ರಿಪ್ಡ್ ಜೀನ್ಸ್ ಧರಿಸುವ ಯುವಕರೇ ಎಚ್ಚರ; ಹರಿದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?

By Sushma Hegde  |  First Published Aug 4, 2023, 5:01 PM IST

ಇತ್ತೀಚಿನ ದಿನಗಳಲ್ಲಿ ರಿಪ್ಡ್ ಜೀನ್ಸ್ ಧರಿಸುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಆದರೆ ನಿಮಗೆ ಗೊತ್ತಾ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹರಿದ ಅಥವಾ ಹಳೆಯ ಬಟ್ಟೆಗಳನ್ನು ಧರಿಸುವುದು ವ್ಯಕ್ತಿಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.


ಇಂದಿನ ಯುಗದಲ್ಲಿ ಜನರು ಹೊಸ ಫ್ಯಾಷನ್ ಅನ್ನು ಅನುಸರಿಸುತ್ತಾರೆ. ಮತ್ತು ಯಾವುದೇ ಫ್ಯಾಷನ್  (Fashion) ಪ್ರವೃತ್ತಿಯಲ್ಲಿದ್ದರೂ, ಹುಡುಗಿಯರು ಮತ್ತು ಹುಡುಗರು ಅದನ್ನು ಅನುಸರಿಸಲು ಪ್ರಾರಂಭಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರಿಪ್ಡ್ ಜೀನ್ಸ್  (Ripped jeans) ಧರಿಸುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಆದರೆ ನಿಮಗೆ ಗೊತ್ತಾ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹರಿದ ಅಥವಾ ಹಳೆಯ ಬಟ್ಟೆಗಳನ್ನು ಧರಿಸುವುದು ವ್ಯಕ್ತಿಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ಒಬ್ಬ ವ್ಯಕ್ತಿಯು ಹರಿದ ಜೀನ್ಸ್ ಅಥವಾ ಹಳೆಯ ಹರಿದ ಬಟ್ಟೆ (torn clothes) ಗಳನ್ನು ಧರಿಸುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರಿಂದ ಅನೇಕ ರೀತಿಯ ರೋಗಗಳು ಸಿಕ್ಕಿ ನಿಮ್ಮ ದೇಹ ದುರ್ಬಲವಾಗುತ್ತದೆ. ಇದರಿಂದ ಗ್ರಹಗತಿಗಳು ಕೂಡ ಕೆಟ್ಟ ಪರಿಣಾಮ ಬೀರುತ್ತವೆ. ನೀವೂ ಹರಿದ ಜೀನ್ಸ್ ಧರಿಸಿದರೆ ಅದಕ್ಕೆ ಸಂಬಂಧಿಸಿದ ಈ ವಿಷಯಗಳನ್ನು 
ಖಂಡಿತಾ ತಿಳಿದುಕೊಳ್ಳಿ.

Tap to resize

Latest Videos

undefined

ಶುಕ್ರ ದೇವನು ಕೋಪಗೊಳ್ಳುತ್ತಾನೆ 

ಶುಕ್ರನನ್ನು ಜೀವನದ ಗುಣಮಟ್ಟ ಮತ್ತು ಆನಂದದ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹರಿದ ಬಟ್ಟೆ ಧರಿಸಿದರೆ, ಶುಕ್ರ  (venus) ದೇವನು ಕೋಪಗೊಳ್ಳುತ್ತಾನೆ. ಹರಿದ ಬಟ್ಟೆಗಳನ್ನು ಧರಿಸುವುದು ನಿಮಗೆ ನಕಾರಾತ್ಮಕ (Negative)  ಪರಿಣಾಮಗಳನ್ನು ನೀಡುತ್ತದೆ. ಈ ಪರಿಣಾಮಗಳು ನಿಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತವೆ. ಇದಲ್ಲದೆ ಹಳೆಯ ಬಟ್ಟೆಗಳನ್ನು ಧರಿಸುವುದರಿಂದ, ವ್ಯಕ್ತಿಯು ಕ್ರಮೇಣ ಬಡವ (poor) ನಾಗುತ್ತಾನೆ ಮತ್ತು ಅವನ ಅದೃಷ್ಟದ ಬೀಗವು ಮುಚ್ಚಲು ಪ್ರಾರಂಭಿಸುತ್ತದೆ. 

