ಒಳ್ಳೆಯ ಕೆಲಸ ಯಾರಿಗೆ ಬೇಡ ಹೇಳಿ? ಅದರಲ್ಲೂ ಸರ್ಕಾರಿ ಕೆಲಸ ಎಂದರೆ ಎಲ್ಲರಿಗೂ ಕನಸೇ. ಸಿಗುವುದು ಮಾತ್ರ ಸುಲಭದ ವಿಷಯವಲ್ಲ. ಹೀಗೆ ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಹಾಕುತ್ತಿರುವವರು ನಿಮ್ಮ ಗ್ರಹಾನುಕೂಲ ಕೂಡಿ ಬರಲು ಏನ್ ಮಾಡ್ಬೋದು ಅಂತ ಇಲ್ನೋಡಿ.
ಓದು ಮುಗಿಯುತ್ತಿದ್ದಂತೆ ಒಳ್ಳೆ ಕೆಲಸ(good job) ಸಿಕ್ಕರೆ ಸಾಕಪ್ಪಾ ಎಂದು ಎದುರು ನೋಡುತ್ತಿರುತ್ತೇವೆ. ಒಳ್ಳೆ ಕೆಲಸ ಎಂಬುದರ ವ್ಯಾಖ್ಯಾನ ಒಬ್ಬೊಬ್ಬರಿಗೆ ಒಂದೊಂದಾಗಿರುತ್ತದೆ. ಕೆಲವರಿಗೆ ದೊಡ್ಡ ಕಾರ್ಪೋರೇಟ್ ಕಂಪನಿಗಳಲ್ಲಿ ಕುಳಿತು ವಾರಕ್ಕೆರಡು ರಜೆ ಪಡೆದು, ಕೈ ತುಂಬಾ ಸಂಬಳ ಎಣಿಸುವ ಕನಸು. ಮತ್ತೆ ಕೆಲವರಿಗೆ ಸರ್ಕಾರಿ(government) ಉದ್ಯೋಗವೇ ಬೇಕೆಂಬ ಹಂಬಲ. ಹೀಗೆ ಸರ್ಕಾರಿ ಉದ್ಯೋಗ ಪಡೆಯುವುದು ಈಗ ಸುಲಭದ ಮಾತಲ್ಲ. ಅದಕ್ಕಾಗಿ ತುಂಬಾ ಪರಿಶ್ರಮ(hard work), ಬದ್ಧತೆ, ಜೊತೆಗೆ ಅದೃಷ್ಟ ಕೂಡಾ ಕೈ ಹಿಡಿಯಬೇಕಾಗುತ್ತದೆ. ಮೊದಲಿನ ಎರಡೇನೋ ನಮ್ಮ ಕೈಲೇ ಇರುತ್ತದೆ. ಆದರೆ, ಅದೃಷ್ಟವನ್ನು ಒಲಿಸಿಕೊಳ್ಳುವುದು ಹೇಗೆ? ಗ್ರಹಗಳನ್ನು ಒಲಿಸಿಕೊಳ್ಳುವ ಬಗೆ ಹೇಗೆ? ಇದಕ್ಕೆ ಜ್ಯೋತಿಷ್ಯದ ಪರಿಹಾರ(astrological remedies)ಗಳೇನು?
ಶಿವನನ್ನು ಒಲಿಸಿಕೊಳ್ಳಿ
ಶಿವ(Lord Shiva)ನ ಒಲುಮೆ ಇದ್ದರೆ ಶನಿಯಂಥ ಗ್ರಹಗಳ ಆಟ ನಡೆಯದು. ಹೀಗಾಗಿ ಶಿವನ ಒಲುಮೆಗಾಗಿ ಪ್ರತಿ ಸೋಮವಾರ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ. ಹಾಲಿನ ಅಭಿಷೇಕವನ್ನೂ ಮಾಡಿ. ಭತ್ತ ಅರ್ಪಿಸಿ. ಶಿವ ನೋಡಲೆಷ್ಟೇ ಕಠಿಣನಾದರೂ ಬಹು ಬೇಗ ಭಕ್ತರ ಪ್ರೀತಿಗೆ ಸೋಲುತ್ತಾನೆ.
