Fact check: ನಟ ಸುಶಾಂತ್ ಸಿಂಗ್ ರಜಪೂತ್‌ ಅವ್ರನ್ನು ಕ್ರಿಕೆಟರ್ ಎಂದ್ರಾ ರಾಹುಲ್ ಗಾಂಧಿ..?

Suvarna News   | Asianet News
Published : Jun 16, 2020, 03:30 PM IST
Fact check: ನಟ ಸುಶಾಂತ್ ಸಿಂಗ್ ರಜಪೂತ್‌ ಅವ್ರನ್ನು ಕ್ರಿಕೆಟರ್ ಎಂದ್ರಾ ರಾಹುಲ್ ಗಾಂಧಿ..?

ಸಾರಾಂಶ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನನ್ನು ಕ್ರಿಕೆಟರ್ ಎಂದು ಕರೆದರಾ ರಾಹುಲ್ ಗಾಂಧಿ..? ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಹುಲ್‌ ಗಾಂಧಿಗೆ ನಿಜಕ್ಕೂ ಸುಶಾಂತ್ ನಟ ಎಂಬುದು ಗೊತ್ತಿರಲಿಲ್ವಾ..? ಇಲ್ಲಿ ಓದಿ.

ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್‌ನನ್ನು ಕ್ರಿಕೆಟರ್ ಎಂದು ಕರೆದರಾ ರಾಹುಲ್ ಗಾಂಧಿ..? ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾಯ್‌ ಪೋ ಚೆ, ಶುದ್ಧ್‌ ದೇಸಿ ರೊಮ್ಯಾನ್ಸ್, ಎಂಎಸ್ ಧೋನಿ ಅನ್‌ಟೋಲ್ಡ್ ಸ್ಟೋರಿ, ಚಿಚೋರಿ ಸಿನಿಮಾದಲ್ಲಿ ನಟಿಸಿದ್ದ ಯುವ ನಟನ ಸಾವಿಗೆ ಪ್ರಧಾನಿ ಮೋದಿ, ರಾಹುಲ್ ಗಾಂಧೀ, ಅರವಿಂದ್ ಕೇಜ್ರೀವಾಲ್ ಸಂತಾಪ ವ್ಯಕ್ತಪಡಿಸಿದ್ದರು.

ರಾಹುಲ್ ಗಾಂಧಿ ಸುಶಾಂತ್ ಅವರನ್ನು ಯಂಗ್ & ಟ್ಯಾಲೆಂಟೆಡ್ ಕ್ರಿಕೆಟರ್ ಎಂದು ಸಂಬೋಧಿಸಿದ ಟ್ವೀಟ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದೊಂದು ಸುಳ್ಳು ಟ್ವೀಟ್ ಎಂಬುದು ನಂತರದಲ್ಲಿ ಬಯಲಾಗಿದೆ. ಬೇಕೆಂದೇ ರಾಹುಲ್ ಗಾಂಧಿ ಟ್ವೀಟರ್ ಖಾತೆ ಮಾರ್ಫಿಂಗ್ ಮಾಡಿ ಈ ರೀತಿ ಮಾಡಲಾಗಿದೆ ಎಂಬುದು ಸಾಬೀತಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಅಗಲಿಕೆಯಿಂದ ಬೇಸರವಾಗಿದೆ. ಯುವ ಹಾಗೂ ಪ್ರತಿಭಾನ್ವಿತ ನಟ ಬಹಳ ಬೇಗನೆ ಹೋಗಿ ಬಿಟ್ಟರು. ಅವರ ಕುಟುಂಬ, ಸ್ನೇಹಿತರು, ಜಗತ್ತಿನಾದ್ಯಂತ ಇರುವ ಅಭಿಮಾನಿಗಳ ಜೊತೆ ದುಃಖವಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

Fact Check: ಕಾಫಿ ಕುಡಿದರೆ ಕೊರೋನಾ ಬರಲ್ವಂತೆ..!

ಆದರೆ ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಳಸಿದ್ದ ಫಾಂಟ್ ಹಾಗೂ ವೈರಲ್ ಆಗಿರುವ ಟ್ವೀಟ್ ಫಾಂಟ್ ಭಿನ್ನವಾಗಿದೆ. ಎಂಎಸ್‌ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಸಿನಿಮಾದಿಂದ ಸುಶಾಂತ್ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದರು. ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿಯ ಪಾತ್ರವನ್ನು ಮನಮುಟ್ಟುವಂತೆ ನಟಿಸಿದ್ದರು ಸುಶಾಂತ್.

PREV
click me!

Recommended Stories

ಡೈಪರ್ ಬಳಸಿದರೆ ಮಕ್ಕಳ ಕಿಡ್ನಿ ಹಾಳಾಗುತ್ತಾ, ವೈರಲ್ ಆಗಿರೊ ಸುದ್ದಿಯಲ್ಲಿ ಸತ್ಯವೆಷ್ಟು?
ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?