ಕೆಲವರು ಹುಟ್ಟಾ ಹಾಗೆಯೇ, ಅವರಿಂದ ಹೀಗೆಯೇ ಇರಬೇಕೆಂದು ನಿರೀಕ್ಷಿಸಲಾಗುವುದಿಲ್ಲ. ಕಟ್ಟುಪಾಡುಗಳನ್ನು ಹಾಕಿ ಕೂಡಿ ಹಾಕಲಾಗುವುದಿಲ್ಲ. ನಿಯಮಗಳಿರುವುದೇ ಮುರಿಯೋದಕ್ಕೆ ಎಂಬ ಜಾಯಮಾನದವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?
ನಾವು ಮಕ್ಕಳಿರುವಾಗಿಂದಲೇ ನಮ್ಮನ್ನು ಒಂದೊಂದೇ ನಿಯಮಗಳನ್ನು ಪಾಲಿಸುವಂತೆ ಕಲಿಸುತ್ತಾ ಬರಲಾಗುತ್ತದೆ. ಕೆಲ ಮಕ್ಕಳಿಗೆ ಈ ನಿಯಮಗಳನ್ನು(rules) ಹಾಕಿ ಅದರಂತೆ ನಡೆಸುವುದೇ ತಂದೆತಾಯಿಗೊಂದು ಸವಾಲಾಗಿ ಬಿಡುತ್ತದೆ. ಬೆಳೆಯುತ್ತಾ ಬಂದಂತೆಲ್ಲ ನಮ್ಮ ಸುತ್ತಲಿನ ನೀತಿ ನಿಯಮಗಳು ಹೆಚ್ಚುತ್ತಲೇ ಹೋಗುತ್ತವೆ. ನಿಯಮಗಳು ನಮ್ಮನ್ನು ಶಿಸ್ತಿನಲ್ಲಿಯೂ, ಹದ್ದುಬಸ್ತಿನಲ್ಲಿಯೂ ಇಡುತ್ತವೆ. ಸಮಾಜಕ್ಕೆ ಒಂದು ಚೌಕಟ್ಟು ಹಾಕುತ್ತವೆ. ಆದರೆ, ಕೆಲವರಿಗೆ ಈ ಚೌಕಟ್ಟುಗಳು ಇಷ್ಟವಾಗುವುದಿಲ್ಲ. ಅವರು ಯಾವ ಕಟ್ಟುಪಾಡುಗಳನ್ನೂ ಇಷ್ಟ ಪಡೋದಿಲ್ಲ. ಎಂಥದೇ ನಿಯಮ ಹಾಕಿದರೂ ಹೆದರದೇ ಅದನ್ನು ಮುರಿಯುವ ಪ್ರವೃತ್ತಿ ಅಂತ ಕ್ರಾಂತಿಕಾರಿಗಳಲ್ಲಿರುತ್ತದೆ. ಇವರು ಗುಂಪನ್ನು ಫಾಲೋ ಮಾಡುವವರಲ್ಲ. ತಮ್ಮ ಮನಸ್ಸಿಗೆ ಬಂದ ದಾರಿಯಲ್ಲಿ ಸಾಗುವವರು. ಇಂಥ ಸ್ವಭಾವ ಯಾವ ರಾಶಿ(zodiac signs)ಯವರಲ್ಲಿ ಕಂಡು ಬರುತ್ತದೆ ಗೊತ್ತಾ?
ಮೇಷ ರಾಶಿ(Aries)
ಮೇಷ ರಾಶಿಯವರು ತಮ್ಮ ಹಠಾತ್ ಪ್ರವೃತ್ತಿಗೆ ಹೆಸರುವಾಸಿಯಾಗಿದ್ದಾರೆ. ತಾವೇನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಯಾರಾದರೂ ಹೇಳುವುದನ್ನು ಅವರು ಇಷ್ಟಪಡುವುದಿಲ್ಲ. ಇವರದು ಅಗ್ನಿಯ ತತ್ವ. ಹಾಗಾಗಿ ಯಾವಾಗಲೂ ತಾವು ಇಷ್ಟಪಡುವುದಕ್ಕಾಗಿ ಹೋರಾಡಲು ಸಿದ್ಧವಾಗಿರುತ್ತಾರೆ. ವಿಶೇಷವಾಗಿ ಅವರ ಸ್ವಾತಂತ್ರ್ಯಕ್ಕಾಗಿ ಸದಾ ಹೋರಾಡುತ್ತಾರೆ. ಮೇಷ ರಾಶಿಯವರು ತಮ್ಮ ಹೃದಯದ ಮಾತನ್ನು ಮಾತ್ರ ಅನುಸರಿಸಲು ಇಷ್ಟಪಡುತ್ತಾರೆ. ಹಾಗಂಥ ಇದಕ್ಕಾಗಿ ಅವರು ಆಕ್ರಮಣಕಾರಿ ಅಥವಾ ಕೆಟ್ಟವರಾಗುವ ಬದಲು ನಿಯಮಗಳನ್ನು ನಯವಾಗಿ ಕಡೆಗಣಿಸುತ್ತಾರೆ. ಮೇಷ ರಾಶಿಯವರು ಯಾರೂ ಹೋಗದ ಹಾದಿಯಲ್ಲಿ ಹೋಗುವುದರಲ್ಲಿ ನಿಸ್ಸೀಮರು.
