ದೀಪಾವಳಿಯಲ್ಲಿ ಹೊಸ ಬಟ್ಟೆ ಧರಿಸೋದು ನಮ್ಮ ಪದ್ಧತಿ. ನಿಮ್ಮಿಷ್ಟದ ಬಟ್ಟೆ ಧರಿಸುವ ಬದಲು ಈ ಬಾರಿ ರಾಶಿಗೆ ಮಹತ್ವ ನೀಡಿ. ನಿಮ್ಮ ರಾಶಿ, ವ್ಯಕ್ತಿತ್ವಕ್ಕೆ ಹೊಂದುವ ಡ್ರೆಸ್ ಆಯ್ಕೆ ಮಾಡಿಕೊಳ್ಳಿ.
ದೀಪಾವಳಿಯ ಶುಭ ಸಮಯದಲ್ಲಿ ಜನರು ಹೊಸ ಬಟ್ಟೆ ಖರೀದಿಗೆ ಮುಂದಾಗ್ತಿದ್ದಾರೆ. ಹಬ್ಬದಲ್ಲಿ ಹೊಸ ಬಟ್ಟೆಗಳನ್ನು ಧರಿಸುವುದು ಫ್ಯಾಷನ್ ಅಲ್ಲ. ಅದ್ರ ಹಿಂದೆ ನಮ್ಮ ಸಂಸ್ಕೃತಿ, ಸಂಪ್ರದಾಯ ಅಡಗಿದೆ. ಹೊಸ ಬಟ್ಟೆ ಶುಭ ಸಂಕೇತವಾಗಿದೆ. ಸಂತೋಷದ ದಿನಗಳ ಆರಂಭವನ್ನು ಇದು ಸೂಚಿಸುತ್ತದೆ. ನಮ್ಮ ರಾಶಿ, ಗ್ರಹ ಹಾಗೂ ನಮ್ಮ ಜೀವನಶೈಲಿ, ನಾವು ಧರಿಸುವ ಬಟ್ಟೆ ಎಲ್ಲವೂ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ನೀವು ದೀಪಾವಳಿ ಸಮಯದಲ್ಲಿ ಹೊಸ ಬಟ್ಟೆ ಖರೀದಿ ಮಾಡುತ್ತಿದ್ದರೆ ನಿಮ್ಮ ರಾಶಿಗೆ ತಕ್ಕಂತೆ ಬಟ್ಟೆ ಖರೀದಿ ಮಾಡಿ, ಧರಿಸಿ. ಇದ್ರಿಂದ ನೀವು ಹೆಚ್ಚಿನ ಲಾಭವನ್ನು ಪಡೆಯಬಹುದು.
ಹಬ್ಬ (Festival) ದ ಖುಷಿ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ಸುಂದರ ಡ್ರೆಸ್ (Dress) , ಸೀರೆ ಧರಿಸಿ ಅತ್ತಿಂದಿತ್ತ ಓಡಾಡಿ ಸಂಭ್ರಮಿಸುತ್ತಾರೆ. ನಾವಿಂದು ದೀಪಾವಳಿ (Diwali) ಶುಭ ಸಮಯದಲ್ಲಿ ಯಾವ ರಾಶಿಯ ಮಹಿಳೆಯರು ಯಾವ ಬಣ್ಣದ ಹಾಗೂ ಯಾವ ಬಟ್ಟೆಯನ್ನು ಧರಿಸಬೇಕು ಎಂಬ ಮಾಹಿತಿ ನೀಡ್ತೇವೆ.
