ರಾಶಿ ಚಕ್ರಗಳಲ್ಲಿ ಅಡಗಿರೋ ರಹಸ್ಯ ಗೊತ್ತೇ..? ನಿಮ್ಮದ್ಯಾವ ರಾಶಿ?

By Suvarna News  |  First Published Oct 14, 2021, 10:59 AM IST

ಎಲ್ಲ ರಾಶಿಯ ವ್ಯಕ್ತಿಗಳು ಬೇರೆ ಬೇರೆ ಸ್ವಭಾವವನ್ನು ಹೊಂದಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಪ್ರತಿ ರಾಶಿಯ ವ್ಯಕ್ತಿಗಳು ಒಂದಲ್ಲ ಒಂದು ರಹಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಹಾಗಾದರೆ ಆ ರಹಸ್ಯಗಳ ಬಗ್ಗೆ ತಿಳಿಯೋಣ


ವಿಷಯಗಳನ್ನು ತಿಳಿಸದೆ ತಮ್ಮೊಳಗೆ ಕಾಪಿಟ್ಟುಕೊಳ್ಳುವ ವ್ಯಕ್ತಿಗಳು ಅನೇಕರಿರುತ್ತಾರೆ. ಹಲವಾರು ವಿಷಯಗಳನ್ನು ರಹಸ್ಯವಾಗಿ (Secret) ಇಟ್ಟುಕೊಳ್ಳುತ್ತಾರೆ. ಎಲ್ಲ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಅಂತಹದ್ದೊಂದು ರಹಸ್ಯವನ್ನು ಎಲ್ಲ ರಾಶಿಚಕ್ರದ (Zodiac sign) ವ್ಯಕ್ತಿಗಳು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ( Astrology) ಹೇಳುತ್ತದೆ. 

ಹೌದು. ಪ್ರತಿ ರಾಶಿಯ ವ್ಯಕ್ತಿಗಳ ಸ್ವಭಾವ ವ್ಯಕ್ತಿತ್ವ ವಿಶೇಷ ಮತ್ತು ವಿಭಿನ್ನವಾಗಿರುತ್ತವೆ. ಕೆಲವರು ಎಲ್ಲವನ್ನು ಹೇಳಿ ಕೊಳ್ಳುತ್ತಾರೆ ಎಂಬಂತೆ ತೋರಿಸಿಕೊಳ್ಳುತ್ತಾರೆ. ಆದರೆ ಹಲವು ವಿಚಾರಗಳನ್ನು ರಹಸ್ಯವಾಗಿಯೇ ಇಟ್ಟುಕೊಂಡಿರುತ್ತಾರೆ. ಹಾಗಾಗಿ ರಾಶಿಚಕ್ರದ ಅನುಸಾರ  ವ್ಯಕ್ತಿಗಳ ರಹಸ್ಯ ತಿಳಿಯೋಣ.

ಮೇಷ ರಾಶಿ (Aries)

ಈ ರಾಶಿಯ ವ್ಯಕ್ತಿಗಳ ಗೆಲ್ಲುವುದಕ್ಕಾಗಿ ಮೋಸ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ. ಈ ಬಗ್ಗೆ ಇವರ ಮನಸ್ಸು ಒಪ್ಪಿಕೊಳ್ಳದೇ ಇರಬಹುದು. ಆದರೆ, ಅಂತಹ ಸಂದರ್ಭದಲ್ಲಿ ಗೆಲ್ಲಲೇಬೇಕೆಂಬ ಹಟದಿಂದ ತಮ್ಮನ್ನು ನಿಯಂತ್ರಿಸಿಕೊಳ್ಳಲಾಗದೆ ಮೋಸ ಮಾಡಿಬಿಡುತ್ತಾರೆ. ಈ ಸ್ವಭಾವವನ್ನು ನಿಯಂತ್ರಿಸಿ ಕೊಂಡದ್ದೇ ಆದಲ್ಲಿ ಅದು ವಿಶೇಷವೆಂದೇ ಹೇಳಲಾಗುತ್ತದೆ. 

