Akshaya Tritiya: ರಾಶಿಗನುಗುಣವಾಗಿ ಖರೀದಿ ಮಾಡಿದ್ರೆ ಲಾಭ ನಿಮ್ದೆ

Published : Apr 19, 2023, 06:42 PM IST
Akshaya Tritiya: ರಾಶಿಗನುಗುಣವಾಗಿ ಖರೀದಿ ಮಾಡಿದ್ರೆ ಲಾಭ ನಿಮ್ದೆ

ಸಾರಾಂಶ

ಅಕ್ಷಯ ತೃತೀಯ ಹತ್ತಿರ ಬರ್ತಿದೆ. ಜನರು ಬಂಗಾರ, ಬೆಳ್ಳಿ ಖರೀದಿಗೆ ಹಣ ಹೊಂದಿಸ್ತಿದ್ದಾರೆ. ಈ ಶುಭ ದಿನ ನೀವೂ ಖರೀದಿ ಪ್ಲಾನ್ ಮಾಡಿದ್ದರೆ ರಾಶಿಗೆ ತಕ್ಕಂತೆ ಲೋಹ ಖರೀದಿ ಮಾಡೋದನ್ನು ಮರೆಯಬೇಡಿ.  

ಚಿನ್ನ – ಬೆಳ್ಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡಲು ಅಕ್ಷಯ ತೃತೀಯ ಅತ್ಯುತ್ತಮ ದಿನವೆಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಆ ದಿನ ಮನೆಗೆ ಲೋಹದ ರೂಪದಲ್ಲಿ ಲಕ್ಷ್ಮಿಯ ಆಗಮನವಾಗುತ್ತದೆ. ಅಕ್ಷಯ ತೃತೀಯದ ದಿನ ಖರೀದಿ ಮಾಡಿದ ಆಸ್ತಿ, ಸಂಪತ್ತಿನ ಪುಣ್ಯ ಫಲ ಎಂದಿಗೂ ಕ್ಷಯವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಈ ಬಾರಿ ಏಪ್ರಿಲ್ 22 ಶನಿವಾರ (Saturday) ದಂದು ಅಕ್ಷಯ ತೃತೀಯ (Akshaya Tritiya) ಆಚರಣೆ ಮಾಡಲಾಗ್ತಿದೆ. ಈ ದಿನ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ಬಂಗಾರ, ಬೆಳ್ಳಿಯನ್ನು ಖರೀದಿ ಮಾಡ್ತೀರಿ. ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ರಾಶಿಯ ಬಗ್ಗೆ ಗಮನ ನೀಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ರಾಶಿಗೆ ಅನುಗುಣವಾಗಿ ವಸ್ತುಗಳನ್ನು ಖರೀದಿ ಮಾಡಿದ್ರೆ ಹೆಚ್ಚಿನ ಫಲ ನಿಮಗೆ ಪ್ರಾಪ್ತಿಯಾಗುತ್ತದೆ. ನಾವಿಂದು ಅಕ್ಷಯ ತೃತೀಯದಂದು ರಾಶಿಗೆ ತಕ್ಕಂತೆ ನೀವು ಯಾವ ವಸ್ತು ಖರೀದಿ ಮಾಡ್ಬೇಕು ಎಂಬುದನ್ನು ಹೇಳ್ತೇವೆ.  

JUPITER TRANSIT 2023: ಮಿಥುನ, ತುಲಾ ರಾಶಿಗೆ ರಾಜಕೀಯದಲ್ಲಿ ಅಧಿಕಾರ, ಉಳಿದ ರಾಶಿಗಳ ಫಲವೇನು?

ರಾಶಿ ಪ್ರಕಾರ ಈ ವಸ್ತು ಖರೀದಿಸಿ : 

ಮೇಷ ರಾಶಿ :  ಮೇಷ ರಾಶಿಯ ಅಧಿಪತಿ ಮಂಗಳ. ಈ ರಾಶಿಯವರಿಗೆ ತಾಮ್ರ (Copper) ಮಂಗಳಕರವಾಗಿದೆ. ನೀವು ಅಕ್ಷಯ ತೃತೀಯದಂದು ತಾಮ್ರ ಅಥವಾ ಚಿನ್ನದ ವಸ್ತುವನ್ನು ಖರೀದಿಸುವುದು ಬಹಳ ಒಳ್ಳೆಯದು.  

ವೃಷಭ ರಾಶಿ : ವೃಷಭ ರಾಶಿಯ ಜನರ ಅಧಿಪತಿ ಶುಕ್ರ ಗ್ರಹ. ಶುಕ್ರನಿಗೆ ಇಷ್ಟವಾದ ಲೋಹ ಬೆಳ್ಳಿ. ನೀವು ಇಡೀ ವರ್ಷ ಸಂತೋಷವಾಗಿರಬೇಕೆಂದ್ರೆ ಅಕ್ಷಯ ತೃತೀಯದ ದಿನ ಬೆಳ್ಳಿ ವಸ್ತುವನ್ನು ಮನೆಗೆ ತನ್ನಿ. 

