111 Portal: ಅಕ್ಟೋಬರ್ 1 ಈ ದಿನವನ್ನು ಮಿಸ್ ಮಾಡಿಕೊಳ್ಳಬೇಡಿ, ನಿಮ್ಮ ಆಸೆ ಈಡೇರಿಸಲು ಹೀಗೆ Manifest ಮಾಡಿ

Published : Oct 01, 2026, 06:05 PM IST
111 portal

ಸಾರಾಂಶ

111 Portal: ಅಕ್ಟೋಬರ್ 1, 2026ರಂದು 1/1/1 ಪೋರ್ಟಲ್ ತೆರೆದುಕೊಳ್ಳುತ್ತದೆ ಎಂದು ಅಂಕಶಾಸ್ತ್ರದಲ್ಲಿ ತಿಳಿಸಿದ್ದಾರೆ.. 111 ಏಂಜಲ್ ನಂಬರ್. ಹೊಸ ಆರಂಭ, ವೈಯಕ್ತಿಕ ಬೆಳವಣಿಗೆ ಮತ್ತು ಗುರಿಗಳತ್ತ ಗಮನ ಕೇಂದ್ರೀಕರಿಸುವ ಸಂಕೇತ. ಈ ದಿನ ಮ್ಯಾನಿಫೆಸ್ಟೇಶನ್ ಮಾಡುವ ಸರಳ ವಿಧಾನ ಇಲ್ಲಿದೆ.

ನಿಮ್ಮ ಕನಸು ನನಸಾಗಿಸಲು ಬೆಸ್ಟ್ ದಿನ

ಸಂಖ್ಯಾಶಾಸ್ತ್ರದ ಪ್ರಕಾರ, ಅಕ್ಟೋಬರ್ 1, 2026ರಂದು 111 ಪೋರ್ಟಲ್ ತೆರೆದುಕೊಳ್ಳುತ್ತಿದೆ. ಹೊಸ ಆರಂಭ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ದೃಷ್ಟಿಯಿಂದ ಈ ದಿನಕ್ಕೆ ವಿಶೇಷ ಮಹತ್ವವಿದೆ . ಸಂಖ್ಯಾಶಾಸ್ತ್ರದ ಪ್ರಕಾರ ಅಕ್ಟೋಬರ್ ತಿಂಗಳು ವಿಶೇಷ ಶಕ್ತಿಗಳಿಂದ ಕೂಡಿದೆ. ತಿಂಗಳ ಮೊದಲ ದಿನವೇ ನಿಮ್ಮ ಕನಸುಗಳಿಗೆ ಹೊಸ ದಿಕ್ಕು ನೀಡುವಂತಹ ವಿಶೇಷ ಸಂಯೋಗವಿದೆ. ಈ ದಿನ ನೀವು ನಿಮ್ಮ ಯಾವುದೇ ದೊಡ್ಡ ಆಸೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮ್ಯಾನಿಫೆಸ್ಟೇಶನ್ ಮಾಡಬಹುದು. 111ರ ವಿಶೇಷ ಸಂಯೋಗ ನಿಮ್ಮ ಗುರಿಗಳು ಮತ್ತು ಆಸೆಗಳತ್ತ ಗಮನ ಕೇಂದ್ರೀಕರಿಸಲು ಉತ್ತಮ ಸಂದರ್ಭ ಎಂದು ಆಧ್ಯಾತ್ಮಿಕ ನಂಬಿಕೆಗಳಲ್ಲಿ ಹೇಳಲಾಗುತ್ತದೆ.

ಅಕ್ಟೋಬರ್ 1ರಂದು ಹೊಸ ಕೆಲಸ ಅಥವಾ ಹೊಸ ಪ್ರಯತ್ನ ಆರಂಭಿಸಲು ಶುಭ ದಿನ ಎಂದು ಸಂಖ್ಯಾಶಾಸ್ತ್ರದಲ್ಲಿ ತಿಳಿಸಲಾಗಿದೆ. ಸಂಖ್ಯಾಶಾಸ್ತ್ರ ಮತ್ತು ಕೆಲವು ಆಧ್ಯಾತ್ಮಿಕ ಪರಂಪರೆಗಳ ಪ್ರಕಾರ, 1 + 10 + 2026ರ ಅಂಕಗಳ ಮೊತ್ತವನ್ನು ನೋಡಿದಾಗ 1/1/1 ಎಂಬ ಸಂಯೋಗ ಬರುತ್ತದೆ. ಈ ದಿನ ನಿಮ್ಮ ಕನಸುಗಳತ್ತ ಗಮನ ಹರಿಸಿ ಮ್ಯಾನಿಫೆಸ್ಟೇಶನ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

1/1/1 ಪೋರ್ಟಲ್ ಎಂದರೇನು?

