ಈ ರಾಶಿಯವರು ಶುದ್ಧ ಪೋಲಿಗಳು, ಅನೈತಿಕ ಸಂಬಂಧಕ್ಕೂ ಹೇಸಲ್ಲ!

By Suvarna News  |  First Published Sep 3, 2022, 1:52 PM IST

ಜೀವನದಲ್ಲಿ ತುಸು ಪೋಲಿತನ ಇಲ್ಲದಿದ್ದರೆ ಲೈಫ್ ಮೋನೋಟನಸ್ ಅನಿಸುತ್ತೆ. ರೊಮ್ಯಾನ್ಸ್ ಜೊತೆಗೂಡಿದರೆ ದಾಂಪತ್ಯದ ಸುಖವೇ ಬದಲಾಗುತ್ತೆ. ಇಲ್ಲದಿದ್ದರೆ ಜೀವನ ಬೇಗ ಬೋರ್ ಅನಿಸುತ್ತೆ. ಅಷ್ಟಕ್ಕೂ ಯಾವ ರಾಶಿಯವರು ಹೆಚ್ಚು ಪೋಲಿಗಳು? ಇಲ್ಲಿದೆ ಡೀಟೈಲ್ಸ್.


ಹಾಲ್‌ನಲ್ಲಿ ಗೆಸ್ಟ್ ಕೂತಿದ್ದರೂ ಅಡುಗೆ ಮನೆಗೆ ಹೋಗಿ ಹೆಂಡತಿ ಕಿವಿಯಲ್ಲಿ ಏನೋ ಪೋಲಿ ಜೋಕ್ ಹೇಳುವ ಗಂಡಂದಿರು ಇರುತ್ತಾರೆ. ತುಸು ಕೀಟಲೆ ಮಾಡಿ ಬಂದಿರುತ್ತಾರೆ. ಈ ಪೋಲಿ ಬುದ್ಧಿಯಿಂದಲೇ ಜೀವನದಲ್ಲಿ ರೊಮ್ಯಾಂಟಿಕ್ ಆಗಿರುತ್ತಾರೆ. ಅದರಿಂದಾನೇ ಹೆಂಡತಿಯನ್ನು ಖುಷಿಯಾಗಿಡುವಲ್ಲಿಯೂ ಕೆಲವು ಪುರುಷರು ನಿಸ್ಸೀಮರಾಗಿರುತ್ತಾರೆ. ಅಷ್ಟಕ್ಕೂ ಅಂಥ ಪುರುಷರು ಸಾಮಾನ್ಯವಾಗಿ ಯಾವ ರಾಶಿಗೆ ಸೇರಿದವರಾಗಿರುತ್ತಾರೆ? 

ಮೇಷ (Aries)
ಈ ರಾಶಿಯ ಸಂಕೇತ ಟಗರು (Goat). ಇದರ ಶಕ್ತಿ ಯಾರಿಗೆ ಗೊತ್ತಿಲ್ಲ ಹೇಳಿ? ತನಗೆ ಸರಿ ಕಾಣಲಿಲ್ಲವೆಂದರೆ ಗುಮ್ಮಿ ಬಿಡುತ್ತದೆ. ಹೆಣ್ಣನ್ನೂ ಹಿಂದಿನಿಂದಲಾದರೂ ಒಮ್ಮೆ ಗುಮ್ಮಿಬಿಡೋಣ ಎಂದೇ ಭಾವಿಸುವ ರಾಶಿಯವರು ಇವರು. ಈ ರಾಶಿಯವರ ಹೆಣ್ಣು ಮಕ್ಕಳೂ ಅಂಥದ್ದೇ ಯೋಚನೆ ಹೊಂದಿರುತ್ತಾರೆ. ಗಂಡಿಗೆ ಸವ್ವಾಸೇರಾಗಿ ತಮ್ಮ ಪೋಲಿತನದ ಸಾಮರ್ಥ್ಯ ತೋರಿಸುತ್ತಾರೆ. ಇವರಿಗೆ ಪ್ರೀತಿ (Love) ಮತ್ತು ಫ್ಲರ್ಟಿಂಗ್‌ನ (Flirting) ವ್ಯತ್ಯಾಸ ಗೊತ್ತಿರುತ್ತೆ. ಎರಡನ್ನೂ ನಿಭಾಯಿಸುವುದಲ್ಲಿಯೂ ನಿಸ್ಸೀಮರು. 

