ಈ ರಾಶಿಗಳಿಗೆ Difficult December, ಈ ಪರಿಹಾರಗಳ ಮೂಲಕ ಸಮಸ್ಯೆಯಿಂದ ಬಚಾವಾಗಿ..

By Suvarna NewsFirst Published Nov 29, 2022, 10:27 AM IST
Highlights

ಕೆಲವು ರಾಶಿಚಕ್ರಗಳು ಡಿಸೆಂಬರ್‌ನಲ್ಲಿ ಸಾಕಷ್ಟು ಏರಿಳಿತಗಳನ್ನು ಎದುರಿಸಬಹುದು. ಈ ರಾಶಿಗಳು ಯಾವೆಲ್ಲ, ಅವು ಕೈಗೊಳ್ಳಬಹುದಾದ ಕೆಲವು ಸುಲಭವಾದ ಜ್ಯೋತಿಷ್ಯ ಪರಿಹಾರಗಳ ಬಗ್ಗೆ ತಿಳಿಯೋಣ.

ಪ್ರತಿ ದಿನವೂ ಜನರು ಇಂದು ಒಳ್ಳೆಯ ದಿನ ತಮ್ಮದಾಗಿರಲಿ ಎಂದು ಬಯಸುತ್ತಾರೆ. ಮುಂಬರುವ ಸಮಯದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಭವಿಷ್ಯದಲ್ಲಿ ಯಾವುದೇ ಅಹಿತಕರ ಘಟನೆಗಳ ಮುನ್ಸೂಚನೆಗಳಿವೆಯೇ ಎಂಬುದನ್ನು ಜ್ಯೋತಿಷ್ಯದ ಮುಖಾಂತರ ತಿಳಿದುಕೊಳ್ಳಬಹುದು. ಅಷ್ಟೇ ಏಕೆ, ಆ ಸಮಸ್ಯೆಗಳಿಗೆ ಮುಂಚಿತವಾಗಿ ಪರಿಹಾರ ಕ್ರಮಗಳನ್ನು ಕೂಡಾ ಕೈಗೊಂಡು ಸಮಸ್ಯೆಯ ಮಟ್ಟ ತಗ್ಗಿಸಿಕೊಳ್ಳಬಹುದು. ಸಧ್ಯ ಡಿಸೆಂಬರ್ ತಿಂಗಳಲ್ಲಿ ಯಾವ ರಾಶಿಯವರಿಗೆ ಕೆಲವು ಸಮಸ್ಯೆಗಳು ಎದುರಾಗಬಹುದು ನೋಡೋಣ ಮತ್ತು ಈ ತೊಂದರೆಗಳಿಗೆ ಕೆಲವು ಸುಲಭ ಪರಿಹಾರಗಳ ಬಗ್ಗೆ ವಿವರವಾಗಿ ತಿಳಿಯೋಣ.

ಮೇಷ ರಾಶಿ(Aries)
ಮೇಷ ರಾಶಿಯವರಿಗೆ ಡಿಸೆಂಬರ್ ಕೆಲವು ಸಮಸ್ಯೆಗಳಿಂದ ಕೂಡಿರುತ್ತದೆ. ಈ ತಿಂಗಳಲ್ಲಿ ನೀವು ಆರ್ಥಿಕ ನಷ್ಟವನ್ನು ಸಹ ಎದುರಿಸಬಹುದು. ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುತ್ತಿದ್ದರೆ ಸಮಯವು ನಿಮಗೆ ಅನುಕೂಲಕರವಾಗಿಲ್ಲ.

ಪರಿಹಾರ: ಮೇಷ ರಾಶಿಯವರು ಪ್ರತಿ ಮಂಗಳವಾರದಂದು ಸುಂದರಕಾಂಡವನ್ನು ಪಠಿಸಬೇಕು. ಇದರಿಂದ ಸಮಸ್ಯೆಗಳನ್ನು ತಗ್ಗಿಸಬಹುದು. ಮಂಗಳವಾರ ಆಂಜನೇಯನಿಗೆ ಸಿಂಧೂರ ಅರ್ಪಿಸಿ ಮತ್ತು ಭಜರಂಗ ಬಾಣವನ್ನು ಪಠಿಸಿ. ಹೀಗೆ ಮಾಡುವುದರಿಂದ ಕೇವಲ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ಸು ಸಿಗುತ್ತದೆ.