ಆಂಜನೇಯ ಸ್ಮರಣೆ
ಪ್ರತಿ ಮಂಗಳವಾರ ಆಂಜನೇಯನಿಗೆ ಗುಲಾಬಿ ಹೂಗಳು ಹಾಗೂ ಕುಂಕುಮ ಅರ್ಪಿಸಿ. ಆಕಾಶದಲ್ಲಿ ಹಾರುತ್ತಿರುವ ಹನುಮಾನ್(Lord Hanuman) ಚಿತ್ರವಿದ್ದರೆ ಅದರ ಎದುರು ನಿಂತು ಮನಃಪೂರ್ತಿಯಾಗಿ ಪ್ರಾರ್ಥಿಸಿಕೊಳ್ಳಿ. ಪ್ರತಿ ದಿನ ಹನುಮಾನ್ ಚಾಲೀಸ್ ಹೇಳಿಕೊಳ್ಳಿ. ಹನುಮಾನ್ ಯಂತ್ರ(Hanuman Yantra) ಕೂಡಾ ಪ್ರತಿಷ್ಠಾಪಿಸಿಕೊಳ್ಳಬಹುದು.
Vaastu for Couple Bedroom: ದಾಂಪತ್ಯ ಸುಖ ಸದಾ ಇರಬೇಕೆಂದ್ರೆ ನವವಿವಾಹಿತರ ಕೋಣೆ ಹೀಗಿರಲಿ
ಗಜಪತಿ
ಪ್ರತಿ ಚತುರ್ಥಿಯಂದು ಬಲಮುಖಿ ಗಣಪನಿಗೆ ಪೂಜೆ ಮಾಡಿ. ಪ್ರತಿ ದಿನ ಈ ಗಣಪನ ಎದುರು ನಿಂತು ಪ್ರಾರ್ಥಿಸಿ.
undefined
ಹಸುವಿಗೆ ಹಸಿವು ನೀಗಿ(Feed A Cow)
ಹಿಂದೂ ಧರ್ಮದಲ್ಲಿ ಹಸುವಿನ ಹಸಿವು ನೀಗಿಸುವ ಕೆಲಸ ಬಹಳ ಶ್ರೇಷ್ಠವಾದದ್ದೆನಿಸಿದೆ. ಮುಕ್ಕೋಟಿ ದೇವರನ್ನೂ ತನ್ನಲ್ಲಿ ಹೊಂದಿರುವ, ಕೇಳಿದ್ದೆಲ್ಲವನ್ನೂ ಕೊಡುವ ಕಾಮಧೇನು ಎನಿಸಿಕೊಂಡಿರುವ ಹಸುವಿಗೆ ಬೆಲ್ಲ, ಚಪಾತಿ ನೀಡಿ ಸಂದರ್ಶನದಲ್ಲಿ ಭಾಗವಹಿಸಿ. ಹಸುವಿಗೆ ಗೋಧಿ ಹಿಟ್ಟು(wheat flour) ನೀಡುವುದು ಲಾಭಕಾರಿ ಎನಿಸಿದೆ. ಇದರಿಂದ ನಿಮ್ಮ ಆಸೆ ಈಡೇರುವ ಸಂಭವಗಳು ಹೆಚ್ಚುತ್ತವೆ.
ಶನಿಯನ್ನು ಪೂಜಿಸಿ
ಪ್ರತಿ ಶನಿವಾರ ಶನಿ ದೇವರನ್ನು ಪೂಜಿಸುವುದನ್ನು ಮರೆಯಬೇಡಿ. ಶನಿ(Shani Dev)ಗೆ ಪ್ರಾರ್ಥಿಸುವ ಮುನ್ನ 'ಓಂ ಶಮ್ ಶನೀಶ್ಚರಾಯೇ ನಮಃ' ಎಂಬ ಮಂತ್ರವನ್ನು 108 ಬಾರಿ ಹೇಳಿಕೊಳ್ಳಿ. ಇದರಿಂದ ಜಾತಕದಲ್ಲಿ ಶನಿ ದೋಷವಿದ್ದರೆ ಪರಿಹಾರವಾಗುತ್ತದೆ.
