Udupi; ಕಲ್ಮಾಡಿಯ ವೆಲಂಕಣಿ ಚರ್ಚ್ ಗೆ ಪುಣ್ಯಕ್ಷೇತ್ರ ದ ಮಾನ್ಯತೆ

By Gowthami K  |  First Published Aug 16, 2022, 6:21 PM IST

ವಿಶ್ವ ಪ್ರಸಿದ್ದ ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಅಧಿಕೃತ ಪುಣ್ಯಕ್ಷೇತ್ರವೆಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಅತಿ ವಂದನೀಯ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋರವರು ವಿದ್ಯುಕ್ತವಾಗಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಘೋಷಿಸಿದರು.


ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್ 

ಉಡುಪಿ (ಆ.16): ವಿಶ್ವ ಪ್ರಸಿದ್ದ ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಅಧಿಕೃತ ಪುಣ್ಯಕ್ಷೇತ್ರವೆಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಅತಿ ವಂದನೀಯ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋರವರು ವಿದ್ಯುಕ್ತವಾಗಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಘೋಷಿಸಿದರು. ಈ ಸಂಧರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳಾದ ಫಾದರ್ ಸ್ಟ್ಯಾನಿ ಬಿ ಲೋಬೋ ಅವರು ಪುಣ್ಯಕ್ಷೇತ್ರದ ಘೋಷಣೆ ಪತ್ರವನ್ನು ವಾಚಿಸಿದರು. ಈ ಸಂಧರ್ಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋ ರವರು ದಿವ್ಯ ಬಲಿಪೂಜೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಬಲಿಪೂಜೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ಫ್ರಾನ್ಸಿಸ್ ಸೆರಾವೋ, ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ಹೆನ್ರಿ ಡಿಸೋಜ, ಕಲ್ಬುರ್ಗಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ರಾಬರ್ಟ್ ಮಿರಾಂದಾ, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಲಾರೆನ್ಸ್ ಮುಕ್ಕುಜಿ, ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಾಯಿಲ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಸ್ಟಾನಿ ಬಿ ಲೋಬೋ, , ಫಾದರ್ ಚಾರ್ಲ್ಸ್ ಮೆನೇಜಸ್, ಕಲ್ಮಾಡಿ ಸ್ಟೆಲ್ಲಾ ಮಾರಿಸ್ ದೇವಾಲಯದ ಪ್ರಧಾನ ಧರ್ಮಗುರುಗಳಾದ ಫಾದರ್ ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರುಗಳಾದ ಫಾದರ್. ಮೆಲ್ವಿಲ್ ರೊಯ್ ಲೋಬೋ, ಮತ್ತು ಧರ್ಮಪ್ರಾಂತ್ಯದ ಇತರ ಧರ್ಮಗುರುಗಳು ಕಲ್ಮಾಡಿಯಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Tap to resize

Latest Videos

ಇದೇ ಸಂಧರ್ಭದಲ್ಲಿ ಸ್ಟೆಲ್ಲಾ ಮಾರಿಸ್ ದೇವಾಲಯದ ಸುವರ್ಣ ಮಹೋತ್ಸವದ ಸನ್ಮಾನ ಸಮಾರಂಭ ಕೂಡಾ ನಡೆಯಿತು.
ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಹಾಗೂ ಕಳೆದ 50 ವರ್ಷಗಳಲ್ಲಿ ಸೇವೆ ಸಲ್ಲಿಸಿದ ದೇವಾಲಯದ ಪಾಲನ ಮಂಡಳಿಯ ಉಪಾಧ್ಯಕ್ಷ್ಯ ಕಾರ್ಯದರ್ಶಿ ಮತ್ತು ವಾರ್ಡಿನ ಗುರಿಕಾರರನ್ನು ಸನ್ಮಾನಿಸಲಾಯಿತು. ಸುವರ್ಣ ಮಹೋತ್ಸವದ ಶಾಶ್ವತ ಯೋಜನೆಯಾಗಿ ಆರೋಗ್ಯ ನಿಧಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾಕ್ಟರ್ ಜೆರಾಲ್ಡ್ ಐಸಾಕ್ ಲೋಬೋ ಚಾಲನೆ ಯನ್ನು ನೀಡಿದರು. ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಮಂಗಳೂರು ಧರ್ಮಪ್ರಾಂತ್ಯದ
ಧರ್ಮಾಧ್ಯಕ್ಷರಾದ ಡಾಕ್ಟರ್ ಪೀಟರ್ ಪೌಲ್ ಸಲ್ಡಾನ ಬಿಡುಗಡೆಗೊಳಿಸಿದರು. 

ಯಲಂಕಿಣಿ ಮಾತೆಯ ವಿಶೇಷತೆ ಏನು ಗೊತ್ತಾ?
ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ ಕರಾವಳಿ ಕರ್ನಾಟಕದ ಭಕ್ತರಿಗೆ ಚಿರಪರಿಚಿತ ಮತ್ತು ಎಲ್ಲಾ ಧರ್ಮದ ಜನರು ಭೇಟಿ ನೀಡುವ ಸ್ಥಳವಾಗಿದೆ. ಮಲ್ಪೆ - ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಬಲ ಭಾಗದಲ್ಲಿರುವ ಚರ್ಚ್ ರಾಷ್ಟ್ರೀಯ ಹೆದ್ದಾರಿ 66 (ಕರಾವಳಿ ಬೈ-ಪಾಸ್) ರಿ೦ದ ಕೇವಲ 3 ಕಿಮೀ ದೂರದಲ್ಲಿದೆ.

