
ದಾಲ್ಚೀನಿ ಎಲೆ(Bay Leaf)
ಇದು ಶನಿ ಮತ್ತು ಬುಧದೊಂದಿಗೆ ಸಂಬಂಧಿಸಿದೆ. ಇದು ಶಕ್ತಿಯನ್ನು ಸೃಷ್ಟಿಸುತ್ತದೆ. ರಾತ್ರಿಯಲ್ಲಿ ಇದನ್ನು ಬಳಸಿದರೆ ತುಂಬಾ ಪ್ರಯೋಜನಕಾರಿ. ಇದನ್ನು ಧೂಪದ್ರವ್ಯವಾಗಿ ಬಳಸುವುದರಿಂದ ವಾತಾವರಣವು ಸ್ವಚ್ಛವಾಗುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.