ಹೊಸ ವರ್ಷ ಯುಗಾದಿ ಬಂದಿದೆ/ ಈ ವರ್ಷದ ರಾಶಿ ಫಲ ಹೇಗಿದೆ? ಖ್ಯಾತ ಜ್ಯೋತಿಷಿ ದೈವಜ್ಞ ಡಾ. ಹರೀಶ್ ಕಾಶ್ಯಪ ವಿವರ ನೀಡಿದ್ದಾರೆ/ ಯಾರಿಗೆ ಈ ಸಾರಿ ದೊಡ್ಡ ಅಭಿವೃದ್ಧಿ
ಬೆಂಗಳೂರು(ಏ. 11) ಖ್ಯಾತ ಜ್ಯೋತಿಷಿ ದೈವಜ್ಞ ಡಾ. ಹರೀಶ್ ಕಾಶ್ಯಪ ಈ ಬಾರಿಯ ಯುಗಾದಿ ಫಲಾಫಲವನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಪ್ಲವನಾಮ ಸಂವತ್ಸರ ಯುಗಾದಿ ಚಾಂದ್ರಮಾನೇನ ವರ್ಷ ಫಲಸೂಚಿಗಳು ಏನಿವೆ? ಯಾವ ರಾಶೀಯವರಿಗೆ ಲಾಭ..ಯಾರಿಗೆ ಸಂಕಟ ಎದುರಾಗಲಿದೆ? ಇಲ್ಲಿದೆ ಪೂರ್ಣ ವಿವರ
ಪ್ಲವನಾಮ ಸಂವತ್ಸರ ಯುಗಾದಿ ಚಾಂದ್ರಮಾನೇನ ವರ್ಷ ಫಲಸೂಚಿಗಳು .
13-04-2021 ಪ್ರಾತಃ ಉದಯ ಲಗ್ನಾ ಮೇಷ -– ಅಶ್ವಿನೀ ಚಂದ್ರ ಸೂರ್ಯ ಭಗವಾನ ಉಚ್ಚ ಆರೋಹಗತಿ –- ಚಂದ್ರ ಶುಕ್ರ ಯೋಗ . ಕುಜವಾರ -– ವರ್ಷಾಧಿಪ ರಾಜ , ಸೇನಾಧಿಪ , ಅರ್ಘಾಧಿಪ ಮತ್ತು ಮೇಘಾಧಿಪ ಕುಜನೇ ಆಗಿಹನು. ಇದು ಬುಧ - ಶನಿಗಳು ರಾಜ ಕುಜನಿಗೆ ಸ್ವಭಾವ ಶತ್ರುಗಳಾಗಿ ಮಂತ್ರಿಗಳಾಗಿರುವ ವರ್ಷ. ಗುರು ನೀಚ ತ್ಯಾಗ ( ಶುಭ ) ಕುಂಭಚಾರ -– 14-09 ರಿಂದ 20 -11 -2021ರ ವರೆಗೂ ವಕ್ರೀ ಮಕರ -–ನೀಚ ಚಾರಿ
20-06ರಿಂದ 18-10-2021ರವರೆಗೂ ಶನಿವಕ್ರೀಚಾರಿ ಸೂಪರ್ಮೂನ್ -– ಬೃಹತ್ ಚಂದ್ರ -– ಮಾರ್ಚ್ 28, ಏಪ್ರಿಲ್ 27 , ಮೇ 26, ಜೂನ್ 24 – ( 20 ಡಿಗ್ರಿಯಿಂದ 25 ಅಂಶ ಭೂಮಿಗೆ ಹತ್ತಿರ ) ( ಒಟ್ಟು ಐದು ಬಾರಿ )
ಗ್ರಹಣ : 26-05 ಚಂದ್ರ ಗ್ರಹಣ 10-06 ಸೂರ್ಯ ಗ್ರಹಣ , 19-11 ಚಂದ್ರ - 14 -12 ಸೂರ್ಯ ಗ್ರಹಣ ( ಭಾರತಕ್ಕೆ ಗೋಚರವಿಲ್ಲ) ಪ್ರಭಾವ ಉಂಟು !
ಸೂರ್ಯಾದಿ ನವಗ್ರಹರು ಭೂಮಿಗೆ ತರಲಿರುವ ಶುಭಾಶುಭ ಸರಕು ಇಂತಿರಲಾಗಿ –- ಇನ್ನು ಯುಗಾದಿ ಉದಯಾರೀತ್ಯಾ ಫಲಾಫಲಗಳ ಮುಖ್ಯಾಂಶಗಳು ಇಂತಿವೆ.
