ಆಗಸ್ಟ್‌ನಲ್ಲಿ 4 ಗ್ರಹಗಳ ರಾಶಿ ಬದಲಾವಣೆ; ದೋಷದಿಂದ ಪಾರಾಗಲು ಹನುಮಾನ್ ಮೊರೆ ಹೋಗಿ..!

By Sushma Hegde  |  First Published Aug 6, 2023, 1:39 PM IST

ಜ್ಯೋತಿಷ್ಯದಲ್ಲಿ ಗ್ರಹಗಳ ರಾಶಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಗ್ರಹಗಳ ರಾಶಿಚಕ್ರದ ಚಿಹ್ನೆಗಳಲ್ಲಿನ ಬದಲಾವಣೆಗಳು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಕೆಲವು ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತವೆ. ಈ ಕುರಿತು ಇಲ್ಲಿದೆ ಮಾಹಿತಿ.


ಜ್ಯೋತಿಷ್ಯದಲ್ಲಿ ಗ್ರಹಗಳ ರಾಶಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಗ್ರಹಗಳ ರಾಶಿಚಕ್ರದ ಚಿಹ್ನೆಗಳಲ್ಲಿನ ಬದಲಾವಣೆಗಳು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಕೆಲವು ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತವೆ. ಈ ಕುರಿತು ಇಲ್ಲಿದೆ ಮಾಹಿತಿ.

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಪ್ರತಿ ಗ್ರಹಕ್ಕೂ ಕೂಡ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ಗ್ರಹವೂ ಸಹ ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ. ಗ್ರಹಗಳು ರಾಶಿಚಕ್ರದ ಬದಲಾವಣೆಯಲ್ಲದೆ, ಕಾಲಕಾಲಕ್ಕೆ ತಮ್ಮ ಚಲನೆಯನ್ನು ಸಹ ಬದಲಾಯಿಸುತ್ತವೆ. ಆಗಸ್ಟ್‌ ತಿಂಗಳಿನಲ್ಲಿಯೂ ಅನೇಕ ಗ್ರಹಗಳು ತಮ್ಮ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಹಾಗೆಯೇ ಕೆಲವು ಗ್ರಹಗಳ ಚಲನೆಯಲ್ಲೂ ಬದಲಾವಣೆಗಲು ಕಂಡು ಬರುತ್ತವೆ. ಈ ಪರಿಸ್ಥಿಯಲ್ಲಿ ಕೆಲವು ಕ್ರಮಗಳ ಬಗ್ಗೆ ತಿಳಿದರೆ, ಕೆಲವು ದುಷ್ಪರಿಣಾಮಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.

Tap to resize

Latest Videos

undefined

ನಾಲ್ಕು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ 

ಆಗಸ್ಟ್‌ನಲ್ಲಿ ನಾಲ್ಕು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ. ಮೊದಲನೆಯದಾಗಿ ಶುಕ್ರಗ್ರಹವು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತದೆ.
ಸದ್ಯ ಹಿಮ್ಮುಖ ಚಲನೆಯಲ್ಲಿ ಸಾಗುತ್ತಿರುವ ಶುಕ್ರ, ಆಗಸ್ಟ್‌ 7ರಂದು ಸಿಂಹ ರಾಶಿಯಿಂದ ಹೊರಬಂದು ಕರ್ಕಾಟಕ ರಾಶಿಗೆ ಪ್ರವೇಶಿಸಲಿದೆ. ಇದರ ನಂತರ ಆಗಸ್ಟ್‌ 17ರಂದು ಸೂರ್ಯನು ಸಿಂಹರಾಶಿಗೆ ಪ್ರವೇಶಿಸುತ್ತಾನೆ. ಈ ದಿನ ಶುಕ್ರನು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಕೊನೆಯದಾಗಿ, ಆಗಸ್ಟ್‌ 24ರಂದು , ಬುಧವು ಸಿಂಹ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸುತ್ತದೆ.

ಶುಕ್ರನಿಂದ ಗಜಲಕ್ಷ್ಮಿ ರಾಜಯೋಗ; ಈ 3 ರಾಶಿಯವರು ಇನ್ಮುಂದೆ ಕುಬೇರರು

 

ರಾಶಿಚಕ್ರ ಬದಲಾವಣೆಯ ಪರಿಣಾಮಗಳು 

ಈ ರಾಶಿಚಕ್ರ ಚಿಹ್ನೆಗಳ ಬದಲಾವಣೆಯಿಂದಾಗಿ ಅನೇಕ ನೈಸರ್ಗಿಕ ಘಟನೆಗಳು ಸಂಭವಿಸುತ್ತದೆ. ಅನೇಕ ದೊಡ್ಡ ಅಪಘಾತಗಳು ಸಂಭವಿಸಬಹುದು. ಇದಲ್ಲದೇ ರಾಜಕೀಯದಲ್ಲೂ ದೊಡ್ಡ ಮಟ್ಟದ ಬದಲಾವಣೆ ಕಾಣಲಿದೆ. ಅಂತಹ ಪರಿಸ್ಥತಿಯಲ್ಲಿ  ಗ್ರಹಗಳ ರಾಶಿ ಬದಲಾವಣೆಯ ನಂತರ ಅದರ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಈ ಕ್ರಮಗಳನ್ನು ತಿಳಿಯೋಣ

ದುಷ್ಪರಿಣಾಮಗಳನ್ನು ತಪ್ಪಿಸಲು ಕ್ರಮಗಳು

ರಾಶಿ ಬದಲಾವಣೆಯ ಸಮಯದಲ್ಲಿ ಗ್ರಹಗಳ ದುಷ್ಪರಿಣಾಮಗಳನ್ನು ತಪ್ಪಿಸಲು, ನೀವು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಹನುಮಂತನ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಇದಲ್ಲದೆ ಸಂಜೆ 7 ಗಂಟೆಯ ನಂತರ ಹನುಮಾನ್‌ ದೇವಸ್ಥಾನದಲ್ಲಿ ಕೆಂಪು ಉದ್ದಿನ ಬೆಳೆಯನ್ನು ಅರ್ಪಿಸಿದ ನಂತರ, ಹನುಮಂತನಿಗೆ ವೀಳ್ಯದೆಲೆ ಮತ್ತು ಬೋಂದಿ ಲಡ್ಡುಗಳನ್ನು ನೈವೇದ್ಯ ಮಾಡಬಹುದು. ಈ ಸಮಯದಲ್ಲಿ  ನೀವು ಮಹಾಮೃತ್ಯಂಜಯ ಮಂತ್ರ ಮತ್ತು ದುರ್ಗಾ ಸಪ್ತಶತಿಯನ್ನು ಸಹ ಪಠಿಸಬೇಕು.

ಗುರು ಸ್ಥಾನ ಬದಲಾವಣೆ; ಈ ರಾಶಿಗಳಿಗೆ ಸಂಪತ್ತು, ವರ್ಷಪೂರ್ತಿ ಅದೃಷ್ಟ..!

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!