Zodiac Sign and Personality: ನಂಬಲು ಅರ್ಹವಾದ ರಾಶಿಗಳಿವು!

By Suvarna News  |  First Published Nov 17, 2021, 1:39 PM IST

ಪ್ರತಿ ರಾಶಿಚಕ್ರಕ್ಕೂ ಅದರದ್ದೇ ಆದ ಅಧಿಪತಿ ಗ್ರಹ ಇರುತ್ತದೆ. ಈ ಗ್ರಹಗಳು ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯದ ಮೇಲೆ ಪರಿಣಾಮವನ್ನು ಬೀರುತ್ತಿರುತ್ತವೆ. ರಾಶಿಚಕ್ರಗಳಲ್ಲಿ ಕೆಲವು ತುಂಬಾ ಶಾಂತ ಸ್ವಭಾವವನ್ನು ಹೊಂದಿದ್ದರೆ, ಮತ್ತೆ ಕೆಲವು ರಾಶಿಚಕ್ರಗಳು ಅತ್ಯಂತ ಪ್ರಾಮಾಣಿಕ ಮತ್ತು ಅನುಕಂಪ, ದಯಾಗುಣಗಳನ್ನು ಹೊಂದಿರುತ್ತವೆ. ಈ ಗುಣಗಳು ಆಯಾ ರಾಶಿಚಕ್ರಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಈ ಐದು ರಾಶಿ ಚಕ್ರದವರ ಗುಣ, ಸ್ವಭಾವಗಳನ್ನು ತಿಳಿದುಕೊಳ್ಳೋಣ ಬನ್ನಿ...
 


ಮನುಷ್ಯ (Man) ಹೇಗೆ ವಿಭಿನ್ನವಾಗಿ (Differnce) ಕಾಣುತ್ತಾನೋ (Looks) ಅವನ ಸ್ವಭಾವಗಳೂ (Nature) ಸಹ ಅಷ್ಟೇ ಭಿನ್ನವಾಗಿರುತ್ತವೆ. ಯಾರೋ ಒಬ್ಬರ ವ್ಯಕ್ತಿತ್ವವನ್ನು (Personality) ನೋಡಿ ಅವರ ಗುಣ-ಸ್ವಭಾವಗಳು ಹೀಗೇ ಇರುತ್ತವೆ ಎಂದು ನಾವು ನಂಬಿದರೆ (Believe) ಅದು ಮೂರ್ಖತನವಾಗುತ್ತದೆ. ಕೆಲವರು ಬಾಹ್ಯ ಜಗತ್ತಿಗೆ ಒಂದು ರೀತಿಯಲ್ಲಿ ಕಾಣುತ್ತಾರೆ. ಹತ್ತಿರದಲ್ಲಿದ್ದವರ ಜೊತೆ ಇನ್ನೊಂದು ತರದಲ್ಲಿ ನಡೆದುಕೊಳ್ಳುತ್ತಾರೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಭಾವವಿರುತ್ತದೆ ಎಂಬುದನ್ನು ಗಮನಿಸಬೇಕು. ಹುಟ್ಟು (Birth), ದಿನಾಂಕ (Date), ಸ್ಥಳ (Place), ಸಮಯ (Time) ಮತ್ತು ಗ್ರಹಗತಿಗಳು, ನಕ್ಷತ್ರಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯ ಗುಣ, ಸ್ವಭಾವಗಳನ್ನು ಜ್ಯೋತಿಷ್ಯ ಶಾಸ್ತ್ರದ (Astrology) ಮೂಲಕ ತಿಳಿದುಕೊಳ್ಳಬಹುದಾಗಿದೆ. ಕೆಲವು ರಾಶಿಚಕ್ರದ ವ್ಯಕ್ತಿಗಳಿಗೆ ತಮ್ಮನ್ನು ಹೊಗಳುವುದನ್ನು (Praising) ಇಷ್ಟಪಡುತ್ತಾರೆ. ಸದಾ ಅವರ ಮುಖಸ್ತುತಿ ಮಾಡಬೇಕೆಂದು ಆಸೆ (Like) ಪಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ, ಈ 5 ರಾಶಿಚಕ್ರವುಳ್ಳ ವ್ಯಕ್ತಿಗಳು ಸ್ವಚ್ಛ ಹೃದಯಿಗಳು (Clean Hearted) ಮತ್ತು ಬಹಳಾ ಪ್ರಾಮಾಣಿಕರೂ (Very Honest) ಆಗಿರುತ್ತಾರೆ. ಕಣ್ಣು ಮುಚ್ಚಿ ಇವರನ್ನು ನಂಬಹುದಾಗಿದೆ ಎಂದು ಹೇಳಲಾಗಿದೆ. 