‘ಬಹುವೃಷ್ಟಿಭಿರಖಿಕಲಧರಾ ಪ್ಲವ ಸದೃಶಾ..’ ಎಂದೇ ಈ 35ನೇ ಸಂವತ್ಸರದ ಗುಣವೆಂದಿದ್ದಾರೆ ಜ್ಯೋತಿಷ್ಕಾರರು. ಮಹಾಮಳೆ, – ಅಗ್ನಿ, ಉತ್ಪಾತಗಳಿಂದ ಸಮುದ್ರಗಳು ಘಾಸಿಗೊಂಡು ಮೇಲೆದ್ದಾವು. ಇಡೀ ಭೂಮಿ ಒಂದು ಪುಟ್ಟ ದೋಣಿಯಂತೆ ಮಹಾಜಲದಲ್ಲಿ ತೇಲುತ್ತಾ ಇರುವಂತೆ ಭಾಸವಾಗುವುದು.
ಹೊಸ ವರ್ಷದಿಂದ ಯಾವ ಬದಲಾವಣೆ ಅಳವಡಿಸಿಕೊಳ್ಳಬೇಕು?
ಕುಜನ ರಾಜತ್ವ ಅಂದರೆ, ಕಾಠಿಣ್ಯದಿಂದ ಹರಡುತ್ತದೆ. ರಾಜರಿಗೆ ವಿಶೇಷವಾಗಿ ಖಡಕ್ ತನದ ಹೆಜ್ಜೆ.. ತಮ್ಮದೇ ನಡೆಯುವಂತೆ ರಾಜದಂಡವ ತಿರುವುತ್ತಾರೆ. ಪ್ರಜೆಗಳಿಗೂ ಅದೇ ಭಾವ ಬಂದು – ಜನಾಮೇಷ, ರಾಜಕೀಯ ತಿಕ್ಕಾಟ , ಭಯೋತ್ಪಾದಕರ ಹಾವಳಿ, ಮರಣಗಳು , ಕ್ರೂರವಾಗಿ ದಂಡಿಸುವ ದೃಶ್ಯಗಳು , ಮಹಾಸ್ತ್ರಗಳ ಪ್ರಯೋಗಗಳು , ತೈಲ ನಿಕ್ಷೇಪಗಳಿಗೆ ಬೆಂಕಿ, ಯಂತ್ರವಾಹನಗಳ ಘರ್ಷಣೆ ಇತ್ಯಾದಿ ಏರ್ಪಟ್ಟು ಅಕ್ಷರಶಃ ಮನುಷ್ಯ ಜಗ ರಣರಂಗವಾಗುತ್ತದೆ.
ಕುಜನ ರಾಹುಯುತಿ ಯುಗಾದಿಯಂದೇ ಪರಿಹಾರ ಆಗಿರುವುದೂ, ಗುರುದ್ರಷ್ಟ ( ದಶ – ನವಮ )ನಾಗಿರುವುದು ಸಮಾಧಾನಕರ.@
ಸ್ವಾಭಾವಿಕ ಶತ್ರುಗಳಾದ ಶನಿ -– ಬುಧರೇ ಮಂತ್ರಿಗಳಾಗಿರುವ ಕಾರಣ ಪರಸ್ಪರ ರಾಜದ್ರೋಹ, ತಿಕ್ಕಾಟ, ಸಂಪುಟ ಬದಲಾವಣೆ , ರಾಷ್ಟ್ರಪತಿ ಆಳ್ವಿಕೆ (ರಾಜ್ಯಗಳಲ್ಲಿ) ಹಿರಿಯ ನಾಯಕರ ಅವಸಾನ ( ದಕ್ಷಿಣ , ಪಶ್ಚಿಮ, ರಾಜ್ಯ- ದೇಶದ ) ಕೋಮುವಾದ ಉಲ್ಬಣ ಇತ್ಯಾದಿ ರಾಜಕೀಯ ವಿಪ್ಲವಕ್ಕೆ ಪ್ಲವ ಸಂವತ್ಸರ ತವಕಿಸುತ್ತಿದೆ.
