ಕೈಗೆ ಹೀಗ್ ದಾರ ಕಟ್ಟಿದ್ರೆ ಬದಲಾಗುತ್ತೆ ಲಕ್, ಇಷ್ಟು ದಿನವಾದ್ಮೇಲೆ ಬಿಚ್ಚೋದು ಮರಿಬೇಡಿ

By Roopa Hegde  |  First Published Jan 16, 2025, 10:56 AM IST

ಶುಭ ಎನ್ನುವ ಕಾರಣಕ್ಕೆ ಜನರು ಮಣಿಕಟ್ಟಿಗೆ ದಾರ ಕಟ್ಟಿಕೊಳ್ತಾರೆ. ಆದ್ರೆ ಈ ದಾರವನ್ನು ಹೇಗೆ ಕಟ್ಟಿಕೊಳ್ಳಬೇಕು, ಎಷ್ಟು ದಿನ ಕೈನಲ್ಲಿ ಇಟ್ಟುಕೊಳ್ಳಬೇಕೆಂಬುದು ಅವರಿಗೆ ತಿಳಿದಿಲ್ಲ. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ.  
 


ದೇವಸ್ಥಾನ (Temple) ಕ್ಕೆ ಹೋದಾಗ ಅಥವಾ ಪವಿತ್ರ ಸ್ಥಳದಲ್ಲಿ ಸಿಗುವ ಕಲವಾ (Kalava) ಅಂದ್ರೆ ಕೆಂಪು ಅಥವಾ ಕಪ್ಪು ಬಣ್ಣದ ದಾರವನ್ನು ಬಹುತೇಕರು ಮಣಿಕಟ್ಟಿಗೆ ಕಟ್ಟಿಕೊಳ್ತಾರೆ. ದೃಷ್ಟಿ ಬೀಳದಿರಲಿ ಎನ್ನುವ ಕಾರಣಕ್ಕೆ ಕತ್ತು ಮತ್ತು ಕೈಗೆ ಕಟ್ಟಿಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಹಿಂದೂ ಧರ್ಮ (Hinduism)ದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಇದನ್ನು ಕಲವಾ, ರಕ್ಷಣೆಯ ದಾರ, ದೃಷ್ಟಿ ದಾರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯಿಂದ ನಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಆತ್ಮವಿಶ್ವಾಸ ಹೆಚ್ಚಿಸುವುದಲ್ಲದೆ ಅದೃಷ್ಟವನ್ನು ಬದಲಿಸುವ ಶಕ್ತಿ ಇದಕ್ಕಿದೆ. ಇದ್ರಿಂದ ಆಗುವ ಲಾಭವೇನು, ಅದನ್ನು ಹೇಗೆ ಕಟ್ಟಿಕೊಳ್ಬೇಕು ಹಾಗೆ ಅದನ್ನು ಯಾವಾಗ ತೆಗೆಯಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. 

ರಕ್ಷಾ ಸೂತ್ರ (Raksha Sutra) ಕಟ್ಟೋದು ಹೇಗೆ? : ಹಿಂದೂ ಧರ್ಮದಲ್ಲಿ ರಕ್ಷಾ ಸೂತ್ರವನ್ನು ಕಟ್ಟಲು ಪುರುಷರು ಹಾಗೂ ಮಹಿಳೆಯರಿಗೆ ಬೇರೆ ಬೇರೆ ನಿಯಮಗಳಿವೆ. ಪುರುಷರಿಗೆ ಬಲಗೈ ಮಣಿಕಟ್ಟಿಗೆ ದಾರವನ್ನು ಕಟ್ಟಬೇಕು. ಅವಿವಾಹಿತ ಪುರುಷರು ಕೂಡ ಬಲ ಕೈಗೆ ರಕ್ಷಾ ಸೂತ್ರವನ್ನು ಕಟ್ಟಬೇಕು. ವಿವಾಹಿತ ಮಹಿಳೆಯರು ತಮ್ಮ ಎಡಗೈಗೆ ದಾರವನ್ನು ಕಟ್ಟಿಕೊಳ್ಳಬೇಕು. ದಾರ ಕಟ್ಟುವ ಮೊದಲು ಕೈಗಳನ್ನು ಮುಷ್ಟಿ ಮಾಡಿಕೊಳ್ಳಬೇಕು. ಹಾಗೆಯೇ ಇನ್ನೊಂದು ಕೈಯನ್ನು ತಲೆ ಮೇಲೆ ಇಟ್ಟುಕೊಳ್ಳಬೇಕು. ದಾರವನ್ನು ಕೈಗೆ ಮೂರು ಬಾರಿ ಮಾತ್ರ ಸುತ್ತಬೇಕು. ಹಿಂದೂ ಧರ್ಮದ ಪ್ರಕಾರ ನೀವು ಮೂರು ಬಾರಿ ಅಲ್ಲದೆ ಐದು ಅಥವಾ ಏಳು ಬಾರಿ ದಾರವನ್ನು ಕೈಗೆ ಕಟ್ಟಬಹುದು. ಬರಿ ಕೈನಲ್ಲಿ ನೀವು ದಾರವನ್ನು ಕಟ್ಟಿಕೊಳ್ಳಬೇಡಿ. ನಾಣ್ಯವನ್ನು ಕೈನಲ್ಲಿ ಇಟ್ಟು, ಕೈಯನ್ನು ಮುಷ್ಟಿ ಕಟ್ಟಿ ನೀವು ದಾರವನ್ನು ಕಟ್ಟಿಕೊಳ್ಳಬೇಕು. 