ವೃಷಭ ರಾಶಿ (Taurus)

Tap to resize

Latest Videos

undefined

ಈ ರಾಶಿಯವರು ತಾವು ಎಲ್ಲವಕ್ಕೂ ಹೆಮ್ಮೆಪಡುತ್ತೇವೆ ಮತ್ತು ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ ಎಂಬಂತೆ ತೋರಿಸಿಕೊಳ್ಳುತ್ತಾರೆ. ಆದರೆ ಆಂತರ್ಯದಲ್ಲಿ ಅಸುರಕ್ಷಿತ ಭಾವನೆ ಮತ್ತು ಅವಿಶ್ವಾಸವನ್ನು ಇಟ್ಟುಕೊಂಡಿರುತ್ತಾರೆ. ಈ ರಾಶಿಯ ವ್ಯಕ್ತಿಗಳ ಯಾರನ್ನಾದರು ತಮ್ಮವರು ಎಂದು ಅಂದುಕೊಂಡರೆ, ಆ ವ್ಯಕ್ತಿಗಳಿಗೆ ತೆರೆದ ಪುಸ್ತಕವಾಗುತ್ತಾರೆ.  

ಇದನ್ನು ಓದಿ: ನಿಮ್ಮ-ನಿಮ್ಮವರದು ಪೂರ್ವಭಾದ್ರ, ಉತ್ತರಭಾದ್ರ, ರೇವತಿ ನಕ್ಷತ್ರವಾದರೆ ಹೀಗಿರುತ್ತೆ ಸ್ವಭಾವ..!

ಮಿಥುನ ರಾಶಿ (Gemini)

ಈ ರಾಶಿಯವರು ಸಂಗಾತಿಯೊಂದಿಗೆ ಸಣ್ಣ ಸಣ್ಣ ವಿಷಯಗಳಿಗೆ ತಕರಾರು ಮಾಡಿಕೊಳ್ಳುವ ಸ್ವಭಾವದವರಾಗಿರುತ್ತಾರೆ. ಆದರೆ, ವಿಶಾಲ ಹೃದಯಿಗಳು ಎಂಬಂತೆ ತೋರಿಸಿಕೊಳ್ಳುತ್ತಾರೆ. ಸಂಗಾತಿಯಿಂದ ಪ್ರತ್ಯುತ್ತರ ಬರದಿದ್ದಲ್ಲಿ ಸಹ ಮುನಿಸಿಕೊಳ್ಳುವ ಸ್ವಭಾವ ಇವರದ್ದು ಆಗಿರುತ್ತದೆ. ಅಷ್ಟೇ ಅಲ್ಲದೆ ತಮ್ಮ ಬಗ್ಗೆ ಎಲ್ಲವೂ ತಿಳಿಯದಿರುವಂತೆ ಎಚ್ಚರಿಕೆ ವಹಿಸುತ್ತಾರೆ.

ಕರ್ಕಾಟಕ ರಾಶಿ (Cancer)

ಈ ರಾಶಿಯವರು ತಮ್ಮ ಎಲ್ಲ ಸ್ನೇಹಿತರನ್ನು ಇಷ್ಟಪಡುವುದಿಲ್ಲ. ಎಲ್ಲರಿಗಿಂತ ಮೇಲು ಎಂಬ ಭಾವನೆ ಇವರಲ್ಲಿರುತ್ತದೆ. ಈ ರಾಶಿಯವರು ತಮ್ಮನ್ನು ತಾವು ದುರ್ಬಲರೆಂದು ಅಂದುಕೊಂಡಿರುತ್ತಾರೆ. ತಮ್ಮ ಬಗ್ಗೆ ಇರುವ ಯಾವುದೇ ನಕಾರಾತ್ಮಕತೆಯನ್ನು ತೋರ್ಪಡಿಸಿಕೊಳ್ಳುವುದಿಲ್ಲ. 

