ಮಹಾಕಾಲ ಕಾರಿಡಾರ್: ಮೊದಲ ಬಾರಿ ಮಂಗಳವಾರ ಉದ್ಘಾಟನೆ ಮಾಡಿದ ಮೋದಿ

By Suvarna NewsFirst Published Oct 12, 2022, 9:18 AM IST
Highlights

ಇದೇ ಮೊದಲ ಬಾರಿ ನರೇಂದ್ರ ಮೋದಿ ಮಂಗಳವಾರ ಅಧ್ಬುತ ಕೆಲಸ ಮಾಡಿದ್ದಾರೆ. ಈ ಮಂಗಳವಾರದ ಹಿಂದೆ ಒಂದು ವಿಶೇಷತೆಯಿದೆ. ಕಾಶಿ ವಿಶ್ವನಾಥ ಕಾರಿಡಾರ್ ಹಾಗೂ ಮಹಾಕಾಲೇಶ್ವರ ಕಾರಿಡಾರ್ ಉದ್ಘಾಟನೆ ಹಿಂದೆಯೂ ಒಂದು ಅಚ್ಚರಿಯಿದೆ.
 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಮಧ್ಯಪ್ರದೇಶದ ಮಹಾಕಾಲೇಶ್ವರ ಕಾರಿಡಾರ್ ಉದ್ಘಾಟನೆ ಮಾಡಿದ್ದಾರೆ. ನರೇಂದ್ರ ಮೋದಿ ಮಾಡುವ ಪ್ರತಿಯೊಂದು ಕೆಲಸದಲ್ಲೂ ವಿಶೇಷವಿರುತ್ತದೆ. ಮಂಗಳವಾರ ನರೇಂದ್ರ ಮೋದಿ ಮಹಾಕಾಲೇಶ್ವರ ಕಾರಿಡಾರ್ ಉದ್ಘಾಟನೆ ಮಾಡಿದ್ರಲ್ಲೂ ಎರಡು ವಿಶೇಷವನ್ನು ನಾವು ನೋಡ್ಬಹುದು. ಇದು ಆಧ್ಯಾತ್ಮಿಕ ಮತ್ತು ಧರ್ಮದ ದೃಷ್ಟಿಯಿಂದ ತುಂಬಾ ಭಿನ್ನವಾಗಿದೆ. 

`ಮಂಗಳವಾರ’ ಮಹಾಕಾಲ (Mahakala) ಕಾರಿಡಾರ್ ಲೋಕಾರ್ಪಣೆ : ಮಹಾಕಾಲ ಕಾರಿಡಾರನ್ನು ಉದ್ಘಾಟನೆ (Inauguration) ಮಾಡಲು ನರೇಂದ್ರ ಮೋದಿ ಮಂಗಳವಾರ ಆಯ್ಕೆ ಮಾಡಿಕೊಂಡಿದ್ದು ಮೊದಲ ವಿಶೇಷ ಎನ್ನಬಹದು. ಅವರು ಇಲ್ಲಿಯವರೆಗೆ ಯಾವುದೇ ಐತಿಹಾಸಿಕ, ಧಾರ್ಮಿಕ, ಸಕಾರಾತ್ಮಕ ಮತ್ತು ಮಹತ್ವದ ನಿರ್ಧಾರಗಳನ್ನು ಮಂಗಳವಾರ ತೆಗೆದುಕೊಂಡಿಲ್ಲ ಎಂಬುದನ್ನು ನೀವು ಗಮನಿಸಬಹುದು.   ನರೇಂದ್ರ ಮೋದಿ (Narendra Modi ) ಸೋಮವಾರದಂದು ಬಹುತೇಕ ಕೆಲಸಗಳನ್ನು ಮಾಡ್ತಾರೆ.  ಪ್ರಥಮ ಬಾರಿಗೆ ವಿಶ್ವವಿಖ್ಯಾತ ಧಾರ್ಮಿಕ ಸ್ಥಳದ ಕಾರಿಡಾರ್ ಉದ್ಘಾಟನೆಯನ್ನು ನರೇಂದ್ರ ಮೋದಿ  ಮಂಗಳವಾರ ಮಾಡಿದ್ದಾರೆ.

Latest Videos

ಉಜ್ಜಯಿನಿಯನ್ನು ಮಂಗಳನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಮಂಗಳವಾರವೇ ಮೋದಿ ಉಜ್ಜಯಿನಿ (Ujjain) ತಲುಪಿದ್ದರು. ಈ ದಿನ ಚಂದ್ರ  ಮೇಷ ರಾಶಿಯಲ್ಲಿದ್ದ. ಚಂದ್ರನ ಅಧಿಪತಿ ಮಂಗಳ. ಮೋದಿಯವರ ರಾಶಿ ವೃಶ್ಚಿಕ ರಾಶಿ. ಅದರ ಅಧಿಪತಿಯೂ ಮಂಗಳ. ನರೇಂದ್ರ ಮೋದಿ ಜಾತಕದ ಲಗ್ನವೂ ವೃಶ್ಚಿಕ ರಾಶಿಯೇ ಆಗಿದ್ದು ಅದರ ಒಡೆಯನೂ ಮಂಗಳ.

