Astrology Tips : ಆರ್ಥಿಕ ಮುಗ್ಗಟ್ಟಿಗೆ ಗಣೇಶನಲ್ಲಿದೆ ಪರಿಹಾರ

Published : May 10, 2023, 06:27 PM IST
Astrology Tips : ಆರ್ಥಿಕ ಮುಗ್ಗಟ್ಟಿಗೆ ಗಣೇಶನಲ್ಲಿದೆ ಪರಿಹಾರ

ಸಾರಾಂಶ

ಶ್ರೀಮಂತಿಕೆ ಎಲ್ಲರಿಗೂ ಬೇಕು. ಮೂರು ಹೊತ್ತಿನ ಊಟ, ಬಟ್ಟೆಗೆ ಹಣವಿದ್ರೂ ಸಾಕು ಎನ್ನುವವರಿದ್ದಾರೆ. ಎಲ್ಲ ಸಮಸ್ಯೆಗೆ ಪರಿಹಾರ ಸಿಗ್ಬೇಕು, ಹಣದ ಮಳೆಯಾಗ್ಬೇಕು ಅಂದ್ರೆ ಗಣಪತಿಯನ್ನು ಹೀಗೆ ಆರಾಧಿಸಬೇಕು.   

ಹಿಂದೂ ಧರ್ಮದಲ್ಲಿ ವಿಘ್ನ ವಿನಾಶಕ ಗಣೇಶನಿಗೆ ಮೊದಲ ಪೂಜೆ ನಡೆಯುತ್ತದೆ. ಯಾವುದೇ ಶುಭ ಕಾರ್ಯವಿರಲಿ, ಮೊದಲು ಗಣೇಶನ ಪೂಜೆ ನಡೆಯುತ್ತದೆ. ಧರ್ಮಗ್ರಂಥಗಳಲ್ಲಿ ಗಣಪತಿಯನ್ನು ಬುದ್ಧಿವಂತಿಕೆ, ಜ್ಞಾನ, ಸಂಪತ್ತು ಮತ್ತು ಸಮೃದ್ಧಿಯ ದೇವರು ಎಂದು ಹೇಳಲಾಗುತ್ತದೆ.  ಸಂಕಷ್ಟ ನಿವಾರಕ ಗಣೇಶನ ಆರಾಧನೆಯನ್ನು ಮಾಡುವ ಭಕ್ತರಿಗೆ ಯಾವುದೇ ಸಮಸ್ಯೆ ಕಾಡುವುದಿಲ್ಲ. ಕಷ್ಟಗಳೆಲ್ಲ ಹೂವಿನಂತೆ ಹಗುರವಾಗುತ್ತವೆ. ಗಣಪತಿ ಆರಾಧನೆಗೆ ಸಂಕಷ್ಠಿ ಬಹಳ ವಿಶೇಷವಾದ ದಿನ. ನೀವು ಪ್ರತಿ ದಿನ ಗಣಪತಿಯನ್ನು ಪೂಜಿಸಬಹುದು. ಕೆಲ ಉಪಾಯಗಳನ್ನು ಮಾಡಿದ್ರೆ ತಕ್ಷಣ ಪ್ರಯೋಜನ ಸಿಗುತ್ತದೆ. ದುಃಖಗಳು ದೂರವಾಗುತ್ತವೆ. ಗಣಪತಿಯ ಈ ಉಪಾಯಗಳನ್ನು ಪಾಲಿಸಲು ನೀವು ಹಣವನ್ನು ಖರ್ಚು ಮಾಡ್ಬೇಕಾಗಿಲ್ಲ. ಯಾವುದೇ ಕಠಿಣ ಕೆಲಸಗಳನ್ನು ಕೂಡ ನೀವು ಮಾಡ್ಬೇಕಾಗಿಲ್ಲ. ನಿತ್ಯ ಸಣ್ಣಪುಟ್ಟ ಕೆಲಸವನ್ನು ಮಾಡುವ ಮೂಲಕ ನೀವು ಗಜಾನನ ಕೃಪೆಗೆ ಪಾತ್ರವಾಗಬಹುದು. ಆರ್ಥಿಕ ನಷ್ಟ, ವೃತ್ತಿಯಲ್ಲಿ ತೊಂದರೆ, ವ್ಯಾಪಾರದಲ್ಲಿ ಸಮಸ್ಯೆ, ಮನೆಯಲ್ಲಿ ಆರ್ಥಿಕ ಸಂಕಷ್ಟ ಎಲ್ಲದಕ್ಕೂ ಗಣೇಶನಲ್ಲಿ ಪರಿಹಾರವಿದೆ. 

