ಬೆಳಕನ್ನು ನೀಡುವ ಸೂರ್ಯನ ಹುಟ್ಟುಹಬ್ಬವಾದ ಇಂದೇ ಕಲ್ಮಶವನ್ನು ತೊಳೆಯುವ ನರ್ಮದಾ ನದಿಯ ಜಯಂತಿಯಾಗಿದೆ. ಪುರಾಣದಲ್ಲಿ ಆಕೆಯ ಮಹತ್ವದ ಬಗ್ಗೆ ಹೇಳಲಾಗಿದೆ..
ಇಂದು ಜಗತ್ತಿನ ಬೆಳಕಿನ ಮೂಲವಾದ ಸೂರ್ಯದೇವನ ಜಯಂತಿ. ಅಚ್ಚರಿಯ ವಿಷಯವೆಂದರೆ ಇದೇ ದಿನ ತಾಯಿ ನರ್ಮದೆ ನದಿಯಾಗಿ ಹುಟ್ಟಿದ್ದು. ಹಾಗಾಗಿ, ಈ ದಿನವನ್ನು ನರ್ಮದಾ ಜಯಂತಿ ಎಂದೂ ಆಚರಿಸಲಾಗುತ್ತೆದ. ಮಧ್ಯಪ್ರದೇಶದ ಅಮರ್ಕಂಟಕ್(Amarkantak)ನಲ್ಲಿ ಹುಟ್ಟುವ ನರ್ಮದಾ ನದಿಯು ಕಡೆಗೆ ಅರೇಬಿಯನ್ ಸಮುದ್ರ(Arabian Sea)ದಲ್ಲಿ ಐಕ್ಯವಾಗುತ್ತದೆ. ಅತ್ಯಂತ ಪವಿತ್ರ ನದಿಗಳಲ್ಲಿ ಒಂದು ಎನಿಸಿಕೊಂಡಿರುವ ಈ ನದಿಗೆ ಪುರಾಣ ಪುಣ್ಯ ಕತೆಗಳಲ್ಲಿ ಮುಖ್ಯ ಸ್ಥಾನವಿದೆ.
ಶಿವನ ಸೃಷ್ಟಿ
ರಾಕ್ಷಸ(demons)ರ ಸಂಹಾರ ಮಾಡಿ ಬರುವ ದೇವತೆ((Devas))ಗಳ ಎಲ್ಲ ಪಾಪವನ್ನು ತೊಳೆದು ಹಾಕಲಿಕ್ಕಾಗಿಯೇ ಶಿವ ಸೃಷ್ಟಿಸಿದ ನದಿ ನರ್ಮದೆ ಎಂಬ ಪ್ರತೀತಿ ಇದೆ.
ಶಿವನು ತಪಸ್ಸಿಗೆ ಕುಳಿತಾಗ, ಆತನ ಏಕಾಗ್ರತೆ ಹೆಚ್ಚಿ ಬೆವರಾಗಿ ಹರಿಯತೊಡಗಿತು. ಆ ಬೆವರೇ ಒಂದೆಡೆ ತುಂಬುತ್ತಾ ಹೋಗಿ ಕಡೆಗೆ ನದಿಯಾಗಿ ಹರಿಯಿತು- ಇದೇ ನರ್ಮದಾ ಎಂಬ ಕತೆಯೂ ಇದೆ. ಇದಕ್ಕೇ ನರ್ಮದಾ ನದಿಗೆ ಶಿವನ ಪುತ್ರಿ ಶಂಕರಿ ಎಂದೂ ಹೇಳಲಾಗುತ್ತದೆ. ಈ ನದಿಯಲ್ಲಿರುವ ಪ್ರತಿಯೊಂದೂ ಕಲ್ಲೂ ಶಿವಲಿಂಗದ ರೂಪ ತಾಳುತ್ತದೆ ಎನ್ನಲಾಗುತ್ತದೆ.
ಇದಲ್ಲದೆ ನರ್ಮದೆಯ ಹುಟ್ಟಿನ ಬಗ್ಗೆ ಮತ್ತೊಂದು ಆಸಕ್ತಿಕರ ಕತೆ ಇದೆ. ಕತೆಯ ಪ್ರಕಾರ, ಸೃಷ್ಟಿಕರ್ತ ಬ್ರಹ್ಮನ ಕಣ್ಣಿಂದ ಇಳಿದ ಎರಡು ಹನಿ ಕಣ್ಣೀರುಗಳು ಭೂಮಿಯಲ್ಲಿ ಹರಿಯಲಾರಂಭಿಸಿದವು. ಅದರಲ್ಲೊಂದು ನರ್ಮದಾ(Narmada) ನದಿಯಾದರೆ, ಮತ್ತೊಂದು ಬ್ರಹ್ಮಪುತ್ರ(Brahmaputra)ವಾಯಿತು ಎನ್ನಲಾಗುತ್ತದೆ.
undefined
Ratha Saptami: ಇಂದು ಜಗದ ಹುಟ್ಟಿನ ಕಾರಣಕರ್ತ ಸೂರ್ಯ ಹುಟ್ಟಿದ ದಿನ- ರಥಸಪ್ತಮಿ
ಹಾವಿನ ವಿಷ(snake venom) ತೆಗೆಯುತ್ತದೆ!
