Navratri 2022 Bhog: ತಾಯಿ ದುರ್ಗೆಯ 9 ರೂಪಗಳಿಗೆ 9 ವಿಧದ ನೈವೇಧ್ಯ ಅರ್ಪಿಸಿ

Published : Sep 24, 2022, 09:54 AM ISTUpdated : Sep 24, 2022, 10:19 AM IST
Navratri 2022 Bhog: ತಾಯಿ ದುರ್ಗೆಯ 9 ರೂಪಗಳಿಗೆ 9 ವಿಧದ ನೈವೇಧ್ಯ ಅರ್ಪಿಸಿ

ಸಾರಾಂಶ

ಶಾರದೀಯ ನವರಾತ್ರಿಯಲ್ಲಿ 9 ದಿನಗಳವರೆಗೆ, ತಾಯಿ ಚಾಮುಂಡೇಶ್ವರಿಯನ್ನು ಮೆಚ್ಚಿಸಲು ಪ್ರತಿದಿನ ವಿಭಿನ್ನ ನೈವೇಧ್ಯ ನೀಡಲಾಗುತ್ತದೆ. ತಾಯಿಯ ಯಾವ ರೂಪಕ್ಕೆ ಏನನ್ನು ನೈವೇದ್ಯ ಮಾಡಬೇಕು ಎಂದು ತಿಳಿಸುತ್ತೇವೆ.

ಶರನ್ನವರಾತ್ರಿಯು ಸೆಪ್ಟೆಂಬರ್ 26 ಸೋಮವಾರದಿಂದ ಪ್ರಾರಂಭವಾಗಲಿದೆ. ಈ 9 ದಿನಗಳಲ್ಲಿ ಜನರು ಶಕ್ತಿ ದೇವತೆಯಾದ ದುರ್ಗಾ ದೇವಿಯ ಒಂಬತ್ತು ರೂಪಗಳಾದ  ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಮಾತಾ ಸಿದ್ಧಿದಾತ್ರಿ ದೇವಿಯನ್ನು ಪೂಜಿಸುತ್ತಾರೆ. ಈ ದಿನಗಳಲ್ಲಿ, ತಾಯಿಯ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ, ಅವರಿಗೆ ಉತ್ತಮ ಆಹಾರ, ಬಟ್ಟೆ, ಹಣ್ಣುಗಳು ಮತ್ತು ಹೂವುಗಳು ಮತ್ತು ಇತರ ಅನೇಕ ವಸ್ತುಗಳನ್ನು ನೀಡಲಾಗುತ್ತದೆ. ಈ ದಿನಗಳಲ್ಲಿ ತಾಯಿಗೆ ಅರ್ಪಿಸುವ ಭೋಗಕ್ಕೆ ವಿಶೇಷ ಮಹತ್ವವಿದೆ. ಈ ಒಂಬತ್ತು ದಿನಗಳಲ್ಲಿ, ಪೂಜೆಯ ಸಮಯದಲ್ಲಿ ಜನರು ವಿವಿಧ ರೀತಿಯ ಭೋಗವನ್ನು ತಾಯಿಗೆ ಅರ್ಪಿಸುತ್ತಾರೆ. ತಾಯಿಯ ಯಾವ ರೂಪಕ್ಕೆ ಯಾವ ನೈವೇಧ್ಯ ಶ್ರೇಷ್ಠವಾಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ. 

9 ದಿನಗಳ ಕಾಲ ತಾಯಿಗೆ ಈ ವಿಶೇಷ ನೈವೇಧ್ಯ(Bhog) ಅರ್ಪಿಸಿ
ಶೈಲಪುತ್ರಿ, ಮೊದಲ ದಿನ - ನವರಾತ್ರಿಯ ಮೊದಲ ದಿನ ಶೈಲಪುತ್ರಿ ತಾಯಿಯ ವಿಧಿವತ್ತಾದ ಪೂಜೆಯ ಜೊತೆಗೆ, ಅವರ ಭೋಗದಲ್ಲಿ ಶುದ್ಧ ದೇಸಿ ತುಪ್ಪ(Pure ghee)ವನ್ನು ಅರ್ಪಿಸಬೇಕು, ಇದರಿಂದಾಗಿ ತಾಯಿಯು ಎಲ್ಲಾ ತೊಂದರೆಗಳು ಮತ್ತು ರೋಗಗಳಿಂದ ಮುಕ್ತಿಯನ್ನು ನೀಡುತ್ತಾಳೆ.

ವಾಹನಕ್ಕೆ ನಿಂಬು, ಮೆಣಸು ಹಾಕೋದೇಕೆ?

