ಕಾಫಿನಾಡ ಶೃಂಗೇರಿ ಶಾರದಾಂಭೆ ಕ್ಷೇತ್ರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಷ್ಟು ದಿನ ಶೃಂಗೇರಿಯಲ್ಲಿ ಶಾರದಾಂಭೆ ದರ್ಶನ ಪಡೆಯುತ್ತಿದ್ದು ಭಕ್ತರು ಇನ್ಮುಂದೆ ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.10): ಕಾಫಿನಾಡ ಶೃಂಗೇರಿ ಶಾರದಾಂಭೆ ಕ್ಷೇತ್ರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಷ್ಟು ದಿನ ಶೃಂಗೇರಿಯಲ್ಲಿ ಶಾರದಾಂಭೆ ದರ್ಶನ ಪಡೆಯುತ್ತಿದ್ದು ಭಕ್ತರು ಇನ್ಮುಂದೆ ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದು. ಶೃಂಗೇರಿಯ ಹಿರಿಯ ಗುರುಗಳಾದ ಶ್ರೀ ಭಾರತೀತೀರ್ಥ ಶ್ರೀಗಳ ಸಂಕಲ್ಪದಂತೆ ಶೃಂಗೇರಿಯಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿ 45 ಕೋಟಿ ವೆಚ್ಚದ 32 ಅಡಿಯ ಬೃಹತ್ ಹಾಗೂ ಸುಂದರ ಮೂರ್ತಿ ಇಂದು ಲೋಕಾರ್ಪಣೆಗೊಂಡಿದೆ..
undefined
ಶಂಕರಾಚಾರ್ಯರ ಪ್ರತಿಮೆ ಅನಾವರಣ: ಇಷ್ಟು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ವಿದ್ಯಾದಿದೇವತೆ ಶಾರದಾಂಬೆ ದರ್ಶನ ಪಡೆಯುತ್ತಿದ್ದ ಭಕ್ತರು ಇನ್ಮುಂದೆ ಸಿದ್ಧಾಂತಗಳಲ್ಲೇ ಪ್ರಾಚೀನ ಸಿದ್ಧಾಂತವಾದ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದು. ಶೃಂಗೇರಿ ಮಠದ ಹಿರಿಯ ಗುರುಗಳಾದ ಶ್ರೀ ಭಾರತೀತೀರ್ಥ ಶ್ರೀಗಳ ಸಂಕಲ್ಪದಂತೆ 45 ಕೋಟಿ ವೆಚ್ಚದ ಎರಡು ಎಕರೆ ವಿಸ್ತೀರ್ಣದಲ್ಲಿ ಬೃಹತ್ ಹಾಗೂ ಸುಂದರವಾಗಿ ನಿರ್ಮಾಣಗೊಂಡಿರೋ 32 ಅಡಿಯ ಶಂಕರಾಚಾರ್ಯರ ಪ್ರತಿಮೆ ಇಂದು ಲೋಕರ್ಪಣೆಗೊಂಡಿದೆ.
ಶೃಂಗೇರಿಯ ಮಾರುತಿ ಬೆಟ್ಟದಲ್ಲಿ 32 ಅಡಿ ಎತ್ತರದ ಶಂಕರ ಪ್ರತಿಮೆ ಅನಾವರಣ!