Tap to resize

Latest Videos

ವೃಷಭ (Taurus)
ಹುಟ್ಟಿದಾಗಿನಿಂದಲೂ ಇವರದ್ದು ಒಂದು ಹೋರಿ ರೀತಿಯ ಸ್ವಭಾವವೇ. ಹಿಂದು ಮುಂದು ನೋಡೋಲ್ಲ. ಆನೆ ನಡೆದಿದ್ದೆ ಹಾದಿ ಎನ್ನುವಂತೆ ಬದುಕುತ್ತಾರೆ. ಮೇಲ್ನೋಟಕ್ಕೆ ಗಾಂಭೀರ್ಯತೆ ಪ್ರದರ್ಶಿಸುತ್ತಾರೆ. ಆದರೆ, ಸಂದರ್ಭಕ್ಕಾಗಿ ಹೊಂಚು ಹಾಕುವ ಸ್ವಭಾವ ಇವರದ್ದು. ಹಾಗಾಗಿ ಸೆಕ್ಸ್ (Sex) ವಿಷ್ಯದಲ್ಲಿ ಈ ರಾಶಿಯವರನ್ನು ನಂಬದಿದ್ದರೇ ಒಳಿತು. ಯಾವಾಗ, ಹೇಗೆ ತಮ್ಮ ಪೋಲಿತನದ ವಿರಾಟದರ್ಶನ ಮಾಡುತ್ತಾರೋ ಗೊತ್ತಾಗೋಲ್ಲ. ಮನಸ್ಸಿನಲ್ಲೊಂದು, ಮೇಲೋಂದು ತೋರುವ ಸ್ವಭಾವ ಇವರದ್ದು. 

ಈ ರೀತಿ ವೀಕೆಂಡ್ ಪ್ಲ್ಯಾನ್ ಮಾಡಿ, ದಾಂಪತ್ಯದ ರೊಮ್ಯಾನ್ಸ್ ಹೆಚ್ಚಿಸಿಕೊಳ್ಳಿ

ಮಿಥುನ (Gemini)
ರಾಶಿಯ ಹೆಸರಿಗೆ ತಕ್ಕಂತೆ ರೊಮ್ಯಾನ್ಸ್‌ಗೆ (Romance) ಹೇಳಿ ಮಾಡಿಸಿದ ರಾಶಿ ಇದು. ರೊಮ್ಯಾನ್ಸ್‌ಗೆ ಕಾಯುತ್ತಿರುತ್ತಾರೆ ಈ ರಾಶಿಯ ಜೀವಿಗಳು. ಸಮಯ ಸಿಗಲಿಲ್ಲವಾದರೂ ಸೃಷ್ಟಿಸಿಕೊಳ್ಳುವಲ್ಲಿ ನಿಸ್ಸೀಮರು. ಹಾಲ್‌ನಲ್ಲಿ ಅತಿಥಿಗಳಿದ್ದರೂ ಅಡುಗೆ ಮನೆಯಲ್ಲಿ ಸಂಗಾತಿಯನ್ನು ಪ್ರಣಯದಾಟಕ್ಕೆ ಎಳೆಯಬಲ್ಲರು. ಇಂಥ ರೋಮಾಂಚನ ಹಾಗೂ ರೊಮ್ಯಾಂಟಿಕ್ ಸಾಹಸ ಈ ರಾಶಿಯವರಿಗಿಷ್ಟ. ಹೊಸ ಹಾಗೂ ಅಪರಿಚಿತ ಜಾಗಗಳಲ್ಲಿ ರೊಮ್ಯಾಂಟಿಕ್ ಸಾಹಸಗಳನ್ನು ಮಾಡುವುದು ಎಂದರೆ ಇವರಿಗೆ ಎಲ್ಲಿಲ್ಲದ ಉತ್ಸಾಹ. ಸರಿಯಾದ ಬಾಳಸಂಗಾತಿ ಸಿಕ್ಕಿದರೆ ಓಕೆ, ಇಲ್ಲವಾದರೆ ಜೀವನದಲ್ಲಿ ಹಾದಿ ತಪ್ಪೋರು ಇವರು. 

ಕುಂಭ (Aquarius)
ಇವರೊಂಥರ ಬಿಂದಿಗೆ ರೀತಿಯೇ. ಒಳಗೆ ಏನಿದೆ, ಎಷ್ಟಿದೆ ಕ್ವಾಂಟಿಟಿ ಅಂತಾನೂ ಗೊತ್ತಾಗೋಲ್ಲ. ಒಮ್ಮೆ ಅತ್ಯಂತ ಪರಿಚಿತರಾಗುವವರೆಗೂ ಈ ರಾಶಿಯವರು ಸಂಭಾವಿತರೇ. ಒಮ್ಮೆ ಅವರ ಆಪ್ತಲೋಕಕ್ಕೆ ಪ್ರವೇಶ ಪಡೆದವರ ಕಥೆ ಮುಗಿಯಿತು. ಪೋಲಿ ಜೋಕುಗಳ ಹೊಳೆಯಲ್ಲಿ ಕೊಚ್ಚಿ ಹೋಗುವಂತೆ ಬೇಕಾದರೂ ಮಾಡಿ ಬಿಡುತ್ತಾರೆ. ತಮಗಿಂತ ವಯಸ್ಸಿನವರಾದರೂ, ಕಡಿಮೆ ವಯಸ್ಸಿನವರಾದರೂ ಸರಿ, ಫ್ಲರ್ಟ್ ಮಾಡಬೇಕೆಂದೆನಿಸಿದರೆ ಇವರು ಮತ್ತೆ ಬಿಡುವವರೇ ಅಲ್ಲ. ಇವರಿದ್ದಲ್ಲ ರೊಮ್ಯಾನ್ಸ್‌ಗೆ ಕೊರತೆಯೇ ಇರೋಲ್ಲ. ಸದಾ ಡಬ್ಬಲ್ ಮೀನಿಂಗ್ (Double Meaning) ಮಾತನಾಡುವವರಲ್ಲಿ ನಿಸ್ಸೀಮರು ಇವರು!

