ಸೂರ್ಯ ದೇವರನ್ನು ಗ್ರಹಗಳ ರಾಜ ಎಂದು ಹೇಳಲಾಗುತ್ತದೆ. ಆತ ಸೆಪ್ಟೆಂಬರ್ 17, 2022 ರಂದು, ಶನಿವಾರ ಕನ್ಯಾ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದರಿಂದ ಅಶುಭ ಯೋಗವೊಂದು ಉಂಟಾಗುತ್ತದೆ. ಹಾಗಿದ್ದೂ 3 ರಾಶಿಗಳಿಗೆ ಶುಭಫಲಗಳು ಕಾದಿವೆ..
ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಕಣ್ಣಿಗೆ ಕಾಣುವ ಏಕೈಕ ದೇವರೆಂದರೆ ಸೂರ್ಯ. ಜ್ಯೋತಿಷ್ಯದಲ್ಲಿ ಸೂರ್ಯ ಗ್ರಹವು ಆತ್ಮ, ತಂದೆ, ಸರ್ಕಾರ, ಅಧಿಕಾರ ಮತ್ತು ನೀವು ಹೇಗೆ ಹೊರಬಂದು ಜನರೊಂದಿಗೆ ವ್ಯವಹರಿಸುತ್ತೀರಿ ಎಂಬುದನ್ನು ಪ್ರತಿನಿಧಿಸುತ್ತದೆ. ಬಲವಾದ ಸೂರ್ಯನು ನಿಮಗೆ ಜೀವ ನೀಡುವ ಶಕ್ತಿ, ಇಚ್ಛಾಶಕ್ತಿ, ರೋಗನಿರೋಧಕ ಶಕ್ತಿ ಸೇರಿದಂತೆ ನಿಮ್ಮ ಜೀವನದ ಎಲ್ಲಾ ದುಷ್ಟರ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನೀಡುತ್ತದೆ ಎಂದು ಸರಳವಾಗಿ ಅರ್ಥ ಮಾಡಿಕೊಳ್ಳಿ. ಆತನೇ ಈ ಲೋಕದ ಕರ್ತೃ ಮತ್ತು ಎಲ್ಲ ಜೀವರಾಶಿಗಳಿಗೆ ಶಕ್ತಿ ನೀಡುವಾತ. ಸೂರ್ಯನಿಲ್ಲದಿದ್ದರೆ ಈ ಲೋಕ ಅಸ್ತಂಗತವಾಗುವುದು ಖಚಿತ. ಸೆಪ್ಟೆಂಬರ್ 17, 2022 ಶನಿವಾರದಂದು ಬೆಳಿಗ್ಗೆ 07:11 ಕ್ಕೆ ಸೂರ್ಯನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಸೂರ್ಯನ ಈ ರಾಶಿಚಕ್ರದ ಬದಲಾವಣೆಯು ಎಲ್ಲ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
ಸೂರ್ಯ ದೇವರು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ ಮತ್ತು ಎಲ್ಲಾ ಚಿಹ್ನೆಗಳಲ್ಲಿ ನಿಗದಿತ ಅವಧಿಯನ್ನು ಅಂದರೆ ಸಾಮಾನ್ಯವಾಗಿ 1 ತಿಂಗಳ ಅವಧಿ ಅವನ ರಾಶಿ ಪರಿವರ್ತನೆಗೆ. ಸಧ್ಯ ಕನ್ಯಾ ರಾಶಿಯನ್ನು ಪ್ರವೇಶಿಸಲಿರುವ ಸೂರ್ಯ ಅಕ್ಟೋಬರ್ 17 ರಂದು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಬಾರಿ ಸೂರ್ಯನ ಕನ್ಯಾ ರಾಶಿ ಪರಿವರ್ತನೆಯಿಂದ ಅಶುಭ ಯೋಗವೊಂದು ರೂಪುಗೊಳ್ಳುತ್ತಿದೆ.