ಶೃಂಗೇರಿಯಿಂದ ಎರಡು ಕಿ.ಮೀ. ದೂರದ ವಿದ್ಯಾರಣ್ಯಪುರದ ಹನುಮಗಿರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಜೊತೆ ಅವರ ನಾಲ್ವರು ಶಿಷ್ಯರಾದ ಸುರೇಶ್ವರಾಚಾರ್ಯರು, ತೋಟಕಾಚಾರ್ಯರು, ಪದ್ಮಪಾದಚಾರ್ಯರು, ಹಸ್ತಮಲಕಾಚಾರ್ಯರು ಮೂರ್ತಿಯೂ ಅನಾವರಣಗೊಂಡಿದೆ. ಇವರ ಜೊತೆ, ವಿಜಯನಗರ ಸಾಮ್ರಾಜ್ಯದ ರೂವಾರಿಗಳಾದ ಜಗದ್ಗುರು ವಿದ್ಯಾರಣ್ಯರ ಮೂರ್ತಿಯೂ ಕೂಡ ಲೋಕಾರ್ಪಣೆಗೊಂಡಿದ್ದು ವಿದ್ಯಾರಣ್ಯರು ಶಂಕರಾಚಾರ್ಯರ ಶಿಷ್ಯರಾಗಿದ್ದು 10ನೇ ಜಗದ್ಗುರುಗಳಾಗಿದ್ದಾರೆ. ಹನುಮಗಿರಿಯಲ್ಲಿ ಜಗದ್ಗುರುಗಳ ಜೊತೆ ಹನುಮನ ಮೂರ್ತಿ ಕೂಡ ನಿರ್ಮಾಣವಾಗಿದೆ. ಇಂದು ಭಾರತೀತೀರ್ಥ ಶ್ರೀಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿದ್ದು ಈ ಸುಂದರ ತಾಣಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ. 15 ದಿನಗಳ ಬಳಿಕ ನಾಡಿನ ಜನ ಈ ತಾಣದ ಸೌಂದರ್ಯವನ್ನ ಸವಿಯಬಹುದು.
ಪ್ರತಿಮೆಗೆ ಉಭಯ ಉಭಯ ಜಗದ್ಗುರುಗಳಿಂದ ಪೂಜೆ: 2013ರಿಂದ ನಡೆಯುತ್ತಿದ್ದ ಕೆಲಸ ಇದೀಗ ಸಂಪೂರ್ಣ ಮುಕ್ತಾಯಗೊಂಡು ಇಂದು ಲೋಕಾರ್ಪಣೆಗೊಂಡಿದೆ. ಶ್ರೀ ಭಾರತೀತೀರ್ಥ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿದ ಸುವರ್ಣ ಮಹೋತ್ಸವದ ಹೊತ್ತಲ್ಲೆ ಶಂಕರಾಚಾರ್ಯರ ಸುಂದರ ಪ್ರತಿಮೆ ಅನಾವರಣಗೊಂಡಿದೆ. 45 ಕೋಟಿ ವೆಚ್ಚದ 2 ಎಕರೆ ವಿಸ್ತೀರ್ಣದಲ್ಲಿ ಮೂರ್ತಿ ನಿರ್ಮಾಣವಾಗಿದೆ. ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆ ತರಲಾಗಿತ್ತು. ಶಂಕರರು ಜೀವಿಸಿದ್ದ ಕಾಲಾವಧಿಗೆ ಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ.
ಸಿಎಂ ಸೂಚನೆ ಹಿನ್ನೆಲೆಯಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭ: ಮೂರು ಆನೆಗಳು ಭಾಗಿ!
ಈ ಹನುಮಗಿರಿ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ಹತ್ತಲು-ಇಳಿಯಲು ಎಸ್ಕಲೇಟರ್ ವ್ಯವಸ್ಥೆ ಅಳವಡಿಸಲಾಗಿದೆ. ಶೃಂಗೇರಿ ಮಠದ 36ನೇ ಜಗದ್ಗುರುಗಳಾದ ಭಾರತೀತೀರ್ಥ ಶ್ರೀಗಳು 1974ರ ನವೆಂಬರ್ 11ರಂದು ಸನ್ಯಾಸ ಸ್ವೀಕರಿಸಿದ್ದರು. ಅವರು ಸನ್ಯಾಸ ಸ್ವೀಕರಿಸಿ 50ನೇ ವರ್ಷದ ಸ್ವರ್ಣ ಮಹೋತ್ಸವದ ಅಂಗವಾಗಿ ಶಂಕರರ ಮೂರ್ತಿ ಲೋಕಾರ್ಪಣೆಗೊಂಡಿದ್ದು ಇಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಭಯ ಜಗದ್ಗುರುಗಳು ಭಾಗವಹಿಸಿ ಶಂಕರರ ಪ್ರತಿಮೆಗೆ ಪೂಜೆ ಸಲ್ಲಿಸಿದರು..ಬೆಳಿಗ್ಗೆನಿಂದ ಮಾರುತಿ ಬೆಟ್ಟದಲ್ಲಿ ವಿವಿಧ ಪೂಜೆಗಳನ್ನು ನೆರೆವರಿಸಲಾಯಿತು. ಪ್ರತಿಮೆ ಅನಾರವಣ ಹಿನ್ನೆಲೆಯಲ್ಲಿ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.