ಅಕ್ಟೋಬರ್ ವರ್ಷದ 10ನೇ ತಿಂಗಳು. 2026ರ ಅಂಕಗಳ ಮೊತ್ತವನ್ನು ಒಂದಂಕಿಗೆ ಇಳಿಸಿದಾಗ 1 ಬರುತ್ತದೆ. ಇದರೊಂದಿಗೆ ಅಕ್ಟೋಬರ್ 1ರ ದಿನಾಂಕವನ್ನು ಸೇರಿಸಿ 1/1/1 ಪೋರ್ಟಲ್ ಎಂದು ಸಂಖ್ಯಾಶಾಸ್ತ್ರ ತಿಳಿಸಿದೆ. ಇಂತಹ ಸಂಯೋಗವನ್ನು ಕೆಲವರು ಹೊಸ ಆರಂಭ, ವಯಕ್ತಿಕ ಬೆಳವಣಿಗೆ ಮತ್ತು ದೃಢ ಸಂಕಲ್ಪದ ಸಂಕೇತ ಎಂದು ಪರಿಗಣಿಸುತ್ತಾರೆ. ಸಂಖ್ಯಾಶಾಸ್ತ್ರ ಮತ್ತು ಇತರ ಆಧ್ಯಾತ್ಮಿಕ ಪರಂಪರೆಗಳಲ್ಲಿ 111 ಏಂಜಲ್ ನಂಬರ್ ಕಾಣಿಸಿಕೊಳ್ಳುವುದನ್ನು ಹೊಸ ಅವಕಾಶಗಳನ್ನು ಸ್ವೀಕರಿಸುವುದು, ಗುರಿಗಳತ್ತ ಮುನ್ನಡೆಯುವುದು ಮತ್ತು ಜೀವನದ ಮುಂದಿನ ಹಂತವನ್ನು ರೂಪಿಸುವ ಆಲೋಚನೆಗಳತ್ತ ಗಮನ ಹರಿಸುವ ಸಂಕೇತವಾಗಿ ನೋಡಲಾಗುತ್ತದೆ.

ಅಕ್ಟೋಬರ್ 1ರಂದು ಹೇಗೆ ಮ್ಯಾನಿಫೆಸ್ಟೇಶನ್ ಮಾಡಬೇಕು?

ಅಕ್ಟೋಬರ್ 1ರಂದು ಮ್ಯಾನಿಫೆಸ್ಟೇಶನ್ ಮಾಡುವಾಗ ನಿಮ್ಮ ಗುರಿ ಅಥವಾ ಆಸೆಯನ್ನು ಮೊದಲು ಸ್ಪಷ್ಟವಾಗಿ ಗುರುತಿಸಿಕೊಳ್ಳುವುದು ಮುಖ್ಯ. ನಿಮಗೆ ನಿಜವಾಗಿ ಏನು ಬೇಕು ಎಂಬುದನ್ನು ಸ್ಪಷ್ಟ ಪದಗಳಲ್ಲಿ ಬರೆಯಿರಿ. ನಂತರ ಕೆಲವು ನಿಮಿಷ ಶಾಂತವಾಗಿ ಕುಳಿತು, ಆ ಗುರಿಯನ್ನು ಸಾಧಿಸಿದ ನಂತರ ನಿಮ್ಮ ಜೀವನ ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಿ. ಆದರೆ ಮ್ಯಾನಿಫೆಸ್ಟೇಶನ್ನು ಕೇವಲ ಯೋಚಿಸುವುದಕ್ಕೆ ಸೀಮಿತಗೊಳಿಸದೆ, ನಿಮ್ಮ ಗುರಿಯನ್ನು ಸಾಧಿಸಲು ಪ್ರಾಯೋಗಿಕ ಹೆಜ್ಜೆಯನ್ನೂ ಇಡುವುದು ಮುಖ್ಯ.