ಮೇಷ ರಾಶಿಯವರ ವ್ಯಕ್ತಿತ್ವ ಹೀಗಿರುತ್ತೆ (Aries) 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ಸತ್ಯವಂತರು (Truthful),  ಪ್ರೀತಿಪಾತ್ರರು (Loving). ಅಲ್ಲದೆ ನಿಷ್ಪಕ್ಷಪಾತಿಗಳು. ಇವರು ಯಾರ ಪರ-ವಿರೋಧವಾಗಿ ನಿಲ್ಲದೆ ನ್ಯಾಯದ ಪರ ನಿಲ್ಲುವವರು. ಮೇಷ ರಾಶಿಗೆ ಮಂಗಳ (Mars) ಅಧಿಪತಿ ಗ್ರಹವಾಗಿದೆ. ಇದು ಉತ್ಸಾಹ (Passion) ಮತ್ತು ಶೌರ್ಯದ (Bravery) ಪ್ರತೀಕವುಳ್ಳ ಗ್ರಹವಾಗಿದೆ. ಈ ರಾಶಿಯವರ ಮೇಲೆ ಸ್ನೇಹಿತರು (Friends) ಇಲ್ಲವೇ ಸಂಬಂಧಿಕರು (Relatives) ನಂಬಿಕೆಯನ್ನಿಟ್ಟರೆ ಎಂದಿಗೂ ಅದಕ್ಕೆ ಮೋಸವಾಗುವುದಿಲ್ಲ. ಅವರ ಪ್ರಾಮಾಣಿಕತೆ ಮತ್ತು ಮುಕ್ತ ಸ್ವಭಾವವು ಜನರನ್ನು ಹೆಚ್ಚಿಗೆ ಆಕರ್ಷಿಸುತ್ತದೆ. ಹೀಗಾಗಿ ಈ ರಾಶಿ ಚಕ್ರದವರು ನಿಮ್ಮ ಬಂಧುಗಳಾಗಿದ್ದರೆ, ಇಲ್ಲವೇ ಸ್ನೇಹಿತ-ಸ್ನೇಹಿತೆಯರಾಗಿದ್ದರೆ ಅವರನ್ನು ನೂರಕ್ಕೆ ನೂರರಷ್ಟು ನಂಬಬಹುದು. 

