ರಾಶಿಗೆ ಅನುಗುಣವಾಗಿ ಜನ ಸಂಬಂಧದಲ್ಲಿ ಎಂತಹ ತಪ್ಪು ಮಾಡ್ತಾರೆ ಗೊತ್ತಾ? ಅದನ್ನ ಸರಿಪಡಿಸ್ಕೊಳೋದು ಹೇಗೆ?

By Suvarna NewsFirst Published Aug 6, 2023, 5:57 PM IST
Highlights

ಪ್ರತಿಯೊಬ್ಬರೂ ಸಂಬಂಧದಲ್ಲಿ ಏನಾದರೊಂದು ತಪ್ಪು ಮಾಡುತ್ತಾರೆ. ಈ ತಪ್ಪುಗಳು ಅವರ ರಾಶಿಚಕ್ರಕ್ಕೆ ಅನುಗುಣವಾಗಿರುತ್ತವೆ. ಪದೇ ಪದೆ ನಿಮ್ಮಿಂದ ನಿಮ್ಮ ಸಂಗಾತಿಗೆ ಏನಾದರೂ ಸಮಸ್ಯೆಯಾಗುತ್ತಿದ್ದರೆ ಅದನ್ನು ಗಮನಿಸಿ. ಅವರ ಬಳಿ ಕೇಳಿ ನಿಮ್ಮ ತಪ್ಪುಗಳ ಬಗ್ಗೆ ತಿಳಿದುಕೊಳ್ಳಿ. ಅಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿದರೆ ಸಂಬಂಧ ಚೆನ್ನಾಗಿರುತ್ತದೆ.

ಸಂಬಂಧದಲ್ಲಿ ತಪ್ಪು ಮಾಡಿ ಪಶ್ಚಾತ್ತಾಪ ಪಡುವುದು ಮನುಷ್ಯನ ಸ್ವಭಾವ. ಆದರೆ, ಕೆಲವರು ಪದೇ ಪದೆ ನಿರ್ದಿಷ್ಟ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇದು ಅವರ ರಾಶಿಯ ಗುಣಕ್ಕೆ ಸಂಬಂಧಿಸಿದ್ದು ಎಂದರೆ ಅಚ್ಚರಿಯಾಗಬಹುದು. ಹಾಗೆ ವರ್ತಿಸುವುದು ಸರಿಯಲ್ಲ ಎಂದೂ ಅವರಿಗೆ ಅನಿಸುವುದಿಲ್ಲ. ಅವರಿಗೆ ಸಹಜವಾದದ್ದು ಮತ್ತೊಬ್ಬರಿಗೆ, ಮುಖ್ಯವಾಗಿ ಅವರ ಸಂಗಾತಿಗೆ ಹಿಂಸೆ ಎನಿಸಬಹುದು. ರಾಶಿಚಕ್ರಕ್ಕೆ ಅನುಗುಣವಾಗಿ ತಮ್ಮ ಸಂಬಂಧದಲ್ಲಿ ಜನರು ಮಾಡುವ ತಪ್ಪುಗಳನ್ನು ಅರಿತುಕೊಂಡು ಅವುಗಳ ಬಗ್ಗೆ ಎಚ್ಚರಿಕೆಯಿಂದ ವರ್ತಿಸುವುದು ಉತ್ತಮ.


•    ಮೇಷ (Aries)
ಅತ್ಯುತ್ಸಾಹದ ಮೇಷ ರಾಶಿಯ ಜನ ಯಾವುದಾದರೂ ಕೆಲಸವಾಗಬೇಕೆಂದು ಮನಸ್ಸಿಗೆ ಬಂದರೆ ಅದರ ಬಗ್ಗೆ ತಮ್ಮ ಸಂಗಾತಿಗೆ ಒತ್ತಡ (Stress) ಹಾಕುತ್ತಾರೆ. ಕೆಲಸವಾಗಬೇಕೆಂಬ ತುಡಿತದಿಂದ ತಮ್ಮ ಸಂಗಾತಿಯನ್ನು ಕಂಫರ್ಟ್‌ ವಲಯದಿಂದ ಆಚೆಗೆ ಬಂದು ವರ್ತಿಸುವಂತೆ ಮಾಡುತ್ತಾರೆ. ಪದೇ ಪದೆ ಹೀಗೆ ಮಾಡುತ್ತಿದ್ದರೆ ಸಂಬಂಧ (Relation) ಸೂಕ್ಷ್ಮವಾಗುತ್ತ ಸಾಗುತ್ತದೆ. ಹೀಗಾಗಿ, ತಾಳ್ಮೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