ಬ್ರಹ್ಮಚಾರಿಣಿ, ಎರಡನೇ ದಿನ - ಎರಡನೇ ದಿನ, ತಾಯಿ ಬ್ರಹ್ಮಚಾರಿಣಿಯ ಪೂಜೆಯ ಜೊತೆಗೆ, ಸಕ್ಕರೆ(Sugar), ಬಿಳಿ ಸಿಹಿತಿಂಡಿಗಳು, ಸಕ್ಕರೆ ಮಿಠಾಯಿ ಮತ್ತು ಹಣ್ಣುಗಳನ್ನು ಅರ್ಪಿಸಬೇಕು. ಇದರಿಂದ ತಾಯಿಯು ವಿಶೇಷ ವರವನ್ನು ನೀಡುತ್ತಾಳೆ.
ಚಂದ್ರಘಂಟಾ, ಮೂರನೇ ದಿನ - ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ತಾಯಿಗೆ ಹಾಲಿನಿಂದ ಮಾಡಿದ ಸಿಹಿತಿಂಡಿಗಳು(Milk sweets) ಮತ್ತು ಖೀರ್ ಇಷ್ಟ, ಅವುಗಳನ್ನು ಅವರಿಗೆ ಅರ್ಪಿಸಿ.
ಕೂಷ್ಮಾಂಡ, ನಾಲ್ಕನೇ ದಿನ - ನವರಾತ್ರಿಯ ನಾಲ್ಕನೇ ದಿನದಂದು ತಾಯಿಯ ಕೂಷ್ಮಾಂಡ ರೂಪವನ್ನು ಪೂಜಿಸಲಾಗುತ್ತದೆ. ನೈವೇಧ್ಯದಲ್ಲಿ ಅವರಿಗೆ ಮಲ್ಪುವಾ(Malpua) ಅರ್ಪಿಸುವುದು ಒಳ್ಳೆಯದು. ಈ ಪ್ರಸಾದವನ್ನು ಮಕ್ಕಳಿಗೆ ಹಂಚಬೇಕು.

ಸೊಸೆ ಆಯ್ಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು!

ಸ್ಕಂದಮಾತಾ, ಐದನೇ ದಿನ - ಮಾ ಸ್ಕಂದಮಾತಾಳಿಗೆ ಬಾಳೆಹಣ್ಣುಗಳನ್ನು(Banana) ಅರ್ಪಿಸಬೇಕು. ಈ ತಾಯಿಯು ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತಾಳೆ.
ಕಾತ್ಯಾಯನಿ, ಆರನೇ ದಿನ - ನವರಾತ್ರಿಯ ಆರನೇ ದಿನ ಮಾ ಕಾತ್ಯಾಯನಿಗೆ ಜೇನುತುಪ್ಪ(Honey)ವನ್ನು ಅರ್ಪಿಸಬೇಕು. ಅದು ತುಂಬಾ ಮಂಗಳಕರವಾಗಿದೆ. ಇದು ನಿಮ್ಮ ಜೀವನದಲ್ಲಿ ಮಾಧುರ್ಯವನ್ನು ತರುತ್ತದೆ ಮತ್ತು ನಿಮ್ಮ ಆಕರ್ಷಣೆಯ ಶಕ್ತಿಯೂ ಹೆಚ್ಚಾಗುತ್ತದೆ.
ಕಾಳರಾತ್ರಿ, ಏಳನೇ ದಿನ - ಏಳನೇ ದಿನ ಮಾ ಕಾಳರಾತ್ರಿಗೆ ಬೆಲ್ಲ(Jaggery) ಅಥವಾ ಅದರಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸಿ, ಇದರಿಂದ ತಾಯಿ ನಿಮ್ಮನ್ನು ತೊಂದರೆಗಳಿಂದ ಪಾರು ಮಾಡುತ್ತಾರೆ.
ಮಹಾಗೌರಿ, ಎಂಟನೇ ದಿನ - ಮಾ ಮಹಾಗೌರಿಗೆ ತೆಂಗಿನಕಾಯಿ(Coconut) ಅಥವಾ ಅದರಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸಿ, ಇದು ತಾಯಿಗೆ ಸಂತೋಷವನ್ನು ನೀಡುತ್ತದೆ.
ಸಿದ್ಧಿಧಾತ್ರಿ, ಒಂಬತ್ತನೇ ದಿನ - ಕೊನೆಯ ದಿನ, ಮಾ ದುರ್ಗೆಯ ಒಂಬತ್ತನೇ ರೂಪವಾದ ಸಿದ್ಧಿಧಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ವಿಶೇಷವಾಗಿ ತಾಯಿಗೆ ದಾಳಿಂಬೆ(Pomagranate) ಮತ್ತು ಎಳ್ಳನ್ನು ಅರ್ಪಿಸಬೇಕು. ಅಲ್ಲಿಗೆ ನವರಾತ್ರಿಯ ಭೋಗಗಳು ಸಂಪೂರ್ಣವಾಗುತ್ತವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