ಕರ್ಕಾಟಕ ರಾಶಿಯವರು ನಿರ್ಭೀತರು (Cancer)
ಜ್ಯೋತಿಷ್ಯ ಶಾಸ್ತ್ರದ ಅನುಸಾರ ಕರ್ಕಾಟಕ ರಾಶಿಚಕ್ರದವರು ಅತ್ಯಂತ ಭಾವುಕ (Emotional) ಜೀವಿಗಳು. ಇವರು ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವವರು. ಎಲ್ಲ ವಿಷಯಗಳನ್ನೂ ಸಹ ಭಾವನಾತ್ಮಕವಾಗಿ ನೋಡುವವರು ಇವರಾಗಿರುತ್ತಾರೆ. ಚಂದ್ರ (Moon) ಗ್ರಹವು ಕರ್ಕಾಟಕ ರಾಶಿಯ ಅಧಿಪತಿ ಗ್ರಹವಾಗಿದೆ. ಈ ರಾಶಿಚಕ್ರವುಳ್ಳ ಜಾತಕವನ್ನು (Kundli) ಹೊಂದಿದವರು, ವಿಶ್ವಾಸಾರ್ಹರಾಗಿರುತ್ತಾರೆ. ಇಂಥವರ ಸ್ನೇಹವನ್ನು ಹೊಂದಿದ್ದರೆ ಅವರು ಎಂದೂ ಆ ಸ್ನೇಹಕ್ಕೆ ಮೋಸ (Cheating) ಮಾಡುವವರಲ್ಲ. ಜೊತೆಗೆ ಸಂಬಂಧಿಕರೊಂದಿಗೂ ಸಹ ಉತ್ತಮ ಬಾಂಧವ್ಯವನ್ನು ಹೊಂದಿರಲು ಪ್ರಯತ್ನಪಡುತ್ತಾರೆ. ಇವರ ಮುನ್ನುಗ್ಗುವ (Forward) ಮತ್ತು ನಿರ್ಭೀತ (Fearless) ಸ್ವಭಾವವು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಆದಾಗ್ಯೂ, ಕರ್ಕಾಟಕ ರಾಶಿಯವರು ತಮ್ಮನ್ನು ತಾವು ವಿಮರ್ಷೆಗೊಳಪಡಿಸಿಕೊಳ್ಳುತ್ತಿರುತ್ತಾರೆ. 

ಇದನ್ನು ಓದಿ: ಚಿನ್ನ, ಬೆಳ್ಳಿ ಆಭರಣಗಳ ಕನಸು ಬಿದ್ದರೆ ಅದೃಷ್ಟವೋ, ದುರಾದೃಷ್ಟವೋ..?

ಧೈರ್ಯಶಾಲಿಗಳು ಈ ಸಿಂಹ ರಾಶಿಯವರು (Leo) 
ಸಿಂಹರಾಶಿಯಲ್ಲಿ ಜನಿಸಿದವರು ಧೈರ್ಯಶಾಲಿಗಳಾದ್ದು (Brave), ಯಾವುದಕ್ಕೂ ಹೆದರಿಕೆಯನ್ನು ಹೊಂದಿರುವುದಿಲ್ಲ. ರಾಶಿಯ ಹೆಸರಿನಂತೆಯೇ ಇವರು ಸಖತ್ ಅಗ್ರೆಸ್ಸೀವ್ (Aggressive) ಸ್ವಭಾವದವರು. ಸೂರ್ಯ ಸಿಂಹರಾಶಿಯ ಅಧಿಪತಿ ಗ್ರಹವಾಗಿದೆ. ಇವರು ತಮ್ಮ ಸಂಗಾತಿಯೊಂದಿಗೆ (Partner) ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಸಂಗಾತಿಯ ಜೊತೆಗೆ ಉತ್ತಮ ಬಾಂಧವ್ಯವನ್ನು (Attachment) ಹೊಂದಿರಬೇಕು ಎಂದು ಬಯಸುತ್ತಾರೆ. ಇನ್ನು ಇವರ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡುವುದೇ ಬೇಡ. ಇವರು ಎಂದೂ ಸುಳ್ಳು ಹೇಳುವವರಲ್ಲ, ಬೇರೆಯವರು ಸುಳ್ಳು (False) ಹೇಳುವುದನ್ನು ಇಷ್ಟಪಡುವುದೂ ಇಲ್ಲ, ಸಹಿಸುವುದೂ ಇಲ್ಲ. ಇನ್ನು ಇವರು ಮೋಸ ಮಾಡುವ ಜಾಯಮಾನದವರಲ್ಲ. ಅಂಥವರು ಕಂಡರೆ ದೂರ ಇಡುವ ಸ್ವಭಾವ ಇವರದ್ದಾಗಿರುತ್ತದೆ. 

