ದಾಂಪತ್ಯ ಸುಖವೇ ಇಲ್ಲ, ಈ ವಾಸ್ತು ಟಿಪ್ಸ್ ಫಾಲೋ ಮಾಡಿದ್ರೆ ಸುಧಾರಿಸುತ್ತೆ ಸಂಬಂಧ!

By Suvarna News  |  First Published Nov 7, 2022, 2:44 PM IST

ನಕಾರಾತ್ಮಕ ಶಕ್ತಿಗಳು ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತವೆ. ಈ ಶಕ್ತಿಗಳು ವಾಸ್ತು ದೋಷಕ್ಕೆ ಕಾರಣವಾಗಿ ದಾಂಪತ್ಯ ಮುರಿದು ಬೀಳಲು ಕಾರಣವಾಗುತ್ತದೆ. ಸದಾ ಸಂಗಾತಿ ಮಧ್ಯೆ ಮುನಿಸುಂಟಾಗ್ತಿದೆ ಎಂದಾದ್ರೆ ಅಡುಗೆ ಮನೆಯಲ್ಲಿರುವ ಒಂದು ವಸ್ತು ಬಳಸಿ ನೋಡಿ.
 


ಹಿಂದೂ ಧರ್ಮದಲ್ಲಿ ದೇವರಿಗೆ ಮಹತ್ವ ನೀಡಿದಂತೆ ದುಷ್ಟ ಶಕ್ತಿಯ ಬಗ್ಗೆಯೂ ನಂಬಿಕೆಯಿದೆ. ದೇವರಿದ್ಮೇಲೆ ದುಷ್ಟ ಶಕ್ತಿಗಳು ಕೂಡ ನಮ್ಮ ಜೊತೆಗಿರುತ್ತವೆ ಎಂದು ನಂಬಲಾಗುತ್ತದೆ. ಈ ನಕಾರಾತ್ಮಕ ಶಕ್ತಿಯನ್ನು ಹೊರ ಹಾಕುವುದು ಬಹಳ ಮುಖ್ಯ. ಮನೆ, ಮನಸ್ಸಿನಲ್ಲಿ ಋಣಾತ್ಮಕ ಶಕ್ತಿ ಮನೆ ಮಾಡಿದಾಗ ಅನೇಕ ಸಮಸ್ಯೆ ಎದುರಾಗುತ್ತದೆ. ಈ ಕೆಟ್ಟ ಶಕ್ತಿಯನ್ನು ಹೋಗಲಾಡಿಸಿ, ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುವಂತೆ ಮಾಡಲು ಮನೆಯಲ್ಲಿಯೇ ಮದ್ದಿದೆ.

ನಮ್ಮ ಮನೆ (House) ಯಲ್ಲಿ ಅನೇಕ ವಸ್ತುಗಳು ವಾಸ್ತು (Vastu) ದೋಷವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಉಪ್ಪು, ಮೆಣಸು, ಅರಿಶಿನದ ಜೊತೆ ಆಲಂ (Alum) ಕೂಡ ಒಂದು. ಪಿಟ್ಕಾರಿ ಎಂದೂ ಕರೆಯಲ್ಪಡುವ ಈ ಆಲಂ ಬಿಳಿ ಕಲ್ಲು. ಆದ್ರೆ ಇದ್ರಲ್ಲಿ ಅಪಾರ ಶಕ್ತಿ ಅಡಗಿದೆ. ನಕಾರಾತ್ಮಕ (Negative) ಶಕ್ತಿ ದಾಂಪತ್ಯದಲ್ಲಿ ಕೂಡ ಬಿರುಕು ಮೂಡಲು ಕಾರಣವಾಗುತ್ತದೆ. ಮನಸ್ಸಿ (Mind) ನಿಂದ ಕೆಟ್ಟ ಭಾವನೆ ಹೋಗ್ಬೇಕು, ದಾಂಪತ್ಯದಲ್ಲಿ ನೆಮ್ಮದಿ, ಶಾಂತಿ, ಪ್ರೀತಿ ಇರಬೇಕು ಎಂದ್ರೆ ನೀವು ಆಲಂ ಬಳಕೆ ಮಾಡಬೇಕು. ವೈವಾಹಿಕ ಸಮಸ್ಯೆ ಇದ್ರಿಂದ ದೂರವಾಗುತ್ತದೆ. ನಾವಿಂದು ಆಲಂ ಬಳಕೆ ಮಾಡಿ ದಾಂಪತ್ಯದಲ್ಲಿ ಬರುವ ಸಮಸ್ಯೆ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ.

Tap to resize

Latest Videos

ಪ್ರತಿ ಮರವೂ ದೇವರ ವಾಸಸ್ಥಾನ, ಯಾವ ಮರದಲ್ಲಿ ಯಾವ ದೇವರಿದ್ದಾನೆ?

