ಹಸ್ತಸಾಮುದ್ರಿಕಾ ಶಾಸ್ತ್ರ: ಹಸ್ತದಲ್ಲಿ ಹೀಗಿದ್ದರೆ ವ್ಯಾಪಾರದಲ್ಲಿ ಲಾಭ-ನಷ್ಟ..!

By Suvarna News  |  First Published Nov 4, 2020, 4:31 PM IST

ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ಹಲವಾರು ವಿಧಗಳಿವೆಯ ಹಸ್ತ ರೇಖೆಯಿಂದ ಭವಿಷ್ಯದ ಸಂಕೇತಗಳನ್ನು ತಿಳಿಯಬಹುದು, ಹಸ್ತ ಮತ್ತು ಬೆರಳುಗಳ ಮೇಲಿರುವ ಚಿಹ್ನೆಯಿಂದ ಸಹ ಭವಿಷ್ಯದ ಯಶಸ್ಸು ಮತ್ತು ಸಂಕಷ್ಟಗಳನ್ನು ತಿಳಿಯಬಹುದೆಂದು ಹೇಳಲಾಗುತ್ತದೆ. ವೃತ್ತಿ ಕ್ಷೇತ್ರ, ವ್ಯಾಪಾರ, ಉದ್ಯೋಗಗಳ ಬಗ್ಗೆ ಸಹ ತಿಳಿದುಕೊಳ್ಳ ಬಹುದಾಗಿದೆ. ಹಾಗಾದರೆ ಹಸ್ತ ರೇಖೆ, ಬೆರಳುಗಳ ಮೇಲಿರುವ ಚಿಹ್ನೆಯ ಆಧಾರದ ಮೇಲೆ ವ್ಯಾಪಾರವು ಯಾರಿಗೆ ಲಾಭ ತರುತ್ತದೆ? ಎಂಬುದನ್ನು ತಿಳಿಯೋಣ..


ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿರುವ ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಭವಿಷ್ಯದ ಆಗುಹೋಗುಗಳನ್ನು ಅರಿಯಬಹುದಾಗಿದೆ. ಹಸ್ತದ ಆಕಾರ, ರೇಖೆಗಳಿಂದ ಭವಿಷ್ಯದಲ್ಲಿ ಯಾವ ಕೆಲಸ, ವ್ಯಾಪಾರ ಅಥವಾ ಯಾವ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ ಎಂಬುದನ್ನು ತಿಳಿಯಬಹುದಾಗಿದೆ.

 ಜ್ಯೋತಿಷ್ಯ ಶಾಸ್ತ್ರದಿಂದ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಹಾಗೆಯೇ ಹಸ್ತವನ್ನು ನೋಡಿಯೂ ಭವಿಷ್ಯದ ಬಗ್ಗೆ ಅರಿಯಬಹುದು. ಹಸ್ತರೇಖೆಯು ವ್ಯಕ್ತಿಯ ಭವಿಷ್ಯದ ಬಗ್ಗೆ ತಿಳಿಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹಸ್ತ ರೇಖೆಯ ಆಧಾರದ ಮೇಲೆ ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನದ ಹಲವು ವಿಷಯಗಳನ್ನು ತಿಳಿಯಬಹುದೆಂದು ಸಹ ಹೇಳಲಾಗುತ್ತದೆ. 

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಹಸ್ತದಲ್ಲಿರುವ ಕೆಲವು ರೇಖೆಗಳ ಸ್ಪಷ್ಟತೆಯು ಸಹ ಭವಿಷ್ಯ ಮತ್ತು ಭಾಗ್ಯದ ಬಗ್ಗೆ ತಿಳಿಸುವಲ್ಲಿ ಸಹಾಯಕವಾಗುತ್ತವೆ. ಭವಿಷ್ಯದಲ್ಲಿ ಬರುವ ಸುಖ-ದುಃಖಗಳ ಬಗ್ಗೆ ತಿಳಿಯಬಹುದಾಗಿದೆ. ಹಸ್ತದಲ್ಲಿರುವ ಈ ವಿಶೇಷ ರೇಖೆ ಅಥವಾ ಚಿಹ್ನೆಗಳ ಬಗ್ಗೆ ತಿಳಿದುಕೊಂಡರೆ ನಿಮ್ಮ ಭವಿಷ್ಯದ ಬಗೆಗಿನ ಕೆಲವು ವಿಷಯಗಳನ್ನು ಅರಿಯುವುದು ಸರಳವಾಗುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಹೆಚ್ಚು ಧೈರ್ಯವಂತರಂತೆ! 

ವ್ಯಾಪಾರ ಮಾಡುವುದು ಒಂದು ಕಲೆ. ವ್ಯಾಪಾರದ ಬಗ್ಗೆ ಹಲವರಿಗೆ ಆಸಕ್ತಿ ಇರುತ್ತದೆ. ವ್ಯಾಪಾರವು ಎಲ್ಲರಿಗೂ ಆಗಿ ಬರುವುದಿಲ್ಲ. ಕೆಲವರು ವ್ಯಾಪಾರವನ್ನು ಆರಂಭಿಸುವ ದಿನದಿಂದಲೇ ಯಶಸ್ಸನ್ನು, ಲಾಭವನ್ನು ಕಾಣುತ್ತಾ ಹೋದರೆ, ಮತ್ತೆ ಕೆಲವರು ನಷ್ಟವನ್ನೇ ಅನುಭವಿಸುತ್ತಿರುತ್ತಾರೆ. ಹಾಗಾಗಿ ಹಸ್ತದ ಆಕಾರ ಮತ್ತು ರೇಖೆಗಳಿಂದ ವ್ಯಾಪಾರದಲ್ಲಿ ಯಾರಿಗೆ ಸಫಲತೆ ಸಿಗುತ್ತದೆ ಮತ್ತು ಹಸ್ತ ರೇಖೆ ಹೇಗಿದ್ದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ತಿಳಿಯೋಣ... 