ಶನಿ –- ಗುರುಗ್ರಹರ ವಕ್ರೀಚಾರದ ವರ್ಷ ಜೂನ್ನಿಂದ ಅಕ್ಟೋಬರ್ವರೆಗೂ ದೀರ್ಘವಾಗಿದೆ. ಅದೇ ಸಮಯದಲ್ಲಿ ಗುರು ಮಕರದಲ್ಲಿ ನೀಚತ್ವ ಹೊಂದಿ -– ನೀಚ ಭಂಗವೂ ಪಡೆಯುವ ಅಪರೂಪ ಗೋಚಾರವಾಗಿದೆ. ಇದರಿಂದ ತಂತ್ರಜ್ಞಾನ , ರಾಜಕೀಯ , ವಿದೇಶ ವ್ಯವಹಾರಗಳು , ಭೋದನೆ ಮತ್ತು ಧರ್ಮ ಕ್ಷೇತ್ರಗಳು ಪರಿಣಾಮ ಹೊಂದುತ್ತವೆ. ಅರ್ಧ ಅರ್ಥನಾಶವೂ, ಅರ್ಧ ಏಳಿಗೆಯ ಸಂಕ್ರಾಂತಿ ತರುವ ಗುರು -– ಶನಿಗಳ ವಕ್ರೀಕಾಲವಿದು. ವೃದ್ಧ ನಾಯಕರಿಗೂ -– ವಯೋ ಕಾಯಿಲೆಗಳ ದೋಷವೂ ಬಂದು ದುಃಖಪಡಬೇಕಾದೀತು
ಐದು ಬಾರಿ ಚಂದ್ರನು ಭೂಮಿಗೆ ಅತೀ ಹತ್ತಿರನಾಗಿ ಮಳೆಗಾಲ ಆರಂಭವಾಗುವ ವರ್ಷವಿದು. ಇದರಿಂದ ದಕ್ಷಿಣ ನೈರುತ್ಯ ಮಾರುತ –- ಪರ್ವತ –- ಸಮುದ್ರಗಳಿಗೆ ಉತ್ಪಾತ ಮಹಾಮಳೆಯಿಂದ ಅನೇಕ ಭೂಭಾಗಗಳು ಮುಳುಗಿ ತೇಲುವುದು. SUPER MOON.
ಗ್ರಹಣ - ಮಳೆಗಾಲದ ಆರಂಭದಲ್ಲಿ ಎರಡು ಗ್ರಹಣಗಳು ಕೇತುಗ್ರಸ್ತ ಚಂದ್ರಗ್ರಹಣ- ವೃಶ್ಚಿಕ ರಾಶಿ .… ರಾಹುಗ್ರಸ್ತ ಸೂರ್ಯ ಗ್ರಹಣ -ವೃಷಭರಾಶಿ ( ರವಿ -ಚಂದ್ರ - ಬುಧ - ರಾಹು )
ಬೃಹತ್ ಚಂದ್ರ- ಸೂಪರ್ ಮೂನ್ಗಳಿಗೂ - ಈ ಗ್ರಹಣಗಳಿಗೂ ನೇರ ಸಂಬಂಧವಿದೆ. ವರ್ಷ ಮಧ್ಯದಲ್ಲಿ ಇದೂ ಕೂಡಾ ಪ್ರಾಕೃತಿಕ ಜಲ ಕಂಟಕವೇ ಆಗಿದೆ.
ಚಾಂದ್ರ ಪ್ಲವ ಸಂವತ್ಸರ ಗ್ರಹಬಲಾದಿ :
ಪ್ರಾತಃ ಮೇಷ ಲಗ್ನ - ಚಂದ್ರ - ಶುಕ್ರಯುತಿ -ದಶಮ ಶಶಕ ಶನಿ ಯೋಗವೂ , ಏಕಾದಶದ ಗುರು , ಉಚ್ಚ ಆರೋಹಿ ರವಿಯ ಅತ್ಯುತ್ತಮ ಅಪರೂಪ ಶುಭಯೋಗದ ವರ್ಷವಿದೆ.
ಸ್ತ್ರೀಯರಿಗೆ ಅಧಿಕ ಶುಭ - ಪರಿಶ್ರಮ - ಏಳಿಗೆ- ಆತ್ಮ ವಿಶ್ವಾಸ -–ಅವಕಾಶ - ತಿಕ್ಕಾಟಗಳ ಮಿಶ್ರಫಲದ ವರ್ಷ.
ಮನರಂಜನೆ- ಸಿನಿಮಾ ಏಳಿಗೆ ಕಾಣುವುದು.
ಬೆಳೆ ಫಸಲು ರಸವತ್ತು ಪಡೆಯುವುದು.