ಪುರಾಣದ ಪ್ರಕಾರ, ಒಮ್ಮೆ 60 ದಶಲಕ್ಷ ಗಂಧರ್ವರು ನಾಗಗಳನ್ನು ಸೋಲಿಸಿದರು. ಪಾತಾಳಲೋಕವನ್ನು ತಮ್ಮದಾಗಿಸಿಕೊಂಡು ಅಲ್ಲಿನ ಸಂಪತ್ತನ್ನು ತಮ್ಮದಾಗಿಸಿಕೊಂಡರು. ಆಗ ನಾಗಾಗಳು ವಿಷ್ಣುವಿನ ಬಳಿ ಹೋಗಿ ಸಹಾಯ ಕೇಳಿದರು. ಆಗ ವಿಷ್ಣುವು ಪುರುಕುಟ್ಸಾ ಬಳಿ ಹೋಗುವಂತೆ ಸೂಚಿಸುತ್ತಾನೆ. ಆಗ ನಾಗಾಗಳು ತಮ್ಮ ಸಹೋದರಿಯಾದ ನರ್ಮದೆಯನ್ನು ಪುರುಕುತ್ಸಾ ಬಳಿ ಸಹಾಯ ಕೇಳಲು ಕಳುಹಿಸುತ್ತಾರೆ. ಆಗ ಒಪ್ಪಿ ಬರುವ ಆತನನ್ನು ನರ್ಮದೆ ನಾಗಾಗಳ ರಾಜ್ಯಕ್ಕೆ ಕರೆದೊಯ್ಯುತ್ತಾಳೆ. ಆತ ಗಂಧರ್ವ(Gandharvas)ರೊಡನೆ ಹೋರಾಡಿ ರಾಜ್ಯವನ್ನು ಗೆದ್ದು ನಾಗಾಗಳಿಗೆ ಹಿಂದಿರುಗಿಸುತ್ತಾನೆ. ಆಗ ಆ ಸಂತೋಷದಲ್ಲಿ ನಾಗರು, ನರ್ಮದೆಯ ಈ ಕತೆ ನೆನೆಸಿಕೊಂಡವರು ಹಾವಿನ ವಿಷದಿಂದ ಸಾಯುವುದಿಲ್ಲ ಎಂಬ ವರ ನೀಡುತ್ತಾರೆ. ನರ್ಮದೆಯು ಪುರುಕುತ್ಸಾನನ್ನೇ ವಿವಾಹವಾಗುತ್ತಾಳೆ.
Zodiac Compatibility: ವಿವಾಹಕ್ಕೆ ನಿಮ್ಮ ರಾಶಿಗೆ ಯಾವ ರಾಶಿಗಳು ಚೆನ್ನಾಗಿ ಹೊಂದುತ್ತವೆ?
ಅತ್ಯಂತ ಪವಿತ್ರ(holy)
ಗಂಗಾ, ಯಮುನಾ, ಗೋದಾವರಿ, ಕಾವೇರಿ(Cauvery) ಹಾಗೂ ನರ್ಮದಾ ನದಿಗಳನ್ನು ಭಾರತದ ಐದು ಪರಮ ಪವಿತ್ರ ನದಿಗಳೆಂದು ಭಾವಿಸಲಾಗುತ್ತದೆ. ಅವುಗಳಲ್ಲೇ ಅತಿ ಪವಿತ್ರವಾದುದೆಂದರೆ ನರ್ಮದಾ. ಆಕೆಯನ್ನು ರೇವಾ ಹಾಗೂ ಪೂರ್ವ ಗಂಗಾ ಎಂದೂ ಕರೆಯಲಾಗುತ್ತದೆ. ಕೇವಲ ಈ ನದಿಯನ್ನು ಕಣ್ತುಂಬಿಕೊಂಡರೂ ನಮ್ಮ ಪಾಪಗಳು ಕರಗುತ್ತವೆ ಎಂಬ ನಂಬಿಕೆ ಇದೆ. ಗಂಗೆಯನ್ನು ಭಕ್ತರು ಮಲಿನ ಮಾಡಿದಾಗ, ಆಕೆ ಕಪ್ಪು ಗೋವಿನ ರೂಪದಲ್ಲಿ ಬಂದು ನರ್ಮದೆಯಲ್ಲಿ ಸ್ನಾನ ಮಾಡಿ ಪವಿತ್ರಳಾಗುತ್ತಾಳೆ ಎಂದೂ ಹೇಳಲಾಗುತ್ತದೆ.
ನರ್ಮದ ಜಯಂತಿ
ನರ್ಮದಾ ಜಯಂತಿಯಂದು ಭಕ್ತರು ನರ್ಮದಾ ನದಿಯಲ್ಲಿ ಮುಳುಗೆದ್ದು ತಾಯಿಗೆ ನಮಸ್ಕರಿಸುತ್ತಾರೆ. ನಂತರ ಆಕೆಯನ್ನು ಪೂಜಿಸುತ್ತಾರೆ. ಇಂದು ಸಂಜೆ ಕೂಡಾ ನದಿಯ ತಟದಲ್ಲಿ ನೆರೆದು ಸಂಧ್ಯಾ ಆರತಿ ಮಾಡುತ್ತಾರೆ. ದೇವತೆಗಳ ಪಾಪ ಪರಿಹಾರ ಮಾಡುವ ಆಕೆ, ತೃಣ ಮಾತ್ರರಾದ ಮಾನವರ ಪಾಪವನ್ನೂ ತೊಳೆಯುತ್ತಾಳೆ ಎಂಬ ನಂಬಿಕೆ ಇದೆ.