Latest Videos

ಜೀವನವೇ ಹಿಂಸೆ ಅನಿಸ್ತಿದೆಯಾ? ಚಿಂತಿಸಬೇಡಿ... ಆಗಸ್ಟ್ಈ ನಾಲ್ಕು ರಾಶಿಯವರಿಗೆ ಅದೃಷ್ಟ ತರಲಿದೆ..!

•    ವೃಷಭ (Taurus)
ದೃಢವಾದ ಸಂಕಲ್ಪ ಮತ್ತು ನಿರ್ಧಾರಗಳಂತೆ ವೃಷಭ ರಾಶಿಯ ಜನ ಹಠಮಾರಿತನಕ್ಕೂ (Stubbornness) ಹೆಸರಾಗಿರುತ್ತಾರೆ. ಸಂಬಂಧದಲ್ಲಿ ಬಿಗಿಯಾದ ಧೋರಣೆಯಿದ್ದಾಗ ಸಂಗಾತಿಗೆ (Partner) ಉಸಿರು ಕಟ್ಟುವಂತೆ ಆಗಬಹುದು. ತಮಗೆ ಪ್ರಾಮುಖ್ಯತೆ ಇಲ್ಲವೆನ್ನುವ ಭಾವನೆ (Feel) ಅವರಲ್ಲಿ ಮೂಡಬಹುದು. ಯಾವಾಗಲೂ ಎಲ್ಲವೂ ಸರಿಯಾಗಿರಬೇಕು ಎನ್ನುವುದನ್ನು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಒಳಿತು. 

•    ಮಿಥುನ (Gemini)
ಚುರುಕು (Wit) ಮತ್ತು ವಿನೋದ ಬುದ್ಧಿಯ ಮಿಥುನ ರಾಶಿಯ ಜನ ಸ್ನೇಹಿತರಿಗೆ ಅಚ್ಚುಮೆಚ್ಚು. ಆದರೆ, ಸಂಬಂಧದಲ್ಲಿ? ವಿಶ್ರಾಂತಿರಹಿತ ಜೀವನ ಹಾಗೂ ಬದಲಾವಣೆ (Chagne) ಬಯಸುವ ನಿಲುವಿನಿಂದಾಗಿ ಇವರು ಸಂಗಾತಿಯಲ್ಲಿ ಗೊಂದಲ ಮೂಡಿಸುತ್ತಾರೆ. ಇದರಿಂದ ಅವರಲ್ಲಿ ಫ್ರಸ್ಟ್ರೇಷನ್‌ (Frustration) ಉಂಟಾಗಬಹುದು. ಹೀಗಾಗಿ, ಇವರು ಮನದಲ್ಲಿರುವುದನ್ನು ಸ್ಪಷ್ಟವಾಗಿ ಹೇಳುವುದು ಅಗತ್ಯ. ಬದಲಾವಣೆಯ ಅಗತ್ಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿದರೆ ಬಾಂಧವ್ಯ ಚೆನ್ನಾಗಿರುತ್ತದೆ.  

•    ಕರ್ಕಾಟಕ (Cancer)
ಪ್ರೀತಿ (Love) ಮತ್ತು ಆರೈಕೆಯ ಕರ್ಕಾಟಕ ರಾಶಿಯ ಜನ ಭಾವನಾತ್ಮಕ (Emotional) ಸಿಕ್ಕುಗಳಲ್ಲಿ ಸಿಲುಕುತ್ತಾರೆ. ಪ್ರೀತಿಪಾತ್ರರಿಂದ ನೋವಿಗೆ ಒಳಗಾದರೆ ಸುಲಭದಲ್ಲಿ ಮರೆಯುವುದಿಲ್ಲ. ದೀರ್ಘಕಾಲ ಅದರ ಬಗ್ಗೆ ಕೊರಗುತ್ತಾರೆ. ಈ ಗುಣದಿಂದ ಇವರ ಸಂಗಾತಿಗೂ ಸಮಸ್ಯೆ ಆಗಬಹುದು. ಹಳೆಯ ನೋವುಗಳನ್ನು ಮರೆಯುವುದು, ಕ್ಷಮಿಸಿ ಮುಂದೆ ಸಾಗುವುದು ಅಗತ್ಯ. ಇದರಿಂದ ಭಾವನಾತ್ಮಕ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು.