ಹಿತ ಶತ್ರುಗಳ ಕಾಟ -ಪೀಡೆ , ಧರ್ಮ ಕಾರ್ಯ ಪ್ರಗತಿ .
ಭೂವ್ಯವಹಾರ ಮಧ್ಯಮ ಫಲ. ಆರ್ಥಿಕತೆ ಸುಧಾರಣೆ
ಆಯಾತ ನಿರ್ಯಾತ ಏರಿಕೆ -ಮನ್ನಣೆ . ಅಧಿಕಾರಿ , ರಾಜವರ್ಗದ ಬಲ ವರ್ಧನೆ , ಶನಿ-ಗುರುಗಳು ಬಲಿಷ್ಠರಿರುವುದರಿಂದ ಕುಜನು ಸ್ವಜನರ ರಕ್ಷಣೆಗಾಗಿ ಪರರ ಹಿಂಸೆ ಮಾಡುವನು. ಅಂದರೆ ಯುದ್ಧ ಸಮಾನ ಭೀತಿಗಳು.
ಜನರು ತಾವೇ ತಮ್ಮ ಹಿತವನ್ನು ಕಾಪಾಡಿಕೊಂಡು ಹೋಗತಕ್ಕದ್ದು. ಕೆಟ್ಟ ವರ್ತನೆ – ದುರುದ್ದೇಶಗಳಿಂದ ಜನರನ್ನು ರಾಹು ಪೀಡಿಸುವನು. ಕುಜನು ಉತ್ತರ ಕೊಡಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು.
ಶುಭವಾರ : ಗುರು- ಮಂಗಳ- ಸೋಮ
ಶುಭ ದಿಕ್ಕು : ಪೂರ್ವ- ಉತ್ತರ
ಶುಭವರ್ಣ : ಬಿಳಿ -ಕೆಂಪು -ಹಳದೀ ( ಹರಳು ಸಹ)
ಶುಭದೇವತೆ : ಶ್ರೀಗಣಪತಿ- ಸುಬ್ರಹ್ಮಣ್ಯ- ದುರ್ಗಾ -ನಾಗರು
ದ್ವಾದಶ ರಾಶಿಗಳ ಫಲಾಫಲ :
ಮೇಷ : ಏಕಾದಶ ಗುರು- ದಶಮ ಶನಿ. ಆರೋಗ್ಯ- ಹಣಕಾಸು, ಉದ್ಯೋಗ ಉತ್ತಮಗೊಳ್ಳುವುದು. ಸರ್ವತ್ರ ವಿಜಯ. ಧರ್ಮಕಾರ್ಯಾಸಕ್ತಿ . ವಿವಾಹಾದಿ ಮಂಗಲ ಕಾರ್ಯ ವೃದ್ಧಿ.
ವೃಷಭ : ದಶಮ ಗುರು. ದೈವ ಮನಸ್ಕ ಸ್ಥಿತಿ. ಗೊಂದಲವೇ ಹೆಚ್ಚಿನ ಮನೋಸ್ಥಿತಿ. ವಿಚಾರ ಮಾಡಿ ತಾಳ್ಮೆಯಿಂದ ಕೆಲಸ ಮಾಡಿ . ದೈವಾನುಕೂಲವಿದೆ. ಅಧಿಕಾರ, ಕೀರ್ತಿ ಲಾಭ.
ಮಿಥುನ : ನವಮ ಗುರು. ಸರ್ವಬಾಧೆಗಳು ಪರಿಹಾರವಾಗುವುದು. ಸರ್ವಪತನ ಭೀತಿ -ಜಾಗೃತೆ , ಮಧ್ಯಮ ಲಾಭ -ಸ್ತ್ರೀಯರಿಗೆ ದೋಷಕರ . ಗುರುಬಲವಿದೆ ಮುನ್ನಡೆಯಿರಿ.
ಕರ್ಕ : ಅಷ್ಠಮ ಗುರು. ಧರ್ಮಕಾರ್ಯಗಳಲ್ಲಿ ಸಂಚಾರ. ಮನೋಕ್ಲೇಷ- ಆಯಾಸದ ವರ್ಷ ಆರಂಭ. ಬಂಧು ಮಿತ್ರರ ಸಹಾಯ ದೊರೆವುದು. ಸಾಧಾರಣ ಫಲ. ಪಿತೃಕರ್ಮ ಶಾಂತಿಯಾದಿಗಳ ಅವಶ್ಯಕತೆಯಿದೆ.