ಸಿಂಹ ರಾಶಿ (Leo)

ಈ ರಾಶಿಯವರು ಎಲ್ಲರ ಬಗ್ಗೆ ಅಸೂಯೆಯ ಭಾವನೆಯನ್ನು ಹೊಂದಿರುತ್ತಾರೆ. ಎಲ್ಲದರಲ್ಲೂ ತಾವು ಪ್ರಶಂಸೆಗೆ ಒಳಗಾಗಬೇಕು ಎಂದು ಇಷ್ಟಪಡುತ್ತಾರೆ. ಎಲ್ಲ ಈ ಕ್ಷೇತ್ರಗಳಲ್ಲಿ ಕೇಂದ್ರಬಿಂದುವಾಗಿರಲು ಇಷ್ಟಪಡುತ್ತಾರೆ.  

ಕನ್ಯಾ ರಾಶಿ (Virgo)

ಈ ರಾಶಿಯ ವ್ಯಕ್ತಿಗಳು ಹೊಗಳುವುದು ಕೇವಲ ತೋರ್ಪಡಿಕೆಗೆ ಆಗಿರುತ್ತದೆ. ಹೃದಯದಿಂದ ಇಷ್ಟಪಡುವುದು ಹೊಗಳುವುದು ಇವರ ವ್ಯಕ್ತಿತ್ವಕ್ಕೆ ಆಗಿಬರುವುದಿಲ್ಲ. ಪ್ರಶಂಸಿಸಿದರೂ ಸಹ ಸೌಜನ್ಯಯುತವಾಗಿ ಹೊಗಳುವುದು ಇವರ ಸ್ವಭಾವವಲ್ಲ. ಹಾಗಾಗಿ ಮನಸ್ಸಿನಲ್ಲಿ ಇಟ್ಟುಕೊಂಡು, ಹೊರಜಗತ್ತಿಗೆ ಬೇರೆಯ ರೀತಿಯಲ್ಲಿ ತೋರಿಸಿಕೊಳ್ಳುತ್ತಾರೆ.

ಇದನ್ನು ಓದಿ: ಶ್ರವಣ, ಧನಿಷ್ಠಾ, ಶತಭಿಷಾ ನಕ್ಷತ್ರದವರ ವಿಶೇಷ ಗುಣ ಅರಿಯಿರಿ..!

ತುಲಾ ರಾಶಿ (Libra)

ಈ ರಾಶಿಯವರು ಸುಮ್ಮನಿದ್ದೇ ಎಲ್ಲವನ್ನೂ ಸಾಧಿಸುವವರು ಆಗಿರುತ್ತಾರೆ. ಕೌಶಲ್ಯವುಳ್ಳವರು ಮತ್ತು ಮಧುರವಾಗಿ ಮಾತನಾಡುವ ಮೂಲಕ ಕಾರ್ಯ ಸಾಧಿಸಿಕೊಳ್ಳುತ್ತಾರೆ. ಒಬ್ಬರೇ ಇರಲು ಹೆದರುವ ಇವರು ಅದನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ. 

ವೃಶ್ಚಿಕ ರಾಶಿ (Scorpio)

ಈ ರಾಶಿಯ ವ್ಯಕ್ತಿಗಳು ಸೇಡನ್ನು ತೀರಿಸಿಕೊಳ್ಳಲು ಯೋಚಿಸುತ್ತಿರುತ್ತಾರೆ. ಅಷ್ಟೇ ಅಲ್ಲದೆ ಹೆಚ್ಚು ರಹಸ್ಯಗಳನ್ನು ಇಟ್ಟುಕೊಂಡಿರುವ ವ್ಯಕ್ತಿಗಳು ಇವರಾಗಿರುತ್ತಾರೆ. ಇತರರ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳದ ಸ್ವಭಾವ ಇವರದಾಗಿರುತ್ತದೆ.

