Alien News: ಡಿಸೆಂಬರ್ 8ಕ್ಕೆ ಭೂಮಿಗೆ ಬರಲಿದ್ದಾರೆ ಅನ್ಯಗ್ರಹ ಜೀವಿಗಳು!

By Suvarna News  |  First Published Oct 11, 2022, 11:28 AM IST

ಅನ್ಯ ಗ್ರಹಗಳಲ್ಲಿ ಜೀವಿಗಳಿದ್ದಾರೋ ಇಲ್ಲವೋ ಎಂಬ ಜಿಜ್ಞಾಸೆ, ಸಂಶೋಧನೆ ಬಹಳ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ. ಅದೇನೇ ಇರಲಿ, ಈಗಂತೂ ಇದೇ ವರ್ಷದ ಕೊನೆಯ ತಿಂಗಳಲ್ಲಿ ಭೂಮಿಗೆ ಅನ್ಯ ಗ್ರಹ ಜೀವಿಗಳು ಬರುತ್ತಾರೆಂಬ ಸುದ್ದಿ ಸೆನ್ಸೇಶನ್ ಹುಟ್ಟು ಹಾಕಿದೆ. 


ನಾವೆಲ್ಲರೂ 'ಕೋಯಿ ಮಿಲ್ ಗಯಾ' ಚಿತ್ರವನ್ನು ನೋಡಿದ್ದೇವೆ. ಇದರಲ್ಲಿ ಏಲಿಯನ್ UFO ನಿಂದ ಭೂಮಿಗೆ ಬಂದಿಳಿದಿತ್ತು. 'ಪಿಕೆ' ಚಿತ್ರದಲ್ಲಿ ಅಮೀರ್ ಖಾನ್ ಒಬ್ಬ ಏಲಿಯನ್ ಆಗಿದ್ದ. ಇದಲ್ಲದೆ ಅನ್ಯಗ್ರಹ ಜೀವಿಗಳ ಕುರಿತು ಹಲವಾರು ಇಂಗ್ಲಿಷ್ ಚಿತ್ರಗಳು ಬಂದಿವೆ. ಬ್ರಹ್ಮಾಂಡದಲ್ಲಿ ಕೋಟಿ ಕೋಟಿ ನಕ್ಷತ್ರಗಳಿರುವಾಗ, ಅವೆಲ್ಲದರಲ್ಲೂ ಸಾಕಷ್ಟು ಗ್ರಹಗಳಿರುವಾಗ ಯಾವುದಾದರೂ ಗ್ರಹದಲ್ಲಿ ಭೂಮಿಯಂತೆಯೇ ಜೀವಿಗಳಿರಬಾರದೇಕೆ ಎಂಬ ಪ್ರಶ್ನೆ ಬಹಳ ಹಿಂದಿನಿಂದಲೂ ಅನೇಕರನ್ನು ಕಾಡಿದೆ, ಈಗಲೂ ಕಾಡುತ್ತಿದೆ. ವಿಜ್ಞಾನಿಗಳು ಇದರ ಬಗ್ಗೆ ಸಂಶೋಧನೆ ಕೈಗೊಂಡರೆ ಸಾಮಾನ್ಯರು ಈ ಬಗ್ಗೆ ಮನಸ್ಸಿಗೆ ಬಂದಂತೆ ಕಲ್ಪಿಸಿಕೊಂಡು ಸಂಭ್ರಮಿಸುತ್ತೇವೆ. 
ಆಗಾಗ, ಏಲಿಯನ್(Alien) ನೋಡಿದ್ದಾಗಿ, ಹಾರುವ ತಟ್ಟೆಗಳನ್ನು ನೋಡಿದ್ದಾಗ ಜಗತ್ತಿನ ಒಂದೊಂದು ಮೂಲೆಯಿಂದಲೂ ಸುದ್ದಿ ಬರುತ್ತಲೇ ಇರುತ್ತದೆ. ಇವೆಲ್ಲವೂ ನಿಗೂಢತೆ ಹೊಂದಿರುವುದರಿಂದ ನಮ್ಮ ಕುತೂಹಲ ಕೆರಳಿಸುತ್ತದೆ. ಆ ಮಧ್ಯೆ, ಅನೋ ಅಲಾರಿಕ್(Eno Alairic) ಎಂಬ ವ್ಯಕ್ತಿಯೊಬ್ಬ ಡಿಸೆಂಬರ್ 8ರಂದು ಭೂಮಿಗೆ ಏಲಿಯನ್ಸ್ ಬರುವುದಾಗಿ ಹೇಳಿದ್ದಾನೆ. ತನ್ನನ್ನು ತಾನು ಟೈಮ್ ಟ್ರಾವೆಲರ್(Time traveler) ಎಂದು ಹೇಳಿಕೊಂಡಿರವ ಈತನ ಈ ಹೇಳಿಕೆ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ.