ಅಕ್ಟೋಬರ್ 1ರಂದು Manifestation ಮಾಡುವ ಸರಳ ವಿಧಾನ

1. ನಿಮ್ಮ ಗುರಿಯನ್ನು ಸ್ಪಷ್ಟವಾಗಿ ಬರೆಯಿರಿ:

ಮೊದಲಿಗೆ ನಿಮಗೆ ಏನು ಬೇಕು ಎಂಬುದನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ಒಂದು ಕಾಗದದಲ್ಲಿ ಬರೆಯಿರಿ.

2. ಸಕಾರಾತ್ಮಕವಾಗಿ ಕಲ್ಪಿಸಿಕೊಳ್ಳಿ:

ಕೆಲವು ನಿಮಿಷ ಶಾಂತವಾಗಿ ಕುಳಿತು ನಿಮ್ಮ ಗುರಿಯನ್ನು ಸಾಧಿಸಿರುವಂತೆ ಕಲ್ಪಿಸಿಕೊಳ್ಳಿ. ಆ ಗುರಿಗೆ ನೀವು ಹತ್ತಿರವಾಗುತ್ತಿರುವ ಭಾವನೆಯನ್ನು ಅನುಭವಿಸಲು ಪ್ರಯತ್ನಿಸಿ.

3. ಒಂದು ಪ್ರಾಯೋಗಿಕ ಹೆಜ್ಜೆ ಇಡಿ:

ಕೇವಲ ಆಸೆಪಡುವುದು ಮಾತ್ರವಲ್ಲ. ನಿಮ್ಮ ಗುರಿಯನ್ನು ಸಾಧಿಸಲು ಸಾಧ್ಯವಾಗುವ ಒಂದು ಸಣ್ಣ ಹೆಜ್ಜೆಯನ್ನಾದರೂ ಅಂದೇ ತೆಗೆದುಕೊಳ್ಳಿ.

4. ಸಕಾರಾತ್ಮಕ ಮನೋಭಾವ ಇಟ್ಟುಕೊಳ್ಳಿ:

ಸ್ಪಷ್ಟ ಗುರಿ, ಸಕಾರಾತ್ಮಕ ಚಿಂತನೆ ಮತ್ತು ನಿರಂತರ ಪ್ರಯತ್ನವನ್ನು ಒಟ್ಟಿಗೆ ಮುಂದುವರಿಸುವುದು ನಿಮ್ಮ ಗುರಿಯತ್ತ ಸಾಗಲು ಸಹಾಯ ಮಾಡಬಹುದು.

ಈ ದಿನ ಹೀಗೆ ಹೇಳಿಕೊಳ್ಳಿ

ನಿಮ್ಮ ಕನಸುಗಳನ್ನು ನನಸಾಗಿಸಲು ಮ್ಯಾನಿಫೆಸ್ಟೇಶನ್ ಮಾಡುತ್ತಿದ್ದರೆ, ನಿಮಗೆ ನೀವು ಹೀಗೆ ಹೇಳಿಕೊಳ್ಳಿ:

“ನನ್ನ ಗುರಿಯನ್ನು ಸ್ಪಷ್ಟತೆ, ನಂಬಿಕೆ ಮತ್ತು ಪರಿಶ್ರಮದೊಂದಿಗೆ ಸಾಧಿಸುವ ದಿಕ್ಕಿನಲ್ಲಿ ನಾನು ಮುಂದೆ ಸಾಗುತ್ತಿದ್ದೇನೆ.”

ಇದನ್ನು ನೀವು ಪದೇ ಪದೇ ಪಾಸಿಟಿವ್ ಅಫರ್ಮೇಶನ್ ರೀತಿ ಹೇಳುತ್ತಿದ್ದರೆ, ಖಚಿತವಾಗಿಯೂ ನಿಮ್ಮ ಕನಸನ್ನು ನನಸಾಗಿಸಲು ಸಾಧ್ಯವಾಗುತ್ತದೆ.

PREV
Read more Articles on
click me!

Recommended Stories

Gandhi Jayanti Wishes in Kannada: ‘ಸತ್ಯ, ಅಹಿಂಸೆಯ ಹಾದಿ’... ಗಾಂಧಿ ಜಯಂತಿಗೆ ಹೃದಯಸ್ಪರ್ಶಿ ಶುಭಾಶಯಗಳು!
ಸಂಜೆ ಹೊಸ್ತಿಲ ಬಳಿ ಈ ಒಂದು ವಸ್ತುವನ್ನು ಇಟ್ರೆ ಲಕ್ಷ್ಮೀದೇವಿ ತಾನಾಗಿಯೇ ಬರ್ತಾಳೆ!