ಧನು ರಾಶಿ (Sagittarius)

ಈ ರಾಶಿಯ ವ್ಯಕ್ತಿಗಳು ಸಂಬಂಧಗಳ ಸಂಕೋಲೆಯಲ್ಲಿ ಇರಲು ಇಷ್ಟಪಡುವುದಿಲ್ಲ. ಹೆಚ್ಚು ಪ್ರೀತಿಸುವ ಇವರು ಜವಾಬ್ದಾರಿ ತೆಗೆದುಕೊಳ್ಳುವ ಸಮಯ ಬಂದರೆ ಓಡಿ ಹೋಗುವ ಸ್ವಭಾವ ಇವರದ್ದು. ಸಮಾಧಾನದಿಂದ  ಕಾದಿದ್ದರೆ ಇವರ ಸಮಯವನ್ನು ಪಡೆದುಕೊಳ್ಳಬಹುದು. 

ಮಕರ ರಾಶಿ (Capricorn)

ಈ ರಾಶಿಯ ವ್ಯಕ್ತಿಗಳು ಕ್ಷಮಿಸುವುದೆ ಬಹಳ ಕಷ್ಟ. ಆಗಿರುವ ನೋವನ್ನು ಮರೆಯುವುದೂ ಇಲ್ಲ. ಹಾಗಂತ ಜೀವನದಿಂದ ಆ ವ್ಯಕ್ತಿಗಳನ್ನು ದೂರವಿಡುವುದಿಲ್ಲ. ಈ ರಾಶಿಯ ವ್ಯಕ್ತಿಗಳು ತಮ್ಮ ಅಸಹಾಯಕತೆ ತಿಳಿಯುವ ಕಡೆ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಹೊರಗಿನಿಂದ ಹೆಚ್ಚು ಬಲಶಾಲಿಗಳಂತೆ ಕಾಣುವ ಇವರು ಮೃದು ಮನಸ್ಥಿತಿಯನ್ನು ಹೊಂದಿರುತ್ತಾರೆ. 

ಕುಂಭ ರಾಶಿ (Aquaris)

ಈ ರಾಶಿಯ ವ್ಯಕ್ತಿಗಳು ಇತರರಿಗೆ ಕೇಡು ಬಯಸುವುದಿಲ್ಲ. ಸ್ವಲ್ಪ ಫ್ಲರ್ಟ್ ಇವರಾಗಿರುತ್ತಾರೆ. ಆದರೆ, ಇದನ್ನು ಎಂದೂ ಒಪ್ಪಿಕೊಳ್ಳುವುದಿಲ್ಲ.  ಜನರೊಂದಿಗೆ ಬೆರೆಯುವಲ್ಲಿ ಇವರು ವಿಫಲರಾಗುತ್ತಾರೆ. ಅದು ಇವರಿಗೆ ನೆಮ್ಮದಿಯನ್ನು ಸಹ ನೀಡುವುದಿಲ್ಲ. ಈ ವ್ಯಕ್ತಿಗಳು ಹೆಚ್ಚಾಗಿ ಒಬ್ಬರೇ ಇರಲು ಇಷ್ಟಪಡುತ್ತಾರೆ.

ಇದನ್ನು ಓದಿ: ಜಾತಕದ ಈ ಸ್ಥಾನದಲ್ಲಿ ಶನಿ ಇದ್ದರೆ ಆಗುವ ಕೆಲಸವೂ ಆಗುವುದಿಲ್ಲ..!

ಮೀನ ರಾಶಿ (Pisces)

ಈ ರಾಶಿಯ ವ್ಯಕ್ತಿಗಳು ಹೇಳುವ ಕತೆಗೆ ಇನ್ನಷ್ಟು ಮಸಾಲೆ ಸೇರಿಸಿ ಹೇಳುವ ಸ್ವಭಾವವನ್ನು ಹೊಂದಿರುತ್ತಾರೆ. ಸಿಂಪತಿಯನ್ನು ಪಡೆಯಲು ಸಜ್ಜನರಂತೆ ಕಾಣಿಸಿಕೊಳ್ಳುತ್ತಾರೆ. ತುಂಬ ಮೃದು ಮನಸ್ಥಿತಿ ಹೊಂದಿರುವ ಈ ವ್ಯಕ್ತಿಗಳು,  ನೋವು ಆಗಬಾರದೆಂದು ಜಾಗರೂಕತೆಯಿಂದ ಇರುತ್ತಾರೆ.

click me!