ಪ್ರತಿ ದಿನ ಈ ಕೆಲಸ ಮಾಡಿದ್ರೆ ಸಿಗುತ್ತೆ ಗಣೇಶ (Ganesha) ನ ಆಶೀರ್ವಾದ :

ಪಂಚೋಪಚಾರ ಪೂಜೆ : ಪ್ರತಿದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಗಣೇಶನ ಪಂಚೋಪಚಾರ ಪೂಜೆಯನ್ನು ಮಾಡಬೇಕು. ಗಣೇಶನಿಗೆ ಗಂಧ ಹಚ್ಚಿ, ಹೂವನ್ನು ಅರ್ಪಿಸಿ, ಧೂಪವನ್ನು ಬೆಳಗಿ, ದೀಪವನ್ನು ಹಚ್ಚಿ, ನೈವೇದ್ಯ ಮಾಡುವುದಕ್ಕೆ ಪಂಚೋಪಚಾರ ಪೂಜೆ ಎನ್ನಲಾಗುತ್ತದೆ.  ಪಂಚೋಪಚಾರ ಪೂಜೆ ನಂತ್ರ ಪಾರ್ವತಿ (Parvati) ಮತ್ತು ಭಗವಂತ ಶಿವನನ್ನು ಆರಾಧಿಸಬೇಕು. ಇದರ ನಂತರ 21 ಬಾರಿ ಗಣೇಶ ಚಾಲೀಸವನ್ನು ಪಠಿಸಬೇಕು. ಹೀಗೆ 108 ದಿನಗಳ ಕಾಲ ನಿರಂತರವಾಗಿ ಮಾಡುವುದರಿಂದ ಬಡತನ ಶಾಶ್ವತವಾಗಿ ದೂರವಾಗುತ್ತದೆ. ಪ್ರತಿ ದಿನ ಇವೆಲ್ಲವನ್ನೂ ಮಾಡಲು ಸಮಯ ಸಾಕಾಗ್ತಿಲ್ಲ ಎನ್ನುವವರು ಬೆಳಿಗ್ಗೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಂಡ್ರೆ ಎಲ್ಲವೂ ಸಾಧ್ಯ.

VASTU TIPS : ಮನೆಯಲ್ಲಿ ಮನಃಶಾಂತಿ ಇಲ್ಲವೆಂದ್ರೆ ಹೀಗ್ ಮಾಡಿ

ಉಪವಾಸ (Fasting) ಮಾಡಿ : ಆರ್ಥಿಕ ಬಿಕ್ಕಟ್ಟು ದೂರವಾಗಬೇಕು ಎಂದಾದ್ರೆ ನೀವು ಗಣೇಶನ ಆರಾಧನೆ ಜೊತೆ ಜೊತೆ ಉಪವಾಸ ಮಾಡ್ಬೇಕು.  ನೀವು ಏಳು ಬುಧವಾರ ಉಪವಾಸ ಮಾಡಬೇಕಾಗುತ್ತದೆ. ಇದ್ರಿಂದ ಆರ್ಥಿಕ ಸಮಸ್ಯೆ ದೂರವಾಗುತ್ತದೆ.