ವಿಜ್ಞಾನಿಗಳ ಪ್ರಕಾರ, ಇದುವರೆಗೆ ವಿದೇಶಿಯರು ಅಥವಾ UFOಗಳ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಬ್ರಹ್ಮಾಂಡವು ಎಷ್ಟು ವಿಶಾಲವಾಗಿದ್ದರೂ ನಾವು ಅದನ್ನು ಊಹಿಸಲೂ ಸಾಧ್ಯವಿಲ್ಲ. ಈ ಕಾರಣದಿಂದಾಗಿ, ಜಾಗದ ಯಾವ ಮೂಲೆಯ ರಹಸ್ಯವು ನಮಗೆ ತಿಳಿದಿಲ್ಲ. ಆದರೆ ಈ ಅನೋ ಅಲಾರಿಕ್ ಹೇಳಿಕೆ ಸಖತ್ ರೋಚಕವಾಗಿದ್ದು, ಸದ್ಯ ವೈರಲ್ ಆಗುತ್ತಿದೆ.

Tap to resize

Latest Videos

undefined

Ujjain mahakal corridor: ನೋಡ ಬನ್ನಿ ‘ಮಹಾಕಾಲನ ಮಹಾಲೋಕ’

ವಿದೇಶಿಯರು ಡಿಸೆಂಬರ್‌ನಲ್ಲಿ ಭೂಮಿಗೆ ಬರುತ್ತಾರೆ
ಈ ಅನೋ ಅಲಾರಿಕ್ ಎಂಬ ವ್ಯಕ್ತಿಯು ತನ್ನನ್ನು ತಾನು ಟೈಂ ಟ್ರಾವೆಲರ್ ಎಂದು ಹೇಳಿಕೊಂಡಿದ್ದಾನೆ. ಸಧ್ಯ ಆತ ಟೈಂ ಟ್ರಾವೆಲಿಂಗ್ ಮೂಲಕ 2671ನೇ ಇಸವಿಯಲ್ಲಿ ಬದುಕುತ್ತಿದ್ದಾನಂತೆ. ಟೈಂ ಟ್ರಾವೆಲಿಂಗ್‌ನೆಂದರೆ ಸಮಯದಲ್ಲಿ ಮುಂದಕ್ಕೆ ಮತ್ತು ಹಿಂದಕ್ಕೆ ಹೋಗಬಹುದೆನ್ನುವ ಪರಿಕಲ್ಪನೆ. ಆತ ಹೇಳುವಂತೆ ಡಿಸೆಂಬರ್‌ನಲ್ಲಿ ಅನ್ಯಗ್ರಹ ಜೀವಿಗಳು ಭೂಮಿಗೆ ಇಳಿಯಲಿದ್ದಾರೆ. 
ಹೌದು, ಡಿಸೆಂಬರ್ 8ರಂದು ದೈತ್ಯ UFOನಿಂದ ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಇಳಿಯುತ್ತಾರೆ. ಅವರು  ಮನುಷ್ಯರೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಅನೋ ಅಲಾರಿಕ್ ಟಿಕ್ ಟಾಕ್‌ನಲ್ಲಿ ಕೆಲವು ಭವಿಷ್ಯ ನುಡಿದಿದ್ದಾನೆ. ಭಾರತದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಿದ್ದರೂ ಅನೇಕ ಜನರು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ವೀಡಿಯೊವನ್ನು ಡೌನ್‌ಲೋಡ್ ಮಾಡಿದ್ದಾರೆ.
ಈತ ಕೇವಲ ಏಲಿಯನ್ಸ್ ಬಗ್ಗೆ ಅಲ್ಲ, ಭೂಮಿಯ ಭವಿಷ್ಯವನ್ನು ಬದಲಾಯಿಸುವ ಒಟ್ಟು 4 ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾನೆ. ಆ ಐದು ವಿಷಯಗಳು ಮತ್ತವು ಸಂಭವಿಸುವ ದಿನಗಳು ಏನೆಂದು ಆತ ಹೇಳಿದ್ದಾನೆ ನೋಡೋಣ.