ಮಿಥುನ ರಾಶಿ : ಮಿಥುನ ರಾಶಿಯವರು ಅಕ್ಷಯ ತೃತೀಯದ ದಿನ ಕಂಚಿನ ಪಾತ್ರೆಗಳನ್ನು ಅಥವಾ ಯಾವುದೇ ಆಭರಣಗಳನ್ನು ಮನೆಗೆ ತೆಗೆದುಕೊಂಡು ಬರಬೇಕು. ಇದ್ರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.

Surya Grahan 2023 ಸಮಯದಲ್ಲಿ ಗರ್ಭಿಣಿಯರು ಈ 5 ಕೆಲಸ ಮಾಡಬಾರದು!

ಕರ್ಕ ರಾಶಿ : ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಕರ್ಕ ರಾಶಿಯವರು ಬೆಳ್ಳಿಯನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಸಿಂಹ ರಾಶಿ : ಸಿಂಹ ರಾಶಿಯ ಜನರು ಅಕ್ಷಯ ತೃತೀಯದ ದಿನ ವಸ್ತುಗಳನ್ನು ಖರೀದಿ ಮಾಡ್ತಿದ್ದರೆ ತಾಮ್ರ ಅಥವಾ ಚಿನ್ನ  ಖರೀದಿಸಬೇಕು. ಇದು ಮಂಗಳಕರ ಫಲವನ್ನು ನಿಮಗೆ ನೀಡುತ್ತದೆ. 

ಕನ್ಯಾ ರಾಶಿ : ಕನ್ಯಾ ರಾಶಿಯವರು ಜೀವನದಲ್ಲಿ ಉಳಿತನ್ನು ಬಯಸುವುದಾದ್ರೆ ಅಕ್ಷಯ ತೃತೀಯದ ದಿನ ಕಂಚಿನ ವಸ್ತುಗಳನ್ನು ಖರೀದಿಸಬೇಕು ಎನ್ನುತ್ತದೆ ಶಾಸ್ತ್ರ.

ತುಲಾ ರಾಶಿ : ತುಲಾ ರಾಶಿಯವರಿಗೆ  ಬೆಳ್ಳಿ ಒಳ್ಳೆಯದು. ಈ ರಾಶಿಯವರು ಅಕ್ಷಯ ತೃತೀಯದ ದಿನ ಬೆಳ್ಳಿ ಅಥವಾ ಬೆಳ್ಳಿಯಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಬೇಕು. ಇದ್ರಿಂದ ಶುಭವಾಗುತ್ತದೆ. 

ವೃಶ್ಚಿಕ ರಾಶಿ : ಈ ರಾಶಿಯವರು ಅಕ್ಷಯ ತೃತೀಯದಂದು ಯಾವುದಾದ್ರೂ ವಸ್ತು ಖರೀದಿಸ್ಲೇಬೇಕು. ವೃಶ್ಚಿಕ ರಾಶಿಯವರಿಗೆ ತಾಮ್ರವನ್ನು ಖರೀದಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ.  ಧನು ರಾಶಿ : ಧನು ರಾಶಿಯ ಜನರು ಹಿತ್ತಾಳೆ ಅಥವಾ ಚಿನ್ನವನ್ನು ಅಕ್ಷಯ ತೃತೀಯದ ದಿನ ಖರೀದಿಸಬೇಕು.

ಮಕರ ರಾಶಿ : ಮಕರ ರಾಶಿಯ ಜನರು ಅಕ್ಷಯ ತೃತೀಯದ ದಿನ ಸ್ಟೀಲ್ ಅಥವಾ ಕಬ್ಬಿಣದ ಪಾತ್ರೆಗಳನ್ನು ಖರೀದಿಸಬೇಕು.

ಕುಂಭ ರಾಶಿ : ಈ ರಾಶಿಯವರ ಅಧಿಪತಿ ಶನಿ. ಹಾಗಾಗಿ ಈ ರಾಶಿಯವರು ಸ್ಟೀಲ್ ಅಥವಾ ಕಬ್ಬಿಣದ ಪಾತ್ರೆಗಳನ್ನು ಖರೀದಿಸಬೇಕು.  

ಮೀನ ರಾಶಿ : ಅಕ್ಷಯ ತೃತೀಯದಂದು ಏನಾದ್ರೂ ಖರೀದಿ ಮಾಡ್ತೇವೆ ಎನ್ನುವ ಮೀನ ರಾಶಿಯವರು ಹಿತ್ತಾಳೆ ಅಥವಾ ಚಿನ್ನವನ್ನು ಖರೀದಿಸುವುದು ಒಳ್ಳೆಯದು. ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. 

PREV
Read more Articles on
click me!

Recommended Stories

ಮಂಗಳ-ಶನಿ ಘರ್ಷಣೆಯಿಂದ ಈ ರಾಶಿ ಅದೃಷ್ಟ ಬದಲು, ಕೈ ತುಂಬಾ ಹಣ.. ಹೆಜ್ಜೆ ಹೆಜ್ಜೆಗೂ ಯಶಸ್ಸು
ಈ ಅದ್ಭುತ ರಾಜಯೋಗಗಳು 2026 ರಲ್ಲಿ, ಈ ರಾಶಿಗೆ ಬೊಂಬಾಟ್‌ ಲಕ್‌, ಲಾಟರಿ