ಚಾಣಕ್ಯ ನೀತಿ ಪ್ರಕಾರ ಜೀವನದಲ್ಲಿ ಪರಮ ಸುಖ ಸಿಗೋದು ಯಾವಾಗ?

By Mahmad Rafik  |  First Published Jul 2, 2024, 11:08 AM IST

ಯಾವುದೇ ಸಮಸ್ಯೆಗೂ ಚಾಣಕ್ಯ ನೀತಿಯಲ್ಲಿ ಪರಿಹಾರ ಸಿಗುತ್ತೆ ಎಂಬುವುದು ಬಲ್ಲವರ ನಂಬಿಕೆಯಾಗಿದೆ. ಚಾಣಕ್ಯ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ನೆಮ್ಮದಿಯಾಗಿರುತ್ತದೆ.


ಆರ್ಥಿಕ ತಜ್ಞರಾಗಿರುವ ಆಚಾರ್ಯ ಚಾಣಕ್ಯರು ಜೀವನದ ಕುರಿತು ಹಲವು ವಿಚಾರಗಳನ್ನು ಹೇಳಿದ್ದಾರೆ. ಕೆಲಸ, ಸಮಾಜ, ಬದುಕಿನ ಪ್ರತಿಯೊಂದು ಹಂತಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಚಾಣಕ್ಯರು ಹೇಳಿದ ಸರಳ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಇಂದಿನ ರಾಜಕೀಯ ನಾಯಕರಿಗೆ ಚಾಣಕ್ಯ ನೀತಿಗಳು ಆದರ್ಶವಾಗಿವೆ. ಚಾಣಕ್ಯ ನೀತಿಗಳನ್ನು ಕಾರ್ಯರೂಪಕ್ಕೆ ಬಂದ್ರೆ ದೇಶ ರಾಮರಾಜ್ಯ ಆಗುತ್ತೆ ಎಂದು ವಿಶ್ಲೇಷಕರು ಹೇಳುತ್ತಾರೆ. ಯಾವುದೇ ಸಮಸ್ಯೆಗೂ ಚಾಣಕ್ಯ ನೀತಿಯಲ್ಲಿ ಪರಿಹಾರ ಸಿಗುತ್ತೆ ಎಂಬುವುದು ಬಲ್ಲವರ ನಂಬಿಕೆಯಾಗಿದೆ. ಚಾಣಕ್ಯ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ನೆಮ್ಮದಿಯಾಗಿರುತ್ತದೆ.

ರಾಜಕೀಯ, ಹಣಕಾಸು, ಶಿಕ್ಷಣ, ಸಮಾಜದ ಹೊರತಾಗಿಯೂ ಆದ್ಯತ್ಮದ ಬಗ್ಗೆಯೂ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಜೀವನದಲ್ಲಿ ಪರಮ ಸುಖ ಯಾವಾಗ ಸಿಗುತ್ತೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.  ಯಾವುದರ ಹಿಂದೆ ಹೋದರೆ ಸುಖ ನಿಮ್ಮದಾಗುತ್ತೆ ಎಂಬುದರ ಮಾಹಿತಿಯನ್ನು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. 

Tap to resize

Latest Videos

ಚಾಣಕ್ಯ ಶ್ಲೋಕ
ನಾಸ್ತಿ ಕಾಮಸಮೋ ವ್ಯಾಧಿರ್ನಾಸ್ತಿ ಮೋಹಸಮೋ ರಿಪುಃ| 
ನಾಸ್ತಿ ಕೋಪಸಮೋ ವಹ್ನಿರ್ನಾಸ್ತಿ ಜ್ಞಾನಾತ್ ಪರಂ ಸುಖಂ||

ಶ್ಲೋಕದ ಅರ್ಥ
ಕಾಮಕ್ಕೆ ಸಮಾನವಾದ ರೋಗ ಮತ್ತೊಂದಿಲ್ಲ, ಮೋಹಕ್ಕೆ ಸಮನಾದ ಬೇರೆ ಯಾವ ಶತ್ರುವಿಲ್ಲ. ಕೋಪಕ್ಕೆ ಸಮಾನವಾದ ಅಗ್ನಿ ಇಲ್ಲ. ಜ್ಞಾನದಿಂದಲೇ ಪರಮ ಸುಖ ಲಭಿಸುತ್ತದೆ. 