ಮಿಥುನ ರಾಶಿ(Gemini)
ಮಿಥುನ ರಾಶಿಯವರು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ ಮತ್ತು ನಿಯಮಗಳು ಅವರನ್ನು ಎಂದಿಗೂ ಮಿತಿಯಲ್ಲಿ ಇಡಲು ಸಫಲವಾಗುವುದಿಲ್ಲ. ಅವರು ಗುಂಪನ್ನು ಹಿಂಬಾಲಿಸುವ ಬದಲು ತಮ್ಮದೇ ಆದ ದಾರಿ ಮಾಡಿಕೊಳ್ಳಲು ಬಯಸುತ್ತಾರೆ. ಅವರು ಹಠಾತ್ ಪ್ರವೃತ್ತಿ(impulsiveness)ಯಲ್ಲಿ ಬೆಳೆಯುತ್ತಾರೆ, ಆದ್ದರಿಂದ ಅವರು ಆಗಾಗ್ಗೆ ನಿಯಮಗಳನ್ನು ಮುರಿಯುತ್ತಾರೆ. ಮೇಷ ರಾಶಿಯವರು ಐ ಡೋಂಟ್ ಕೇರ್ ಎಂಬ ಮನೋಭಾವದಿಂದ ತಿರುಗಾಡುತ್ತಾರೆ. ತಮ್ಮ ಜೀವನವನ್ನು ಸ್ವಲ್ಪ ಕಿಡಿಗೇಡಿತನ ಮತ್ತು ಬಹಳಷ್ಟು ಮಸಾಲೆಗಳೊಂದಿಗೆ ಬದುಕಲು ಬಯಸುತ್ತಾರೆ. ತರಗತಿಗಳಲ್ಲಿ ತಲೆಹರಟೆಗಳಾಗಿರುತ್ತಾರೆ. ಮುಂದೆ ವೃತ್ತಿ ಬದುಕಿನಲ್ಲೂ ಈ ಸ್ವಭಾವವನ್ನೂ ಬಿಡುವವರಲ್ಲ ಇವರು.
ಹೆಚ್ಚು divorceಗೊಳಗಾಗೋರು ಇದೇ ನಕ್ಷತ್ರದಲ್ಲಿ ಹುಟ್ಟಿದವರು!
ಧನು ರಾಶಿ(Sagittarius)
ಜನರು ತಾವೇನು ಮಾಡಬೇಕೆಂದು ಬಯಸುತ್ತಾರೆ, ತಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬ ಬಗ್ಗೆ ಕೇರ್ ಮಾಡುವವರಲ್ಲ ಧನು ರಾಶಿಯವರು. ಸಾಹಸ ಹಾಗೂ ಸ್ವಾತಂತ್ರ್ಯ ಪ್ರಿಯರಾದ ಇವರು, ನಿಯಮಗಳನ್ನು ಮುರಿಯುವುದರಲ್ಲೂ ಸಾಹಸದ ರುಚಿ ನೋಡುತ್ತಾರೆ. ಹಠಾತ್ ನಿರ್ಧಾರಗಳೊಂದಿಗೆ ರೋಮಾಂಚಕ ಜೀವನವನ್ನು ಇಷ್ಟಪಡುತ್ತಾರೆ. ಏನನ್ನಾದರೂ ಮಾಡುವ ಮೊದಲು ಅದಕ್ಕೆ ಸಂಬಂಧಿಸಿದ ನಿಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರ ಇವರಲ್ಲ. ಬದಲಿಗೆ, ತಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಾರೆ. ಹಾಗಂಥ ಕೆಟ್ಟವರೇನಲ್ಲ. ಸತ್ಯಕ್ಕಾಗಿ ಹಂಬಲಿಸುವ ಇವರು, ಅದಕ್ಕನುಗುಣವಾಗಿ ಕಾರ್ಯನಿರ್ವಹಿಸಲು ಸಿದ್ಧರಾಗಿರುತ್ತಾರೆ. ತಮಗೆ ಬೇಕಾದ ಉತ್ತರ ಪಡೆಯಲು ಹೋರಾಡಲು ಸಿದ್ಧವಾಗಿರುತ್ತಾರೆ. ಮೋಜು ಮಾಡುವ ಸಲುವಾಗಿ ನಿಯಮ ಉಲ್ಲಂಘಿಸುವುದು ತಪ್ಪೇನಲ್ಲ ಎಂದು ವಾದಿಸುತ್ತಾರೆ.