ಪುರುಷರಿಗೆ ಯಂಗ್ ಹುಡುಗೀಯರೇ ಇಷ್ಟ ಆಗೋದು ಯಾಕೆ?

ಧನು (Sagittarius)
ದಾಂಪತ್ಯದ ರೊಮ್ಯಾನ್ಸ್ (Married Life Romance), ಸಾಂಗತ್ಯ (Companionship) ಅಂದ್ರೆ ಇವರಿಗೆ ಅಚ್ಚುಮೆಚ್ಚು. ಅಕಸ್ಮಾತ್ ಸಿಗಲಿಲ್ಲವೋ, ಇನ್ನೊಬ್ಬರ ಮನೆ ಹೊಕ್ಕಲೂ ಹೇಸೋಲ್ಲ. ಅಲ್ಲಿ ತಮ್ಮ ಪೋಲಿ ಬುದ್ಧಿ ಪ್ರದರ್ಶಿಸಿ ಬಿಡುವ ರಾಶಿಯವರು ಇವರು. ಮಾತಿನಲ್ಲಿ ಮಾತ್ರವಲ್ಲ, ಕೃತ್ಯದಲ್ಲಿಯೂ ಮಹಾನ್ ಪೋಲಿಗಳು ಇವರು. ಸಿಕ್ಕಾಪಟ್ಟೆ ಕ್ರಿಯೇಟಿವ್ ಪೋಲಿಗಳೆಂದರೂ ತಪ್ಪಾಗೋಲ್ಲ. ಒಬ್ಬರು ಸಿಗಲಿಲ್ಲವೆಂದರೆ ಮತ್ತೊಬ್ಬರನ್ನು ಹುಡುಕಿಕೊಂಡು, ತಮಗೆ ಬೇಕಾದಲ್ಲಿ ಹೋಗುವಲ್ಲಿಯೂ ನಿಸ್ಸೀಮರು. ಸ್ವಲ್ಪ ಏಕಾಂತವಿದೆ ಎಂದರೂ ಪ್ರಣಯದಾಟ ಶುರು ಹಚ್ಚಿಕೊಳ್ಳುತ್ತಾರೆ.  

ಮೀನ (Pisces)
ಅಬ್ಬಾ, ಇವರ ಸಹವಾಸವೇ ಡೇಂಜರ್. ಇವರು ರಸಿಕತನದಿಂದ ತಮ್ಮ ಬಾಸ್‌ನನ್ನೇ ಬುಟ್ಟಿಗೆ ಹಾಕಿಕೊಳ್ಳಲೂ ಹಿಂದೇಟು ಹಾಕುವುದಿಲ್ಲ. ತಮ್ಮಿಷ್ಟ ಬಂದಂತೆ ಯಾರನ್ನು ಬೇಕಾದರೂ ಕುಣಿಸಬಲ್ಲರು. ಅದೇ ದಾರಿ ಹಿಡಿದು ತಮ್ಮ ಕೆಲಸವನ್ನು ಮಾಡಿ ಮುಗಿಸುತ್ತಾರೆ. ತಮ್ಮನ್ನೇ ಶ್ರೀಕೃಷ್ಣನಿಗೆ ಪರಮಾತ್ಮನಿಗೆ ಹೋಲಿಸಿಕೊಂಡು, ತಮ್ಮ ಪೋಲಿತನವನ್ನೂ ಸಮರ್ಥಿಸಿಕೊಳ್ಳುವಲ್ಲಿಯೂ ಈ ರಾಶಿಯವರದ್ದು ಎತ್ತಿದ ಕೈ. ಪೋಲಿತನದ ಸ್ಪರ್ಧೆಯಲ್ಲಿ ಈ ರಾಶಿಯವರನ್ನು ಗೆಲ್ಲಲೂ ಯಾರಿಗೂ ಸಾಧ್ಯವಿಲ್ಲವಿಲ್ಲ ಬಿಡಿ. 

 

 

click me!