ಟೈಮ್ ಟ್ರಾವೆಲರ್‌ನಿಂದ ಊಹಿಸಲಾದ ದಿನಗಳು
ನವೆಂಬರ್ 30, 2022: ಜೇಮ್ಸ್ ವೆಬ್ ದೂರದರ್ಶಕವು ಭೂಮಿಯ ಪ್ರತಿಬಿಂಬಿತ ಆವೃತ್ತಿಯ ಗ್ರಹವನ್ನು ಕಂಡು ಹಿಡಿಯಲಿದೆ.
ಡಿಸೆಂಬರ್ 8, 2022: ಹೊಸ ರೀತಿಯ ಲೋಹಗಳು ಮತ್ತು ಅನ್ಯಲೋಕದ ಜಾತಿಗಳನ್ನು ಹೊಂದಿರುವ ದೊಡ್ಡ ಉಲ್ಕೆಯು ಭೂಮಿಗೆ ಅಪ್ಪಳಿಸುತ್ತದೆ.
ಫೆಬ್ರವರಿ 6, 2023: ಹದಿಹರೆಯದ 4 ಹುಡುಗರ ಗುಂಪು ಪ್ರಾಚೀನ ಅವಶೇಷಗಳನ್ನು ಕಂಡುಕೊಳ್ಳಲಿದೆ. ಮತ್ತು ಇದರಲ್ಲಿ ಇತರ ಗೆಲಕ್ಸಿಗಳಿಗೆ ಬಾಗಿಲು ತೆರೆಯುವ ಸಾಧನವನ್ನು ಕಂಡುಕೊಳ್ಳಲಿದೆ.
ಮಾರ್ಚ್ 23, 2023: ಮರಿಯಾನಾ ಕಂದಕವನ್ನು ಅನ್ವೇಷಿಸುವ ವಿಜ್ಞಾನಿಗಳ ತಂಡವು ಪ್ರಾಚೀನ ಪ್ರಭೇದಗಳನ್ನು ಕಂಡುಹಿಡಿಯಲಿದೆ.

ಮಲೆನಾಡಲ್ಲಿ ಮಳೆಗಾಲದಲ್ಲಿ ಮನೆಗೆ ಕಪ್ಪೆ ಬರೋದು ಕಾಮನ್, ಇದು ತರುತ್ತಾ ಲಕ್?

ಆದಾಗ್ಯೂ, ಸ್ವಯಂಘೋಷಿತ ಸಮಯ ಪ್ರಯಾಣಿಕ ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿರುವುದು ಇದೇ ಮೊದಲಲ್ಲ. ಕಳೆದ ಬಾರಿ ಆತ ಹೇಳಿದಂತೆ, ಮುಂದಿನ ವರ್ಷದಲ್ಲಿ 3 ಅಡಿ ಜೇಡ, 18 ಅಡಿ ಬೀಟ್ ಮತ್ತು 1 ಅಡಿ ಇರುವೆ ಆವಿಷ್ಕಾರವಾಗುತ್ತದೆ ಎಂದಿದ್ದಾನೆ. 

ಇವೆಲ್ಲ ನಿಜವಲ್ಲ ಎಂದು ಬಹುತೇಕರಿಗೆ ಮನಸ್ಸು ಹೇಳುತ್ತಿದ್ದರೂ, ಆ ದಿನವನ್ನು ಕುತೂಹಲದಿಂದ ಎದುರು ನೋಡುವಂತಾಗಿರುವುದು ಮಾತ್ರ ವಿಪರ್ಯಾಸ. 

click me!