ಈ ತಿಂಗಳು 3 ರಾಶಿಯವರಿಗೆ ಹಣದ ಹೊಳೆ; ಶುಕ್ರನ ಆಶೀರ್ವಾದದಿಂದ ಬಾಳೇ ಬಂಗಾರ..!

 

ಮನೆಯಲ್ಲಿ ಬಡವನ ಉಂಟಾಗುತ್ತದೆ 

ಶಾಸ್ತ್ರ (Shastra) ಗಳ ಪ್ರಕಾರ ಹರಿದ ಬಟ್ಟೆಗಳನ್ನು ಧರಿಸುವುದರಿಂದ, ಲಕ್ಷ್ಮಿ ದೇವಿಯು ಕೋಪಗೊಂಡು ಮನೆಯಿಂದ ಹೊರ ಹೋಗುತ್ತಾಳೆ ಮತ್ತು ಇದರಿಂದ ಮನೆಯಲ್ಲಿ ಬಡತನ ಬರಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಯಾವಾಗಲೂ ಹರಿದ ಅಥವಾ ಹಳೆಯ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಹರಿದ ಜೀನ್ಸ್ ಧರಿಸುವುದು ವ್ಯಕ್ತಿಯ ಮಾನಸಿಕ (mental) ವಾಗಿ ಮತ್ತು ದೈಹಿಕವಾಗಿ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೂ ಕೆಲವು ಸಂಬಂಧಗಳು ದೂರವಾಗಲು ಪ್ರಾರಂಭವಾಗುತ್ತದೆ.

ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ಇರಲಿ..!

ಜ್ಯೋತಿಷ್ಯ ಶಾಸ್ತ್ರ (Astrology) ದ ಪ್ರಕಾರ ರಾತ್ರಿಯಲ್ಲಿ ನಿಮ್ಮ ಬಟ್ಟೆಗಳನ್ನು ಹೊರಗೆ ಬಿಡಬೇಡಿ. ಏಕೆಂದರೆ ಹೀಗೆ ಮಾಡುವುದರಿಂದ ಬಟ್ಟೆಯೊಳಗೆ ನೆಗೆಟಿವ್ ಎನರ್ಜಿ  (Negative energy) ಸೇರುತ್ತದೆ ಮತ್ತು ಆ ಬಟ್ಟೆ ಧರಿಸಿದವರ ಮೇಲೂ ಪರಿಣಾಮ ಬೀರುತ್ತದೆ. 

ಶಾಸ್ತ್ರಗಳ ಪ್ರಕಾರ, ಹೊಸ ಬಟ್ಟೆಗಳನ್ನು ಯಾವಾಗಲೂ ಶುಕ್ರವಾರ, ಗುರುವಾರ  (Thursday) ಅಥವಾ ಬುಧವಾರದಂದು ಧರಿಸಬೇಕು.

ಯಾವುದೇ ಹೊಸ ಬಟ್ಟೆಗಳನ್ನು ಧರಿಸಲು ಶುಕ್ರವಾರವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗುತ್ತದೆ.

ಶನಿವಾರ (Saturday) ದಂದು ಹೊಸ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.

ಸಾವಿರ ವರ್ಷಗಳ ಬಳಿಕ ಖಗೋಳದಲ್ಲಿ ವಿಸ್ಮಯ; ಆಗಸ್ಟ್'ನಲ್ಲೇ ನಾಲ್ಕು ಕೌತುಕಗಳು..!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

 

click me!