ನರೇಂದ್ರ ಮೋದಿಗೆ ಸಂಬಂಧಿಸಿದ ದಿನಾಂಕ : 

ನರೇಂದ್ರ ಮೋದಿ ಜನನ (Birth) : ಸೆಪ್ಟೆಂಬರ್ 17,1950 ಭಾನುವಾರ

ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ : ಅಕ್ಟೋಬರ್ 7,2001,ಭಾನುವಾರ

ಮೊದಲ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ: ಮೇ. 26,2014,ಸೋಮವಾರ

ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ಲೋಕಾರ್ಪಣೆ : ಅಕ್ಟೋಬರ್ 31,2018 ಬುಧವಾರ

ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ : ಮೇ 26, 2019 ಭಾನುವಾರ

ರಾಮ ಮಂದಿರ ಶಿಲಾನ್ಯಾಸ : ಆಗಸ್ಟ್ 5,2020, ಬುಧವಾರ

ಕಾಶಿ ವಿಶ್ವನಾಥ (Kashi Vishwanath) ಕಾರಿಡಾರ್ ಲೋಕಾರ್ಪಣೆ : ಡಿಸೆಂಬರ್ 13,2021, ಸೋಮವಾರ.

ಮಹಾಕಾಲ ಕಾರಿಡಾರ್ ಲೋಕಾಪರ್ಣೆಯಲ್ಲಿ ಎರಡನೇ ವಿಶೇಷ : ಈಗಾಗಲೇ ನರೇಂದ್ರ ಮೋದಿ, ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಿದ್ದಾರೆ. ಮಂಗಳವಾರ ಮಹಾಕಾಲ ಕಾರಿಡಾರ್ ಉದ್ಘಾಟನೆ ಮಾಡಿದ್ದಾರೆ. ಮಹಾಕಾಲ್ ಮತ್ತು ಕಾಶಿ ವಿಶ್ವನಾಥ ಇಬ್ಬರನ್ನೂ ಜಗತ್ತು ಮತ್ತು ಭೂಮಿಯ ಅಧಿಪತಿಗಳೆಂದು ಪರಿಗಣಿಸಲಾಗಿದೆ. ದೇಶದ 12 ಜ್ಯೋತಿರ್ಲಿಂಗಗಳ ಪೈಕಿ ಜ್ಯೋತಿರ್ಲಿಂಗದ ವಿಸ್ತರಣೆಗೆ ಪ್ರಧಾನಿ ಮೋದಿ ಈ ಎರಡನ್ನು ಮೊದಲು ಆಯ್ಕೆ ಮಾಡಿರುವುದು ಕಾಕತಾಳೀಯ. ಕಾಶಿ ವಿಶ್ವನಾಥ್ ಜ್ಯೋತಿರ್ಲಿಂಗವು ಉತ್ತರಾಭಿಮುಖವಾಗಿದೆ. ಇದು ದೇವರುಗಳ ದಿಕ್ಕು. ಅದೇನೆಂದರೆ ಕಾಶಿ ವಿಶ್ವನಾಥನು ಲೋಕದಲ್ಲಿರುವ ದೇವರುಗಳ ಭದ್ರತೆಯನ್ನು ನೋಡಿಕೊಳ್ಳುತ್ತಾನೆ ಎಂದು ನಂಬಲಾಗಿದೆ. ಇದರ ವಿಸ್ತರಣೆಯನ್ನು ನರೇಂದ್ರ ಮೋದಿ ಮೊದಲು ಮಾಡಿದ್ರು.

Deepavali Vastu Tips: ಮನೆಯನ್ನು ಹೀಗೆ ಕ್ಲೀನ್ ಮಾಡಿದ್ರೆ ಲಕ್ಷ್ಮೀ ಕೃಪೆ ನಿಮ್ಮ ಮೇಲಿರುತ್ತೆ!

ಇನ್ನು ಮಹಾಕಾಲದ ಬಗ್ಗೆ ಹೇಳೋದಾದ್ರೆ ದಕ್ಷಿಣ ಮುಖವಾಗಿರುವ ಒಂದೇ ಒಂದು ಜ್ಯೋತಿರ್ಲಿಂಗವೆಂದ್ರೆ ಅದು ಮಹಾಕಾಲ. ದಕ್ಷಿಣವನ್ನು ಎಲ್ಲರಿಗೂ ತಿಳಿದಂತೆ ಅಸುರರ ದಿಕ್ಕು ಎನ್ನಲಾಗುತ್ತದೆ. ಮಹಾಕಾಲ ರಾಕ್ಷಸರ ಮೇಲೆ ಕಣ್ಣಿಡುವ ಭೂಮಿಯ ಅಧಿಪತಿ.  ಅಂದ್ರೆ ರಾಕ್ಷಸರಿಂದ ರಕ್ಷಣೆ ನೀಡುವ ದೇವರು. 

ASTROLOGY TIPS : ನರಕ ಚತುರ್ದಶಿ ದಿನ ಈ ಉಪಾಯ ಮಾಡಿ ಚಮತ್ಕಾರ ನೋಡಿ

ನರೇಂದ್ರ ಮೋದಿ ದೇವರನ್ನು ನೋಡಿಕೊಳ್ಳುವ ಹಾಗೂ ರಾಕ್ಷಸರಿಂದ ರಕ್ಷಿಸುವ ಎರಡು ದೇವರ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷ. ನರೇಂದ್ರ ಮೋದಿ  ಮಾಡಿದ ಕೆಲಸ ಅಧ್ಬುತವಾಗಿದೆ. ಪ್ರಕೃತಿ ಇದನ್ನೇ ಬಯಸಿದೆ. ಇಲ್ಲವೆಂದ್ರೆ ಬೇರೆ ಯಾವುದಾದ್ರೂ ಭವ್ಯವಾದ ಕಾರಿಡಾರ್ ಉದ್ಘಾಟನೆ ಮಾಡಬಹುದಿತ್ತು. ಆದ್ರೆ ಪ್ರಕೃತಿ ಬಯಸಿದ್ದನ್ನು ಪಡೆದಿದ್ದಾಳೆಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. 

click me!