•    ಸಿಂಹ (Leo)
ಎಲ್ಲರ ಗಮನ ತಮ್ಮತ್ತ ಇರಬೇಕೆಂದು ಬಯಸುವ ಸಿಂಹ ರಾಶಿಯ ಜನ ಸಂಬಂಧದಲ್ಲೂ ಆಗಾಗ ಹೊಗಳಿಕೆ (Admiration) ಬಯಸುತ್ತಾರೆ. ಸಂಗಾತಿ ತಮ್ಮನ್ನು ಗುರುತಿಸಬೇಕು, ಕೇಳಿಸಿಕೊಳ್ಳಬೇಕು ಎನ್ನುವುದು ಇವರ ಆಸೆ. ಇಲ್ಲವಾದಲ್ಲಿ ಬೇರೊಂದು ಕಡೆ ಕೇಂದ್ರಬಿಂದುವಾಗಲು ಹೊರಡುತ್ತಾರೆ. ಸಂಗಾತಿಯ ಮನಸ್ಸನ್ನೂ ಅರಿತುಕೊಳ್ಳಲು ಯತ್ನಿಸುವುದು, ಅವರ ಮಾತುಗಳನ್ನೂ ಆಲಿಸುವುದು ಮುಖ್ಯ. 

ಜೀವ ಬಿಡ್ತೀನಿ ಆದ್ರೆ ಸೆಕ್ಸ್ ಬಿಡಲ್ಲ ಅಂತಾರೆ; ಕಾಮವೇ ಇವರಿಗೆ ಪ್ರಾಣ..!

•    ಕನ್ಯಾ (Virgo)
ಕ್ರಿಯಾಶೀಲ ಮತ್ತು ಕರುಣಾಭರಿತ ಕನ್ಯಾ ರಾಶಿಯ ಜನರ ನಿರೀಕ್ಷೆ ಭಾರೀ ಅಧಿಕವಾಗಿರುತ್ತದೆ. ಸಿಕ್ಕಾಪಟ್ಟೆ ಮೇಲ್ಮಟ್ಟದಲ್ಲಿ ನಿರೀಕ್ಷೆ ಮಾಡುವ ಗುಣದಿಂದ ಟೀಕೆ ಮಾಡುವುದೂ ಹೆಚ್ಚುತ್ತದೆ. ಸಂಗಾತಿಗೆ ಇದರಿಂದ ಹಿಂಸೆಯಾಗಬಹುದು. ದೌರ್ಬಲ್ಯ, ಸಾಮರ್ಥ್ಯಗಳನ್ನು ಒಪ್ಪಿಕೊಳ್ಳುವುದು ಅಗತ್ಯ.

•    ತುಲಾ (Libra)
ಸಂಬಂಧದಲ್ಲಿ ಸಾಮರಸ್ಯ ಬಯಸುವ ತುಲಾ ರಾಶಿಯ ಜನ ಸಂಘರ್ಷದಿಂದ ದೂರವಿರಲು ಬಯಸುತ್ತಾರೆ. ಸಂಘರ್ಷ ಒಳ್ಳೆಯದಲ್ಲ ಎನ್ನುವುದು ನಿಜ. ಆದರೆ, ಕೆಲವೊಮ್ಮೆ ಸಂಘರ್ಷ ಅಗತ್ಯವಾಗಿರುತ್ತದೆ. ಆಗಲೂ ನೀವು ಸುಮ್ಮನಿದ್ದರೆ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ. ನಿಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸುವುದು ಉತ್ತಮ ಮಾರ್ಗ.

•    ವೃಶ್ಚಿಕ (Scorpio)
ಯಾವುದನ್ನೂ ಸುಲಭವಾಗಿ ಮರೆಯದ (Forget) ಹಾಗೂ ಕ್ಷಮಿಸದ (Forgive) ಗುಣ ಇವರದ್ದು. ಈ ಗುಣವೇ ಸಂಬಂಧದಲ್ಲಿ ಒತ್ತಡ ಹೆಚ್ಚಿಸುತ್ತದೆ. “ಹೋಗಲಿ ಬಿಡುʼ ಎನ್ನುವ ಧೋರಣೆ ಬೆಳೆಸಿಕೊಳ್ಳುವುದು ಉತ್ತಮ. 