ಅರಬ್ಬಿ ಸಮುದ್ರಕ್ಕೆ ಸಮೀಪದಲ್ಲಿರುವ ಈ ಚರ್ಚ್‌ನನ್ನು 'ಸ್ಟೆಲ್ಲಾ ಮಾರಿಸ್' ಅಂದರೆ 'ಸಮುದ್ರದ ತಾರೆ' ಎಂದು  ಕರೆಯಯುತ್ತಾರೆ. ಮೊದಲು, ಕಲ್ಮಾಡಿಯ ಜನರು ತಮ್ಮ ಆಧ್ಯಾತ್ಮಿಕ ಅಗತ್ಯತೆಗಳಿಗಾಗಿ ತೊಟ್ಟಂ ಅಥವಾ ಉಡುಪಿಯ ಚರ್ಚಿಗೆ ಭೇಟಿ ನೀಡಬೇಕಾಗಿತ್ತು. ಹೀಗಾಗಿ ಕಲ್ಮಾಡಿಯ ಜನರ ಧಾರ್ಮಿಕ ಅಗತ್ಯತೆಗಳಿಗಾಗಿ ಕಲ್ಮಾಡಿಯಲ್ಲಿಯೇ ಒಂದು ಪುಟ್ಟ ಪ್ರಾರ್ಥನಾ ಮಂದಿರದ ಸ್ಥಾಪನೆಯ ಅಗತ್ಯತೆ ಕಂಡು ಬಂದಿತು. ಪ್ರಾರ್ಥನ ಮಂದಿರದ ಅಗತ್ಯತೆಯನ್ನು ಅರಿತು ಕಲ್ಮಾಡಿಯವರೇ ಆದ ಧರ್ಮಗುರು ಚಾರ್ಲ್ಸ್ ಡಿಸೋಜಾ ರವರು ಊರ ಜನರ ಸಹಕಾರದಿಂದ ಕಲ್ಮಾಡಿಯಲ್ಲಿ ಮೊತ್ತ ಮೊದಲ ದೇವಾಲಯ ನಿರ್ಮಾಣವಾಯಿತು. 

ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್‌ನ ಹೊಸ ಕಟ್ಟಡವನ್ನು ದೋಣಿಯ ಆಕಾರದಲ್ಲಿ ನಿರ್ಮಿಸಲು ಪ್ರಾರಂಭಿಸಿದರು ಮತ್ತು ದೀಪಸ್ತ೦ಭ ಆಕಾರದಲ್ಲಿ ಗಂಟೆ ಗೋಪುರವನ್ನು ಸಹ ನಿರ್ಮಿಸಿದರು. ಜನವರಿ 6, 2018 ರಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಉಡುಪಿಯ ಬಿಷಪ್ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ, ಮಂಗಳೂರು ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಶಿವಮೊಗ್ಗದ ಬಿಷಪ್ ಅತೀ ವಂದನೀಯ ಡಾ ಫ್ರಾನ್ಸಿಸ್ ಸೆರಾವೋ, ಗುಲ್ಬರ್ಗದ ಬಿಷಪ್ ಡಾ.ರಾಬರ್ಟ್ ಮಿರಾಂದ ಅವರ ಉಪಸ್ಥಿತಿಯಲ್ಲಿ ವಿಶಿಷ್ಟವಾದ ಚರ್ಚನ್ನು ಉದ್ಘಾಟಿಸಲಾಯಿತು.

ಸ್ಟೆಲ್ಲಾ ಮಾರಿಸ್ ಚರ್ಚ್ ಕಲ್ಮಾಡಿ ತನ್ನ ಅಸ್ತಿತ್ವದ (1972-2022) ಸುವರ್ಣ ಮಹೋತ್ಸವವನ್ನು ಆಗಸ್ಟ್ 15, 2022 ರಿಂದ ಆಚರಿಸುತ್ತಿದೆ. ವೆಲಂಕಣಿ ಮಾತೆಯ ಪುಣ್ಯಕ್ಷೇತ್ರ, ಕಲ್ಮಾಡಿ (ವೆಲಂಕಣಿ ಮಾತೆಯ ಕೇ೦ದ್ರ, ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ) ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವು ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ವೆಲಂಕಣಿ ಮಾತೆಯ ಪ್ರತಿಮೆಯನ್ನು ಆಗಸ್ಟ್ 15, 1988 ರಂದು ಉಡುಪಿ ಚರ್ಚ್‌ನಿಂದ ಮೆರವಣಿಗೆಯಲ್ಲಿ ತರಲಾಯಿತು. ಈ ಪ್ರತಿಮೆಯನ್ನು ವ೦ದನೀಯ ವಿಲ್ಸನ್ ಡಿಸೋಜಾ ಅವರು ಕೊಡುಗೆಯಾಗಿ ನೀಡಿದರು ಮತ್ತು ಈ ಪ್ರತಿಮೆಯನ್ನು ತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತರಲಾಯಿತು.

1988 ರ ಆಗಸ್ಟ್ 15 ರಂದು ಕಲ್ಮಾಡಿಯಲ್ಲಿ ಅಂದಿನ ಮಂಗಳೂರಿನ ಬಿಷಪ್ ಅತೀ ವ೦ದನೀಯ ಡಾ. ಬಾಸಿಲ್ ಡಿʼಸೋಜಾ ಅವರು ವೆಲ೦ಕಣಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಥಾಪಿಸಿದರು. ಪ್ರತಿಷ್ಠಾಪನೆಯ ನಂತರ, ಇಂದಿಗೂ ಕೇಂದ್ರದಲ್ಲಿ ಅನೇಕ ಪವಾಡಗಳು ನಡೆದಿವೆ.

click me!