ಕುಂಭ ರಾಶಿ(Aquarius)
ಕುಂಭ ರಾಶಿಯವರು ತಮ್ಮನ್ನು ತಾವು ನಿಯಮಬಾಹಿರರಾಗಿ ಇಟ್ಟುಕೊಳ್ಳುತ್ತಾರೆ. ಅಂತರ್ಮುಖಿಗಳಾಗಿದ್ದರೂ ಅವರು ಕ್ರಾಂತಿಕಾರಿ ಕ್ರಮಗಳು ಮತ್ತು ಆಲೋಚನೆಗಳನ್ನು ತರಲು ವಿಶೇಷವಾಗಿ ಯೋಚಿಸಬಲ್ಲರು. ಆ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಬಲ್ಲರು. ಕಾನೂನು ವಿಷಯಗಳನ್ನು ನಿರ್ವಹಿಸುವಲ್ಲಿ ಇವರು ಉತ್ತಮವಾಗಿಲ್ಲದಿರಬಹುದು, ಆದರೆ ಪ್ರಾಮಾಣಿಕತೆಯಂತೂ ಇವರಲ್ಲಿದೆ. ಈಗಾಗಲೇ ಮಾಡಿರುವ ನಿಯಮಗಳಲ್ಲಿ, ಸಂಪ್ರದಾಯಗಳಲ್ಲಿ ಸಾಕಷ್ಟು ಕುಂದುಕೊರತೆಗಳಿದ್ದು ಅವನ್ನು ಮರುಪರಿಶೀಲಿಸಬೇಕಾಗಿದೆ ಎಂಬುದು ಇವರ ನಿಲುವು. ಈ ಬಗ್ಗೆ ಪದೇ ಪದೆ ದನಿ ಎತ್ತುತ್ತಾರೆ. ಸೃಜನಾತ್ಮಕ ರೂಪಗಳಲ್ಲಿ ಅದನ್ನು ಹೊರ ಹಾಕುತ್ತಾರೆ, ತೀಕ್ಷ್ಣವಾದ ಮೆದುಳನ್ನು ಹೊಂದಿರುವ ಇವರು ತಮ್ಮ ಮನಸ್ಸಿಗೆ ಸರಿಯಾಗಿ ನಡೆದುಕೊಳ್ಳದವರನ್ನು ತಿದ್ದಲು ಬಯಸುತ್ತಾರೆ.
ಸಿಹಿ ಮಾತಿಂದಲೇ ನಿಮ್ಮ Secrets ಬಾಯಿ ಬಿಡಿಸೋ ಚಾಣಾಕ್ಯರು ಈ ರಾಶಿಯವರು!
ಮೀನ ರಾಶಿ(Pisces)
ಮೀನ ರಾಶಿಯವರ 6ನೇ ಇಂದ್ರಿಯ ಜಾಗೃತವಾಗಿರುತ್ತದೆ. ಆದ್ದರಿಂದ ಅವರು ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೂ ಮುಲಾಜಿಲ್ಲದೆ ಮಾಡುತ್ತಾರೆ. ಅವರು ತಮ್ಮ ಕ್ರಿಯೆಗಳ ನಂತರದ ಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ. ಜೀವನ ಹೆಂಗೆ ಬರುತ್ತೋ ಹಾಗೆ ತೆಗೆದುಕೊಂಡು ಹೋಗಲು ಬಯಸುತ್ತಾರೆ. ನಿಯಮಗಳು ಇವರ ಸೃಜನಶೀಲತೆ ಮತ್ತು ಕಲ್ಪನೆಗಳಿಗೆ ಮಿತಿ ಹೇರುವುದರಿಂದ ಇವರು ನಿಯಮಗಳನ್ನು ಮುರಿಯಲು ಇಷ್ಟಪಡುತ್ತಾರೆ. ಹಠಾತ್ ಪ್ರವೃತ್ತಿಯಾಗಿದ್ದರೂ, ಮೀನ ರಾಶಿಯವರು ವಿವಿಧ ವಿಷಯಗಳಲ್ಲಿ ಸುರಕ್ಷಿತವಾಗಿ ಆಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ ಮತ್ತು ಸಿಕ್ಕಿಹಾಕಿಕೊಳ್ಳುವ ಭಯದಲ್ಲಿರುತ್ತಾರೆ.