Tap to resize

Latest Videos


ಕಿರು ಬೆರಳು
ಜ್ಯೋತಿಷ್ಯ ಶಾಸ್ತ್ರದಲ್ಲಿ ಕಿರು ಬೆರಳಿಗೆ ಬುಧ ಗ್ರಹದ ಪ್ರಭಾವವಿರುತ್ತದೆ ಎಂದು ಹೇಳಲಾಗುತ್ತದೆ. ಬುಧ ಗ್ರಹವು ಮನುಷ್ಯನ ಜೀವನದಲ್ಲಿ ಹಣ, ಸಂಪತ್ತು, ಚತುರತೆ, ವ್ಯಾಪಾರ ಮತ್ತು ಉದ್ಯೋಗ ಕಾರಕ ಗ್ರಹವಾಗಿದೆ. ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಕಿರು ಬೆರಳಿನಲ್ಲಿ ಚಕ್ರದ ಚಿಹ್ನೆ ಇದ್ದರೆ ಅಂಥವರು ವ್ಯಾಪಾರದಲ್ಲಿ ಹೆಚ್ಚು ಸಫಲತೆಯನ್ನು ಕಾಣುತ್ತಾರೆ. ಕಿರು ಬೆರಳಿನಲ್ಲಿ ಚಕ್ರದ ಚಿಹ್ನೆ ಇಲ್ಲದಿದ್ದರೆ ಅಂಥವರು ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಇದನ್ನು ಓದಿ: ರಾಶಿಗನುಣವಾಗಿ ನಿಮ್ಮ ಲಕ್ಕಿ ನಂಬರ್ ಯಾವುದೆಂದು ತಿಳಿಯಿರಿ..!?

ಉಂಗುರ ಬೆರಳು
ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನು ಸುಖ, ತೇಜಸ್ಸು, ಆರೋಗ್ಯ, ಉಚ್ಛ ಪದವಿ, ವೃತ್ತಿ ಮತ್ತು ಯಶಸ್ಸಿನ ಕಾರಕ ಗ್ರಹವೆಂದು ಹೇಳಲಾಗುತ್ತದೆ. ಉಂಗುರ ಬೆರಳು ಸೂರ್ಯ ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಉಂಗುರ ಬೆರಳಲ್ಲಿ ಚಕ್ರದ ಚಿಹ್ನೆ ಇದ್ದವರು ವ್ಯಾಪಾರದಲ್ಲಿ ಯಶಸ್ಸು ಕಂಡರೆ, ಇಲ್ಲದವರು ನಷ್ಟವನ್ನು ಅನುಭವಿಸುವುದಲ್ಲದೇ, ಹೆಚ್ಚು ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ. 

ಮಧ್ಯದ ಬೆರಳು
ಮಧ್ಯದ ಬೆರಳಿಗೆ ಶನಿಗ್ರಹದ ಪ್ರಭಾವವಿರುತ್ತದೆ ಎಂದು ಹಸ್ತ ಸಾಮುದ್ರಿಕಾದಲ್ಲಿ ಹೇಳಲಾಗುತ್ತದೆ. ನ್ಯಾಯ ಮತ್ತು ಕರ್ಮಗಳಿಗೆ ತಕ್ಕ ಫಲವನ್ನು ನೀಡುವಾತ ಶನಿದೇವ. ಉತ್ತಮ ಕರ್ಮಗಳಿಗೆ ಒಳ್ಳೆಯ ಫಲವನ್ನು, ಕೆಟ್ಟ ಕರ್ಮಗಳಿಗೆ ಶಿಕ್ಷೆಯನ್ನು ನೀಡುವ ಗ್ರಹ ಶನಿ. ಹಾಗಾಗಿ ಮಧ್ಯದ ಬೆರಳಿನಲ್ಲಿ ಚಕ್ರದ ಚಿಹ್ನೆ ಇದ್ದರೆ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ. ಚಕ್ರದ ಚಿಹ್ನೆ ಇಲ್ಲದಿದ್ದವರಿಗೆ ವ್ಯಾಪಾರದಲ್ಲಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಇದನ್ನು ಓದಿ: ರಾಶಿಯನುಸಾರ ವಾರದ ಯಾವ ದಿನ ನಿಮಗೆ ಶುಭ..!? 

ತೋರು ಬೆರಳು
ಗುರು ಗ್ರಹದ ಪ್ರಭಾವವು ತೋರು ಬೆರಳಿನ ಮೇಲಿರುತ್ತದೆ ಎಂದು ಹೇಳಲಾಗುತ್ತದೆ. ವ್ಯಕ್ತಿಯ ತೋರು ಬೆರಳಿನಲ್ಲಿ ಶುಭ ಚಿಹ್ನೆ ಇದ್ದರೆ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದವರಾಗಿರುತ್ತಾರೆ. ಜನರನ್ನು ಮಾತಿನಿಂದ ಸೆಳೆಯುವ ಶಕ್ತಿ ಇವರಲ್ಲಿರುತ್ತದೆ. ವ್ಯಾಪಾರದ ಬಗ್ಗೆ ಹೇಳುವುದಾದರೆ, ತೋರು ಬೆರಳಲ್ಲಿ ಚಕ್ರದ ಚಿಹ್ನೆಯನ್ನು ಹೊಂದಿದ್ದರೆ ಸಫಲತೆ ಸಿಗುತ್ತದೆ. ಉತ್ತಮ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ.

click me!