Vastu Tips For Success: ಯಶಸ್ಸಿನ ಹಾದಿಗೆ ಇಲ್ಲಿದೆ ಸಿಂಪಲ್‌ ವಾಸ್ತು ಟಿಪ್ಸ್‌

ಮಿಥುನ ರಾಶಿ(Gemini)
ಮಿಥುನ ರಾಶಿಯವರಿಗೆ ಸಮಯವು ಅನುಕೂಲಕರವಾಗಿಲ್ಲ. ನಿಮ್ಮ ವೈವಾಹಿಕ ಜೀವನದಲ್ಲಿ ಏರಿಳಿತಗಳಿರಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ಪ್ರಯತ್ನಿಸುವ ಅವಶ್ಯಕತೆಯಿದೆ ಮತ್ತು ನೀವು ಹೊಸ ಸಂಬಂಧದ ಆರಂಭದಲ್ಲಿದ್ದರೆ ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ. ನೀವು ಮದುವೆಗೆ ಸರಿಯಾದ ಹೊಂದಾಣಿಕೆಯನ್ನು ಹುಡುಕುತ್ತಿದ್ದರೆ ಸಮಯ ನಿಮ್ಮ ಕಡೆ ಇರುವುದಿಲ್ಲ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಮತ್ತು ಹಿರಿಯರ ಸಲಹೆಯೊಂದಿಗೆ ಮುಂದುವರಿಯಲು ಪ್ರಯತ್ನಿಸಿ.

ಪರಿಹಾರ: ದುರ್ಗಾ ಕವಚವನ್ನು ಪಠಿಸಿ ಮತ್ತು ಹನುಮಂತನಿಗೆ ಸಿಂಧೂರವನ್ನು, ತಾಯಿ ಪಾರ್ವತಿಗೆ ಅಲಂಕಾರ ಸಾಮಗ್ರಿಗಳನ್ನು ಅರ್ಪಿಸಿ. ಸಿಹಿ ಪ್ರಸಾದ ಮಾಡಿ ದುರ್ಗಾ ದೇವಿಗೆ ಅರ್ಪಿಸಿ.

ಕಟಕ(Cancer)
ಡಿಸೆಂಬರ್ ನಿಮಗೆ ಏರಿಳಿತಗಳಿಂದ ತುಂಬಿರುತ್ತದೆ ಮತ್ತು ಈ ತಿಂಗಳು ನೀವು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ನಿಮ್ಮ ಆರೋಗ್ಯದ ಬಗ್ಗೆ ನೀವು ಸಂಪೂರ್ಣ ಗಮನ ಹರಿಸದಿದ್ದರೆ, ನೀವು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ಪರಿಹಾರ: ಶನಿವಾರದಂದು ಸಾಸಿವೆ ಎಣ್ಣೆಯನ್ನು ದಾನ ಮಾಡಿ, ಬಡ ಮಕ್ಕಳಿಗೆ ಸಿಹಿ ತಿನ್ನಿಸಿ ಮತ್ತು ಶನಿ ದೇವಸ್ಥಾನದಲ್ಲಿ ದೀಪವನ್ನು ಹಚ್ಚಿ. ಶನಿವಾರದಂದು ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿ ಮತ್ತು ದೀಪವನ್ನು ಬೆಳಗಿಸಿ.

ಧನು ರಾಶಿ(Sagittarius)
ಈ ತಿಂಗಳು ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು ಮತ್ತು ನೀವು ಹಿರಿಯರೊಂದಿಗೆ ಹೆಜ್ಜೆ ಹಾಕಲು ವಿಫಲರಾಗುತ್ತೀರಿ. ತಾಳ್ಮೆಯನ್ನು ಕಾಪಾಡಿಕೊಳ್ಳುವುದು ಶೀಘ್ರದಲ್ಲೇ ತೊಂದರೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಪರಿಹಾರ: ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಿ ಮತ್ತು ಹನುಮಂತನಿಗೆ ಹಳದಿ ಸಿಂಧೂರವನ್ನು ಅರ್ಪಿಸಿ.

Pitru Doshದಿಂದಾಗುವ ಸಮಸ್ಯೆಗಳೇನು? ಅದರಿಂದ ಮುಕ್ತರಾಗಲು ಏನೆಲ್ಲ ಮಾಡಬೇಕು?

ತುಲಾ ರಾಶಿ(Libra)
ಡಿಸೆಂಬರ್ ನಿಮಗೆ ತೊಂದರೆಗಳಿಂದ ಕೂಡಿರಬಹುದು. ಈ ಸಮಯದಲ್ಲಿ ಯಾವುದೇ ಪ್ರಮುಖ ಹೂಡಿಕೆಯನ್ನು ತಪ್ಪಿಸಿ. ಹಣಕಾಸಿನ ನಷ್ಟದ ಚಿಹ್ನೆಗಳು ಇವೆ, ಆದ್ದರಿಂದ ಚಿಂತನಶೀಲವಾಗಿ ಹಣವನ್ನು ವಿನಿಮಯ ಮಾಡಿಕೊಳ್ಳಿ. ಈ ತಿಂಗಳು ನೀವು ವಾಹನ ಖರೀದಿ ಅಥವಾ ಆಸ್ತಿ ಖರೀದಿಯಂತಹ ಯಾವುದೇ ಪ್ರಮುಖ ಖರ್ಚುಗಳನ್ನು ತಪ್ಪಿಸಬೇಕು.

ಪರಿಹಾರ: ಪ್ರತಿದಿನ ತಾಯಿ ಲಕ್ಷ್ಮಿಗೆ ದೇಸಿ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಸಂಜೆ ಲಕ್ಷ್ಮಿಯ ಭಜನೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.

click me!