ನಿತ್ಯ ಮಾಡಿ ಈ ಕೆಲಸ : ಗಣೇಶನನ್ನು ಪ್ರಾರ್ಥಿಸಲು ಯಾವುದೇ ದಿನ ಅಥವಾ ಸಮಯದ ಅಗತ್ಯವಿಲ್ಲ. ನೀವು ಯಾವುದೇ ಸಮಯದಲ್ಲಿ ಕೂಡ ಗಣೇಶನ ನಾಮವನ್ನು ಸ್ಮರಿಸಬಹುದು. ಪ್ರತಿ ದಿನ ಗಣಪತಿ ಅರ್ಥಶೀರ್ಷವನ್ನು ನೀವು ಪಠಿಸಬೇಕು. 108 ಬಾರಿ ನೀವು ಗಣಪತಿ ಅರ್ಥಶೀರ್ಷ ಪಠಿಸಬೇಕಾಗಿಲ್ಲ. ಕೇವಲ 7 ಬಾರಿ ಗಣಪತಿ ಅರ್ಥಶೀರ್ಷ ಪಠಿಸಿದರೆ ಸಾಕು. ನಿತ್ಯ ನೀವು ಈ ಕೆಲಸ ಮಾಡಿದ್ರೆ ಕೆಲವೇ ದಿನಗಳಲ್ಲಿ ನಿಮ್ಮೆಲ್ಲ ಸಮಸ್ಯೆ ದೂರವಾಗುತ್ತದೆ. ನೆಮ್ಮದಿ ಜೀವನ ನಿಮ್ಮದಾಗುತ್ತದೆ. 

Sindhi Wedding : ಸಿಂಧಿ ಮದುವೆಯಲ್ಲಿದೆ ವಿಚಿತ್ರ ಪದ್ಧತಿ

ಗಣಪತಿ ಆರಾಧನೆ ವೇಳೆ ಈ ತಪ್ಪು ಮಾಡ್ಬೇಡಿ : ದೇವರ ಪೂಜೆ ಮಾಡುವ ವೇಳೆ ಶುದ್ಧತೆಗೆ ಮಹತ್ವ ನೀಡಬೇಕಾಗುತ್ತದೆ. ಗಣೇಶನ ಪೂಜೆ ವೇಳೆಯೂ ನೀವು ಇದ್ರ ಬಗ್ಗೆ ಗಮನ ಹರಿಸಬೇಕು. ಮದ್ಯ, ಮಾಂಸವನ್ನು ತಿನ್ನಬಾರದು. ನೀವು ಮಾಡಿದ ಪೂಜೆಗೆ ಫಲ ಸಿಗಬೇಕು ಎಂದಾದ್ರೆ ನೀವು ಹಿರಿಯರನ್ನು ಗೌರವಿಸಬೇಕು. ಮಹಿಳೆಯರು, ವೃದ್ಧರು, ವಿಕಲಾಂಗರನ್ನು ಹೀಯಾಳಿಸಬಾರದು. ಅವರ ಕಷ್ಟಕ್ಕೆ ನೆರವಾಗಬೇಕು. ಅವರಿಗೆ ನಿಂಧಿಸುವ ಕೆಲಸವನ್ನು ಮಾಡಿದ್ರೆ ನೀವು ಎಷ್ಟೇ ಪೂಜೆ ಮಾಡಿದ್ರೂ ಅದ್ರ ಫಲಿತಾಂಶ ನಿಮಗೆ ಸಿಗುವುದಿಲ್ಲ. ಉಪವಾಸದ ದಿನಗಳಲ್ಲಿ ಹಾಗೂ ಪೂಜೆಯ ಸಮಯದಲ್ಲಿ ನೀವು ಬ್ರಹ್ಮಚರ್ಯವನ್ನು ಪಾಲಿಸಬೇಕು. ಹಾಗೆಯೇ ಹಸಿದು ಬಂದವರಿಗೆ ಆಹಾರವನ್ನು ನೀಡಲು ಮರೆಯಬಾರದು.
 

PREV
Read more Articles on
click me!

Recommended Stories

ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!