ಶ್ಲೋಕದ ವಿವರಣೆ 
ಅರಿಷಡ್ವರ್ಗಗಳನ್ನು ತ್ಯಜಿಸಿದವನನ್ನು ಸನ್ಯಾಸಿ ಎಂದು ಕರೆಯಲಾಗುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯವನ್ನು ತೊರೆದಾಗ ಮಾತ್ರ ಮನುಷ್ಯ ಜೀವಕ್ಕೆ ಶಾಂತಿ ಸಿಗುತ್ತದೆ. ಅದೇ ರೀತಿ ಕಾಮತುರಾಣಾಂ ನ ಭಯಂ ನ ಲಜ್ಜಾಂ ಎಂದ ಗಾದೆಯೂ ನಮ್ಮಲ್ಲಿದೆ. ಹಾಗಾಗಿ ಹೆಣ್ಣಿನ ಮೋಹ ಮೇಲಿನ ಹಲವು ಯುದ್ಧಗಳಿಗೆ ಕಾರಣವಾಗಿದೆ. ಕಾಮದ ಹಿಂದೆ ಬಿದ್ದವನು ಎಲ್ಲವನ್ನು ಕಳೆದುಕೊಂಡು ರಸ್ತೆಗೆ ಬಿದ್ದಿರುವ ಉದಾಹರಣೆಗಳು ಸಹ ಇವ. ಅದೇ ರೀತಿ ಕೋಪದಲ್ಲಿದ್ದಾಗ ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಕೋಪವು ಬೆಂಕಿ ಇದ್ದಂತೆ, ಅದು ನಮ್ಮನ್ನೇ ಸುಡುತ್ತದೆ. ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮನ್ನೇ ಸುಡುತ್ತವೆ. ಆದ್ದರಿಂದ ಕೋಪವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. 

ವೇಶ್ಯೆಯರು ಇವರನ್ನು ಶತ್ರುಗಳಂತೆ ಕಾಣ್ತಾರೆ; ಯಾಕೆ ಗೊತ್ತಾ? ಚಾಣಕ್ಯ ನೀತಿಯಲ್ಲಿದೆ ವಿವರ

ಇನ್ನು ಅರ್ಧ ಜ್ಞಾನ ಹೊಂದಿರುವ ವ್ಯಕ್ತಿಯಲ್ಲಿ ಗರ್ವ ಬಂದಿರುತ್ತದೆ. ಖಾಲಿ ಡಬ್ಬ ಹೆಚ್ಚು ಸದ್ದು ಮಾಡುತ್ತೆ, ಅರ್ಧ ಸುಟ್ಟ ಮಡಿಕೆ ಹೆಚ್ಚು ದಿನ ಬಾಳಿಕೆ ಬರಲ್ಲ. ಆದ್ದರಿಂದ ಸಂಪೂರ್ಣ ಜ್ಞಾನ ಪಡೆದಾಗ ಮಾತ್ರ ಪರಮ ಸುಖ ಸಿಗುತ್ತದೆ. ಮುಕ್ತಿ ಹೊಂದುವುದೇ ಮನುಷ್ಯ ಜನ್ಮದ ಪರಮ ಗುರಿ. ಆಗಾಧ ಜ್ಞಾನದಿಂದ ಮನುಷ್ಯ ನಿರ್ಮಲವಾಗುತ್ತದೆ. ಅಂತಹವರನ್ನು ಜ್ಞಾನಿಗಳು ಎಂದು ಕರೆಯಲಾಗುತ್ತದೆ.

ಇಂದಿನ ರಾಜಕೀಯದಲ್ಲಿಯೂ ಚಾಣಕ್ಯ ಎಂಬ ಪದ ಚಾಲ್ತಿಯಲ್ಲಿದೆ. ಚಾಣಕ್ಯರನ್ನು ಆರ್ಥಿಕ ತಜ್ಞ ಎಂದು ಕರೆಯಲಾಗುತ್ತದೆ. ಚಾಣಕ್ಯ ಹೇಳಿದ ಸಂದೇಶ, ಸಲಹೆ, ಸೂತ್ರಗಳನ್ನು ನೀತಿ (Chanakya Niti) ಎಂದು ವಿವರಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ಶ್ಲೋಕಗಳ (Chanakya Shlokas) ಮೂಲಕ ಜನತೆಗೆ ಹೇಳಿದ್ದಾರೆ. ರಾಜಕೀಯದ ಜೊತೆ ಜೊತೆಯಲ್ಲಿ ಸಾಮಾಜಿಕ, ಸಂಬಂಧ, ವ್ಯಾಪಾರ, ಆರೋಗ್ಯದ ಕುರಿತು ಚಾಣಕ್ಯ ನೀತಿಯಲ್ಲಿದೆ.

ಚಾಣಕ್ಯ ನೀತಿ: ಮನೆ ಯಜಮಾನ ಹೀಗಿದ್ರೆ ಆ ಮನೆ ಉದ್ಧಾರವಾಗುವುದೇ ಇಲ್ಲ ಬಿಡಿ!

click me!