undefined
ಈ ರಾಶಿಯ ಮೇಲೆ ದೀಪಾವಳಿವರೆಗೆ ಕುಬೇರನ ಆಶೀರ್ವಾದ, ಹಣದ ಹೊಳೆ ಗ್ಯಾರಂಟಿ
ನಿಮ್ಮ ರಾಶಿಗನುಗುಣವಾಗಿ ಬಟ್ಟೆ ಧರಿಸಿ:
ಮೇಷ : ಮೇಷ ರಾಶಿಯ ಜನರು ತಮ್ಮ ಧೈರ್ಯ ಮತ್ತು ಶಕ್ತಿಯುತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ವ್ಯಕ್ತಿತ್ವ ಎದ್ದುಕಾಣುವಂತಹ ಗಾಢ ಕೆಂಪು ಮತ್ತು ಚಿನ್ನದ ಬಣ್ಣವಿರುವ ಅನಾರ್ಕಲಿ ಸೂಟ್ ಧರಿಸೋದು ಒಳ್ಳೆಯದು.
ವೃಷಭ : ವೃಷಭ ರಾಶಿಯ ಜನರು ಆರಾಮ ಮತ್ತು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಇವರು ಪಚ್ಚೆ ಅಥವಾ ಮೆರೂನ್‌ನಂತಹ ಆಳವಾದ ಬಣ್ಣಗಳ ಕ್ಲಾಸಿಕ್ ರೇಷ್ಮೆ ಸೀರೆ ಧರಿಸೋದು ಮಂಗಳಕರ. ಇದ್ರ ಜೊತೆ ಬಂಗಾರದ ಒಡವೆ ಹಾಗೂ ಸುಂದರ ಸ್ಮೈಲ್ ನಿಮ್ಮ ಸೌಂದರ್ಯವನ್ನು ಡಬಲ್ ಮಾಡುತ್ತದೆ.
ದೀಪಾವಳಿ ಬಗ್ಗೆ ನಿಮಗೆಷ್ಟು ಗೊತ್ತು: ಇಲ್ಲಿದೆ ನೋಡಿ ಕ್ವಿಜ್ ನಿಮಗಾಗಿ
ಮಿಥುನ : ಈ ರಾಶಿಯ ಜನರು ವೈವಿಧ್ಯತೆ ಮತ್ತು ಸಂವಹನವನ್ನು ಆನಂದಿಸುತ್ತಾರೆ. ಬಣ್ಣ ಬಣ್ಣದ ಲೆಹೆಂಗಾ ಚೋಲಿ ಇವರಿಗೆ ಸೂಕ್ತ. ಇದು ಇವರ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ.
ಕರ್ಕ : ಕರ್ಕ ರಾಶಿಯವರು ಮನೆ ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಸಣ್ಣ ಸಣ್ಣ ಮೋಟಿಫ್‌ಗಳನ್ನು ಹೊಂದಿರುವ ಸುಂದರವಾದ ಬನಾರಸಿ ರೇಷ್ಮೆ ಸೀರೆ ಮತ್ತು ಅದಕ್ಕೆ ಹೊಂದುವ ಬ್ಲೌಸ್ ಧರಿಸಬೇಕು. ಇದಕ್ಕೆ ಒಪ್ಪುವ ಲಾಕೆಟ್ ಧರಿಸಲು ಮರೆಯಬೇಡಿ.
ಸಿಂಹ (Leo): ಈ ರಾಶಿಯವರು ಭವ್ಯತೆ ಮತ್ತು ಐಷಾರಾಮಿ ಜೀವನವನ್ನು ಪ್ರೀತಿಸುತ್ತಾರೆ. ರಾಯಲ್ ನೀಲಿ ಅಥವಾ ಗಾಢವಾದ ಕೆಂಗಂದು ಬಣ್ಣದ ರಾಯಲ್ ವೆಲ್ವೆಟ್ ಸೂಟ ಧರಿಸಿ.
ಕನ್ಯಾ (Virgo): ಕನ್ಯಾ ರಾಶಿಯವರು ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುವ ಜೊತೆಗೆ ವಿವರವಾಗಿ ಪರಿಶೀಲಿಸುತ್ತಾರೆ. ಅವರು ಮೃದುವಾದ ನೀಲಿಬಣ್ಣದ ಕೈಯಿಂದ ಕಸೂತಿ ಮಾಡಿದ ಚಿಕಂಕರಿ ಸೀರೆ ಧರಿಸಬೇಕು. ಬೆಳ್ಳಿ ಆಭರಣ ಇದಕ್ಕೆ ಹೊಂದಿಕೆ ಆಗುತ್ತದೆ.
