ವೈರಲ್ ಸಾಧ್ವಿ ತೆಗೆದುಕೊಂಡಿದ್ದು ಮಂತ್ರ ದೀಕ್ಷೆ ! ತಪ್ಪು ಮಾಡಿಲ್ವ ಸುಂದರಿ ಹರ್ಷ ರಿಚಾರಿಯಾ?

By Roopa Hegde  |  First Published Jan 16, 2025, 12:38 PM IST

ಸಾಧ್ವಿ ಬಟ್ಟೆ ಧರಿಸಿ ಮಹಾ ಕುಂಭ ಮೇಳದಲ್ಲಿ ವೈರಲ್ ಆಗಿರುವ ಹರ್ಷ ಚರ್ಚೆಯಲ್ಲಿದ್ದಾರೆ. ಅವರ ಬಗ್ಗೆ ಸಾಕಷ್ಟು ವಿಷ್ಯಗಳು ಹೊರಗೆ ಬರ್ತಿವೆ. ಈ ಮಧ್ಯೆ ಅವರು ದೀಕ್ಷೆ ಪಡೆದಿರುವ ಪೀಠದಿಂದ ಸ್ಪಷ್ಟನೆಯೊಂದು ಹೊರಬಿದ್ದಿದೆ. 
 


ಪ್ರಯಾಗ್‌ರಾಜ್ ಮಹಾಕುಂಭ (Prayagraj Mahakumbha) ದಲ್ಲಿ ಮಾಡೆಲ್ ಹಾಗೂ ನಿರೂಪಕಿ ಹರ್ಷ ರಿಚಾರಿಯಾ (harsha richhariya) ಸುದ್ದಿ ಮಾಡ್ತಿದ್ದಾರೆ. ಅಮೃತ ಸ್ನಾನದಲ್ಲಿ ಪಾಲ್ಗೊಂಡಿದ್ದ ಹರ್ಷ ರಿಚಾರಿಯಾ, ಮಹಾಮಂಡಲೇಶ್ವರ (Mahamandaleshwar)ದ ರಾಜ ರಥದ ಮೇಲೆ ಕುಳಿತುಕೊಂಡಿದ್ದರು. ಇದನ್ನು ಸ್ವಾಮಿ, ಸಂತರು ವಿರೋಧಿಸುತ್ತಿದ್ದಾರೆ.  ವಿವಾದ ಭುಗಿಲೆದ್ದಿದೆ. ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇದನ್ನು ಪ್ರಶ್ನೆ ಮಾಡಿದ್ದಾರೆ. ಮಹಾ ಕುಂಭದಲ್ಲಿ ಇಂತಹ ಸಂಪ್ರದಾಯವನ್ನು ಪ್ರಾರಂಭಿಸುವುದು ಸಂಪೂರ್ಣವಾಗಿ ತಪ್ಪು. ಇದು ವಿಕೃತ ಮನಸ್ಥಿತಿಯ ಪರಿಣಾಮ. ಮಹಾ ಕುಂಭಮೇಳದಲ್ಲಿ ಮುಖದ ಸೌಂದರ್ಯವನ್ನಲ್ಲ, ಹೃದಯದ ಸೌಂದರ್ಯವನ್ನ ನೋಡಬೇಕು ಎಂದು ಅವರು ಹೇಳಿದ್ದಾರೆ. ಅದಕ್ಕೀಗ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ರವೀಂದ್ರ ಪುರಿ ಸ್ಪಷ್ಟೀಕರಣ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ರವೀಂದ್ರ ಪುರಿ, ಹರ್ಷ ರಿಚಾರಿಯಾ ವಿಷ್ಯ ಕಳೆದ ಎರಡು, ಮೂರು ದಿನಗಳಿಂದ ಚರ್ಚೆಯಲ್ಲಿದೆ. ಹರ್ಷ ರಿಚಾರಿಯಾ ಉತ್ತರಾಖಂಡದವರು. ನಮ್ಮ ಅಖಾಡದ ಮಹಾಮಂಡಲೇಶ್ವರರಿಂದ ದೀಕ್ಷೆ ತೆಗೆದುಕೊಳ್ಳಲು ಬಂದಿದ್ದರು. ಅವರು ಒಬ್ಬ ಮಾಡೆಲ್. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಅವರು ಮಹಾ ಕುಂಭ ಮೇಳದಲ್ಲಿ ಕೇಸರಿ ಬಟ್ಟೆಯನ್ನು ಧರಿಸಿದ್ದರು. ಇದನ್ನು ವಿರೋಧಿಸಲು ಸಾಧ್ಯವಿಲ್ಲ. ಇದು ನಮ್ಮ ಸಂಪ್ರದಾಯ. ಸನಾತನ ಸಂಸ್ಥೆಯ ಯಾವುದೇ ಕಾರ್ಯಕ್ರಮವಿದ್ರೂ ಅದ್ರಲ್ಲಿ ಯುವಕರು ಭಾಗಿಯಾಗ್ತಾರೆ. ಆ ಸಂದರ್ಭದಲ್ಲಿ ಅವರು ಕೇಸರಿ ಬಟ್ಟೆಯನ್ನು ಧರಿಸ್ತಾರೆ. ಅವರು ಒಂದು ದಿನ, ಐದು ದಿನ ಇಲ್ಲವೆ ಏಳು ದಿನದವರೆಗೆ ಸಂತರಾಗ್ತಾರೆ. ನಂತ್ರ ತಮ್ಮ ಕೆಲಸಕ್ಕೆ ಮರಳುತ್ತಾರೆ. ಹರ್ಷ ಕೂಡ  ಮಹಾಮಂಡಲೇಶ್ವರರಿಂದ ದೀಕ್ಷೆ ಪಡೆದಿದ್ದರು. ಅವರು ಸನ್ಯಾಸಿನಿಯಾಗಿಲ್ಲ. ಅವರು ಸನ್ಯಾಸಿನಿ ಅಲ್ಲ. ಅವರಿಗೆ ಮಂತ್ರ ದೀಕ್ಷೆಯನ್ನು ಮಾತ್ರ ನೀಡಲಾಗಿದೆ. ಮಂತ್ರ ದೀಕ್ಷೆ ಪಡೆದಿದ್ದ ಅವರು ರಥದ ಮೇಲೆ ಕುಳಿತಿದ್ದರು. ಜನರು ಅದನ್ನೇ ತಪ್ಪಾಗಿ ತಿಳಿದುಕೊಂಡಿದ್ದಾರೆಂದು ರವೀಂದ್ರ ಪುರಿ ಹೇಳಿದ್ದಾರೆ. 

Tap to resize

Latest Videos

ಮಹಾ ಕುಂಭ ಮೇಳದ ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಿದ್ದು ಮುಸ್ಲಿಂ ರಾಷ್ಟ್ರಗಳು ! ಟಾಪ್ ಒಂದರಲ್ಲಿದೆ ಶತ್ರು ದೇಶ

ಮಂತ್ರ ದೀಕ್ಷೆಗೂ ಸನ್ಯಾಸ ದೀಕ್ಷೆಗೂ ವ್ಯತ್ಯಾಸವಿದೆ ಎಂದ ಅವರು, ಮಂತ್ರ ದೀಕ್ಷೆ ಎಂದ್ರೇನು ಎಂಬುದನ್ನು ವಿವರಿಸಿದ್ದಾರೆ. ಮಂತ್ರ ದೀಕ್ಷೆಯಲ್ಲಿ ಕೆಲ ಮಂತ್ರಗಳನ್ನು ಅವರ ಕಿವಿಯಲ್ಲಿ ಹೇಳಲಾಗುತ್ತದೆ. ಉದಾಹರಣೆಗೆ ಓಂ ನಮಃ ಶಿವಾಯ ಮಂತ್ರವನ್ನು ಕಿವಿಯಲ್ಲಿ ಹೇಳಲಾಗುತ್ತದೆ. ದೀಕ್ಷೆ ಪಡೆದವರು ತಮ್ಮ ಅನುಕೂಲಕ್ಕೆ ತಕ್ಕಂತೆ ಒಂದಿಷ್ಟು ದಿನ ಸನ್ಯಾಸಿಯಂತೆ ಜೀವನ ನಡೆಸ್ತಾರೆ. 

ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿದ್ದ ಹರ್ಷ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ಮೊದಲು ವೈರಲ್ ಆಗಿತ್ತು. ಅದ್ರಲ್ಲಿ ಅವರು, ಶಾಂತಿಗಾಗಿ ಸನ್ಯಾಸಿಯಾದೆ ಎಂದಿದ್ದರು. ಅವರ ಮೂಲ ಕೆದಕುತ್ತಾ ಹೋದಂತೆ ಅವರು ಸನ್ಯಾಸಿಯಲ್ಲ ಮಾಡೆಲ್ ಎಂಬುದು ಹೊರಗೆ ಬಂದಿತ್ತು. ಇದು ಸಾಕಷ್ಟು ವಿವಾದವನ್ನು ಹುಟ್ಟು ಹಾಕಿದೆ. ಈಗ್ಲೂ ಹರ್ಷ ಟ್ರೋಲ್ ಆಗ್ತಿದ್ದಾರೆ. ಈ ಮಧ್ಯೆ ಹರ್ಷ ತಂದೆ, ಮಗಳ ಮದುವೆ ಬಗ್ಗೆ ಹೇಳಿದ್ದಾರೆ. ವರನಿಗಾಗಿ ಹುಡುಕಾಟ ನಡೆದಿದ್ದು, ಶೀಘ್ರವೇ ಹರ್ಷ ಮದುವೆ ನಡೆಯಲಿದೆ ಎಂದು ಪಾಲಕರು ಹೇಳಿದ್ದಾರೆ. ಹರ್ಷ ಸನ್ಯಾಸಿಯಾಗಿಲ್ಲ. ಧರ್ಮ ಮತ್ತು ಆಧ್ಯಾತ್ಮದ ಮೇಲೆ ಆಕೆಗೆ ಒಲವಿದೆ ಎಂದು ಹರ್ಷ ತಾಯಿ ಸ್ಪಷ್ಟಪಡಿಸಿದ್ದಾರೆ.

ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?

ಹರ್ಷ ತಂದೆ ತಾಯಿ  ಭೋಪಾಲ್ ನಲ್ಲಿ ವಾಸವಾಗಿದ್ದಾರೆ. ತಂದೆ ಕೆಲಸ ಬಿಟ್ಟಿದ್ರೆ ತಾಯಿ ಬುಟಿಕ್ ನಡೆಸ್ತಾರೆ. ಮಾಡೆಲಿಂಗ್ ಮೂಲಕ ತಮ್ಮ ವೃತ್ತಿ ಶುರು ಮಾಡಿದ್ದ ಹರ್ಷ ಆರು ವರ್ಷಗಳ ನಂತ್ರ ಆಧ್ಯಾತ್ಮಿಕದತ್ತ ಒಲವು ತೋರಿಸಿದ್ದರು. ನಿರೂಪಕಿಯಾಗಿ ಕೆಲಸ ಮಾಡ್ತಿದ್ದ ಹರ್ಷ, ಕಳೆದ ಎರಡು ವರ್ಷಗಳಿಂದ ಮಾಡೆಲಿಂಗ್ ಮತ್ತು ನಿರೂಪಣೆಯಿಂದ ದೂರವಿದ್ದಾರೆ. ಅಪರೂಪಕ್ಕೆ ನಿರೂಪಣೆ ಮಾಡ್ತಿರೋದಾಗಿ ಅವರು ಹೇಳಿದ್ದಾರೆ. 
 

click me!