ಸತ್ಯವಂತರು ಈ ಮಕರ ರಾಶಿಯವರು (Capricorn)
ಶನಿ ಗ್ರಹವು (Saturn) ಮಕರ ರಾಶಿಯ ಅಧಿಪತಿ ಗ್ರಹವಾಗಿದೆ. ಜ್ಯೋತಿಷ್ಯದ ಅನುಸಾರ ಶನಿಯನ್ನು ನ್ಯಾಯದ ಗ್ರಹ ಎನ್ನಲಾಗುತ್ತದೆ. ಹೀಗಾಗಿ ಈ ರಾಶಿಯವರನ್ನು ಕಣ್ಣು ಮುಚ್ಚಿ ನಂಬಬಹುದಾಗಿದೆ. ಎಂಥದ್ದೇ ಸನ್ನಿವೇಶ ಇರಲಿ, ಇವರು ನ್ಯಾಯದ (Justice) ಹಾದಿಯನ್ನು (Path) ಬಿಟ್ಟು ನಡೆಯುವವರಲ್ಲ. ತಮ್ಮ ಪ್ರಾಮಾಣಿಕತೆಯನ್ನು ಬಿಟ್ಟುಕೊಡುವವರೂ ಅಲ್ಲ. ಮಕರ ರಾಶಿಯವರು ಸತ್ಯಕ್ಕೆ ತಲೆಬಾಗುವವರಾಗಿದ್ದಾರೆ. ಇವರ ನೇರನುಡಿ ಕೆಲವೊಮ್ಮೆ ಇವರಿಗೆ ಸಂಕಷ್ಟವನ್ನು ತಂದೊಡ್ಡುತ್ತದೆ. 

ಇದನ್ನು ಓದಿ: ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಸುಲಭದ ದಾರಿ

ಪ್ರಾಮಾಣಿಕಕ್ಕೆ ಮತ್ತೊಂದು ಹೆಸರೇ ಕುಂಭ (Aquarius)
ಕುಂಭ ರಾಶಿಗೂ ಶನಿ ಗ್ರಹವೇ ಅಧಿಪತಿ ಗ್ರಹವಾಗಿದ್ದು, ಪ್ರಾಮಾಣಿಕತೆಗೆ ಹೆಚ್ಚಿನ ಒತ್ತನ್ನು ನೀಡುತ್ತದೆ. ಕುಂಭ ರಾಶಿಯವರು ಒಮ್ಮೆ ನಿರ್ಧಾರ (Decision) ಮಾಡಿದರೆಂದರೆ ಅದರಿಂದ ಹಿಂದೆ ಹೆಜ್ಜೆ (Step) ಇಡಲಾರರು. ಅವರು ತಾವು ನಿರ್ಧರಿಸಿದ ಕೆಲಸವನ್ನು ಪೂರ್ಣಗೊಳಿಸಿಯೇ ವಿಶ್ರಾಂತಿಯನ್ನು ಪಡೆಯುತ್ತಾರೆ. ಅಲ್ಲಿಯವರೆಗೆ ವಿರಾಮವನ್ನು ತೆಗೆದುಕೊಳ್ಳದೇ ಕೆಲಸವನ್ನು ಮಾಡುವ ಗುಣವನ್ನು ಹೊಂದಿರುತ್ತಾರೆ. ಈ ರಾಶಿಚಕ್ರದವರು ತಮ್ಮ ಮಾತುಗಾರಿಕೆ ಮತ್ತು ಆಲೋಚನೆಗಳಿಂದ (Thought) ಎಲ್ಲರ ಮನಸ್ಸನ್ನು  ಗೆಲ್ಲುತ್ತಾರೆ. ಅಲ್ಲದೆ, ಇವರ ಪ್ರತಿ ಕೆಲಸ ಕಾರ್ಯಗಳೂ ಸಹ ಪ್ರಾಮಾಣಿಕತೆಯಿಂದ ಕೂಡಿರುತ್ತದೆ. ಮತ್ತು ಸತ್ಯವಂತರಾಗಿಯೇ ನಡೆದುಕೊಳ್ಳುತ್ತಾರೆ. ಇವರನ್ನು ನಂಬಿ ನೀವು ಯಾವ ಜವಾಬ್ದಾರಿಯನ್ನೂ (Responsibility) ಸಹ ವಹಿಸಬಹುದಾಗಿದೆ. 

click me!