Self care tips for 2022: ನಿಮ್ಮ ರಾಶಿಗೆ ಈ ಅಭ್ಯಾಸ ಒಳ್ಳೇದು..
ಸಿಹಿ ತಿನ್ನಿ
ಸಂದರ್ಶನಕ್ಕೆ ತೆರಳುವ ಮುನ್ನ ಸ್ವಲ್ಪ ಸಿಹಿ ತಿಂದು ಹೊರಡಬೇಕು. ಮೊಸರು ಹಾಗೂ ಸಕ್ಕರೆ ತಿಂದು ಸಂದರ್ಶನದಲ್ಲಿ ಭಾಗವಹಿಸಿ.
ಮಂತ್ರ
'ಓಂ ನಮೋ ಭಗವತಿ ಪದ್ಮಾವತಿ ರಿದ್ಧಿ ಸಿದ್ದಿ ದಾಯಿನಿ' ಎಂಬ ಮಂತ್ರವನ್ನು ಸಂದರ್ಶನಕ್ಕೆ ತೆರಳುವ ಮುನ್ನ 108 ಬಾರಿ ಹೇಳಿಕೊಳ್ಳಿ. ಇದೂ ಕೂಡಾ ಸರ್ಕಾರಿ ಉದ್ಯೋಗ ದೊರಕಿಸಿಕೊಡಲು ಸಹಾಯಕವಾಗಿದೆ.
ಅಶ್ವತ್ಥ ಮರ(Peepal Tree)
ಭಾನುವಾರ ಹೊರತುಪಡಿಸಿ ವಾರದ ಆರು ದಿನವೂ ಅಶ್ವತ್ಥ ಮರವನ್ನು ಪೂಜಿಸಿ. ದೇವರು ಹಾಗೂ ನಮ್ಮ ಪಿತೃಗಳು ಅಶ್ವತ್ಥ ಮರದಲ್ಲಿರುತ್ತಾರೆ ಎನ್ನಲಾಗುತ್ತದೆ. ಹಾಗಾಗಿ, ಅವರೆಲ್ಲರ ಆಶೀರ್ವಾದ ಬಲ ಪಡೆದುಕೊಳ್ಳುವುದು ಮುಖ್ಯ. ಪ್ರತಿ ಶನಿವಾರ ಅಶ್ವತ್ಥ ಕಟ್ಟೆಯ ಎದುರು ದೀಪ ಹಚ್ಚಿ.
ನೀಲಮಣಿ(blue sapphire gemstone)
ನಿಮ್ಮ ಬಲಗೈಯ ಮಧ್ಯದ ಬೆರಳಿಗೆ ನೀಲಮಣಿ ಧರಿಸುವುದರಿಂದ ಶನಿ ಗ್ರಹದ ಸಮಸ್ಯೆಗಳನ್ನು ಕಳೆದುಕೊಳ್ಳಬಹುದು.
ಸೂರ್ಯನ ಬಲ
ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿದ್ದು, ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಬಯಸುತ್ತಿರುವವರು ಕೆಂಪು ಮೆಣಸಿನಕಾಯಿಯ 21 ಬೀಜಗಳನ್ನು ನೀರಿಗೆ ಮಿಶ್ರಣ ಮಾಡಿ ಅದನ್ನು ಹುಟ್ಟುತ್ತಿರುವ ಸೂರ್ಯನಿಗೆ ನಿರಂತರ 43 ದಿನಗಳ ಕಾಲ ಅರ್ಪಿಸಬೇಕು. ಅದರೊಂದಿಗೆ 'ಅಭಿಮಂತ್ರಿತ್ ನರ್ಮದೇಶ್ವರ್ ಶಿವ ಲಿಂಗ' ತಂದು ನೀರಿನ ಅಭಿಷೇಕವನ್ನು ಪ್ರತಿ ದಿನ ಮಾಡಬೇಕು.