ಸಿಂಹ : ಸಪ್ತಮ ಗುರು. ವಿವಾಹ ಯೋಗ, ದಾಂಪತ್ಯ ಅನುಕೂಲ, ಪುತ್ರ ಸಂತಾನ. ಬಿರುಸಿನ ವರ್ಷಾರಂಭ. ಅನಿರೀಕ್ಷಿತ ಪ್ರಯಾಣ- ಕೆಲಸ ಬದಲು- ಹೊಸ ಅವಕಾಶ .
ಕನ್ಯಾ : ಷಷ್ಠಗುರು, ಶ್ರಮ ಹೆಚ್ಚು, ಫಲ ಕಡಿಮೆ. ದಿಢೀರ್ ಉದ್ಯೋಗ ಬದಲಾವಣೆ. ನಿಮ್ಮ ಧೈರ್ಯ- ಹಿರಿಯರ ಆಶೀರ್ವಾದವೇ ನಿಮಗೆ ದಾರಿದೀಪ. ಚಿಂತೆ ಬಿಟ್ಟು , ಕೆಲಸ ಕಾರ್ಯಗಳಲ್ಲಿ ತೊಡಗಿರಿ.
ತುಲಾ : ಪಂಚಮ ಗುರು. ಆತ್ಮವಿಶ್ವಾಸ ಹೆಚ್ಚುವುದು. ಭಾವನಾತ್ಮಕ ವರ್ಷ. ನಿಂತ ಶುಭಕಾರ್ಯ ಚಾಲನೆ ಪಡೆವುದು . ಹಣ ಹೂಡಿಕೆ - ಹೊಸ ವ್ಯಾಪಾರದಲ್ಲಿ ಜಾಗೃತೆ ಬೇಕು.
ವೃಶ್ಚಿಕ : ಚತುರ್ಥ ಗುರು.ಅಭಿಯೋಗ, ರಾಜಯೋಗ ಫಲ. ವ್ಯವಹಾರಿಕವಾಗಿ ಉತ್ತಮ ವರ್ಷ . ಪಿತ್ತ - ಶೀತಗಳ ಉಪದ್ರವಾದೀತು , ಎಚ್ಚರ .
ಧನು : ತೃತೀಯ ಗುರು, ಜನ್ಮ ಶನಿ ಕೊನೆ - ಗುರು ಚಾರದ ವರ್ಷ, ಬಹಳ ನಿರೀಕ್ಷೆ ಈಡೇರದೇ ಬಂದದ್ದನ್ನು ಸ್ವೀಕೃತ ಮನದಿಂದ ಪಡೆಯಿರಿ. ಆಯಾಸ, ಪರ್ಯಟನೆ, ವ್ಯಾಪಾರ ನಿಂತ ನೀರು. ಅಧಿಕ ಶ್ರಮ.
ಮಕರ : ದ್ವಿತೀಯ ಗುರು. ಯಶ- ವಿಜಯ ಪ್ರಾಪ್ತಿ. ಹೊಸ ಹುರುಪು , ಧನಾದಾಯ ಆಶಾದಾಯಕ . ದೈವಾನುಕೂಲ ಇದೆ. ಒತ್ತಡ ಹೆಚ್ಚುವುದು. ಗಟ್ಟಿ ಮನಸ್ಸಿನಿಂದ ನಿಭಾಯಿಸಿ.
ಕುಂಭ : ಜನ್ಮಗುರು. ಮಾನಸಿಕ ಸ್ಥಿರತೆ. ಶನಿ-ಗುರುಗಳ ಅತಿಚಾರದಿಂದ ಆಂತರಿಕ ಶಕ್ತಿ ವರ್ಧನೆ. ಧನಾದಾಯ ಮಧ್ಯಮ . ಚಟುವಟಿಕೆಯ ಬಿರುಸು ವರ್ಷ.
ಮೀನ : ದ್ವಾದಶ ಗುರು. ಶುಭ ಚಿಂತನೆ ಬೆಳೆಯುವುದು. ವ್ಯವಹಾರಿಕ ಚೇತರಿಕೆ. ಸಂಬಂಧಗಳು ಸುಖ ತರುವುದು. ಅನೇಕ ಸಂಚಾರಯೋಗ, ಗುರುಪೀಠಗಳ ದರ್ಶನ. ಖರ್ಚು-ವೆಚ್ಚ ಹೆಚ್ಚುವುದು.