ಶಿವನ ಪೂಜೆಯಲ್ಲಿ ಈ ಐದು ಪೂಜಾ ಸಾಮಗ್ರಿಯನ್ನು ತಪ್ಪಿಯೂ ಬಳಸ್ಬೇಡಿ..
ಷಡಷ್ಟಕ ಯೋಗ(Shadashtak Yoga)
ಪಂಚಾಂಗದ ಪ್ರಕಾರ, ಈ ಬಾರಿ ಸೂರ್ಯನ ಸಂಕ್ರಮಣದಿಂದಾಗಿ ಅತ್ಯಂತ ಅಪಾಯಕಾರಿ ಯೋಗ ಅಂದರೆ ಷಡಷ್ಟಕ ಯೋಗವು ರೂಪುಗೊಳ್ಳುತ್ತದೆ. ಷಡಷ್ಟಕ ಯೋಗವು ಸೂರ್ಯ ಮತ್ತು ರಾಹು ಈ ಎರಡು ಗ್ರಹಗಳ ಸಂಯೋಜನೆಯಿಂದ ರೂಪುಗೊಳ್ಳುತ್ತಿರುವ ಅತ್ಯಂತ ಅಶುಭ ಯೋಗವಾಗಿದೆ. ಇಂತಹ ಯೋಗದ ರಚನೆಯಿಂದಾಗಿ, ಒಂದು ದೇಶದಲ್ಲಿ ದೊಡ್ಡ ವ್ಯಕ್ತಿ ಅಥವಾ ನಾಯಕನ ಹಠಾತ್ ಮರಣ ಸಂಭವಿಸಬಹುದು ಅಥವಾ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿರುತ್ತದೆ. ದೊಡ್ಡ ನೈಸರ್ಗಿಕ ವಿಕೋಪ ಸಂಭವಿಸಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶಗಳ ನಡುವೆ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ. ಈ ಯೋಗದ ಅಶುಭಗಳೇನೇ ಇರಲಿ, ಈ ಬಾರಿಯ ಸೂರ್ಯ ಗೋಚಾರದಿಂದ 3 ರಾಶಿಗಳು ಲಾಭ ಪಡೆಯುತ್ತಿವೆ.
ಸೂರ್ಯ ಗೋಚಾರದ ಲಾಭ
ಮೇಷ ರಾಶಿ(Aries): ಮೇಷ ರಾಶಿಯವರಿಗೆ ಕನ್ಯಾ ರಾಶಿಯಲ್ಲಿ ಸೂರ್ಯದೇವನ ಸಂಚಾರದಿಂದ ಹೆಚ್ಚಿನ ಲಾಭವಾಗಲಿದೆ. ಅವರು ಆರೋಗ್ಯದ ದೃಷ್ಟಿಯಿಂದ ಲಾಭವನ್ನು ಪಡೆಯುತ್ತಾರೆ. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೂ ಯಶಸ್ಸು ಸಿಗಲಿದೆ.
ಕರ್ಕಾಟಕ ರಾಶಿ(Cancer): ಕರ್ಕ ರಾಶಿಯವರಿಗೆ ಈ ಸಮಯ ಶುಭಕರವಾಗಿರುತ್ತದೆ. ಅವರ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಅವರ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ.
ಪಿತೃಪಕ್ಷ: ಪೂರ್ವಜರನ್ನು ಸಂತೃಪ್ತಿ ಪಡಿಸಲು ಈ ತಪ್ಪು ಮಾಡಬೇಡಿ!
ವೃಶ್ಚಿಕ ರಾಶಿ(Scorpio): ವೃಶ್ಚಿಕ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಸೂರ್ಯನ ಸಂಕ್ರಮಣದ ಲಾಭ ಸಿಗಲಿದೆ. ಅವರ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಅವರ ಆದಾಯದ ಮೂಲವೂ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯ ಇರುತ್ತದೆ. ಯಾರೋ ದಾರಿ ತಪ್ಪಿಸುವ ಮೂಲಕ ನಿಮ್ಮ ಕೋಪವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.