Amarnath Yatra: ಸ್ಥಗಿತವಾಗಿದ್ದ ಅಮರನಾಥ ಯಾತ್ರೆ ಪುನಾರಂಭ

By Kannadaprabha NewsFirst Published Jul 10, 2023, 3:00 AM IST
Highlights

ಭಾರಿ ಮಳೆಯ ಕಾರಣ ಯಾತ್ರೆ ಸ್ಥಗಿತವಾಗಿತ್ತು. ಆದರೆ ಭಾನುವಾರ ಮಳೆ ನಿಂತಿದ್ದು ಆಕಾಶ ಸ್ವಚ್ಛವಾಗಿದೆ. ಇದರ ಬೆನ್ನಲ್ಲೇ ಯಾತ್ರೆ ಪುನಾರಂಭವಾಗಿದೆ. ಪಂಜತರಣಿ ಹಾಗೂ ಶೇಷನಾಗ ಬೇಸ್‌ಗಳಲ್ಲಿ ಸಿಲುಕಿದ್ದ ಯಾತ್ರಿಕರು ಭಾನುವಾರ ಬೆಳಗ್ಗೆಯೇ ಯಾತ್ರೆಗೆ ಚಾರಣ ಆರಂಭಿಸಿದ್ದಾರೆ.

ಶ್ರೀನಗರ(ಜು.10): 2 ದಿನಗಳಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಭಾನುವಾರ ಪುನಾರಂಭವಾಗಿದೆ. ಇದರಿಂದಾಗಿ ವಿವಿಧ ಕ್ಯಾಂಪ್‌ಗಳಲ್ಲಿ ಸಿಲುಕಿಕೊಂಡಿದ್ದ ಯಾತ್ರಾರ್ಥಿಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಭಾರಿ ಮಳೆಯ ಕಾರಣ ಯಾತ್ರೆ ಸ್ಥಗಿತವಾಗಿತ್ತು. ಆದರೆ ಭಾನುವಾರ ಮಳೆ ನಿಂತಿದ್ದು ಆಕಾಶ ಸ್ವಚ್ಛವಾಗಿದೆ. ಇದರ ಬೆನ್ನಲ್ಲೇ ಯಾತ್ರೆ ಪುನಾರಂಭವಾಗಿದೆ. ಪಂಜತರಣಿ ಹಾಗೂ ಶೇಷನಾಗ ಬೇಸ್‌ಗಳಲ್ಲಿ ಸಿಲುಕಿದ್ದ ಯಾತ್ರಿಕರು ಭಾನುವಾರ ಬೆಳಗ್ಗೆಯೇ ಯಾತ್ರೆಗೆ ಚಾರಣ ಆರಂಭಿಸಿದ್ದಾರೆ.

ಇದೇ ವೇಳೆ ಕೆಲವು ಯಾತ್ರಿಕರು ದರ್ಶನ ಮುಗಿಸಿ ವಾಪಸಾಗುವಾಗ ಮಧ್ಯದಲ್ಲೇ ಸಿಲುಕಿದ್ದರು. ಅವರನ್ನು ಬಲ್ತಾಲ್‌ ಕ್ಯಾಂಪ್‌ ಕಡೆಗೆ ಸಾಗಲು ಅನುವು ಮಾಡಿಕೊಡಲಾಗಿದೆ.

Latest Videos

Amarnath Yatra: ಸಂಕಷ್ಟದಲ್ಲಿರೋ ಯಾತ್ರಾರ್ಥಿಗಳಿಗೆ ಶಾಸಕ ವಿನಯ್ ಕುಲಕರ್ಣಿ ಸಹಾಯಹಸ್ತ

ಮತ್ತೊಂದೆಡೆ ಹವಾಮಾನ ವೈಪರಿತ್ಯದ ಕಾರಣ ಸಿಲುಕಿದ್ದ 700 ಯಾತ್ರಿಕರಿಗೆ ಸೇನೆಯು ಖಾಜಿಗುಂಡ್‌ನ ತನ್ನ ನೆಲೆಯಲ್ಲಿ ಆಶ್ರಯ ಒದಗಿಸಿದೆ. ಜಮ್ಮು-ಶ್ರೀನಗರ ಹೆದ್ದಾರಿಯ 40 ಮೀ. ಭಾಗವು ರಾಮ್‌ಬನ್‌ನಲ್ಲಿ ಕುಸಿದು ಶನಿವಾರ 3500 ವಾಹನಗಳು ಸಿಲುಕಲು ಕಾರಣವಾಗಿತ್ತು. ಭಾನುವಾರ ಅದನ್ನು ದುರಸ್ತಿ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಇಂದಿನಿಂದ ಮಳೆ ಕ್ಷೀಣ:

ಸೋಮವಾರದಿಂದ ಮಳೆ ಕ್ಷೀಣವಾಗಲಿದೆ ಎಂಬ ಶುಭ ಸಮಾಚಾರವನ್ನು ಹವಾಮಾನ ಇಲಾಖೆ ನೀಡಿದೆ. ಈವರೆಗೆ ಸುಮಾರು 80 ಸಾವಿರ ಭಕ್ತರು ಅಮರನಾಥ ಹಿಮಲಿಂಗ ದರ್ಶನ ಮಾಡಿದ್ದಾರೆ. 3.5 ಲಕ್ಷ ಭಕ್ತರು ಹೆಸರು ನೋಂದಾಯಿಸಿಕೊಂಡಿದ್ದು, ಆ.31ರವರೆಗೆ ಯಾತ್ರೆ ನಡೆಯಲಿದೆ.

click me!