Tap to resize

Latest Videos

ಮಾರ್ಚ್ 14 ರ ಮೊದಲು ಈ 3 ರಾಶಿಗೆ ಅದೃಷ್ಟ, ಶ್ರೀಮಂತಿಕೆ, ಬುಧ ಸೂರ್ಯ 3 ಬಾರಿ ಸಂಯೋಗ

ರಕ್ಷಾ ಸೂತ್ರವನ್ನು ಯಾವಾಗ ತೆಗೆಯಬೇಕು? : ಕಲವಾ ಕಟ್ಟಿಕೊಳ್ಳಲು ಇರುವಷ್ಟೆ ನಿಯಮ ಅದನ್ನು ತೆಗೆಯುವಾಗ್ಲೂ ಇದೆ. ನಿಮಗೆ ಇಷ್ಟ ಬಂದಾಗ ಕಲವಾ ತೆಗೆಯಲು ಸಾಧ್ಯವಿಲ್ಲ. ಒಮ್ಮೆ ಕಟ್ಟಿದ ದಾರವನ್ನು ಕೆಲವರು ಬಹಳ ಸಮಯ ಹಾಗೆ ಇಟ್ಟುಕೊಳ್ತಾರೆ. ವರ್ಷಪೂರ್ತಿ ನೀವು ಈ ದಾರವನ್ನು ಕೈನಲ್ಲಿ ಇಟ್ಟುಕೊಳ್ಳುವಂತಿಲ್ಲ. ಧಾರ್ಮಿಕ ನಂಬಿಕೆ ಪ್ರಕಾರ 21 ದಿನಗಳ ನಂತ್ರ ಕಲವಾದ ಸಕಾರಾತ್ಮಕ ಶಕ್ತಿ ಕಡಿಮೆಯಾಗಿರುತ್ತದೆ. ಅದನ್ನು ಇನ್ನಷ್ಟು ದಿನ ನೀವು ಕಟ್ಟಿಕೊಳ್ಳೋದ್ರಿಂದ ಲಾಭಕ್ಕಿಂತ ನಷ್ಟ ಹೆಚ್ಚು. ಅದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅದರ ಬಣ್ಣ ಕೂಡ ಮಾಸಿರುತ್ತದೆ. ಅದರ ಶಕ್ತಿ ಕಡಿಮೆ ಆಗುತ್ತದೆ. ಹಾಗಾಗಿ 21 ದಿನಗಳ ನಂತ್ರ ನೀವು ದಾರವನ್ನು ತೆಗೆಯಬೇಕು. ಅದನ್ನು ತೆಗೆದ ನಂತ್ರ ಹರಿಯುವ ಪವಿತ್ರ ನದಿಗೆ ನೀವು ಅದನ್ನು ಹಾಕ್ಬೇಕು. ಹರಿಯುವ ನದಿ ಇಲ್ಲ ಎಂದಾದ್ರೆ ನೀವು ಪವಿತ್ರ ಗಿಡದ ಕೆಳಗೆ ಇದನ್ನು ಹಾಕಬೇಕು. ನಂತ್ರ ಮತ್ತೆ ನೀವು ಹೊಸ ದಾರವನ್ನು ಕಟ್ಟಿಕೊಳ್ಳಬಹುದು. 

ಈ ದಿನಾಂಕದಲ್ಲಿ ಹುಟ್ಟಿರುವ ಜನರು ಬೇರೆಯವರ ಮನಸ್ಸು ಕೆಡಿಸುವಲ್ಲಿ ಮುಂದು

ಕಲವಾ ಕಟ್ಟುವುದರಿಂದ ಆಗುವ ಲಾಭಗಳು : ನಾಡಿ ಬಿಂದುವಿನಲ್ಲಿ ದಾರ ಕಟ್ಟುವುದರಿಂದ ಮನುಷ್ಯನ ಶಾರೀರಿಕ ಮತ್ತು ಆಧ್ಯಾತ್ಮಕ ಶಕ್ತಿಯನ್ನು ಪಡೆಯುತ್ತಾನೆ. ಇದ್ರಿಂದ ಧ್ಯಾನ ಹಾಗೂ ಪ್ರಾರ್ಥನೆಯಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ.  ಮೊದಲೇ ಹೇಳಿದಂತೆ ಇದ್ರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುವುದಲ್ಲದೆ, ದುರಾದೃಷ್ಟ ನಮ್ಮಿಂದ ದೂರವಾಗುತ್ತದೆ. ಇದ್ರಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ. ಮಧುಮೇಹ, ಬಿಪಿ, ಹೃದಯ ಸಂಬಂಧಿ ರೋಗಗಳಿಂದ ನಮ್ಮ ದೇಹವನ್ನು ರಕ್ಷಿಸುವ ಕೆಲಸವನ್ನು ಈ ದಾರ ಮಾಡುತ್ತದೆ. ಪಿತ್ತ ಮತ್ತು ಕಫದ ಸಮಸ್ಯೆ ಇರುವವರು ಕೂಡ ಇದನ್ನು ಕಟ್ಟಿಕೊಳ್ಳಬೇಕು. 

click me!