ಮಣಿಕಟ್ಟಿನ ಮೇಲೆ ಆಲಂ ಕಟ್ಟಿಕೊಂಡರೆ ಸಮಸ್ಯೆ ಪರಿಹಾರ : ಕೆಂಪು (Red ) ಬಣ್ಣದ ಬಟ್ಟೆಯಲ್ಲಿ ಆಲಂ ಹಾಕಿ ಅದನ್ನು ಮಣಿಕಟ್ಟಿಗೆ ಕಟ್ಟಿಕೊಳ್ಳಬೇಕು. ಶುಕ್ರವಾರದಂದು ಮಹಿಳೆಯರು ತಮ್ಮ ಎಡಗೈಗೆ ಮತ್ತು ಪುರುಷರು ತಮ್ಮ ಬಲಗೈಗೆ ಈ ಬಟ್ಟೆಯನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ಸಂಗಾತಿ ಮೇಲೆ ಯಾವುದೇ ಕೆಟ್ಟ ಭಾವನೆಯಿದ್ದರೂ ದೂರವಾಗುತ್ತದೆ. ಇಬ್ಬರ ಮಧ್ಯೆ ವೈಮನಸ್ಸು ಕಡಿಮೆಯಾಗುತ್ತದೆ.

ಮಲಗುವ ರೂಮ್ (Room) ನಲ್ಲಿ ಆಲಂ ಇಟ್ಟು ನೋಡಿ : ಹಾಸಿಗೆಯ ಬಳಿ ಒಂದು ಬಟ್ಟಲಿನಲ್ಲಿ ಆಲಂನ ಕೆಲವು ತುಂಡುಗಳನ್ನು ಇಡಬೇಕು. ನಿಮ್ಮ ಬೆಡ್ ರೂಮಿನಲ್ಲಿ ಆಲಂ ಇಡುವುದ್ರಿಂದ ಸಾಕಷ್ಟು ಲಾಭವನ್ನು ಕಾಣಬಹುದು. ಆದ್ರೆ ಒಮ್ಮೆ ಇಟ್ಟ ಆಲಂ ತುಂಡುಗಳನ್ನು ನೀವು ವರ್ಷಪೂರ್ತಿ ಹಾಗೆ ಬಿಡಬಾರದು. ನೀವು ಪ್ರತಿ 15 ದಿನಗಳಿಗೊಮ್ಮೆ ಅದನ್ನು ಬದಲಾಯಿಸಬೇಕು. ಹೀಗೆ ಮಾಡುವುದರಿಂದ ಕೋಣೆಯೊಳಗಿರುವ ಋಣಾತ್ಮಕ ಶಕ್ತಿ ನಾಶವಾಗುತ್ತದೆ. ಸಂಗಾತಿ ಜೊತೆ ಶಾಂತವಾದ ಮನಸ್ಸಿನಿಂದ ಕೆಲ ಸಮಯ ನೆಮ್ಮದಿಯಾಗಿ ಕಳೆಯಲು ಸಾಧ್ಯವಾಗುತ್ತದೆ.  

ಸಂಗಾತಿ ಮಧ್ಯೆ ಇರುವ ಮನಸ್ತಾಪ ತಣ್ಣಗಾಗ್ಬೇಕೆಂದ್ರೆ ಹೀಗೆ ಮಾಡಿ : ಸಂಗಾತಿ ಜೊತೆ ಪದೇ ಪದೇ ಗಲಾಟೆ, ಜಗಳವಾಗ್ತಿದೆ ಎಂದಾದ್ರೆ ನೀವು ಆಲಂ ನೀರಿನಲ್ಲಿ ಸ್ನಾನ ಮಾಡಬೇಕು. ನೀವು ಮೊದಲು ಸ್ನಾನ ಮಾಡುವ ನೀರಿಗೆ ಆಲಂ ಹಾಕಿಡಿ. ಅದು ಕರಗಿದ ಮೇಲೆ ಆ ನೀರಿನಲ್ಲಿ ಸ್ನಾನ ಮಾಡಿ. ನೀವು ಪ್ರತಿ ದಿನ ಈ ಉಪಾಯವನ್ನು ಮಾಡಿದ್ರೆ ಕೆಲವೇ ದಿನಗಳಲ್ಲಿ ಫಲಿತಾಂಶವನ್ನು ನೀವು ಕಾಣುತ್ತೀರಿ. ಮನೆಯದಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.  

ಮುರಿದ ಹಲ್ಲುಗಳ ಕನಸು ಬಿದ್ರೆ ಅದರ ಅರ್ಥ ಏನು?

ಮನಸ್ಸು ಕೇಂದ್ರೀಕರಿಸುವ ಶಕ್ತಿ ಆಲಂಗಿದೆ : ನಿಮ್ಮ ಸಂಗಾತಿ ಮೇಲೆ ಪ್ರೀತಿ ಇದ್ದರೂ ಮನಸ್ಸು ಬೇರೆಯವರಿಗೆ ಆಕರ್ಷಿತವಾಗ್ತಿದೆ ಎಂದಾದ್ರೆ ನೀವು ಆಲಂ ಸಹಾಯದಿಂದ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಮೊದಲು ನೀವು ಒಂದು ಕರವಸ್ತ್ರದಲ್ಲಿ ಆಲಂ ತುಂಡುಗಳನ್ನು ಹಾಕಿ ಕಟ್ಟಿ. ಅದನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ನೀವು ಆಕರ್ಷಿತವಾಗ್ತಿರುವ ವ್ಯಕ್ತಿ ಬಳಿ ಹೋಗುವಾಗ ಅವಶ್ಯಕವಾಗಿ ಕರವಸ್ತ್ರ ಇರಲಿ. ಇದ್ರಿಂದ ನಿಮ್ಮ ಸಂಬಂಧ ಎಂದಿಗೂ ದಾರಿ ತಪ್ಪುವುದಿಲ್ಲ. ನಿಮ್ಮ ಮನಸ್ಸು ಚಂಚಲಗೊಳ್ಳುವುದಿಲ್ಲ. 
 

click me!