ನವದೆಹಲಿ (ಆ. 09): ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಸೋಮವಾರ ಮುಕ್ತಾಯವಾದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಸಾಧನೆ ತೋರಿದೆ. ಸಾಮಾನ್ಯವಾಗಿ ದೇಶಕ್ಕೆ ಹತ್ತಾರು ಪದಕ ತರುವ ಶೂಟಿಂಗ್, ಆರ್ಚರಿ ಕ್ರೀಡೆಗಳು ಈ ಬಾರಿಯ ಕ್ರೀಡಾಕೂಟದಲ್ಲಿ ಇಲ್ಲದಿದ್ದರೂ ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ತನ್ನ 4ನೇ ಸರ್ವಶ್ರೇಷ್ಠ ಪ್ರದರ್ಶನ ತೋರಿದೆ. ಈ ನಡುವೆ ಭಾರತದ ತಾರಾ ಓಟಗಾರ್ತಿ ಹಿಮಾ ದಾಸ್ ಕುರಿತ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಪೋಸ್ಟ್‌ನಲ್ಲಿ ಪಾಯಿಂಟ್‌ಗಳ ಪಟ್ಟಿಯ ಚಿತ್ರವನ್ನು ಹಂಚಿಕೊಂಳ್ಳಲಾಗಿದ್ದು ಹಿಮಾ ದಾಸ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹತ್ತರಲ್ಲಿ ಆರು ಚಿನ್ನ ಗೆದ್ದಿದ್ದಾರೆ ಎಂದು ಹೇಳಲಾಗಿದೆ. ಈ ಬಳಿಕ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು ಎಂದು ಹೇಳಲಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ತನಿಖೆಯಲ್ಲಿ ಈ ಹೇಳಿಕೆ ಸುಳ್ಳು ಎಂದು ತಿಳಿದುಬಂದಿದೆ. ಹಿಮಾ ದಾಸ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಯಾವುದೇ ಪದಕ ಗೆದ್ದಿರಲಿಲ್ಲ.
Claim: “ವಿಶ್ವ ಇತಿಹಾಸದಲ್ಲಿ ಭಾರತ ಮೊದಲ ಬಾರಿಗೆ ಮೊದಲ ಸ್ಥಾನದಲ್ಲಿದೆ, 10 ಚಿನ್ನದ ಪದಕಗಳಲ್ಲಿ 6 ಅನ್ನು ಹಿಮಾ ದಾಸ್ ಗೆದ್ದಿದ್ದಾರೆ. ಸೆಲ್ಯೂಟ್ ಸಿಸ್ಟರ್” ಎಂದು ಹಿಂದಿಯಲ್ಲಿ ಬರೆಯಲಾಗಿದೆ.
Fact Check: ವೈರಲ್ ಪೋಸ್ಟಿನ ಸತ್ಯಾಸತ್ಯತೆಯನ್ನು ತಿಳಿಯಲು ಹಲವಾರು ಕೀವರ್ಡ್‌ಗಳ ಮೂಲಕ ಗೂಗಲ್ ಸರ್ಚ್ ಮಾಡಿದಾಗ ಕ್ಲೈಮ್‌ಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿಯನ್ನು ಕಂಡುಹಿಡಿಯಲಾಗಲಿಲ್ಲ. 2022 ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಆಯೋಜಿಸಲಾಗಿತ್ತು.
22 ಬಂಗಾರ, 16 ಬೆಳ್ಳಿ, 23 ಕಂಚಿನ ಪದಕಗಳೊಂದಿಗೆ ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟಾರೆ 61 ಪದಕ ಗಳಿಸಿದೆ. ಬರ್ಮಿಂಗ್ಹ್ಯಾಮ್ 2022 ರ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ಪದಕ ಗೆದ್ದ ಆಟಗಾರರಲ್ಲಿ ಹಿಮಾ ದಾಸ್ ಹೆಸರು ಇಲ್ಲ. ಭಾರತ 60 ಪದಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇನ್ನು ತನಿಖೆಯನ್ನು ಮುಂದುವರೆಸಿ ಬರ್ಮಿಂಗ್ಹ್ಯಾಮ್2022 ರ ಅಧಿಕೃತ ಟ್ವಿಟರ್ ಖಾತೆಯನ್ನು ಪರಿಶೀಲಿಸಲಾಯಿತು. ಈ ಸಮಯದಲ್ಲಿ ಭಾರತ ಎಂದಿಗೂ ಮೊದಲ ಸ್ಥಾನದಲ್ಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.
ಇನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ ಕನ್ನಡ ಪ್ರಭ (Kannada Prabha) ವರದಿಯ ಪ್ರಕಾರ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಭಾರತ ಕೊನೆ ದಿನ 5 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದುಕೊಂಡಿದೆ. ಭಾರತ 22 ಚಿನ್ನ, 16 ಬೆಳ್ಳಿ, 23 ಕಂಚು ಸೇರಿ ಒಟ್ಟು 61 ಪದಕಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನಿಯಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ವೈರಲ್ ಪೋಸ್ಟಿನಲ್ಲಿ ಭಾರತವು ಹತ್ತು ಚಿನ್ನವನ್ನು ಗೆಲ್ಲುವ ಮೂಲಕ ಮೊದಲ ಸ್ಥಾನವನ್ನು ತಲುಪಿದೆ ಎಂದು ಹೇಳಲಾಗಿದೆ. ನಮ್ಮ ಈವರೆಗಿನ ತನಿಖೆಯಲ್ಲಿ ಹಿಮಾ ದಾಸ್ ಹತ್ತರಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದಿಲ್ಲ ಎಂಬುದು ಸಾಬೀತಾಗಿದೆ. ಇದೇ ವೇಳೆ ಭಾರತ 10 ಚಿನ್ನದ ಪದಕ ಗೆದ್ದು ಮೊದಲ ಸ್ಥಾನಕ್ಕೆ ತಲುಪಿಲ್ಲ ಎಂಬುದು ಖಚಿತವಾಗಿದೆ.
Conclusion: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ 2022 ರಲ್ಲಿ ಹಿಮಾ ದಾಸ್ ಆರು ಚಿನ್ನದ ಪದಕಗಳನ್ನು ಗೆದಿದ್ದಾರೆ ಎಂದು ವೈರಾಲಗುತ್ತಿರುವ ಪೋಸ್ಟ್ ಸುಳ್ಳು. ಫ್ಯಾಕ್ಟ್ ಚೆಕ್‌ನಲ್ಲಿಈ ಹೇಳಿಕೆ ಸುಳ್ಳು ಎಂದು ತಿಳಿದುಬಂದಿದೆ.