Fact Check: ನಂಬರ್‌ ಪ್ಲೇಟ್‌ ಮರೆಮಾಚುವಂತೆ ವಾಹನಗಳ ಮೇಲೆ ನಿಂಬೆ-ಮೆಣಿಸಿನಕಾಯಿ ಹಾಕುವಂತಿಲ್ಲ

By Manjunath NayakFirst Published Aug 2, 2022, 8:00 PM IST
Highlights

ವರದಿಯೊಂದರ ಸ್ಕ್ರೀನ್‌ಶಾಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ವಾಹನಗಳಿಗೆ ಲಿಂಬೆ-ಮೆಣಸಿಕಾಯಿಯನ್ನು ಕಟ್ಟಿದರೆ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಲಾಗಿದೆ

ನವದೆಹಲಿ (ಆ. 02): ತಮ್ಮ ವಾಹನಗಳ ಮೇಲೆ ದೃಷ್ಟಿ ತಾಗಬಾರದೆಂದು ಸೇರಿದಂತೆ ಹಲವು ಕಾರಣಗಳಿಗೆ ಅನೇಕರು ತಮ್ಮ ವಾಹನಗಳ ಮೇಲೆ ಲಿಂಬೆ-ಮೆಣಸಿಕಾಯಿಯನ್ನು ಕಟ್ಟಿರುತ್ತಾರೆ. ಆದರೆ ಇದೀಗ ವರದಿಯ ಸ್ಕ್ರೀನ್‌ಶಾಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ವಾಹನಗಳಿಗೆ ಲಿಂಬೆ-ಮೆಣಸಿಕಾಯಿಯನ್ನು ಕಟ್ಟಿದರೆ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಲಾಗಿದೆ. ಇನ್ನು ‘ಈ ನಿಯಮ ಹಿಂದೂ ವಿರೋಧಿ’ ಎಂದು ಕೆಲವರು ಆರೋಪಿಸಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಇದನ್ನು ಫ್ಯಾಕ್ಟ್‌ ಚೆಕ್‌ ಮಾಡಿದ್ದು  ನಿಂಬೆ, ಮೆಣಸಿನಕಾಯಿ ಮಾತ್ರವಲ್ಲ, ವಾಹನಗಳ ನಂಬರ್ ಪ್ಲೇಟ್‌ಗಳನ್ನು ಮರೆಮಾಡುವ ಯಾವುದೇ ವಸ್ತುವನ್ನು ವಾಹನಳಿಗೆ ಅಳವಡಿಸುವುದು ಅಪರಾಧ ಎಂದು ತಿಳಿದುಬಂದಿದೆ. 

Claim: ಟ್ರಾಫಿಕ್ ಪೊಲೀಸರು ಕಾರು ಮಾಲೀಕರಿಗೆ ದಂಡ ವಿಧಿಸುತ್ತಿರುವ ನಿಂಬೆ ಮತ್ತು ಮೆಣಸಿನಕಾಯಿಯೊಂದಿಗೆ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

Fact Check: "Remove Chilli and lemon on cars" ಎಂಬ ಕೀವರ್ಡ್‌ಗಳೊಂದಿಗೆ  ನಾವು ಗೂಗಲ್‌ ಸರ್ಚ್‌ ಮಾಡಿದಾಗ ನಾವು ಈ ಕೆಳಗಿನ ವರದಿಯನ್ನು ಕಂಡುಕೊಂಡಿದ್ದೇವೆ. 

"ಮೆಣಸಿನಕಾಯಿ, ನಿಂಬೆ ಮತ್ತು ನಿಮ್ಮ ನಂಬರ್ ಪ್ಲೇಟನ್ನು ಮರೆಮಾಡುವ ಯಾವುದನ್ನಾದರೂ ತೆಗೆದುಹಾಕಿ ಅಥವಾ ದೆಹಲಿ ಪೊಲೀಸರನ್ನು ಎದುರಿಸಲು ಸಿದ್ಧರಾಗಿರಿ" ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ಇದೇ ವರದಿಯಲ್ಲಿ ದೆಹಲಿ ಪೊಲೀಸ್ ವಿಶೇಷ ಆಯುಕ್ತರ ಟ್ವೀಟನ್ನು ಉಲ್ಲೇಖಿಸಲಾಗಿದ್ದು ಈ ನಿಯಮವನ್ನು ಖಚಿತಪಡಿಸುತ್ತದೆ. 

 

Such tricks, to hide a part of number plate, to avoid prosecution of traffic offences by camera, will not work. Delhi Traffic Police is keeping close eye 🧐🔭 on such vehicles🚗. Be aware, algorithms can figure out correct number & you 😭may find a traffic cop at your door steps. pic.twitter.com/enqnA0co31

— Dr. Muktesh Chander, IPS(R) (@mukteshchander)

 

ಇನ್ನು ಇದೇ ಮಾದರಿಯಲ್ಲಿ ನಂಬರ್‌ ಪ್ಲೇಟ್‌ ಮುಚ್ಚುವಂತಹ ಯಾವುದೇ ವಸ್ತವನ್ನು ವಾಹನದ ಮೇಲೆ ಅಳವಡಿಸಿದರೆ ದಂಡ ಹಾಕಲಾಗುವುದು ಎಂದು ಉಲ್ಲೇಖಿಸಿರುವ ಹಲವು ವರದಿಗಳು ಲಭ್ಯವಾಗಿವೆ. ಈ ವರದಿಗಳನ್ನು ನೀವು , ಇಲ್ಲಿ ಮತ್ತು ಇಲ್ಲಿ ಪರಿಶೀಲಿಸಬಹುದ. 

ಇನ್ನು ಮೋಟಾರು ವಾಹನ ಕಾಯಿದೆ ಕೂಡ ವಾಹನದ ನಂಬರ್ ಪ್ಲೇಟ್‌ಗಳಿಂದ ಎಲ್ಲಾ ವಸ್ತುಗಳನ್ನು ತೆಗೆದುಹಾಕಬೇಕು ಎಂದು ಹೇಳುತ್ತದೆ, ಇಲ್ಲದಿದ್ದರೆ ದಂಡವನ್ನು ವಿಧಿಸಲಾಗುತ್ತದೆ. The MV Act (Rule 50, 51 of MV Act, 1989) ನಲ್ಲಿ "ವಾಹನದ ಯಾವುದೇ ಇತರ ಹೆಸರುಗಳ ನೋಂದಣಿ ಗುರುತುಗಳನ್ನು ಹೊರತುಪಡಿಸಿ, ಚಿತ್ರಗಳು, ಕಲೆಗಳನ್ನು ಸಂಖ್ಯೆಯ ಪ್ಲೇಟ್‌ಗಳಲ್ಲಿ ಪ್ರದರ್ಶಿಸಬಾರದು. ಅಲಂಕಾರಿಕ ಅಕ್ಷರಗಳನ್ನು ಅನುಮತಿಸಲಾಗುವುದಿಲ್ಲ" ಎಂದು ಹೇಳಲಾಗಿದೆ

Conclusion: ನಿಂಬೆ, ಮೆಣಸಿನಕಾಯಿ ಮಾತ್ರವಲ್ಲ, ವಾಹನಗಳ ನಂಬರ್ ಪ್ಲೇಟ್‌ಗಳನ್ನು ಮರೆಮಾಡುವ ಯಾವುದೇ ವಸ್ತುವನ್ನು ಹಾಕಿದರೆ ದಂಡ ಕಟ್ಟಬೇಕಾಗುತ್ತದೆ ಎಂದು ಸಾಬೀತಾಗಿದೆ. 

click me!