ತುಲಾ (Libra) : ತುಲಾ ರಾಶಿ ಜನರು ಸಮತೋಲನ ಮತ್ತು ಸೌಂದರ್ಯವನ್ನು ಆನಂದಿಸುತ್ತಾರೆ. ಗುಲಾಬಿ ಮತ್ತು ಲ್ಯಾವೆಂಡರ್ ಛಾಯೆಗಳ ಸುಂದರವಾದ ಮತ್ತು ಆಕರ್ಷಕವಾದ ಅನಾರ್ಕಲಿ ಗೌನ್ ಧರಿಸುವುದು ಒಳ್ಳೆಯದು.
ವೃಶ್ಚಿಕ (Capricorn) : ಧೈರ್ಯವನ್ನು ವೃಶ್ಚಿಕ ರಾಶಿಯ ಜನರು ಇಷ್ಟಪಡುತ್ತಾರೆ. ಹಾಗಾಗಿ ಗಾಢ ಕೆಂಪು ಅಥವಾ ಕಪ್ಪು ಬಣ್ಣದೀಂದ ಅಲಂಕರಿಸಿದ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆಕರ್ಷಕ ನೋಟಕ್ಕಾಗಿ ನೋಸ್ ರಿಂಗ್ ಧರಿಸಿ.
ಧನು (Sagittarius) : ಅನ್ವೇಷಣೆಯನ್ನು ಇಷ್ಟಪಡುವ ಜನರು ಧನು ರಾಶಿಯವರು. ರೋಮಾಂಚಕ ಬಾಂಧನಿ ಪ್ರಿಂಟ್ ಲೆಹೆಂಗಾ ಇವರ ವ್ಯಕ್ತಿತ್ವಕ್ಕೆ ಹೊಂದಿಕೆ ಆಗುತ್ತದೆ.
ಮಕರ (Capricorn) : ಸಂಪ್ರದಾಯವನ್ನು ಇಷ್ಟಪಡುವ ಜನರು ಇವರು. ಹಸಿರು ಅಥವಾ ಕೆಂಗಂದು ಬಣ್ಣದ ಶ್ರೀಮಂತ ಮತ್ತು ಕಾಲಾತೀತವಾದ ಕಂಜೀವರಂ ಸೀರೆ ಇವರಿಗೆ ಒಪ್ಪಿಗೆಯಾಗುತ್ತದೆ.
ಕುಂಭ (Capricorn) : ನೀವು ಕುಂಭ ರಾಶಿಯವರಾಗಿದ್ದರೆ ಅನನ್ಯ ಮತ್ತು ಸೃಜನಶೀಲ ಫ್ಯಾಶನ್ ಪಾಲಿಸುತ್ತೀರಿ. ಅಸಾಂಪ್ರದಾಯಿಕ ಬಣ್ಣಗಳು ಅಥವಾ ಪ್ಯಾಟರ್ನ್ ನ ಸಮಕಾಲೀನ ಆದರೆ ಕಲಾತ್ಮಕ ಧೋತಿ ಶೈಲಿಯ ಉಡುಗೆ ಧರಿಸಿ.
ಮೀನ (Pisces) : ಮೀನ ರಾಶಿಯವರು ಕಲಾತ್ಮಕ ಸ್ವಭಾವದವರು. ಸಮುದ್ರ ಹಸಿರು ಅಥವಾ ತಿಳಿ ನೀಲಿ ಬಣ್ಣದ ಅನಾರ್ಕಲಿ ಸೂಟ್ ಅವರಿಗೆ ಒಪ್ಪಿಗೆಯಾಗುತ್ತದೆ.