•    ಧನು (Sagittarius)
ಸ್ವಾತಂತ್ರ್ಯ ಬಯಸುವ ಗುಣದಿಂದಾಗಿ ಸಂಬಂಧಕ್ಕೆ ಬದ್ಧವಾಗಿರಲು ಸಮಸ್ಯೆಯಾಗಬಹುದು. ಸಂಬಂಧ ಎಂದರೆ ಬಂಧನವಲ್ಲ. ಮುಕ್ತವಾಗಿ ನಿಮ್ಮ ಭಾವನೆಗಳನ್ನು ಸಂಗಾತಿಯಲ್ಲಿ ಹೇಳಿಕೊಳ್ಳುವ ಮೂಲಕ ಆರೋಗ್ಯಕರ ಮಿತಿ ಇಟ್ಟುಕೊಂಡು ಸಾಗುವುದು ಉತ್ತಮ.

•    ಮಕರ (Capricorn)
ಅಚಲವಾಗಿ, ಅಲ್ಲಾಡದ ಗುರಿಯೆಡೆಗಿನ ಆದ್ಯತೆ ಮೆಚ್ಚಬೇಕಾದದ್ದೇ. ಆದರೆ, ಇದೇ ನಿಮ್ಮ ಸಂಬಂಧಕ್ಕೆ ಮುಳ್ಳಾಗಬಾರದು. ಈ ಗುಣ ನಿಮ್ಮ ಸಂಗಾತಿಗೆ ತಮ್ಮನ್ನು ಕಡೆಗಣಿಸುವಂತೆ ಭಾಸವಾಗಬಹುದು. ಖಾಸಗಿ ಜೀವನ ಮತ್ತು ವೃತ್ತಿಪರ ಮಹತ್ವಾಕಾಂಕ್ಷೆಯನ್ನು ಸಮತೋಲನದಿಂದ ಇಟ್ಟುಕೊಳ್ಳುವುದು ಮುಖ್ಯ.

•    ಕುಂಭ (Aquarius)
ಸ್ವತಂತ್ರ್ಯ ಚೈತನ್ಯದ ಕುಂಭ ರಾಶಿಯ ಜನ ಈ ಗುಣದಿಂದಾಗಿಯೇ ಭಾವನಾತ್ಮಕವಾಗಿ ದೂರವಿರುವಂತೆ ಭಾಸವಾಗುತ್ತಾರೆ. ಸಂಬಂಧದಲ್ಲಿ ಅಂತರ (Distance) ಉಂಟಾಗಬಹುದು. ಇವರು ತಮ್ಮ ಸಂಬಂಧದಲ್ಲಿ ಆತ್ಮೀಯತೆ ತೋರುವುದು ಅಗತ್ಯ.

•    ಮೀನ (Pisces)
ಸಹಾನುಭೂತಿಯುಳ್ಳ ಮೀನ ರಾಶಿಯ ಜನರಿಗೆ ಈ ಗುಣವೇ ಕೆಲವೊಮ್ಮೆ ಸಮಸ್ಯೆ ಸೃಷ್ಟಿಸಬಲ್ಲದು. ಸಂಗಾತಿಯ ಬೇಕುಬೇಡಗಳಿಗೆ ಆದ್ಯತೆ ನಿಮ್ಮ ಬಗ್ಗೆ ಚೂರೂ ಗಮನ ನೀಡದೇ ಇರಬಹುದು. ಇದರಿಂದ ಕ್ರಮೇಣ ಅಸಮಾಧಾನ ಉಂಟಾಗಬಹುದು. ಈ ಗುಣಕ್ಕೆ ಮಿತಿ ಹೇರಿಕೊಳ್ಳುವುದು ಉತ್ತಮ. ಸಂಗಾತಿಯತ್ತ ಗಮನಹರಿಸಿ, ಆದರೆ ನಿಮ್ಮ ಅಗತ್ಯಗಳನ್ನು ಕಡೆಗಣಿಸಬೇಡಿ. 
 

click me!